Rohit Sharma: ಲಾರ್ಡ್ಸ್‌ನಲ್ಲಿ ಯಾರೂ ಊಹಿಸಲಾರದ ಐತಿಹಾಸಿಕ ಸಾಧನೆ ಮಾಡಿದ ರೋಹಿತ್ ಶರ್ಮಾ, ಟೀಕಾಕಾರರಿಗೆ ತಿರುಗೇಟು

Rohit Sharma: ಲಾರ್ಡ್ಸ್‌ನಲ್ಲಿ ಭಾನುವಾರ (ಜುಲೈ 19) ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಗೆಲುವು ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು. ಟೀಮ್ ಇಂಡಿಯಾ ಸೋತರೂ ಸಹ ಈ ಮೈದಾನದಲ್ಲಿ ಹಿಟ್‌ಮ್ಯಾನ್‌ ರೋಹಿತ್ ಶರ್ಮಾ ಅವರು ಯಾರೂ ಊಹಿಸಹ ದಾಖಲೆ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಲಂಡನ್‌ನ ಪ್ರಸಿದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋತರೂ ಸಹ, ರೋಹಿತ್ ಶರ್ಮಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೀಮ್ ಇಂಡಿಯಾ ಪರ ಇದುವರೆಗೂ ಯಾರೂ ಮಾಡದ ಸಾಧನೆಯನ್ನು ಅವರು ಮಾಡಿ ಗಮನ ಸೆಳೆದಿದ್ದಾರೆ.

Rohit Sharma Creates History at Lord s Stadium First Indian to Score ODI Century at Iconic Venue

ಲಾರ್ಡ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ

ಕ್ರಿಕೆಟ್‌ನ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಲಂಡನ್‌ನಲ್ಲಿರುವ ಲಾರ್ಡ್ಸ್ ಮೈದಾನದಲ್ಲಿ ಇದುವರೆಗೆ ಯಾವುದೇ ಭಾರತೀಯ ಬ್ಯಾಟರ್ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿರಲಿಲ್ಲ. ಆದರೆ ಇದೀಗ ಹಿಟ್‌ ಮ್ಯಾನ್‌ ರೋಹಿತ್ ಶರ್ಮಾ ಅವರು ಈ ಸಾಧನೆ ಮಾಡಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಇಂಗ್ಲೆಂಡ್ ನೀಡಿದ್ದ 388 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ರೋಹಿತ್ ಶರ್ಮಾ ಕೇವಲ 110 ಎಸೆತಗಳಲ್ಲಿ 16 ಬೌಂಡರಿ, 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 138 ರನ್ ಚಚ್ಚಿದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್ ಅವರು ಪಾತ್ರರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್

ಇದೇ ಇನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮಾ ಅವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ಮಹತ್ತರ ದಾಖಲೆಯನ್ನು ಮುರಿದಿದ್ದಾರೆ. ವಿದೇಶಿ ನೆಲದಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಈಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ರೋಹಿತ್ ಏಕಾಂಗಿ ಹೋರಾಟ ವ್ಯರ್ಥ

ಇಂಗ್ಲೆಂಡ್ ತಂಡವು ಬೆನ್ ಡಕೆಟ್ 141(135), ಜೇಕಬ್ ಬೆಥೆಲ್ 91(93), ಜೋ ರೂಟ್‌ ಅಜೇಯ 74 ರನ್‌ಗಳ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 387 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡದ ಪರ ರೋಹಿತ್ ಶರ್ಮಾ 138(110) ವಿರಾಟ್ ಕೊಹ್ಲಿ 74(60), ಶುಭ್‌ಮನ್ ಗಿಲ್ 77(84) ರನ್‌ಗಳ ಕೊಡುಗೆ ನೀಡಿದರು.

ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಹಾಗೂ ಇಂಗ್ಲೆಂಡ್ ವೇಗಿ ಸ್ಯಾಮ್ ಕರನ್‌ ಅವರ (4/75) ಅವರ ಮಾರಕ ಬೌಲಿಂಗ್‌ ದಾಳಿಯಿಂದಾಗಿ ಭಾರತ 27 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಒಟ್ಟಿನಲ್ಲಿ ಭಾರತ ಸರಣಿ ಕೈಚೆಲ್ಲಿದರೂ ಸಹ ರೋಹಿತ್ ಶರ್ಮಾ ಅವರ ಈ ಐತಿಹಾಸಿಕ ಇನಿಂಗ್ಸ್ ಲಾರ್ಡ್ಸ್ ಕ್ರಿಕೆಟ್ ಮೈದಾನದ ಇತಿಹಾಸದಲ್ಲಿ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತದ್ದಾಗಿದೆ.

ಇನ್ನೂ ಈ ಪಂದ್ಯದಲ್ಲಿ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಬೌಲರ್‌ಗಳು ದುಬಾರಿಯಾದ್ದದ್ದು. ಪರ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾದರು. ಗುರ್ನೂರ್ ಬ್ರಾರ್ 10 ಓವರ್‌ ಬೌಲಿಂಗ್ ಎಸೆದು ಬರೋಬ್ಬರಿ 97 ರನ್‌ ಬಿಟ್ಟುಕೊಟ್ಟು ಟೀಮ್ ಇಂಡಿಯಾ ಪರ ದುಬಾರಿ ಬೌಲರ್ ಎನಿಸಿಕೊಂಡರು. ಉಳಿದಂತೆ ಪ್ರಿನ್ಸ್‌ ಯಾದವ್ 79, ಅರ್ಷದೀಪ್ ಸಿಂಗ್ 72, ಪ್ರಸಿದ್ಧ್‌ ಕೃಷ್ಣ 69/2, ಅಕ್ಷರ್ ಪಟೇಲ್ 61 ರನ್ ಬಿಟ್ಟುಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+