BMTC: ಪ್ರಯಾಣಿಕರಿಗೆ ಗುಡ್‌ನ್ಯೂಸ್, ಇಂದಿನಿಂದ ಹೊಸ ಮಾರ್ಗದಲ್ಲಿ ಬಸ್ ಸೇವೆ, ಎಲ್ಲಿಂದ-ಎಲ್ಲಿಗೆ?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಹೆಚ್ಚಿನ ಸ್ಪಂದನೆ ಸಿಗುತ್ತಿರುವ ಜೊತೆಗೆ ಪ್ರಯಾಣಿಕರ ಸಂಚಾರದಲ್ಲಿ ಏರಿಕೆ ಕಂಡು ಬಂದಿದೆ. ಅಗತ್ಯತೆ ಆಧಾರದಲ್ಲಿ ಬೆಂಗಳುರು ಮಹಾನಗರ ಸಾರಿಗೆ ಸಂಸ್ಥೆ (BMTC) ಹೊಸ ಮಾರ್ಗದಲ್ಲಿ ಬಸ್‌ಗಳನ್ನು ಪರಿಚಯಿಸಿದೆ. ಎಲ್ಲಿಂದ ಎಲ್ಲಿಗೆ? ಸಂಚಾರ, ಸಮಯ, ಮಾರ್ಗ, ನಿಲುಗಡೆ ವಿವರ ಮುಂದಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗದಲ್ಲಿ ಇದೇ ಜುಲೈ 20ರಿಂದ ಅತ್ತಿಬೆಲೆ ಬಸ್ ನಿಲ್ದಾಣದಿಂದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT)ರೈಲು ನಿಲ್ದಾಣದ ಬಸ್‌ಗಳ ಸಂಚಾರ ಶುರುವಾಗಿದೆ.

BMTC

ಅತ್ತಿಬೆಲೆ ಬಸ್ ನಿಲ್ದಾಣ ಬಿಡುವ ಸಮಯ

ಬಿಎಂಟಿಸಿ ಬಸ್ ಅತ್ತಿಬೆಲೆ ಬಸ್ ನಿಲ್ದಾಣದಿಂದ ಬೆಳಗ್ಗೆ 05:20 ಗಂಟೆ, 06: 10, 07: 00, 07:50, 08:40, 09: 30, 10:20, 11:20 ಮಧ್ಯಾಹ್ನ 13:20 ಗಂಟೆ, 15:20, ಸಂಜೆ 16:20ಕ್ಕೆ, 17: 20, 1820 ಮತ್ತು ರಾತ್ರಿ 19:20, 20:30 ಹಾಗೂ 21: 30 ಗಂಟೆಗೆ ಹೊರಡುತ್ತದೆ.

ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಬಿಎಂಟಿಸಿ ಬಸ್ ಬೆಳಗ್ಗೆ 05:20 ಗಂಟೆಗೆ, 06:10, 07:00, 07:50, 08:40, 09:30, 10:20, 11:20 ಮಧ್ಯಾಹ್ನ 13:20, 15:20, ಸಂಜೆ 16:20, 17:20, 18:20 ರಾತ್ರಿ 19:20, 20:30 ಹಾಗೂ 21: 30 ಗಂಟೆಗೆ ಪ್ರಯಾಣ ಆರಂಭಿಸುತ್ತದೆ.

ಬಸ್ ನಿಲುಗಡೆ ನಿಲ್ದಾಣ, ಮಾರ್ಗದ ವಿವರ

ಅತ್ತಿಬೆಲೆ ಬಸ್ ನಿಲ್ದಾಣದಿಂದ ಸಂಚರಿಸುವ ಬಸ್ ಚಂದಾಪುರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮನಹಳ್ಳಿ ಮಾರ್ಗವಾಗಿ ಸಾಗಿ ಮಡಿವಾಳ, ಕೋರಮಂಗಲ ವಾಟರ್ ಟ್ಯಾಂಕ್, ದೂಪನಹಳ್ಳಿ, ಇಂದಿರಾನಗರ ಮೂಲಕ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ. ಈ ಮೇಲಿನ ಎಲ್ಲ ಕಡೆಗೂ ನಿಲುಗಡೆ ನೀಡಲಿದೆ. ಇದರಿಂದ ಆಯಾ ಭಾಗದ ನೌಕರರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರಿಗೆ ಹೆಚ್ಚುವರಿ ಬಿಎಂಟಿಸಿ ಬಸ್ ಸಿಕ್ಕಂತಾಗುತ್ತದೆ.

ನಮ್ಮ ಮೆಟ್ರೋ ಫೀಡರ್ ಬಸ್ ಸೇವೆ ಆರಂಭ

ಇತ್ತೀಚೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) MF 14VJ ಹೆಸರಿನಲ್ಲಿ ಬೆಂಗಳೂರು ಮೆಟ್ರೋ ಫೀಡರ್ ಬಸ್‌ ಸೇವೆಯನ್ನು ಬಿಡುಗಡೆ ಮಾಡಿತ್ತು. ವಾಜರಹಳ್ಳಿ ಮೆಟ್ರೋ ನಿಲ್ದಾಣದಿಂದ ಜ್ಞಾನಭಾರತೀ ಮೆಟ್ರೋ ನಿಲ್ದಾಣದ ಮಧ್ಯ ಈ ಫಿಡರ್ ಬಸ್ ಓಡಾಡಿಲಿದೆ.

ಕರಿಷ್ಮಾ ಹಿಲ್ಸ್, ಶಶಿಧರ್ ಬಡಾವಣೆ, ಚನ್ನಸಂದ್ರ, ಬಿಇಎಂಎಲ್ ಐದನೇ ಹಂತ, ಬಿಇಎಂಎಲ್ ಕಾಂಪ್ಲೆಕ್ಸ್, ರಾಜೇಶ್ವರಿ ದೇವಸ್ಥಾನ ಮಾರ್ಗವಾಗಿ, ನಿಲುಗಡೆ ನೀಡುತ್ತದೆ. ಬೆಳಗ್ಗೆ 8.15 ಗಂಟೆಯಿಂದ ಪ್ರತಿ 20, 25 ನಿಮಿಷಗಳ ಮಧ್ಯದ ಅಂತದಲ್ಲಿ ವಾಜರಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ಅಷ್ಟೇ ನಿಮಿಷಗಳ ಅಂತರಕ್ಕೊಂದು ಎಂಬಂತೆ ಬಿಎಂಟಿಸಿ ಮೆಟ್ರೋ ಬಸ್‌ಗಳು ಜ್ಞಾನಭಾರತಿ ಮೆಟ್ರೋ ನಿಲ್ದಾಣದಿಂದ ಸಂಚಾರ ಮಾಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+