ನಿಮ್ಮ ಫೋನ್ ವಾಲ್‌ಪೇಪರ್ ಆಗಿ ದೇವರ ಫೋಟೋ ಹಾಕಿದ್ದೀರಾ? ಹಾಗಿದ್ದರೆ ಈ ವಿಚಾರಗಳೂ ತಿಳಿದಿರಲಿ
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಮೊಬೈಲ್ ಫೋನ್ ವಾಲ್‌ಪೇಪರ್ ಆಗಿ ದೇವರ ಫೋಟೋಗಳನ್ನು ಹಾಕಿಕೊಳ್ಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ತಮ್ಮ ನೆಚ್ಚಿನ ದೇವತೆಯ ಚಿತ್ರವನ್ನು ತಮ್ಮ ಫೋನ್‌ನಲ್ಲಿ ಭಕ್ತಿ ಮತ್ತು ನಂಬಿಕೆಯಿಂದ ಇಟ್ಟುಕೊಂಡು ಪ್ರತಿದಿನ ಪ್ರಾರ್ಥಿಸುವವರು ಅನೇಕರಿದ್ದಾರೆ. ಆದರೆ ತಮ್ಮ ಮೊಬೈಲ್ ಫೋನ್‌ನಲ್ಲಿ ದೇವರು ಅಥವಾ ದೇವತೆಯ ಚಿತ್ರವನ್ನು ಇಟ್ಟುಕೊಳ್ಳುವುದು ಮಾತ್ರವಲ್ಲದೆ ಅದಕ್ಕೆ ಸರಿಯಾದ ಗೌರವವನ್ನು ನೀಡಬೇಕು. ಇಲ್ಲದಿದ್ದರೆ, ಅದು ನಕಾರಾತ್ಮಕ ಫಲಿತಾಂಶಗಳನ್ನು ಬೀರುವ ಸಾಧ್ಯತೆ ಇರುತ್ತದೆ.
ಮೊಬೈಲ್ ಫೋನ್ ವಾಲ್ ಪೇಪರ್‌ನಲ್ಲಿ ದೇವರ ಫೋಟೋ
ಮೊಬೈಲ್ ಫೋನ್ ವಾಲ್ ಪೇಪರ್‌ನಲ್ಲಿ ದೇವರ ಫೋಟೋ ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಫೋನ್‌ನಲ್ಲಿ ದೇವರ ಫೋಟೋ ಇಟ್ಟುಕೊಂಡು ಅದೇ ಮೊಬೈಲ್ ಫೋನ್ ಅನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗುವುದು ಸಾಮಾನ್ಯ ವಿಷಯವಾಗಿದೆ. ಆದರೆ ಅದರಲ್ಲಿ ದೇವರ ಚಿತ್ರವಿದ್ದರೆ, ಅದು ಆಧ್ಯಾತ್ಮಿಕವಾಗಿ ಗೌರವಾನ್ವಿತ ವಿಷಯವಲ್ಲ ಎನ್ನುತ್ತದೆ ಜ್ಯೋತಿಷ್ಯ.

ಈ ರೀತಿ ನಡೆದುಕೊಳ್ಳುವುದು ಬಹಳ ಮುಖ್ಯ
ಇದಲ್ಲದೆ, ಪ್ರತಿ ಬಾರಿ ನಿಮ್ಮ ಮೊಬೈಲ್ ಕೈಯಲ್ಲಿ ಹಿಡಿದುಕೊಳ್ಳುವಾಗಲೂ ಅದರ ಮೇಲೆ ಕಾಣುವ ದೇವರ ಫೋಟೋವನ್ನು ಗೌರವದಿಂದ ಕಾಣಬೇಕು. ಅದಕ್ಕೆ ನಮಸ್ಕರಿಸಬೇಕು . ಹೀಗೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಬುದ್ಧಿವಂತಿಕೆ ಹೆಚ್ಚಾಗುತ್ತದೆಯಂತೆ. ಅದೇ ಸಮಯದಲ್ಲಿ, ದೇವರ ಫೋಟೋ ಇಟ್ಟುಕೊಂಡಿರುವ ಫೋನ್ ನಿಮ್ಮ ಪಾದಗಳಿಗೆ ತಾಗಬಾರದು. ಅದನ್ನು ಎಲ್ಲೆಂದರಲ್ಲಿ ಅಜಾಗರೂಕತೆಯಿಂದ ಎಸೆಯಬಾರದು. ಅಶುದ್ಧ ಸ್ಥಳಗಳಲ್ಲಿ ಇಡಬಾರದು ಎನ್ನುವುದನ್ನು ಗಮನಿಸಿಕೊಳ್ಳಬೇಕು. ನೀವು ಭಕ್ತಿಯಿಂದ ಪೂಜಿಸುವಷ್ಟೇ ಗೌರವವನ್ನು ಮೊಬೈಲ್‌ನಲ್ಲಿರುವ ದೇವರ ಫೋಟೋಗೂ ನೀಡಬೇಕು ಎನ್ನುವುದು ಬಹಳ ಮುಖ್ಯ.
ಶಾಪಕ್ಕೆ ಮೊಬೈಲ್ ಫೋಟೋ ಕಾರಣವಲ್ಲ
ಇನ್ನು ತಾಯಿಯೇ ಪರಮ ಶಕ್ತಿ. ತಾಯಿ ತನ್ನ ಮಕ್ಕಳ ಮೇಲೆ ಯಾವತ್ತೂ ಕೋಪಗೊಳ್ಳುವುದಿಲ್ಲ. ಈ ಭೂಮಿಯ ಮೇಲೆ ಕೆಟ್ಟ ಮಗ ಇರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ಮಾತಿದೆ. ಹಾಗೆಯೇ ದೇವಿ ಪ್ರತಿಯೊಬ್ಬರನ್ನೂ ತನ್ನ ಮಗುವಿನಂತೆ ಕಾಣುತ್ತಾಳೆ. ಹಾಗಾಗಿ ತಾಯಿ ಯಾವಾಗಲೂ ತನ್ನ ಭಕ್ತರ ಮೇಲೆ ಆಶೀರ್ವಾದವನ್ನೇ ಹರಿಸುತ್ತಾಳೆ. ಮೊಬೈಲ್‌ನಲ್ಲಿ ಆಕೆಯ ಪೋಟೋ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಆ ವ್ಯಕ್ತಿಗೆ ಶಿಕ್ಷೆ ನೀಡುವುದಿಲ್ಲ. ಅಥವಾ ಆ ವ್ಯಕ್ತಿಯ ಜೀವನದಲ್ಲಿ ಆಗುವ ಬದಲಾವಣೆಗಳಿಗೆ ಆ ಫೋಟೋವೇ ಕಾರಣ ಎಂದೂ ಅಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಕಾರ್ಯಗಳಿಗೆ ಜವಾಬ್ದಾರನಾಗಿರುತ್ತಾನೆ. ತಾನು ಒಳ್ಳೆಯ ಕೆಲಸ ಮಾಡುತ್ತೇನೆಯೋ ಅಥವಾ ಕೆಟ್ಟ ಕೆಲಸ ಮಾಡುತ್ತೇನೆಯೋ ಎನ್ನುವ ನಿರ್ಧಾರ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕವಾಗಿರುತ್ತದೆ. ಹಾಗಾಗಿ ಕರ್ಮಕ್ಕೆ ಅನುಸಾರವಾಗಿ ಫಲ ಪಡೆಯುತ್ತಾನೆ.
ಭಕ್ತಿ , ಗೌರವ ಮುಖ್ಯ
ಯಾರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದೇವರು ಅಥವಾ ದೇವತೆಯ ಚಿತ್ರವನ್ನು ಇಟ್ಟುಕೊಂಡಿರುತ್ತಾರೆಯೋ ಅವರು ತಪ್ಪದೇ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಊಟ ಮಾಡುವಾಗ ಮೊಬೈಲ್ ಅನ್ನು ಪಕ್ಕಕ್ಕೆ ಇಡಬೇಕು. ದೇವರ ಚಿತ್ರವಿರುವ ಫೋನ್ ಅನ್ನು ಗೌರವದಿಂದ ಇಡಬೇಕು. ಮನೆಯಲ್ಲಿ ಯಾವ ರೀತಿ ದೇವರ ಚಿತ್ರವನ್ನು ಸ್ವಚ್ಛವಾಗಿ ಮತ್ತು ಶುದ್ಧವಾಗಿ ಇಡುತ್ತೇವೆಯೋ ಅದೇ ರೀತಿಯಲ್ಲಿ ಅದೇ ಭಾವನೆಯಲ್ಲಿ ಮೊಬೈಲ್ ಫೋನ್ ಅನ್ನು ಕೂಡಾ ಇಟ್ಟುಕೊಳ್ಳಬೇಕು. ಫೋಟೋವನ್ನು ವಾಲ್‌ಪೇಪರ್ ಆಗಿ ಹೊಂದಿಸುವಲ್ಲಿ ಮಾತ್ರವಲ್ಲದೆ, ಚಿತ್ರಕ್ಕೆ ಸರಿಯಾದ ಗೌರವವನ್ನು ನೀಡುವಲ್ಲಿಯೂ ಭಕ್ತಿ ಪ್ರತಿಫಲಿಸಬೇಕು.


Click it and Unblock the Notifications
