Bengaluru Property: ಬೆಂಗಳೂರಲ್ಲಿ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಇದು ಸರಿಯಾದ ಸಮಯವೇ, ಎಷ್ಟು ದುಡ್ಡು ಬೇಕು

Bengaluru Property: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆಯು ಹೆಚ್ಚಾಗುತ್ತಲ್ಲೇ ಇದೆ. ಇನ್ನು ಬೆಂಗಳೂರಿನಲ್ಲಿ ಒಂದು ಸುಂದರವಾದ ಮನೆ ಖರೀದಿ ಮಾಡುವುದಂತೂ ದೂರದ ಮಾತಾಗಿಯೇ ಉಳಿದಿದೆ. ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಆಸ್ತಿ ಬೆಲೆಗಳು ಏರುತ್ತಲೇ ಇದೆ. ಕೆಲವು ಭಾಗಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದರಿಂದ ಬೆಂಗಳೂರಿನಲ್ಲಿ ಹಲವರು ಭೂಮಿ, ಪ್ರಾಪರ್ಟಿ ಹಾಗೂ ಮನೆ ಖರೀದಿ ಮಾಡುವ ಆಸೆಯನ್ನೇ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಬೇಕು ಎನ್ನುವ ಮಧ್ಯಮ ವರ್ಗದವರ ಕನಸು ಕನಸಾಗಿಯೇ ಉಳಿದಿದೆ. ಅನೇಕ ವೃತ್ತಿಪರರಿಗೆ ಸಂಬಳ ಹೆಚ್ಚಾಗಿದ್ದರೂ, ಆದಾಯ ಮತ್ತು ಮನೆ ಬೆಲೆಗಳ ನಡುವಿನ ಅಂತರವು ದೀರ್ಘಾವಧಿಯ ಗೃಹ ಸಾಲಗಳನ್ನು ತೆಗೆದುಕೊಳ್ಳಬೇಕೇ ಬೇಡವೇ ಎನ್ನುವ ಪ್ರಶ್ನೆ ಎದುರಾಗುವಂತೆ ಮಾಡಿದೆ.

ಬೆಂಗಳೂರು ನಗರದಲ್ಲಿ ವಾರ್ಷಿಕವಾಗಿ ಸುಮಾರು 80-90 ಲಕ್ಷ ರೂ. ಗಳಿಸುವ ದಂಪತಿ ಇತ್ತೀಚಿನ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ವಾರ್ಷಿಕವಾಗಿ ದೊಡ್ಡ ಮಟ್ಟದ ಆದಾಯ ಬಂದರೂ ಸಹ, ಮನೆ ಖರೀದಿ ಮಾಡುವುದಕ್ಕೆ ಧೈರ್ಯವಾಗುತ್ತಿಲ್ಲ. ಮನೆ ಖರೀದಿ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಮನೆ ಖರೀದಿಸುವುದು ನಿಜವಾಗಿಯೂ ಆರ್ಥಿಕವಾಗಿ ಸರಿಯಾದ ನಿರ್ಧಾರವೇ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಪೋಸ್ಟ್‌ನಿಂದ ಬೆಂಗಳೂರು ನಗರದಲ್ಲಿ ಮನೆಯನ್ನು ಬಾಡಿಗೆ ಅಥವಾ ಭೌಗ್ಯಕ್ಕೆ ಪಡೆಯುವುದು ಒಳ್ಳೆಯ ನಿರ್ಧಾರವೇ ಎಂದು ಜನ ಯೋಚನೆ ಮಾಡುವುದಕ್ಕೆ ಮುಂದಾಗಿದ್ದಾರೆ.

Bengaluru Property

ಇನ್ನು ವೈರಲ್ ಪೋಸ್ಟ್‌ನಲ್ಲಿ ದಂಪತಿಯು ಬೆಂಗಳೂರಿನಲ್ಲಿ ಫ್ಲಾಟ್ ಖರೀದಿಸುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದಾಗ್ಯೂ, ಆಸ್ತಿ ಬೆಲೆಗಳನ್ನು ನೋಡಿದ ನಂತರ ಈ ಹಂತದಲ್ಲಿ ಮನೆ ಖರೀದಿಸುವುದು ಸರಿಯಾದ ನಿರ್ಧಾರವೇ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾವು ಬೆಂಗಳೂರಿನಲ್ಲಿ ಸ್ಥಳ ಖರೀದಿಸುವ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದ್ದೇವೆ, ಆದರೆ ನಾನು ಪ್ರತಿ ಬಾರಿ ಪ್ರಾಪರ್ಟಿ ಬೆಲೆ ನೋಡಿದಾಗ ಕಷ್ಟವೆನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳು 1.5 ಕೋಟಿ ರೂ.ನಿಂದ 2.5 ಕೋಟಿ ರೂ. ವರೆಗೆ ಇದೆ. ಆದರೆ ಮುಂದಿನ 20 ರಿಂದ 30 ವರ್ಷಗಳವರೆಗೆ ದೊಡ್ಡ ಇಎಂಐಗಳನ್ನು ಪಾವತಿಸಬೇಕಾಗುತ್ತದೆ. ಅಷ್ಟು ಸುದೀರ್ಘ ಅವಧಿ ಇಎಂಐ ಪಾವತಿ ಮಾಡುವುದು ಸವಾಲಿನ ಕೆಲಸ ಎಂದು ಅವರು ಹೇಳಿಕೊಂಡಿದ್ದಾರೆ.

ಬಾಡಿಗೆಯ ಮೂಲಕ ಸಾಲ ಪಾವತಿ ಮಾಡಬಹುದು ನಿಜ. ಆದರೆ, ಸಾಲದ ವೆಚ್ಚಗಳಿಗೆ ಹೋಲಿಸಿದರೆ ಬಾಡಿಗೆ ತುಂಬಾ ಕಡಿಮೆ ಇದೆ ಎಂದು ಕೆಲವರು ಹೇಳಿದ್ದಾರೆ. ಇಎಂಐಯಲ್ಲಿ ಮನೆ ತೆಗೆದುಕೊಂಡರೆ ಆದಾಯದ 30-35% ಕ್ಕಿಂತ ಕಡಿಮೆ ಇರಿಸುವುದು ಅಥವಾ ಕಡಿಮೆ ರಿಸ್ಕ್‌ ತೆಗೆದುಕೊಳ್ಳುವುದು ಸಮಂಜಸವೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್‌ಗೆ ಇತ್ತೀಚೆಗೆ ಮನೆಗಳನ್ನು ಖರೀದಿಸಿದ ಅಥವಾ ಇನ್ನೂ ಬಾಡಿಗೆಗೆ ಆಯ್ಕೆ ಮಾಡಿಕೊಳ್ಳುತ್ತಿರುವವರು ಹೆಚ್ಚು ಕಮೆಂಟ್ ಮಾಡಿದ್ದಾರೆ. ಈಗ ಇರುವ ಉದ್ಯೋಗ ಅಭದ್ರತೆಯಲ್ಲಿ ಮನೆ ಖರೀದಿ ಮಾಡುವುದಕ್ಕಿಂತ ಕಾದು ನೋಡುವುದೇ ಉತ್ತಮ ನಿರ್ಧಾರ. ಬೆಂಗಳೂರಿನಂತಹ ನಗರದಲ್ಲಿ ಭೂಮಿ ಬೆಲೆಯು ಭಾರೀ ಹೆಚ್ಚಳವಾಗುತ್ತಿದೆ. ಹಾಗೆಂದು ಸಾಲ ಮಾಡಲು ಸಹ ಸಾಧ್ಯವಿಲ್ಲ. ದೀರ್ಘ ಅವಧಿಯ ಸಾಲವು ಹೊರೆಯಾಗಬಹುದು ಎಂದು ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+