Karna Serial: ತಾಳಿ ಶಾಸ್ತ್ರ ಸಂಭ್ರಮದಲ್ಲಿ ಕರ್ಣ - ನಿಧಿ ಜೋಡಿ, ಸತ್ಯಗಳ ಅನಾವರಣ!
Karna Serial: ಕರ್ಣ ಸೀರಿಯಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕರ್ಣ ಮತ್ತು ನಿಧಿ ಒಂದಾದ ಮೇಲೆ ಇಬ್ಬರು ಸಂಭ್ರಮದಿಂದ ಕಾಲ ಕಳೆಯುತ್ತಿದ್ದಾರೆ. ಕರ್ಣ ಮತ್ತು ನಿಧಿಯು ಹಲವು ಸವಾಲುಗಳ ನಂತರ ಮದುವೆಯಾಗಿದ್ದರು. ನಿತ್ಯಾಳೇ ಮುಂದೆ ನಿಂತು ನಿಧಿ ಮತ್ತು ಕರ್ಣನ ಮದುವೆ ಮಾಡಿಸಿ ಮಹಾ ತ್ಯಾಗ ಮಾಡಿದ್ದಳು. ಆದರೆ, ಕಳೆದ ಹಲವು ಎಪಿಸೋಡ್‌ಗಳಿಂದ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಕಾಣಿಸಿಕೊಂಡಿಲ್ಲ. ಇದರ ನಡುವೆ ಕರ್ಣ ಸೀರಿಯಲ್ ಹಲವು ಹೊಸ ಹೊಸ ತಿರುವುಗಳನ್ನು ಪಡೆದುಕೊಂಡಿದೆ. ಅದರಲ್ಲಿ ಧಾರಾವಾಹಿಗೆ ಹೊಸ ವಿಲನ್ ಎಂಟ್ರಿ ಕೊಡುತ್ತಿರುವುದು ಹಾಗೂ ನಿಧಿ ಅವರ ತಂದೆ ಮತ್ತು ತಾಯಿ ಹೇಗೆ ಮೃತಪಟ್ಟರು ಎಂದು ಕಂಡು ಹಿಡಿಯಲು ಮುಂದಾಗಿರುವುದು ಸಹ ಸೇರಿದೆ. ಈ ನಡುವೆ ಕರ್ಣ ಮತ್ತು ನಿಧಿಯು ತಾಳಿ ಶಾಸ್ತ್ರ ಸಂಭ್ರಮದಲ್ಲಿ ಮುಳುಗಿದ್ದಾರೆ. "ತಾಳಿ ಶಾಸ್ತ್ರ ಸಂಭ್ರಮದಲ್ಲಿ ಮುಳುಗಿದ್ದಾರೆ ಮುದ್ದು ಜೋಡಿ.." ಎನ್ನುವ ಸಾಲುಗಳೊಂದಿಗೆ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ವೀಕ್ಷಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಶಾಸ್ತ್ರೋಕ್ತವಾಗಿ ನಿಧಿಯ ತಾಳಿ ಶಾಸ್ತ್ರ ನಡೆದಿದೆ. ಹೊಸ ತಾಳಿಯನ್ನು ನಿಧಿಗೆ ಕರ್ಣ ಕಟ್ಟಿದ್ದು, ಹಳೆಯ ತಾಳಿಯನ್ನು ಅಥವಾ ಮದುವೆ ಸಮಯದಲ್ಲಿ ಕಟ್ಟಲಾಗಿದ್ದ ತಾಳಿಯನ್ನು ತೆಗೆಯಲಾಗಿದೆ. ಶಾಸ್ತ್ರಿಗಳು ಹೊಸ ತಾಳಿ ಕಟ್ಟುವಂತೆ ಕರ್ಣಗೆ ಹೇಳಿದ್ದಾರೆ. ತಾಳಿ ಕಟ್ಟಿದ ನಂತರ ಅರಿಶಿನ ಮತ್ತು ಕುಂಕುಮ ಹಚ್ಚಲಾಗಿದೆ. ನಂತರ ನಿಧಿಗೆ ಕಾಲುಂಗುರ ತೊಡಿಸಲಾಗಿದೆ. ಕಾಲುಂಗುರ ಬರೀ ಒಡವೆಯಲ್ಲ ಅದರ ಹಿಂದೆ ಮಹತ್ವವಿದೆ ಎಂದು ಅಜ್ಜಿ ಹೇಳಿದ್ದಾರೆ. ಕಾಲಿನ ಎರಡನೇ ಬೆರಳಿನ ನರವು ಗರ್ಭಕೋಶಕ್ಕೆ ಕನೆಕ್ಟ್ ಆಗಿರುತ್ತದೆ. ನಡೆಯುವಾಗ ಬೆಳ್ಳಿ ಕಾಲುಂಗುರ ಭೂಮಿಗೆ ತಾಗುತ್ತದೆ. ಆ ಒತ್ತಡದಿಂದ ಹೆಣ್ಣಿನ ಗರ್ಭಾಶಯ ಗಟ್ಟಿಯಾಗುತ್ತದೆ. ಇದು ಸಂಪ್ರದಾಯ ಮಾತ್ರವಲ್ಲ ಇಂದಿನ ಕಾಲದವರು ಕೇಳುತ್ತಾರಲ್ಲ, ಸೈನ್ಸ್... ಇದೇ ಆ ಸೈನ್ಸ್ ಅಂತ ಅಜ್ಜಿ ವಿವರಿಸಿದ್ದಾರೆ.

ಅಜ್ಜಿ ಅವರ ವಿವರಣೆಗೆ ಕರ್ಣ ಸಹ ಸಹಮತ ವ್ಯಕ್ತಪಡಿಸಿದ್ದಾನೆ. ಬಂಗಾರಿ ನೀನು ಹೇಳಿದ್ದು ಶೇ 100 ಸರಿಯಾಗಿದೆ ಅಂತ ಹೇಳಿದ್ದಾನೆ ಕರ್ಣ. ನಮ್ಮ ಬದುಕಿನಲ್ಲಿ ಸುಖ ಬರಲಿ, ಕಷ್ಟ ಬರಲಿ ನಿಮ್ಮ ಕೈಯನ್ನು ಬಿಡಲ್ಲ ಅಂತ ಕರ್ಣ ಹೇಳಿದ್ದಾನೆ. ಇದಕ್ಕೆ ನಿಧಿ ನೀನು ನನ್ನ ಜೊತೆಯಲ್ಲಿದ್ದರೆ ಸಾಕು ಎಂಥಹ ಕಷ್ಟವಾದರೂ ಸುಖವಾಗಿ ಬದಲಾಗುತ್ತೆ ಅಂತ ಹೇಳಿದ್ದಾಳೆ.
Karna Serial: ಸತ್ಯಗಳ ಅನಾವರಣ
ಇನ್ನು ಕರ್ಣ ಸೀರಿಯಲ್‌ನಲ್ಲಿ ಕರ್ಣ ಸತ್ಯಗಳಿಗೆ ಹತ್ತಿರುವಾಗುತ್ತಿರುವಂತೆ ತೋರಿಸಲಾಗಿದೆ. ತನಗೆ ಸಿಕ್ಕ ಫೋಟೋಗಳನ್ನು ಕರ್ಣ ರಮೇಶ್ ರೂಮ್‌ನಲ್ಲಿ ಇರಿಸಿದ್ದಾನೆ. ಈ ಫೋಟೋಗಳನ್ನು ನೋಡ ರಮೇಶ್ ಶಾಕ್ ಆಗಿದ್ದಾನೆ. ರಮೇಶ್‌ನ ಹಳೆಯ ಲವರ್ ಇರುವಂತೆ ತೋರಿಸಲಾಗಿದೆ. ಈ ಫೋಟೋಗಳು ಇಲ್ಲಿಗೆ ಹೇಗೆ ಬಂತು ಅಂತ ರಮೇಶ್ ಪ್ರಶ್ನೆ ಮಾಡಿದ್ದು, ಅದೇ ಕ್ಷಣಕ್ಕೆ ಕರ್ಣ ಎಂಟ್ರಿ ಕೊಟ್ಟಿದ್ದಾನೆ. ಈ ಫೋಟೋ ನಿಮಗೆ ತುಂಬಾ ಮುಖ್ಯವಾಗಿತ್ತು ಅಲ್ವಾ ಅಂತ ಕರ್ಣ ಪ್ರಶ್ನೆ ಮಾಡಿದ್ದಾನೆ. ನಿಮ್ಮ ಜೊತೆಯಲ್ಲಿ ಇರುವವರು ಯಾರು, ನಿಧಿ ಅಪ್ಪ - ಅಮ್ಮನಿಗೂ ನಿಮಗೂ ಏನು ಸಂಬಂಧ ಅಂತ ಕರ್ಣ ಬಂದು ರಮೇಶ್ ಬಳಿ ಪ್ರಶ್ನೆ ಮಾಡಿದ್ದಾನೆ.
Karna Serial: ವೀಕ್ಷಕರದ್ದು ಅದೊಂದೇ ಪ್ರಶ್ನೆ
ಇನ್ನು ಕರ್ಣ ಸೀರಿಯಲ್ ಉತ್ತಮ ತಿರುವುಗಳನ್ನು ಪಡೆದುಕೊಂಡು ಒಳ್ಳೆಯ ಮನರಂಜನೆಯನ್ನು ಕೊಡುತ್ತಿದೆ. ಈ ಸುಂದರ ದೃಶ್ಯಗಳು ವೀಕ್ಷಕರಲ್ಲಿ ಸಂತೋಷವನ್ನುಂಟು ಮಾಡಿದೆ. ಹೊಸ ಎಪಿಸೋಡ್‌ನಲ್ಲಿನ ಟ್ವಿಸ್ಟ್‌ಗೆ ವೀಕ್ಷಕರು ಸಹ ಫಿದಾ ಆಗಿದ್ದಾರೆ. ಆದರೆ ಕರ್ಣ ಸೀರಿಯಲ್ ಅನ್ನು ನೋಡುತ್ತಿರುವ ವೀಕ್ಷಕರದ್ದು ಒಂದೇ ಪ್ರಶ್ನೆ ನಿತ್ಯಾ ಎಲ್ಲಿ ಕಾಣಿಸುತ್ತಿಲ್ಲ ಎನ್ನುವುದು ಮಾತ್ರ. ಮೊದಲಿನ ಕಥೆ ಎಲ್ಲಾ ನೋಡಿದಾಗ ನಮಗೆ ಇವರಿಬ್ಬರೂ ಲಾಸ್ಟ್ ತನಕ ಮದುವೆ ಆಗೋದೇ ಇಲ್ಲ ಅಂತಾ ಭಾವಿಸಿದ್ವಿ. ಆಗ ಬಹಳ ಬೇಜಾರಾಗಿತ್ತು ಈಗ ಖುಷಿ ಆಗ್ತಾ ಇದೆ ಎಂದು ವೀಕ್ಷಕರು ಹೇಳಿದ್ದಾರೆ.












Click it and Unblock the Notifications