ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಭರ್ಜರಿ ನೇಮಕಾತಿ: ನಿಮ್ಮದು ಪಿಯುಸಿ ಆಗಿದ್ದರೆ, ಇಂದೇ ಅರ್ಜಿ ಸಲ್ಲಿಸಿ
ಭ್ರಷ್ಟಾಚಾರ ನಿಗ್ರಹಿಸುವ ರಾಜ್ಯದ ಉನ್ನತ ತನಿಖಾ ಸಂಸ್ಥೆಯಾಗಿರುವ ಕರ್ನಾಟಕ ಲೋಕಾಯುಕ್ತದಲ್ಲಿ ಖಾಲಿ ಹುದ್ದಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ಲೋಕಾಯುಕ್ತದಲ್ಲಿರುವ ಖಾಲಿ ಇರುವ ಒಟ್ಟು 25 'ಕ್ಲರ್ಕ್-ಕಂ-ಟೈಪಿಸ್ಟ್' ಹುದ್ದೆಗಳನ್ನ ನೇರ ನೇಮಕಾತಿಯಿಂದ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ, ಅದರಲ್ಲೂ ವಿಶೇಷವಾಗಿ ಪಿಯುಸಿ ಮುಗಿಸಿ ಟೈಪಿಂಗ್ ಗೊತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ. ಕೇವಲ ಆನ್‌ಲೈನ್ ಮೂಲಕ ಈ ಗ್ರೂಪ್-ಸಿ ವೃಂದದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಲೋಕಾಯುಕ್ತ ಸಂಸ್ಥೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜುಲೈ 17, 2026 ಅಂದರೆ ನಿನ್ನೆಯಿಂದಲೇ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 17ರ ವರೆಗೆ ಅರ್ಜಿಗಳನ್ನು ಹಾಕಬಹುದು. ಅರ್ಜಿಗಳನ್ನ ಅಧಿಕೃತ ವೆಬ್‌ಸೈಟ್ https://lokayukta.karnataka.gov.in ನಲ್ಲಿ ಮಾತ್ರ ಸಲ್ಲಿಸಬಹುದು.
ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳು
1. ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
2. ಇದರ ಜೊತೆಗೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಕಿರಿಯ ದರ್ಜೆಯ ಟೈಪಿಂಗ್ ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆಯನ್ನಾ ಹೊಂದಿರಬೇಕು.
ಅರ್ಜಿ ಶುಲ್ಕದ ವಿವರಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವರ್ಗಾವಾರು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನೂ ಕೂಡ ಆನ್‌ಲೈನ್‌ನಲ್ಲೇ ಕಟ್ಟಬೇಕು.
ಸಾಮಾನ್ಯ ವರ್ಗ , ಪ್ರವರ್ಗ-2(ಎ), 2(ಬಿ), 3(ಎ) ಮತ್ತು 3(ಬಿ) ವರ್ಗದ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಕಟ್ಟಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
1. ಮೊದಲು ಕರ್ನಾಟಕ ಲೋಕಾಯುಕ್ತದ ಅಧಿಕೃತ ವೆಬ್‌ಸೈಟ್‌ಗೆ (lokayukta.karnataka.gov.in) ಭೇಟಿ ನೀಡಿ.
2. ಅಲ್ಲಿ ನೇಮಕಾತಿ ವಿಭಾಗದಲ್ಲಿ 'ಕ್ಲರ್ಕ್-ಕಂ-ಟೈಪಿಸ್ಟ್ ನೇಮಕಾತಿ 2026-27' ಅಧಿಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಬಳಿ ಇರುವ ಶೈಕ್ಷಣಿಕ ದಾಖಲೆ, ಅಂಕ ಪಟ್ಟಿ, ವಯಸ್ಸು ಹಾಗೂ ಇನ್ನಿತರ ಅಗತ್ಯವಿರುವ ಎಲ್ಲಾ ವೈಯಕ್ತಿಕ ವಿವರಗಳನ್ನು ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿ.
4. ನಂತರ ಪಾಸ್‌ಪೋರ್ಟ್ ಅಳತೆಯ ಫೋಟೋ, ಸಹಿ ಮತ್ತು ಜಾತಿ ಪ್ರಮಾಣಪತ್ರಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
5. ಕೊನೆಗೆ ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, ಅರ್ಜಿಯನ್ನು ಸಬ್ಮಿಟ್ ಮಾಡಿ. ಹಾಗೆಯೇ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಯಾವುದೇ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಮುಖ್ಯ. ಅದರಲ್ಲೂ ಲೋಕಾಯುಕ್ತದಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವುದು ಬಹುತೇಕರ ಕನಸಾಗಿರುತ್ತದೆ. ಆದ್ದರಿಂದ, ಅರ್ಹ ಯುವಕ ಯುವತಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೂಡಲೇ ಅರ್ಜಿ ಸಲ್ಲಿಸಿ.












Click it and Unblock the Notifications