ಫೋನ್ ಸ್ವಿಚ್ ಆಫ್ ಆಗಿದ್ರೂ ಆನ್‌ಲೈನ್‌ನಲ್ಲೇ ಆರ್ಡರ್ ಮಾಡಿ ಎಂದ ರೆಸ್ಟೋರೆಂಟ್: 2067ರಲ್ಲಿ ಬದುಕುತ್ತಿದ್ದೀರಾ ಎಂದ ಗ್ರಾಹಕ

ಬೆಂಗಳೂರು: ದೇಶದಾದ್ಯಂತ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಲ್ಪ ಹೆಚ್ಚೇ ಅನ್ನಬಹುದು. ಆದರೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ಅತಿರೇಕದ ತಂತ್ರಜ್ಞಾನದ ಬಳಕೆ ಗ್ರಾಹಕರಿಗೆ ನೆಮ್ಮದಿಗಿಂತ ಹೆಚ್ಚಾಗಿ ತಲೆನೋವಾಗಿ ಪರಿಣಮಿಸುತ್ತಿದೆ.

ಹೌದು, ಫೋನ್ ಬ್ಯಾಟರಿ ಸಂಪೂರ್ಣ ಖಾಲಿಯಾಗಿದ್ದರೂ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲೇ ಆಹಾರ ಆರ್ಡರ್ ಮಾಡುವಂತೆ ಒತ್ತಾಯಿಸಿದ ರೆಸ್ಟೋರೆಂಟ್ ವಿರುದ್ಧ ಬೆಂಗಳೂರಿನ ಗ್ರಾಹಕರೊಬ್ಬರು ಸೋಶಿಯಲ್‌ ಮೀಡಿಯಾದ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru Man Slams Brigade Road Restaurant For Forcing QR Code Menu amp amp Online Ordering Despite Dead Phone

ಬೆಂಗಳೂರು ರೆಸ್ಟೋರೆಂಟ್‌ನಲ್ಲಿರುವ ಕ್ಯೂಆರ್ ಕೋಡ್ ವ್ಯವಸ್ಥೆಯ ಕುರಿತು ಬ್ರ್ಯಾಂಡ್ ಕನ್ಸಲ್ಟೆಂಟ್ ಲಲಿತ್ ಲೋಬೋ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಕ್ಯೂಆರ್ ಕೋಡ್ ಮೆನು ಕಿರಿಕಿರಿ!

ಕಳೆದ ಶುಕ್ರವಾರ ಲಲಿತ್ ಲೋಬೋ ಅವರು ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯ ಬಳಿಯ ಜನಪ್ರಿಯ ರೆಸ್ಟೋಬಾರ್ ಒಂದಕ್ಕೆ ರಾತ್ರಿಯ ಊಟಕ್ಕೆ ತೆರಳಿದ್ದರು. ಟೇಬಲ್‌ನಲ್ಲಿ ಕುಳಿತು ವೇಟರ್ ಬಳಿ ಮೆನು ಕಾರ್ಡ್ ಕೇಳಿದಾಗ, ಟೇಬಲ್ ಮೇಲಿದ್ದ ಕ್ಯೂಆರ್ ಕೋಡ್ ಮೆನು ಸ್ಕ್ಯಾನ್ ಮಾಡುವಂತೆ ಹೇಳಿದ್ರು.

Today Gold Rate: ಸತತ ಎರಡನೇ ದಿನವೂ ಭರ್ಜರಿ ಏರಿಕೆ ಕಂಡ ಚಿನ್ನದ ದರ! ಎಷ್ಟಿದೆ ಇಂದು ಬೆಳ್ಳಿ- ಬಂಗಾರದ ಬೆಲೆ?
Today Gold Rate: ಸತತ ಎರಡನೇ ದಿನವೂ ಭರ್ಜರಿ ಏರಿಕೆ ಕಂಡ ಚಿನ್ನದ ದರ! ಎಷ್ಟಿದೆ ಇಂದು ಬೆಳ್ಳಿ- ಬಂಗಾರದ ಬೆಲೆ?

ಆದರೆ, ಆ ಸಮಯದಲ್ಲಿ ಲೋಬೋ ಅವರ ಮೊಬೈಲ್ ಬ್ಯಾಟರಿ ಖಾಲಿಯಾಗಿ ಸ್ವಿಚ್ ಆಫ್ ಆಗಿತ್ತು. ಅವರ ಪತ್ನಿಯ ಫೋನ್‌ನಲ್ಲಿ ಕೇವಲ ಶೇ. 6ರಷ್ಟು ಮಾತ್ರ ಚಾರ್ಜ್ ಉಳಿದಿತ್ತು. ಹೀಗಾಗಿ, "ದಯವಿಟ್ಟು ಪ್ರಿಂಟೆಡ್ ಮೆನು ಕಾರ್ಡ್ ಕೊಡಿ, ನಮ್ಮ ಬಳಿ ಇರುವ ಒಂದೇ ಫೋನ್ ಇಡೀ ಸಂಜೆ ಬಾಳಿಕೆ ಬರುವುದಿಲ್ಲ" ಎಂದು ಲೋಬೋ ವಿನಂತಿಸಿದರು. ಇದಕ್ಕೆ ಒಪ್ಪಿದ ವೇಟರ್ ಮೆನು ಕಾರ್ಡ್ ತಂದುಕೊಟ್ಟರಾದರೂ, "ಆಹಾರ ಆರ್ಡರ್ ಮಾಡಲು ಮಾತ್ರ ನೀವು ಆನ್‌ಲೈನ್‌ನಲ್ಲೇ ಬುಕ್ ಮಾಡಬೇಕು" ಎಂದು ಪಟ್ಟು ಹಿಡಿದರು.

ಇದರಿಂದಾಗಿ ಊಟವನ್ನ ಆನಂದಿಸುವ ಬದಲು, ಪತ್ನಿಯ ಫೋನ್ ಬ್ಯಾಟರಿ ಉಳಿಸಿಕೊಳ್ಳುವುದೇ ಅವರಿಗೆ ದೊಡ್ಡ ಸವಾಲಾಯಿತು. ಅಷ್ಟೇ ಅಲ್ಲ, ಊಟದ ನಡುವೆ ನಾಲ್ಕು ಬಾರಿ ವೆಬ್‌ಪೇಜ್ ರಿಸೆಟ್ ಆಗಿದ್ದರಿಂದ ಪ್ರತಿ ಬಾರಿಯೂ ಮತ್ತೆ ಲಾಗಿನ್ ಆಗಬೇಕಾಯಿತು ಮತ್ತು ಪ್ರತಿ ಬಾರಿ ವೇಟರ್ ಬಂದು ಟೇಬಲ್‌ನ ಒಟಿಪಿ (OTP) ನೀಡಬೇಕಾದ ಪರಿಸ್ಥಿತಿ ಎದುರಾಯಿತು.

2067ರಲ್ಲಿ ಬದುಕುತ್ತಿದ್ದೀರಾ? ರೆಸ್ಟೋರೆಂಟ್ ಮಾಲೀಕರಿಗೆ ತರಾಟೆ

ಈ ಕಹಿ ಅನುಭವದ ಬಳಿಕ ಲಿಂಕ್ಡ್‌ಇನ್‌ನಲ್ಲಿ ಸುದೀರ್ಘ ಪೋಸ್ಟ್ ಬರೆದಿರುವ ಲೋಬೋ, ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕರನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ಟೆಕ್ ಕ್ಷೇತ್ರದವರಂತೆ ನೀವೂ 2067ರಲ್ಲಿ ಬದುಕುತ್ತಿದ್ದೇವೆ ಎಂದು ಭ್ರಮಿಸಿದ್ದೀರಿ. ಎಲ್ಲವನ್ನೂ ಡಿಜಿಟಲ್ ಮಾಡಲು ಹೊರಟಿದ್ದೀರಿ. ಆದರೆ, ಗ್ರಾಹಕರು ಯಾವಾಗಲೂ ಫುಲ್ ಚಾರ್ಜ್ ಇರುವ ಫೋನ್ ಮತ್ತು ಉತ್ತಮ ನೆಟ್‌ವರ್ಕ್ ಇಟ್ಟುಕೊಂಡೇ ಬರಬೇಕು ಎಂದು ನಿರೀಕ್ಷಿಸುವುದು ಮೂರ್ಖತನ. ನಿಮಗೆ ಆಟೋಮೇಷನ್ ಬೇಕಿದ್ದರೆ, ಜಿಪುಣತನ ಬಿಟ್ಟು ಪ್ರತಿ ಟೇಬಲ್‌ನಲ್ಲೂ ನಿಮ್ಮದೇ ಆದ ಟ್ಯಾಬ್ಲೆಟ್‌ಗಳನ್ನ ಇಡಿ" ಎಂದು ಕಿಡಿಕಾರಿದ್ದಾರೆ.

ವಿದೇಶದ ಸುಶಿ ರೆಸ್ಟೋರೆಂಟ್‌ಗಳ ಉದಾಹರಣೆ ನೀಡಿರುವ ಅವರು, "ಅಲ್ಲಿ ಟ್ಯಾಬ್ಲೆಟ್ ಮೂಲಕ ಆರ್ಡರ್ ಮಾಡಿ ಕನ್ವೇಯರ್ ಬೆಲ್ಟ್ ಮೂಲಕ ಆಹಾರ ಪಡೆಯುವ ವ್ಯವಸ್ಥೆಯಿದ್ದರೂ, ಕೌಂಟರ್‌ನಲ್ಲಿ ನಗದು ಪಾವತಿಸುವ ಆಯ್ಕೆಯೂ ಇರುತ್ತದೆ. ವಾರವಿಡೀ ಕೆಲಸ ಮಾಡಿ ದಣಿದು, ಹಣ ಖರ್ಚು ಮಾಡಿ ನೆಮ್ಮದಿಯಾಗಿ ಸಮಯ ಕಳೆಯಲು ನಾವು ರೆಸ್ಟೋರೆಂಟ್‌ಗೆ ಬರುತ್ತೇವೆ. ನಿಮ್ಮ ಅರೆಬೆಂದ ತಂತ್ರಜ್ಞಾನದಿಂದ ಅದನ್ನ ಒತ್ತಡದಾಯಕ ಮಾಡಬೇಡಿ" ಎಂದು ಅಸಮಾಧಾನ ಹೊರಹಾಕಿದ್ದಾರೆ.

Bengaluru News: ಶಿಲ್ಪಾ ನಾಗ್‌ಗೆ ನೂತನ ಆಯುಕ್ತರ ಜವಾಬ್ದಾರಿ; ಹೋಟೆಲ್ ಈಜುಕೊಳದಲ್ಲಿ ಇಬ್ಬರು ವಿದೇಶಿಗರ ಸಾವು
Bengaluru News: ಶಿಲ್ಪಾ ನಾಗ್‌ಗೆ ನೂತನ ಆಯುಕ್ತರ ಜವಾಬ್ದಾರಿ; ಹೋಟೆಲ್ ಈಜುಕೊಳದಲ್ಲಿ ಇಬ್ಬರು ವಿದೇಶಿಗರ ಸಾವು

ನೆಟ್ಟಿಗರ ಪ್ರತಿಕ್ರಿಯೆ: ಹೋಟೆಲ್‌ಗಳಲ್ಲಿ ಮೂಲಸೌಕರ್ಯದ ಕೊರತೆಗೆ ಆಕ್ರೋಶ

ಲೋಬೋ ಅವರ ಈ ಪೋಸ್ಟ್‌ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ತಮಗೂ ಇಂತಹದ್ದೇ ಅನುಭವವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. "ಹಲವು ರೆಸ್ಟೋರೆಂಟ್‌ಗಳಲ್ಲಿ ಸರಿಯಾದ ಮೊಬೈಲ್ ನೆಟ್‌ವರ್ಕ್ ಇರುವುದಿಲ್ಲ, ವೈ-ಫೈ ಸೌಲಭ್ಯವೂ ಇರುವುದಿಲ್ಲ. ಅಂತಹ ಕಡೆ ಕ್ಯೂಆರ್ ಕೋಡ್ ಆರ್ಡರ್ ಕಡ್ಡಾಯ ಮಾಡುವುದು ಅಸಂಬದ್ಧ" ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು, "ಫೋನ್ ಮೂಲಕವೇ ಆರ್ಡರ್ ಮಾಡಬೇಕೆಂದು ಒತ್ತಾಯಿಸುವ ರೆಸ್ಟೋರೆಂಟ್‌ಗಳು ಕನಿಷ್ಠ ಪಕ್ಷ ಪ್ರತಿ ಟೇಬಲ್‌ನಲ್ಲೂ ಚಾರ್ಜಿಂಗ್ ಪಾಯಿಂಟ್ ಅಥವಾ ತಮ್ಮದೇ ಡಿವೈಸ್ ಒದಗಿಸುವುದು ಮೂಲಭೂತ ಕರ್ತವ್ಯ" ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+