ಮೀಮ್ಸ್‌ ಸುನಾಮಿ.. ಗೂಗಲ್ ಟ್ರೆಂಡಿಂಗ್‌ನಲ್ಲೂ 15ರ ಪೋರ ವೈಭವ್ ಸೂರ್ಯವಂಶಿಯದ್ದೇ ಹವಾ..

Vaibhav Sooryavanshi: ಟೀಮ್ ಇಂಡಿಯಾ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಆಡಿದ ಸ್ಫೋಟಕ ಇನ್ನಿಂಗ್ಸ್ ಕಂಡು ಕ್ರಿಕೆಟ್ ಅಭಿಮಾನಿಗಳು ಇನ್ನೂ ಅಚ್ಚರಿಯಿಂದ ಹೊರಬಂದಿಲ್ಲ. ಮಂಗಳವಾರ (ನವೆಂಬರ್ 24) ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತ 'ಎ' ತಂಡದ ಪರ ಕೇವಲ 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ವೈಭವ್, ಪುರುಷರ ಲಿಸ್ಟ್-ಎ ಕ್ರಿಕೆಟ್ ಇತಿಹಾಸದ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ.

ಈ ಪಂದ್ಯ ಮುಗಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮೀಮ್ಸ್ ಮತ್ತು ತಮಾಷೆಯ ಪೋಸ್ಟ್‌ಗಳ ಸುನಾಮಿಯೇ ಎದ್ದಿದೆ. ಕೇವಲ 53 ಎಸೆತಗಳಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಚಚ್ಚಿದ ವೈಭವ್ ಅವರ ಬ್ಯಾಟಿಂಗ್ ಸ್ಕೋರ್‌ಬೋರ್ಡ್ ನೋಡಿದವರಿಗೆ ಒಮ್ಮೆ ಕಣ್ಣು ಉಜ್ಜಿಕೊಳ್ಳುವಂತಾಗಿದೆ.

Vaibhav Sooryavanshi 204-Run Blitz Goes Viral Hilarious Memes Flood Social Media After UAE Match

ಟ್ವಿಟರ್‌ನಲ್ಲಿ ವೈಭವ್ ಕುರಿತ ಮೀಮ್ಸ್‌..

2024ರಲ್ಲಿ ಚಾಡ್ ಬೋವ್ಸ್ 103 ಎಸೆತಗಳಲ್ಲಿ ಗಳಿಸಿದ್ದ ವೇಗದ ದ್ವಿಶತಕದ ದಾಖಲೆಯನ್ನು ವೈಭವ್ ಅರ್ಧಕ್ಕರ್ಧ ಎಸೆತಗಳ ಅಂತರದಲ್ಲಿ ಅಳಿಸಿಹಾಕಿದ್ದಾರೆ. ಈ ಅಸಾಧಾರಣ ಆಟಕ್ಕೆ ಟ್ವಿಟರ್ ಬಳಕೆದಾರರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಹುತೇಕ ನೆಟ್ಟಿಗರು ಆಶ್ಚರ್ಯದಿಂದ 'ಅಸಂಭವ, ಅಸಂಭವ' ಎಂಬ ಪದಗಳ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಬಿಹಾರ ಮೂಲದ ಈ ಯುವ ಪ್ರತಿಭೆಯ ಸಾಧನೆಯನ್ನು ಕೊಂಡಾಡಿರುವ ಅಭಿಮಾನಿಗಳು ಒಬ್ಬ ಬಿಹಾರಿ ಎಲ್ಲರಿಗೂ ಸರಿಸಾಟಿ ಎಂಬ ಘೋಷವಾಕ್ಯದೊಂದಿಗೆ ಸಂಭ್ರಮಿಸುತ್ತಿದ್ದಾರೆ..

ಹಾಸ್ಯಮಯ ಮೀಮ್ಸ್ ಭಾರಿ ವೈರಲ್

ವೈಭವ್ ಅವರ ಬ್ಯಾಟಿಂಗ್ ಶೈಲಿಯನ್ನು ಕಂಡ ಅಭಿಮಾನಿಗಳು, ಆತ ಮೈದಾನದಲ್ಲಿ ಏನೋ 'ಚೀಟ್ ಕೋಡ್' ಬಳಸಿ ಬ್ಯಾಟ್ ಬೀಸುತ್ತಿದ್ದಾನೆ ಎಂದು ತಮಾಷೆ ಮಾಡಿದ್ದಾರೆ. 'ವೈಭವ್ ಸೂರ್ಯವಂಶಿ ಬ್ಯಾಟಿಂಗ್ ನೋಡುತ್ತಿದ್ದರೆ, ಯಾರೋ 'ಇಎ ಕ್ರಿಕೆಟ್ 07' (EA Cricket 07) ವಿಡಿಯೋ ಗೇಮ್ ಅನ್ನು 'ಈಸಿ ಮೋಡ್'ನಲ್ಲಿ (Easy Mode) ಇಟ್ಟು ಆಡಿದಂತೆ ಕಾಣುತ್ತಿದೆ' ಎಂದು ಬಳಕೆದಾರರೊಬ್ಬರು ಬರೆದುಕೊಂಡಿರುವ ಪೋಸ್ಟ್ ವೈರಲ್ ಆಗಿದೆ. ಮತ್ತೊಂದೆಡೆ, ಯುಎಇ ಬೌಲರ್‌ಗಳ ಪರಿಸ್ಥಿತಿ ಮತ್ತು ಸಿಕ್ಸರ್‌ಗಳನ್ನು ಎಣಿಸಲು ಸುಸ್ತಾದ ಪ್ರೇಕ್ಷಕರ ಕುರಿತು ಹಲವು ಹಾಸ್ಯಮಯ ಮೀಮ್ಸ್ ಹರಿದಾಡುತ್ತಿವೆ.

ಪ್ರತಿ ಮೈಲಿಗಲ್ಲೂ ಗೂಗಲ್ ಟ್ರೆಂಡಿಂಗ್

ಈ ಇನ್ನಿಂಗ್ಸ್‌ನಲ್ಲಿ ಕೇವಲ ದ್ವಿಶತಕ ಮಾತ್ರವಲ್ಲ, ಪ್ರತಿ ಹಂತದಲ್ಲೂ ದಾಖಲೆಗಳು ಸೃಷ್ಟಿಯಾಗಿವೆ. 16 ಎಸೆತಗಳಲ್ಲಿ ಅರ್ಧಶತಕ, 28 ಎಸೆತಗಳಲ್ಲಿ ಶತಕ ಹಾಗೂ 40 ಎಸೆತಗಳಲ್ಲಿ 150 ರನ್ ಪೂರೈಸಿದ ವೈಭವ್ ಅಬ್ಬರದಿಂದಾಗಿ ಭಾರತ 'ಎ' ತಂಡ 250 ರನ್‌ಗಳ ಗುರಿಯನ್ನು ಕೇವಲ 14.2 ಓವರ್‌ಗಳಲ್ಲಿ (ಇನ್ನೂ 214 ಎಸೆತಗಳು ಬಾಕಿ ಇರುವಂತೆಯೇ) ತಲುಪಿತು.

ಇದರ ಬೆನ್ನಲ್ಲೇ ಕಳೆದ 24 ಗಂಟೆಗಳಲ್ಲಿ ಭಾರತದಾದ್ಯಂತ ಗೂಗಲ್ ಟ್ರೆಂಡಿಂಗ್ ಪಟ್ಟಿಯಲ್ಲೂ ವೈಭವ್ ಸೂರ್ಯವಂಶಿ ಹೆಸರು ಅಗ್ರಸ್ಥಾನಕ್ಕೇರಿದೆ. 'ಭಾರತ ಎ vs ಯುಎಇ ಸ್ಕೋರ್‌ಕಾರ್ಡ್' ಮತ್ತು 'ವೈಭವ್ ಬ್ಯಾಟಿಂಗ್ ಹೈಲೈಟ್ಸ್' ವಿಡಿಯೋಗಳಿಗಾಗಿ ಲಕ್ಷಾಂತರ ಮಂದಿ ಹುಡುಕಾಟ ನಡೆಸುತ್ತಿದ್ದಾರೆ. ಸೀನಿಯರ್ ಮಟ್ಟದ ಬೌಲರ್‌ಗಳನ್ನು 15ರ ಬಾಲಕನೊಬ್ಬ ಇಷ್ಟು ಸುಲಭವಾಗಿ ದಂಡಿಸಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಮರೆಯಲಾಗದ ಅನುಭವ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+