ಟೀಮ್ ಇಂಡಿಯಾ ಆಯ್ಕೆಗಾರರು ಸಿರಾಜ್ ನಿಜವಾದ ಪಾತ್ರವನ್ನೇ ಮರೆತುಬಿಟ್ಟಿದ್ದಾರೆ: ಆರ್‌ಸಿಬಿ ಮಾಜಿ ಸ್ಟಾರ್ ಎಬಿಡಿ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ರೇಸ್‌ನಲ್ಲಿ ಟೀಮ್ ಇಂಡಿಯಾಗೆ ಈ ಗೆಲುವು ಅತ್ಯಂತ ನಿರ್ಣಾಯಕವಾಗಿತ್ತು. ಈ ಕುರಿತು ಭಾರಿ ಟೀಕೆಗಳು ವ್ಯಕ್ತವಾಗುತ್ತಲಿವೆ. ಇದರ ಬೆನ್ನಲ್ಲೇ ಇದೀಗ ಆರ್‌ಸಿಬಿ ಮಾಜಿ ಸ್ಟಾರ್ ಆಟಗಾರ ಕೂಡ ಖಡಕ್ ಸಂದೇಶ ನೀಡಿದ್ದಾರೆ.

ಪಂದ್ಯ ಡ್ರಾ ಆದ ಬೆನ್ನಲ್ಲೇ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟ ನಾಯಕ ಶುಭ್‌ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಕೂಡ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.

AB de Villiers Backs Siraj After India Dropping Him Vs NZ Sends Strong Message to Team Management

ಸಿರಾಜ್ ಪಾತ್ರವನ್ನು ಮರೆತ ಆಯ್ಕೆಗಾರರು: ಎಬಿಡಿ ಅಸಮಾಧಾನ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮಾತನಾಡಿರುವ ಎಬಿ ಡಿವಿಲಿಯರ್ಸ್, ಆರ್‌ಸಿಬಿ ತಂಡದಲ್ಲಿ ಸಿರಾಜ್ ಅವರೊಂದಿಗೆ ದೀರ್ಘಕಾಲ ಆಡಿದ ಅನುಭವವನ್ನು ಸ್ಮರಿಸಿಕೊಂಡಿದ್ದಾರೆ. 'ಸಿರಾಜ್ ಅವರ ಇತ್ತೀಚಿನ ಅಂಕಿಅಂಶಗಳು ಅಷ್ಟೇನೂ ಆಕರ್ಷಕವಾಗಿಲ್ಲದಿರಬಹುದು ಮತ್ತು ಅವರು ಸದ್ಯ ಫಾರ್ಮ್ ಕಳೆದುಕೊಂಡಿರಬಹುದು. ಆದರೆ ಭಾರತ ತಂಡದಲ್ಲಿ ಅವರು ನಿಭಾಯಿಸುವ ಪಾತ್ರ ಅತ್ಯಂತ ಅಮೂಲ್ಯವಾದುದು. ಈ ನಿರ್ಧಾರ ತೆಗೆದುಕೊಂಡ ಕೋಚ್ ಅಥವಾ ಆಯ್ಕೆಗಾರರು ತಂಡದಲ್ಲಿ ಸಿರಾಜ್ ಅವರ ನಿಜವಾದ ಪಾತ್ರವನ್ನೇ ಮರೆತುಬಿಟ್ಟಿದ್ದಾರೆ,' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಓರ್ವ ದಣಿವರಿಯದ ಬೌಲರ್ ಆಗಿದ್ದು, ಅವರ ನಿರಂತರ ದಾಳಿಯಿಂದಾಗಿಯೇ ಜಸ್ಪ್ರೀತ್ ಬುಮ್ರಾ ಮತ್ತು ಇತರ ವೇಗಿಗಳಿಗೆ ಮುಕ್ತವಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಮಾರ್ನೆ ಮಾರ್ಕೆಲ್‌ಗೆ ಸಿರಾಜ್ ಹೋಲಿಕೆ

ಮೊಹಮ್ಮದ್ ಸಿರಾಜ್ ಅವರ ಮಹತ್ವವನ್ನು ವಿವರಿಸಲು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್ ಅವರ ಉದಾಹರಣೆ ನೀಡಿದ ಡಿವಿಲಿಯರ್ಸ್, 'ಮಾರ್ಕೆಲ್ ಯಾವಾಗಲೂ ಐದು ವಿಕೆಟ್‌ಗಳ ಗೊಂಚಲು ಪಡೆಯುತ್ತಿರಲಿಲ್ಲ. ಏಕೆಂದರೆ ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು ಔಟ್ ಮಾಡಲು ನಾವು ಡೇಲ್ ಸ್ಟೇನ್ ಕೈಗೆ ಚೆಂಡು ನೀಡುತ್ತಿದ್ದೆವು.

ಆದರೆ ಮಾರ್ಕೆಲ್ ಕಠಿಣ ಓವರ್‌ಗಳನ್ನು ಎಸೆದು ದೊಡ್ಡ ಜೊತೆಯಾಟಗಳನ್ನು ಮುರಿಯುವ ಮೂಲಕ ಪ್ರಮುಖ ವಿಕೆಟ್ ಕಬಳಿಸುತ್ತಿದ್ದರು. ಸಿರಾಜ್ ಕೂಡ ತಂಡಕ್ಕೆ ಅಂತಹದ್ದೇ ವಿಭಿನ್ನ ಮೌಲ್ಯವನ್ನು ತಂದುಕೊಡುತ್ತಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಮುಂದಿನ ಟೆಸ್ಟ್ ಪಂದ್ಯಕ್ಕೆ ಸಿರಾಜ್ ಖಂಡಿತವಾಗಿಯೂ ತಂಡಕ್ಕೆ ಮರಳಬೇಕು,' ಎಂದು ಒತ್ತಾಯಿಸಿದ್ದಾರೆ.

ನಾಯಕ ಶುಭ್ಮನ್ ಗಿಲ್ ಸಮರ್ಥನೆ ಏನು?

ಮತ್ತೊಂದೆಡೆ ವೆಲ್ಲಿಂಗ್ಟನ್ ಟೆಸ್ಟ್ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಯಕ ಶುಭ್‌ಮನ್ ಗಿಲ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. 'ಸಿರಾಜ್ ನನ್ನ ಉತ್ತಮ ಸ್ನೇಹಿತ. ಅವರನ್ನು ಕೈಬಿಡುವುದು ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಪಂದ್ಯಕ್ಕೂ ಮುನ್ನ ನಾನು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದ್ದೆ, ಅವರೂ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಪ್ರತಿಯೊಬ್ಬ ಆಟಗಾರನ ವೃತ್ತಿಜೀವನದಲ್ಲೂ ಏರಿಳಿತಗಳಿರುತ್ತವೆ. ಸದ್ಯದ ಫಾರ್ಮ್ ಆಧಾರದ ಮೇಲೆ ನಾವು ತಂಡ ಆಯ್ಕೆ ಮಾಡಿದ್ದೇವೆ. ಸಿರಾಜ್ ಖಂಡಿತವಾಗಿಯೂ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ,' ಎಂದು ಗಿಲ್ ಹೇಳಿದ್ದರು.

ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 720/9 ಡಿಕ್ಲೇರ್ ಮಾಡಿಕೊಂಡು 352 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅಜೇಯ 63 ರನ್‌ಗಳ ಜೊತೆಯಾಟದಿಂದಾಗಿ ನ್ಯೂಜಿಲೆಂಡ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+