ಬಾಲ್ಯವಿವಾಹ ತಡೆದು ಓದು ಮುಂದುವರಿಸಿದ 17ರ ಬಾಲಕಿ: ಹಿಮಾ ನಿನಾಮಾ ಸಾಹಸಕ್ಕೆ ಫುಟ್ಬಾಲ್ ದಿಗ್ಗಜ ಡೇವಿಡ್ ಬೆಕ್‌ಹ್ಯಾಮ್ ಫಿದಾ!

ಇಂದೋರ್: ಬಾಲ್ಯವಿವಾಹವೆಂಬ ಸಾಮಾಜಿಕ ಪಿಡುಗಿಗೆ ಬಲಿಯಾಗದೆ, ಶಿಕ್ಷಣವೇ ತನ್ನ ಭವಿಷ್ಯ ಎಂದು ದಿಟ್ಟ ನಿರ್ಧಾರ ಕೈಗೊಂಡ ಮಧ್ಯಪ್ರದೇಶದ 17 ವರ್ಷದ ಬಾಲಕಿಯೊಬ್ಬಳು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ.

ಹೌದು, ಕುಟುಂಬದ ಒತ್ತಡಕ್ಕೆ ಮಣಿಯದೆ ಶಿಕ್ಷಕರ ನೆರವಿನಿಂದ ತನ್ನ ಬಾಲ್ಯವಿವಾಹವನ್ನ ತಡೆದ ಬಾಲಕಿ ಹಿಮಾ ನಿನಾಮಾ ಅವರ ಸ್ಫೂರ್ತಿದಾಯಕ ಪಯಣವನ್ನ ಸ್ವತಃ ಅಂತಾರಾಷ್ಟ್ರೀಯ ಫುಟ್ಬಾಲ್ ದಿಗ್ಗಜ ಹಾಗೂ ಯುನಿಸೆಫ್ ಸದ್ಭಾವನಾ ರಾಯಭಾರಿ ಡೇವಿಡ್ ಬೆಕ್‌ಹ್ಯಾಮ್ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಹೊಗಳಿದ್ದಾರೆ.

17 Year Old Girl Stops Her Own Child Marriage To Study Dreams Of Becoming A Teacher David Beckham

ಕುಟುಂಬದ ಒತ್ತಡಕ್ಕೆ ಸೆಡ್ಡು: ಶಿಕ್ಷಕರ ನೆರವಿನಿಂದ ಬಾಲ್ಯವಿವಾಹಕ್ಕೆ ಬ್ರೇಕ್

ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಕಲ್ಯಾಣಪುರದ ಸಂದೀಪನಿ ಶಾಲೆಯಲ್ಲಿ 11ನೇ ತರಗತಿ ಓದುತ್ತಿದ್ದ ಹಿಮಾ ನಿನಾಮಾಗೆ ಆಕೆಯ ಕುಟುಂಬಸ್ಥರು ಮದುವೆ ನಿಶ್ಚಯಿಸಿದ್ದರು. ಆದರೆ, 17ನೇ ವಯಸ್ಸಿನಲ್ಲೇ ಮದುವೆಯಾಗಿ ತನ್ನ ಓದಿಗೆ ಇತಿಶ್ರೀ ಹಾಡಲು ಹಿಮಾ ಸಿದ್ಧಳಿರಲಿಲ್ಲ. ಮನೆಯವರ ಒತ್ತಡಕ್ಕೆ ಮಣಿಯದ ಆಕೆ, ತಕ್ಷಣವೇ ತನ್ನ ಶಾಲೆಯ ಶಿಕ್ಷಕರ ಮೊರೆ ಹೋದಳು.

ಹಿಮಾಳ ಪರವಾಗಿ ನಿಂತ ಶಾಲೆ ಪ್ರಾಂಶುಪಾಲರಾದ ಜಿ.ಪಿ. ಓಝಾ ಹಾಗೂ ಇತರ ಶಿಕ್ಷಕರು ಆಕೆಯ ಮನೆಗೆ ತೆರಳಿ ಪೋಷಕರೊಂದಿಗೆ ಮಾತನಾಡಿದರು. ಬಾಲ್ಯವಿವಾಹದ ಕಾನೂನು ಪರಿಣಾಮಗಳು ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣದ ಮಹತ್ವವನ್ನ ಮನವರಿಕೆ ಮಾಡಿಕೊಟ್ಟು ಬಾಲ್ಯವಿವಾಹ ನಿಲ್ಲಿಸುವಲ್ಲಿ ಯಶಸ್ವಿಯಾದರು.

ಬ್ಯಾಗ್ ಹೊಲಿದು ಜೀವನ ಸಾಗಿಸುತ್ತಿದ್ದ ಮಹಿಳೆ ಇಂದು 75 ಕೋಟಿ ರೂ. ಬ್ಯುಸಿನೆಸ್ ಒಡತಿ: ಇದು ಮಾಮ್ಸ್‌ಮೇಡ್ ವೀಣಾ ದೇವಿ ಯಶೋಗಾಥೆ
ಬ್ಯಾಗ್ ಹೊಲಿದು ಜೀವನ ಸಾಗಿಸುತ್ತಿದ್ದ ಮಹಿಳೆ ಇಂದು 75 ಕೋಟಿ ರೂ. ಬ್ಯುಸಿನೆಸ್ ಒಡತಿ: ಇದು ಮಾಮ್ಸ್‌ಮೇಡ್ ವೀಣಾ ದೇವಿ ಯಶೋಗಾಥೆ

ದೈಹಿಕ ಸವಾಲಿನ ನಡುವೆಯೂ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ

ಮದುವೆ ನಿಂತ ಬಳಿಕ ಸಂಪೂರ್ಣವಾಗಿ ಓದಿನತ್ತ ಗಮನ ಹರಿಸಿದ ಹಿಮಾ, 11ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ. ಪ್ರಸ್ತುತ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಕೆ, ಮುಂದೆ ಶಿಕ್ಷಕಿಯಾಗಿ ಇತರ ಹೆಣ್ಣುಮಕ್ಕಳಿಗೂ ಶಿಕ್ಷಣ ನೀಡಿ ಅವರನ್ನ ಸ್ವಾವಲಂಬಿಗಳನ್ನಾಗಿ ಮಾಡುವ ಕನಸು ಕಂಡಿದ್ದಾಳೆ.

ಕೇವಲ ಓದಷ್ಟೇ ಅಲ್ಲದೆ, ಹಿಮಾ ಶಿಕ್ಷಣ ಮತ್ತು ಕ್ರೀಡೆ ಎರಡರಲ್ಲೂ ಸಕ್ರಿಯವಾಗಿದ್ದಾಳೆ. "ನನ್ನ ಕುಟುಂಬದವರು ನನಗೆ ಮದುವೆ ಮಾಡಲು ಬಯಸಿದ್ದರು, ಆದರೆ ನಾನು ನಿರಾಕರಿಸಿದೆ. ನನಗೆ ಓದುವ ಆಸೆಯಿತ್ತು. ನನಗೆ ಸರಿಯಾಗಿ ನಡೆಯಲು ಸಾಧ್ಯವಾಗದ ಕಾರಣ ಆರಂಭದಲ್ಲಿ ಕ್ರೀಡೆಯಿಂದ ದೂರ ಉಳಿಯುತ್ತಿದ್ದೆ. ಆದರೆ ನನ್ನ ಶಿಕ್ಷಕರು ನನಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ ಬಳಿಕ ಕ್ರೀಡೆಯಲ್ಲೂ ಭಾಗವಹಿಸಲು ಆರಂಭಿಸಿದೆ" ಎಂದು ಹಿಮಾ ತನ್ನ ಮನದಾಳದ ಮಾತನ್ನ ಹಂಚಿಕೊಂಡಿದ್ದಾಳೆ.

ಲಕ್ಷ್ಮಿ ಪೂಜೆ ನೆಪದಲ್ಲಿ ಬಾಲಕಿಯರಿಗೆ ಶೋಷಣೆ: ಬಳ್ಳಾರಿಯಲ್ಲಿ ನಕಲಿ ಸ್ವಾಮೀಜಿ ಜಾಲ ಭೇದಿಸಿದ ಪೊಲೀಸರು, 11 ಮಂದಿ ಅರೆಸ್ಟ್
ಲಕ್ಷ್ಮಿ ಪೂಜೆ ನೆಪದಲ್ಲಿ ಬಾಲಕಿಯರಿಗೆ ಶೋಷಣೆ: ಬಳ್ಳಾರಿಯಲ್ಲಿ ನಕಲಿ ಸ್ವಾಮೀಜಿ ಜಾಲ ಭೇದಿಸಿದ ಪೊಲೀಸರು, 11 ಮಂದಿ ಅರೆಸ್ಟ್

ಡೇವಿಡ್ ಬೆಕ್‌ಹ್ಯಾಮ್ ಮೆಚ್ಚುಗೆ

ಹಿಮಾಳ ಈ ಹೋರಾಟವನ್ನು ಗುರುತಿಸಿದ ಯುನಿಸೆಫ್ ಇಂಡಿಯಾ ತಂಡ ಆಕೆಯ ಗ್ರಾಮ ಹಾಗೂ ಶಾಲೆಗೆ ಭೇಟಿ ನೀಡಿ ಕಿರು ಸಾಕ್ಷ್ಯಚಿತ್ರವೊಂದನ್ನ ನಿರ್ಮಿಸಿದೆ. ನವೆಂಬರ್ 20ರಂದು ಆಚರಿಸಲಾದ ವಿಶ್ವ ಮಕ್ಕಳ ದಿನಾಚರಣೆಯಂದು ಇಂಗ್ಲೆಂಡ್ ಫುಟ್ಬಾಲ್ ತಂಡದ ಮಾಜಿ ನಾಯಕ ಡೇವಿಡ್ ಬೆಕ್‌ಹ್ಯಾಮ್ ಈ ಸಾಕ್ಷ್ಯಚಿತ್ರವನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಯುನಿಸೆಫ್‌ನೊಂದಿಗಿನ ತಮ್ಮ ಎರಡು ದಶಕಗಳ ಪಯಣವನ್ನ ಸ್ಮರಿಸಿರುವ ಬೆಕ್‌ಹ್ಯಾಮ್, "ಸರಿಯಾದ ಬೆಂಬಲ ಮತ್ತು ಅವಕಾಶಗಳು ಸಿಕ್ಕಾಗ ಹೆಣ್ಣುಮಕ್ಕಳು ಹೇಗೆ ತಮ್ಮ ಬದುಕಿನ ನಿರ್ಧಾರಗಳನ್ನ ತಾವೇ ತೆಗೆದುಕೊಂಡು, ಮುನ್ನಡೆದು ನಾಯಕತ್ವ ವಹಿಸಬಲ್ಲರು ಎಂಬುದನ್ನ ನಾನು ಕಣ್ಣಾರೆ ಕಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಹಿಮಾಳ ಈ ಕಥೆ ಇಂದು ದೇಶದ ಲಕ್ಷಾಂತರ ಬಾಲಕಿಯರಿಗೆ ಹೊಸ ಧೈರ್ಯ ತುಂಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+