Bengaluru Rain: ಬೆಂಗಳೂರು - ಮೈಸೂರು, ನೈಸ್ ರಸ್ತೆಯಲ್ಲಿ ಈ ಕಾರಣಕ್ಕೆ ಭಾರೀ ಟ್ರಾಫಿಕ್ ಜಾಮ್, ನಗರದಲ್ಲಿ ಭಾರೀ ಮಳೆ
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗಿದೆ. ಮಳೆಯೊಂದಿಗೆ ಬೆಂಗಳೂರು ನಗರದ ಒಳಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇದರೊಂದಿಗೆ ಬೆಂಗಳೂರು - ಮೈಸೂರು - ನೈಸ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ವಾರಾಂತ್ಯವೂ ಆಗಿರುವುದರಿಂದ ಈ ಭಾಗದಲ್ಲಿ ವಾಹನ ಸಂಚಾರವು ಹೆಚ್ಚಾಗಿತ್ತು. ವಾರಾಂತ್ಯವಾಗಿರುವುದರಿಂದ ಬೆಂಗಳೂರು - ಮೈಸೂರು ಮಾರ್ಗವಾಗಿ ಸಂಚರಿಸುವ ವಾಹನ ಸವಾರರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಈ ಭಾಗದಲ್ಲಿ ಸಂಭವಿಸಿದ ದಿಢೀರ್ ಟ್ರಾಫಿಕ್ ಜಾಮ್‌ನಿಂದ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿರುವುದರಿಂದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ಕನಕಪುರ ನೈಸ್ ರಸ್ತೆಯ ಬ್ರಿಡ್ಜ್ ಮೇಲೆ ವಾಹನ ರಸ್ತೆಗೆ ಉರುಳಿ ಬಿದ್ದಿರುವುದರಿಂದ ಎಲೆಕ್ಟ್ರಾನಿಕ್ ಸಿಟಿ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ, ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ವಿನಂತಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಸೋಶಿಯಲ್ ಮೀಡಿಯಾ ಎಕ್ಸ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪರದಾಡಿದ ಪ್ರಯಾಣಿಕರು
ಕನಕಪುರು ನೈಸ್ ರಸ್ತೆ ಬಳಿ ವಾಹನ ಬಿದ್ದಿರುವುದರಿಂದ ತಾತ್ಕಾಲಿಕವಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ದುರಂತದಿಂದ ಬೆಂಗಳೂರು - ಮೈಸೂರು ಮಾರ್ಗವಾಗಿ ಪ್ರಯಾಣಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಮಾರ್ಗದಲ್ಲಿ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಂಗಳೂರಿನ ವಿವಿಧ ಭಾಗದಲ್ಲಿ ಮಳೆ
ಇನ್ನು ಬೆಂಗಳೂರಿನ ವಿವಿಧ ಭಾಗದಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದಲೂ ಮಳೆಯಾಗುತ್ತಿದ್ದು, ವಾರಾಂತ್ಯವೂ ಸಹ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ಮುಂದುವರಿದಿದೆ. ಮಳೆಯೊಂದಿಗೆ ಕನಕಪುರು ನೈಸ್ ರಸ್ತೆ ಬಳಿ ವಾಹನ ಬಿದ್ದಿರುವುದರಿಂದ ಭಾರೀ ಸಮಸ್ಯೆ ಆಯಿತು. ಇನ್ನು ಶನಿವಾರ ಸಂಜೆ ಬೆಂಗಳೂರು ನಗರದ ವಿವಿಧ ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಮಲ್ಲೇಶ್ವರ, ಶೇಷಾದ್ರಿಪುರ, ಸದಾಶಿವನಗರ, ಮೆಜೆಸ್ಟಿಕ್, ರಾಜಾಜಿನಗರ, ವಿಧಾನಸೌಧ, ಕೆ.ಆರ್ ಸರ್ಕಲ್, ಶ್ರಿರಾಮಪುರ, ಗಾಂಧಿನಗರ, ವಿಜಯನಗರ, ಹೊಸಹಳ್ಳಿ ಹಾಗೂ ಮಂಜುನಾಥ ನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ಮುಂದುವರಿದಿದೆ.
ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರಿನ ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಲೋವರ್ ಅಗರಂ ರಸ್ತೆಯಲ್ಲಿ ಓಂ.ಆರ್.ಸಿ ಜಂಕ್ಷನ್ ನಿಂದ ಇಂಡಿಯಾ ಗ್ಯಾರೇಜ್ ಜಂಕ್ಷನ್ ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ವಾಹನ ಸವಾರರ ಸುಗಮ ಸಂಚಾರದ ಹಿತ ದೃಷ್ಟಿಯಿಂದ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಿರುವುದಾಗಿ ಹೇಳಲಾಗಿದೆ.
ಇಂಡಿಯಾ ಗ್ಯಾರೇಜ್ ಜಂಕ್ಷನ್‌ನಿಂದ ವಿವೇಕನಗರ ಕಡೆಗೆ ಸಂಚರಿಸುವ ವಾಹನಗಳ ಸವಾರರು ಇಂಡಿಯಾ ಗ್ಯಾರೇಜ್ ಜಂಕ್ಷನ್‌ನಿಂದ ವಿಕ್ಟೋರಿಯಾ ರಸ್ತೆ ಮುಖಾಂತರ ಪಾಂಗ್ರೋ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ಅಂಬೇಡ್ಕರ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಓಆರ್‌ಸಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಲೋವರ ಅಗರಂ ರಸ್ತೆಯ ಮೂಲಕ ವಿವೇಕನಗರ ಕಡೆಗೆ ಸಂಚರಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
🚗 ವಾಹನ ಸವಾರರ ಗಮನಕ್ಕೆ, ತುರ್ತು ಸಂಚಾರ ಸಲಹೆ: ಮೈಸೂರು - ಇ-ಸಿಟಿ ನೈಸ್ ರಸ್ತೆಯಲ್ಲಿ ಉರುಳಿಬಿದ್ದ ವಾಹನ; ಪರ್ಯಾಯ ಮಾರ್ಗ ಬಳಸಲು ಪೋಲಿಸ್ ಮನವಿ! #BengaluruTraffic #NICERoad #TrafficAdvisory #KanakapuraRoad #ViralWatch #OIKannada #OIReels #ElectronicCity pic.twitter.com/fFzNSAXiiW
— oneindiakannada (@OneindiaKannada) July 18, 2026












Click it and Unblock the Notifications