Inspirational: ₹1.5 ಲಕ್ಷ ಸಂಬಳದ ಕೆಲಸ ಬಿಟ್ಟು ಊರಿಗೆ ಮರಳಿದ ಯುವಕ: ಈಗ ತಿಂಗಳಿಗೆ ₹4 ಲಕ್ಷ ಆದಾಯ, ಯಶಸ್ಸಿನ ಕಥೆ!
ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಬರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗ ಪ್ರಾರಂಭಿಸಿದ ಯುವಕನೊಬ್ಬ ಅದ್ಭುತ ಯಶಸ್ಸು ಗಳಿಸಿದ್ದಾನೆ. ಮುಂಬೈನಲ್ಲಿ ತಿಂಗಳಿಗೆ 1.5 ಲಕ್ಷ ರೂಪಾಯಿ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ತನ್ನ ಸ್ವಂತ ಊರಿಗೆ ಹಿಂತಿರುಗಿದ ಯುವಕ ಎರಡು ಹೊಸ ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸಿದ್ದಾನೆ. ಅಲ್ಲದೆ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ, ಈಗ ತಿಂಗಳಿಗೆ ಸುಮಾರು 4 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾನೆ. ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಇಂದಿನ ಕಾಲದಲ್ಲಿ ಹಲವರು ಅಪಾಯಕಾರಿ ನಿರ್ಧಾರ ಎಂದು ಭಾವಿಸಿರುವ ಸಂದರ್ಭದಲ್ಲಿಯೇ ವಿನೂತನ ಮಾರ್ಗವನ್ನು ಇವರು ಕಂಡುಕೊಂಡಿದ್ದಾರೆ. ಇಂದು ಆರ್ಥಿಕ ಸ್ವಾತಂತ್ರ್ಯ ಮತ್ತು ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡುವ ಉದ್ದೇಶದಿಂದ ಅಂಕಿತ್ ಪಾಂಡೆ ಎನ್ನುವವರು ಈ ರೀತಿಯ ದೃಢ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಅವರ ಜೀವನ ಕಥೆ ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಬರಹವೊಂದನ್ನು ಅಂಕಿತ್ ಪಾಂಡೆ ಎನ್ನುವವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಮುಂಬೈನಲ್ಲಿ ತಿಂಗಳಿಗೆ ₹1.5 ಲಕ್ಷ ಸಂಬಳ ಬರುವ ಉದ್ಯೋಗ ಮಾಡುತ್ತಿದ್ದರು. ಕೆಲಸ ಬಿಟ್ಟು ಸ್ವಂತ ಉದ್ಯೋಗ ಮಾಡುವ ನಿರ್ಧಾರದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿರ್ಧಾರವು ದೊಡ್ಡ ತಪ್ಪು ಎಂದು ಹಲವರು ಎಚ್ಚರಿಸಿದರೂ, ಆದರೂ ಅಂಕಿತ್ ಪಾಂಡೆ ಅವರು ತಮ್ಮ ಕೆಲಸದ ಮೇಲೆ ಹಾಗೂ ನಿರ್ಧಾರದ ಮೇಲೆ ವಿಶ್ವಾಸವಿರಿಸಿ ಆ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ, ಅಂದಾಜು ₹3 ಕೋಟಿ ಮೌಲ್ಯದ ಫ್ಲಾಟ್ ಅನ್ನು ಮಾರಾಟ ಮಾಡಿ, ಮತ್ತೊಂದು ದುಬಾರಿ ಅಪಾರ್ಟ್‌ಮೆಂಟ್ ಖರೀದಿಸುವ ಬದಲು ತಮ್ಮ ಸ್ವಗ್ರಾಮಕ್ಕೆ ಮರಳುವ ನಿರ್ಧಾರ ತೆಗೆದುಕೊಂಡರು. ಈ ನಿರ್ಧಾರವು ಅವರ ಬದುಕಿನ ಬಹುದೊಡ್ಡ ಟರ್ನಿಂಗ್ ಪಾಯಿಂಟ್ ಎಂದು ಹೇಳಿಕೊಂಡಿದ್ದಾರೆ.
1.5 ಲಕ್ಷ ರೂ. ಆದಾಯ ತ್ಯಜಿಸಿದ ನಂತರ ಹೊಸ ಪ್ರಾರಂಭ!
ಅಂಕಿತ್ ಪಾಂಡೆ ಅವರು ಸುಮಾರು 20 ಲಕ್ಷ ರೂಪಾಯಿ ಮೊತ್ತದಲ್ಲಿ ಭೂಮಿಯನ್ನು ಖರೀದಿಸಿದರು, 50 ಲಕ್ಷ ರೂಪಾಯಿ ಮೊತ್ತದಲ್ಲಿ ಮನೆ ನಿರ್ಮಿಸಿದರು ಮತ್ತು ಎರಡು ರೆಸ್ಟೋರೆಂಟ್‌ಗಳನ್ನು ತೆರೆಯಲು ಸುಮಾರು 50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರು. ಇಂದು, ಎರಡೂ ರೆಸ್ಟೋರೆಂಟ್‌ಗಳು ಜೊಮಾಟೊ ಮತ್ತು ಸ್ವಿಗ್ಗಿಯಲ್ಲಿ ಪಟ್ಟಿಮಾಡಲ್ಪಟ್ಟಿವೆ ಮತ್ತು ಉದ್ಯೋಗಿಗಳಿಂದ ನಿರ್ವಹಿಸಲ್ಪಡುತ್ತವೆ. ಈ ವ್ಯವಹಾರಗಳು ಅವರಿಗೆ ಪ್ರತಿ ತಿಂಗಳು ಸುಮಾರು 3 ಲಕ್ಷ ರೂಪಾಯಿಗಳನ್ನು ಉಳಿಸಲು ಸಾಕಷ್ಟು ಲಾಭವನ್ನೂ ತಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
₹1.5 ಕೋಟಿ ಹಣವನ್ನು ಸ್ಥಿರ ಠೇವಣಿ (Fixed Deposit - FD)ಯಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದ ಅವರಿಗೆ ತಿಂಗಳಿಗೆ ಸುಮಾರು 1 ಲಕ್ಷ ಬಡ್ಡಿ ಆದಾಯ ಬರುತ್ತಿದೆ. ಒಟ್ಟಾರೆ, ವಿವಿಧ ಮೂಲಗಳಿಂದ ಅವರ ಮಾಸಿಕ ಆದಾಯ ಸುಮಾರು ₹4 ಲಕ್ಷ ಎಂದು ಹೇಳಲಾಗಿದೆ. ಇದಕ್ಕೆ ನೆಟ್ಟಿಗರು ಸರಾಸರಿ ಸಂಬಳದೊಂದಿಗೆ ಮೆಟ್ರೋ ನಗರದಲ್ಲಿ ಬದುಕುವುದು, ಯಾವುದೇ ಪಾರಂಪರಿಕ ಆಸ್ತಿ ಇಲ್ಲದೆ, ನಗರದೊಂದಿಗೆ ಭಾವನಾತ್ಮಕ ಬಾಂಧವ್ಯವೂ ಇಲ್ಲದೆ ಜೀವನ ಸಾಗಿಸುವುದು ನಿಜಕ್ಕೂ ಕಷ್ಟಕರ ಮತ್ತು ಶೋಚನೀಯವಾಗಿದೆ ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


Click it and Unblock the Notifications
