ಬಿಗ್‌ಬಾಸ್ ಕನ್ನಡ ಸೀಸನ್ 13 ಮನೆಗೆ ಮಾಡ್ರನ್ ಮಹಾಕವಿ ರೀ ಎಂಟ್ರಿ: ಡಬಲ್ ಟ್ವಿಸ್ಟ್, ಕಿಚ್ಚ ಸುದೀಪ್ ಏನಂದ್ರು ?!
Bigg Boss Kannada 13: ಕನ್ನಡ ಬಿಗ್‌ಬಾಸ್ ಸೀಸನ್ 13ರಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಬಿಗ್‌ಬಾಸ್ ಕನ್ನಡದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪದ ಮೇಲೆ ಬಿಗ್‌ಬಾಸ್‌ನ ಸ್ಪರ್ಧಿ ಮಾಡ್ರನ್ ಮಹಾಕವಿ ಮಂಜು ಅವರನ್ನು ಬಿಗ್‌ಬಾಸ್‌ನಿಂದ ಎಲಿಮಿನೇಟ್ ಮಾಡಲಾಗಿತ್ತು. ಇದೀಗ ವೈಲ್ಡ್ ಕಾರ್ಡ್‌ನ ಮೂಲಕ ಬಿಗ್‌ಬಾಸ್ ಮನೆಗೆ ಮತ್ತೆ ಮಂಜು ಎಂಟ್ರಿ ಕೊಟ್ಟಿದ್ದಾರೆ.
ದೀಪಾವಳಿ ಸಮಯದಲ್ಲಿ ಸಿಹಿಯೊಂದಿಗೆ ಸ್ವಲ್ಪ ಖಾರವೂ ಇರಲಿ ಅಂತ ನಟ ಹಾಗೂ ಬಿಗ್‌ಬಾಸ್ ಕನ್ನಡ ನಿರೂಪಕರಾದ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಂಜುನಾಥ್ ಅವರು ಹೇಳಿದ್ದೇನು, ಇದಕ್ಕೆ ಕಿಚ್ಚ ಸುದೀಪ್ ಅವರ ರಿಯಾಕ್ಷನ್ ಹೇಗಿತ್ತು ಹಾಗೂ ನೆಟ್ಟಿಗರು ಏನಂದ್ರು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ನೋಡೋಣ.

ಬಿಗ್‌ಬಾಸ್ ಕನ್ನಡ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಮಂಜುನಾಥ್ ಅವರು ಎಂಟ್ರಿ ಕೊಟ್ಟಿದ್ದಾರೆ. ಮಾಡ್ರನ್ ಮಹಾಕವಿ ಅಂತಲೇ ಖ್ಯಾತಿ ಗಳಿಸಿರುವ ಮಂಜು ಅವರ ರೀ ಎಂಟ್ರಿಯು ಹಲವು ಕಾರಣಗಳಿಗೆ ಕುತೂಹಲ ಪಡೆದುಕೊಂಡಿದೆ. ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಈಗಾಗಲೇ ಸ್ಪರ್ಧಿಗಳು 50ಕ್ಕೂ ಹೆಚ್ಚು ದಿನಗಳನ್ನು ಕಳೆದಿದ್ದಾರೆ. ಈ ಹಂತದಲ್ಲಿ ಮಂಜು ಅವರು ರೀ ಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳಲ್ಲಿ ಸಂತೋಷವನ್ನುಂಟು ಮಾಡಿದೆ.
ಬಿಗ್‌ಬಾಸ್ ಕನ್ನಡ ಮನೆಯಿಂದ ಹೊರಗೆ ಬಂದಾಗ ಮಂಜು ಅವರು ತಪ್ಪು ಮಾಡಿ ಬಿಟ್ಟಿದ್ದೆ ಎಂದು ಕಣ್ಣೀರು ಹಾಕಿದ್ದರು. ಮತ್ತೊಂದು ಅವಕಾಶ ಸಿಕ್ಕರೆ ತಿದ್ದಿಕೊಳ್ಳುವುದಾಗಿಯೂ ಸಹ ಹೇಳಿದ್ದರು. ಮಂಜು ಅವರು ಮನೆಯಿಂದ ಹೊರಗೆ ಬಂದಾಗ ಹಲವರು ಅವರಿಗೆ ಇನ್ನೊಂದು ಅವಕಾಶ ಸಿಗಬೇಕಾಗಿತ್ತು ಅಂತ ಹೇಳಿದ್ದರು.
ಅಲ್ಲದೆ ಹಲವು ಬಿಗ್‌ಬಾಸ್ ಕನ್ನಡ ವೀಕ್ಷಕರು ಮಾಡ್ರನ್ ಮಹಾಕವಿ ಮಂಜು ಮನೆಯಿಂದ ಹೋದ ಮೇಲೆ ಶೋ ನೋಡುವುದನ್ನು ಬಿಟ್ಟಿದ್ದೇವೆ ಅಂತಲೂ ಹೇಳಿದ್ದರು. ಇದೀಗ ಬಿಗ್‌ಬಾಸ್ ಕನ್ನಡ ಮನೆಗೆ ಕೊನೆಗೂ ಮಾಡ್ರನ್ ಮಹಾಕವಿ ಮಂಜುನಾಥ್ ಎಂಟ್ರಿ ಆಗಿದೆ.
ಬಿಗ್‌ಬಾಸ್ ಕನ್ನಡ ಮನೆಗೆ ಎಂಟ್ರಿ ಕೊಟ್ಟ ಮಾಡ್ರನ್ ಮಹಾಕವಿ ಮಂಜು!
ದೀಪಾವಳಿ ಗಿಫ್ಟ್ ಆಗಿ ಸ್ವೀಟ್ ಜೊತೆಗೆ ಸ್ವಲ್ಪ ಖಾರವನ್ನೂ ಕಳ್ಸತಾ ಇದ್ದೀವಿ ಅಂತ ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಒಂದು ಅದ್ಭುತ ಎಂಟ್ರಿ ಕೊಡ್ತಾ ಇದ್ದೇವೆ. ಬಿಗ್‌ಬಾಸ್ ಕನ್ನಡ ಮನೆಗೆ ಎಂಟ್ರಿ ಕೊಟ್ಟಿರುವ ಮಾಡ್ರನ್ ಮಹಾಕವಿ ಮಂಜು ಅವರು, ಮಾಡಿರುವ ತಪ್ಪಿಗೆ ನನ್ನ ಒಪ್ಪಿಗೆ ಇದೆ.
ಈ ಸತಿ ನನ್ನ ಕಣ್ಣು ಬಿಗ್‌ಬಾಸ್ ಸೀಸನ್ ಕಪ್ಪಿಗೆ ಅಂತ ಹೇಳಿದ್ದಾರೆ. ಒಳಗಡೆ ಹೋಗಿ ಏನೆಲ್ಲ ಬಾಕಿ ಕೆಲಸಗಳಿದೆ ಅಂತ ಕಿಚ್ಚ ಸುದೀಪ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಮಂಜು ಅವರು, ಹೆಂಗಿದ್ದರೂ ದೀಪಾವಳಿಗೆ ಸರಿಯಾಗಿ ಕಳಿಸ್ತಾ ಇದ್ದೀರಿ... ಪಟಾಕಿ ಎಲ್ಲ ರೆಡಿ ಮಾಡಿಟ್ಟುಕೊಂಡಿದ್ದಾರೆ ಅಂಟಿಸಿ ಬಿಡ್ತೀನಿ ನೀಟ್ ಆಗಿ. ಸುರುಸುರು ಬತ್ತಿ ಆಡಿಸುತ್ತಿರುವವರಿಗೆ ಸರಾ ಪಟಾಕಿ ಎಲ್ಲ ಸ್ಕೈಶಾಟ್ ಅಂತ ಹೇಳಿದ್ದಾರೆ.
Bigg Boss Kannada 13: ನೆಟ್ಟಿಗರು ಏನಂದ್ರು ?
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಮಾಡ್ರನ್ ಮಹಾಕವಿ ಮಂಜು ರೀ ಎಂಟ್ರಿ ಕೊಟ್ಟಿರುವುದಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಜು ಅವರು ಬಂದಿರುವುದರಿಂದ ಈಗಿನಿಂದ ಬಿಗ್‌ಬಾಸ್ ಕನ್ನಡ ನೋಡುತ್ತೇವೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಮಂಜು ಅವರನ್ನು ಬಿಗ್‌ಬಾಸ್ ಕನ್ನಡ ಮನೆಗೆ ಮತ್ತೆ ಕರೆಸುವ ಅವಶ್ಯಕತೆ ಏನಿತ್ತು ಅಂತಲೂ ಕೇಳಿದ್ದಾರೆ.


Click it and Unblock the Notifications
