ಬಿಗ್‌ಬಾಸ್ ಕನ್ನಡ ಸೀಸನ್ 13: ಗಾನವಿ ಆಟದ ಗುಟ್ಟು ಬಿಚ್ಚಿಟ್ಟ ಕಿಚ್ಚ ಸುದೀಪ್; ವಿಡಿಯೋ ನೋಡಿ ಮನೆ ಮಂದಿ ಶಾಕ್!
ಬಿಗ್‌ಬಾಸ್ ಕನ್ನಡ ಸೀಸನ್ 13ರ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮವು ಹಲವು ಕಾರಣಗಳಿಗೆ ಕುತೂಹಲವಾಗಿತ್ತು. ಇದರಲ್ಲಿ ಮುಖ್ಯವಾಗಿ ಗಾನವಿ ಅವರು ಪತ್ರವನ್ನು ಹೇಗೆ ಅತ್ಯಂತ ಚಾಲಾಕಿ ತನದಿಂದ ಪಡೆದುಕೊಂಡರು ಎನ್ನುವ ವಿಷಯವು ಹೆಚ್ಚು ಚರ್ಚೆ ಆಯಿತು. ನಟ, ನಿರೂಪಕ ಕಿಚ್ಚ ಸುದೀಪ್ ಅವರು ಸಹ ಈ ವಿಷಯವನ್ನು ಪ್ರಸ್ತಾಪಿಸಿದರು.
ಗಾನವಿ ಹಾಗೂ ಆಸಿಯಾ ಇಬ್ಬರಿಗೂ ಅವರ ಮನೆಯಿಂದ ಪತ್ರಗಳು ಬಂದಿದ್ದವು. ಆದರೆ, ಬಿಗ್‌ಬಾಸ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಪತ್ರ ಸಿಗಲಿದೆ ಎಂದಿದ್ದರು. ಗಾನವಿ ಅವರು ಮನೆಯವರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮನೆಯಲ್ಲಿ ಯಾರಿಗೂ ತಿಳಿಯದ ವಿಷಯವನ್ನು ಕಿಚ್ಚ ಸುದೀಪ್ ಅವರು ವಾರಾಂತ್ಯದ ಶೋನಲ್ಲಿ ರಿವೀಲ್ ಮಾಡಿದ್ದಾರೆ.

ಗಾನವಿ ಅವರೇ ನೀವು ಆಟವನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಡ್ರಾಮಾ ಮಾಡಿದರೂ ಅಂತ ಹೇಳಲ್ಲ. ಆದರೆ, ಈ ವಾರದಲ್ಲಿ ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳು ಆಗಿವೆ. ಆಸಿಯಾ ಯಾವಾಗಲೂ ಅಳುತ್ತಿದ್ದರು, ಆದರೆ ಅವರು ಪತ್ರ ಬಂದ ಸಮಯದಲ್ಲಿ ಕಣ್ಣೀರು ಹಾಕಲಿಲ್ಲ. ಆದರೆ ಗಾನವಿ ಅವರು ಪತ್ರ ಬಂದಾಗ ಕಣ್ಣೀರು ಹಾಕಿದ್ದಾರೆ. ಗಾನವಿ ಅವರ ಕಣ್ಣೀರಿಗೆ ತಂಡವ್‌ರಾವ್ ಅವರು ಸಹ ಕರಗಿ ಹೋದರು. ನಾನು ಪಾಯಿಂಟ್ ಮಾಡುವುದಕ್ಕೆ ಇಷ್ಟಪಡುತ್ತೀನಿ ಗಾನವಿ ಅವರೇ ನೀವು ಗೇಮ್‌ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಅಂತ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇದಾದ ಮೇಲೆ ವಿಡಿಯೋ ಪ್ರಸಾರ ಮಾಡಲಾಗಿದ್ದು, ಗಾನವಿ ಅವರು ಬಿಗ್‌ಬಾಸ್ ಕನ್ನಡ ಮನೆಗೆ ಬರುವಾಗ ಏನು ಹೇಳಿದ್ರು ಎನ್ನುವುದು ವಿಡಿಯೋದಲ್ಲಿದೆ.
Bigg Boss Kannada Season 13: ನಮ್ಮದು ತುಂಬಿದ ಕುಟುಂಬ ಎಂದಿದ್ದ ಗಾನವಿ
ಗಾನವಿ ಅವರು ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಗೆ ಬಂದಾಗ ನಮ್ಮದು ತುಂಬಿದ ಕುಟುಂಬ, ನಮ್ಮ ಮನೆಯಲ್ಲಿ ಒಟ್ಟು 18 ಜನ ಇದ್ದೀವಿ. ನಾವು ಮೂರು ಜನ ಹೆಣ್ಣು ಮಕ್ಕಳು ಅಂತಲೂ ಗಾನವಿ ಅವರು ಹೇಳಿರುವುದು ಇದೆ. ಸಿಂಗಲ್ ಪೇರೆಂಟ್ ಎನ್ನುವ ಕಾರಣಕ್ಕೆ ಕಣ್ಣಲ್ಲಿ ವೋಟ್ ಹಾಕಿಸಿಬಿಟ್ಟೆ ಅಂತ ತಾಂಡವ್ ರಾವ್ ಅವರು ಹೇಳಿರುವುದನ್ನು ಪ್ರಸಾರ ಮಾಡಲಾಗಿದೆ.
ಸೌಂದರ್ಯ ಶೆಟ್ಟಿ ಅವರು, ಎಲ್ಲರೂ ಆಸಿಯಾಗೆ ವೋಟ್ ಹಾಕುತ್ತಾರೆ ಅಂತ ಅಂದುಕೊಂಡಿದ್ದೆ, ಗಾನವಿ ಅವರು ಫೇಕ್ ಅಂತ ನಾನು ಹೇಳುತ್ತಿಲ್ಲ. ಅವರ ಎಮೋಷನ್ ಅವರಿಗೆ ತುಂಬಾ ಉಪಯೋಗವಾಯ್ತು, ಅವರು ಅದನ್ನು ಚೆನ್ನಾಗಿ ಡೀಲ್ ಮಾಡಿದ್ರು. ಅವರು ಒಬ್ಬರೇ ಅಂತ ತಪ್ಪು ತಿಳಿದುಕೊಂಡಿದ್ದಾರೆ ತಾಂಡವ್ ರಾವ್ ಅವರಿಗೂ ನಾನು ಈ ವಿಷಯವನ್ನು ಹೇಳಿದ್ದೆ. ಆದರೆ, ತಾಂಡವ್ ರಾವ್ ಅವರು ಮಿಸ್ ಮಾಡಿಕೊಂಡಿದ್ದಾರೆ ಅಂತ ಸೌಂದರ್ಯ ಶೆಟ್ಟಿ ಅವರು ಹೇಳಿದ್ದಾರೆ.
Captain ಕಿಚ್ಚ mention ಮಾಡ್ಬೇಕಾದ ವಿಚಾರ ಯಾವುದು?
Captain ಕಿಚ್ಚ mention ಮಾಡ್ಬೇಕಾದ ವಿಚಾರ ಯಾವುದು ಎನ್ನುವ ಕಲರ್ಸ್ ಕನ್ನಡ ವಾಹಿನಿಯ ಪ್ರಶ್ನೆಗೆ ಹಲವರು ಗಾನವಿ ಅವರ ಹೆಸರನ್ನು ಕಾಮೆಂಟ್ ಮಾಡಿದ್ದಾರೆ. ಗಾನವಿ ಧನುಷ್ ಅನ್ನು ಟಾಸ್ಕ್ ವಿಷಯದಲ್ಲಿ ಎಳೆದಿದ್ದಾರೆ. ಊಟದ ವಿಷಯಕ್ಕೆ ಶಾಸ್ತ್ರೀಗೆ ಕೆಟ್ಟದಾಗಿ ನಿಂದಿಸಿದ್ದು. ಯಾರಿಗೆ ಆಗಲಿ ಒಂದು ತುತ್ತು ಜಾಸ್ತಿ ಆಗಬಹುದು ಕಡಿಮೆ ಆಗಬಹುದು ಊಟದ ವಿಷಯದಲ್ಲಿ ನಿಂದಿಸುವುದು ತಪ್ಪು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಜಗದೀಶ್ ಅವರು ಒಂದು ಪಪ್ಪಾಯಿ ವಿಷಯಕ್ಕೆ ಮನೆಗೆ ಊಟವೇ ಕ್ಯಾನ್ಸಲ್ ಮಾಡಿದವರು ,ಕೇಕ್ ಒಬ್ಬರೇ ತಿಂದಾಗ ಎಲ್ಲರಿಗೂ ಕೊಡಬೇಕು ಅನ್ನೋದು ಗೊತ್ತಾಗ್ಲಿಲ್ವಾ? ಕ್ಯಾಪ್ಟನ್ ಆದವರು ಮನೆಯ ಸದಸ್ಯರೆಲ್ಲರಿಗೂ ಊಟ ಸಮಾನ ಹಂಚುವುದು ಬಿಟ್ಟು ತಾನು ಹಾಕ್ಕೊಂಡು ಕಿರಣ್‌ಗೂ ಬೇಕಾದಷ್ಟು ಹಾಕಿ ತಿನ್ನುವಾಗ ಪಪ್ಪಾಯ ರೂಲ್ಸ್ ನೆನಪಾಗಲಿಲ್ವಾ?ಯಶಸ್, ಸೌಂದರ್ಯಗೆ ನಾಯಿ ಅಂತ ಬಯ್ಯೋದು ತಪ್ಪು. ಜಗ್ಗಿ ಮಾಡಿದ್ದನ್ನೇ ಅವರು ಹೇಳಿದ್ದು, ತಪ್ಪು ತಿದ್ದಿಕೊಳ್ಳುವ ಮನಸ್ಥಿತಿ ಇಲ್ಲ ಇದನ್ನು ಅರ್ಥ ಮಾಡಿಸಬೇಕು ಜಗ್ಗಿ ಅವರಿಗೆ ಅಂತಲೂ ಕೆಲವರು ಹೇಳಿದ್ದಾರೆ.



Click it and Unblock the Notifications
