Bigg Boss Kannada 13: ಯಶಸ್ ಕೃಷ್ಣ ಬಣ್ಣ ಬಯಲು ಮಾಡಿದ ಕಿಚ್ಚ ಸುದೀಪ್; ಕಣ್ಣೀರಿಟ್ಟ ಸೌಂದರ್ಯ!

Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ವಯಂವರ ಟಾಸ್ಕ್‌ ನಡೆದ ಬೆನ್ನಲ್ಲೇ ಯಶಸ್ ಬಣ್ಣ ಬಯಲಾಗಿದೆ. ಯಶಸ್ ಆಡಿರುವ ಮಾತುಗಳ ವಿಡಿಯೋವನ್ನು ಕಿಚ್ಚ ಸುದೀಪ್ ಅವರು ಪ್ಲೈ ಮಾಡಿದ್ದು, ಸೌಂದರ್ಯ ಕಣ್ಣೀರು ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಟಾಸ್ಕ್‌ನ ನಿರ್ಣಯಗಳ ಬಗ್ಗೆಯೂ ಕಿಚ್ಚ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವಾರ ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಸ್ವಯಂವರ ಟಾಸ್ಕ್‌ ಕೊಡಲಾಗಿತ್ತು. ಗಗನ್ ಚಿನ್ನಪ್ಪ ಹಾಗೂ ಯಶಸ್ ಕೃಷ್ಣ ಅವರು, ವರರಾಗಿ ವಧು / ಡಾನ್ ಸೌಂದರ್ಯ ಶೆಟ್ಟಿ ಅವರ ಮನವೊಲಿಸಬೇಕಾಗಿತ್ತು. ಆದರೆ, ಆಟದಲ್ಲಿ ಕೆಲವೊಂದು ತಾರತಮ್ಯ ಮಾಡಲಾಗಿದೆ. ಟಾಸ್ಕ್‌ ಪ್ರಾರಂಭವಾಗುವುದಕ್ಕೂ ಮುನ್ನವೇ ಗೆಲ್ಲುವ ಸ್ಪರ್ಧಿ ಯಾರು ಎನ್ನುವುದನ್ನು ನಿರ್ಣಯಿಸಲಾಗಿತ್ತು ಎನ್ನುವುದನ್ನು ರಿವೀಲ್‌ ಮಾಡಲಾಗಿದೆ. ಅಲ್ಲದೆ ಯಶಸ್ ಕೃಷ್ಣ ಮತ್ತು ಗಾನವಿ ಅವರ ನಡುವಿನ ಸಂಭಾಷಣೆಯನ್ನು ಸುದೀಪ್ ಅವರು ಪ್ಲೈ ಮಾಡಿದ್ದಾರೆ. ವಾರದ ಕತೆ ಕಿಚ್ಚಿನ ಜೊತೆಯಲ್ಲಿ ಎರಡು ಕಾರಣಗಳಿಗೆ ಪ್ರಮುಖವಾಗಿದೆ. ಈ ವಾರ ಕತೆ ಕಿಚ್ಚನ ಜೊತೆ ನಡೆಸಿಕೊಡುವಾಗ ಸುದೀಪ್ ಅವರು ಯಶಸ್ ಏನು ಹೇಳಿದ್ದರು ಎನ್ನುವುದನ್ನು ತೋರಿಸಿದ್ದಾರೆ.

Bigg Boss Kannada 13 Kichcha Sudeep Exposes Yashas Krishna s Remarks Soundarya Breaks Down in Tears

ವಾರದ ಕತೆ ಕಿಚ್ಚ ಸುದೀಪ್ ಜೊತೆ ಶೋನಲ್ಲಿ ವಿಡಿಯೋವೊಂದನ್ನು ತೋರಿಸಬೇಕು ಅನಿಸುತ್ತೆ. ವಿಡಿಯೋವೊಂದನ್ನ ತೋರ್ಸ್ತೀನಿ ಅಂತ ಸುದೀಪ್ ಹೇಳಿದ್ದಾರೆ. ಗಾನವಿ ಅವರೊಂದಿಗೆ ಯಶಸ್ ಕೃಷ್ಣ ಅವರು ಮಾತನಾಡುತ್ತಿರುವ ವಿಡಿಯೋವನ್ನು ಸುದೀಪ್ ಪ್ಲೈ ಮಾಡಿದ್ದಾರೆ. ಇದರಲ್ಲಿ ಯಶಸ್ ಕೃಷ್ಣ ಅವರು, ನನ್ನ ಮಾನಮರ್ಯಾದೆ ವಿಚಾರಕ್ಕೆ ಏನಾದ್ರು ಬಂದ್ರೆ, ಮಾನಾಮರ್ಯಾದೆ ತಗ್ದಾಕ್ತೀನಿ ಅಂತ ಹೇಳಿದ್ದು ನಿಜ ಅಂತ ಗಾನವಿ ಅವರಿಗೆ ಹೇಳಿದ್ದಾರೆ. ಮುಂದುವರಿದು ಈ ಸಂದರ್ಭದಲ್ಲಿ ಗಾನವಿ ಅವರು ಮತ್ತೆ ಯಾಕೆ ಈಗ ಮಾತಾಡ್ತಾ ಇದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯಶಸ್ ಅವರು, ನಾನು ಯಾರಿಗೆ ಹೇಳ್ದೆ ಅಂತ ಪ್ರಶ್ನೆ ಮಾಡಿದ್ದಾರೆ.

ನೀನು ರಿಯಾಕ್ಟ್‌ ಮಾಡಿದೆ ಅಂತ ನಿನಗೆ ತಿರುಗಿರೋದು ಅಷ್ಟನ್ನ ಹೇಳ್ತೀನಿ ಅಂತ ಯಶಸ್ ಹೇಳಿದ್ದಾರೆ. ಇದಕ್ಕೆ ಸೌಂದರ್ಯ ಶೆಟ್ಟಿ ಅವರು, ನನಗೆ ಹೇಳಿದ್ದು ಅಂತ ಹೇಳಿದ್ದು ಅಂತ ಬೇಸರಪಟ್ಟಿದ್ದಾರೆ. ಆಗ ಕಿಚ್ಚ ಸುದೀಪ್ ಅವರು ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ... ಅವಳ ಕಣ್ಣು ಆಕಾಶ್ದಾಗೆ, ಇವನ ಕಣ್ಣು ಅವಳ ಮ್ಯಾಗೆ.. ಊರೋರ್ ಕಣ್ಣು ಇವರ ಮ್ಯಾಗೆ... ಏ ಎ ಹೇ ಹೇ... ಅಂತ ಹಾಡು ಹೇಳಿದ್ದಾರೆ. ಸುದೀಪ್ ಅವರೊಂದಿಗೆ ಸ್ಪರ್ಧಿಗಳು ಸಹ ಹಾಡು ಹಾಡಿದ್ದಾರೆ.

ಯಶಸ್ ಕೃಷ್ಣ ಮತ್ತು ಗಾನವಿ ಅವರ ನಡುವಿನ ಸಂಭಾಷಣೆಯ ವಿಡಿಯೋಗೆ ಸೌಂದರ್ಯ ಶೆಟ್ಟಿ ಅವರು ಕಣ್ಣೀರಾಕಿದ್ದಾರೆ. ವಿಡಿಯೋ ನೋಡಿದ ಮೇಲೆ ಕಿಚ್ಚ ಸುದೀಪ್ ಅವರ ಬಳಿ ಎರಡು ನಿಮಿಷ ಬ್ರೇಕ್ ತೆಗೆದುಕೊಳ್ಳಬಹುದಾ ಅಂತ ಕೇಳಿ ಅಲ್ಲಿಂದ ಎದ್ದು ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+