December Horoscope: ರಾಹು-ಕೇತು ಸಂಚಾರದ ಪ್ರಭಾವ: ಡಿಸೆಂಬರ್‌ನಲ್ಲಿ ಈ 3 ರಾಶಿಗಳಿಗೆ ಬಂಪರ್ ಯೋಗ!

ಗ್ರಹಗಳ ಸಂಚಾರವು ಪ್ರತಿಯೊಂದು ರಾಶಿಯವರ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ ಎಂಬುದು ಜ್ಯೋತಿಷ್ಯ ನಂಬಿಕೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಹಲವು ಶುಭ ಹಾಗೂ ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇವುಗಳ ಆಧಾರದ ಮೇಲೆ ಕೆಲವರಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಬಡ್ತಿ ಹಾಗೂ ವ್ಯಾಪಾರದಲ್ಲಿ ಪ್ರಗತಿ ಕಂಡುಬಂದರೆ, ಇನ್ನು ಕೆಲವರು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.

2026ರ ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದು, ಈ ತಿಂಗಳಿನಲ್ಲಿ ಗ್ರಹಗಳ ಸಂಚಾರದಲ್ಲಿ ಹಲವು ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ರಾಹು ಮತ್ತು ಕೇತುಗಳ ರಾಶಿ ಬದಲಾವಣೆ, ಮೀನ ರಾಶಿಯಲ್ಲಿ ಶನಿಯ ಸಂಚಾರ, ಸಿಂಹ ರಾಶಿಯಲ್ಲಿ ಗುರುವಿನ ವಕ್ರಗತಿ ಸೇರಿದಂತೆ ಸೂರ್ಯ ಮತ್ತು ಬುಧ ಗ್ರಹಗಳ ಸಂಚಾರವೂ ಜ್ಯೋತಿಷ್ಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

December Horoscope Aries Taurus amp amp Gemini Zodiac Signs Monthly Predictions for Career Finance and Family

ಈ ಗ್ರಹಗಳ ಬದಲಾವಣೆಗಳು ಮೇಷ, ವೃಷಭ ಮತ್ತು ಮಿಥುನ ರಾಶಿಯವರ ಉದ್ಯೋಗ, ವ್ಯಾಪಾರ, ಹಣಕಾಸು, ಕುಟುಂಬ ಜೀವನ ಹಾಗೂ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಡಿಸೆಂಬರ್ ತಿಂಗಳು ಈ ಮೂರು ರಾಶಿಯವರಿಗೆ ಹೇಗಿರಲಿದೆ? ಯಾರಿಗೆ ಅದೃಷ್ಟ ಒಲಿಯಲಿದೆ? ಯಾವ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು? ಎಂಬುದರ ಸಂಪೂರ್ಣ ಮಾಸ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಡಿಸೆಂಬರ್ ತಿಂಗಳು ಮೇಷ ರಾಶಿಯವರಿಗೆ ವೃತ್ತಿ ಮತ್ತು ಉದ್ಯೋಗದ ದೃಷ್ಟಿಯಿಂದ ಮಹತ್ವದ ಬದಲಾವಣೆಗಳನ್ನು ತರಬಹುದು. ರಾಹುವಿನ ಸಂಚಾರ ಮತ್ತು ಶನಿಯ ಮಾರ್ಗಿ ಸ್ಥಿತಿಯಿಂದಾಗಿ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಗಳಿಗೆ ಸೂಕ್ತ ಮನ್ನಣೆ ದೊರೆಯುವ ಸಾಧ್ಯತೆ ಇದೆ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಲವು ಕೆಲಸಗಳು ಈ ತಿಂಗಳಲ್ಲಿ ಪೂರ್ಣಗೊಳ್ಳಬಹುದು.

ಡಿಸೆಂಬರ್ ತಿಂಗಳು ತುಲಾ ರಾಶಿಗೆ ಶುಭಕಾಲ, ಧನು ರಾಶಿಗೆ ಮಿಶ್ರ ಫಲ; ಸಂಪೂರ್ಣ ಭವಿಷ್ಯ ಇಲ್ಲಿದೆ
ಡಿಸೆಂಬರ್ ತಿಂಗಳು ತುಲಾ ರಾಶಿಗೆ ಶುಭಕಾಲ, ಧನು ರಾಶಿಗೆ ಮಿಶ್ರ ಫಲ; ಸಂಪೂರ್ಣ ಭವಿಷ್ಯ ಇಲ್ಲಿದೆ

ಉದ್ಯೋಗ ಮತ್ತು ವೃತ್ತಿ

ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಕೆಲಸದ ಒತ್ತಡ ಹೆಚ್ಚಾದರೂ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಕಾರ್ಯಕ್ಷಮತೆಯನ್ನು ಮೇಲಧಿಕಾರಿಗಳು ಗುರುತಿಸಿ ಪ್ರಶಂಸಿಸುವ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಹೊಸ ಅವಕಾಶಗಳು ಎದುರಾಗಬಹುದು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಧಕ-ಬಾಧಕಗಳನ್ನು ಪರಿಶೀಲಿಸುವುದು ಉತ್ತಮ.

ವ್ಯಾಪಾರ ಮತ್ತು ಹಣಕಾಸು

ವ್ಯಾಪಾರಸ್ಥರಿಗೆ ಹೊಸ ಯೋಜನೆಗಳನ್ನು ಆರಂಭಿಸಲು ಅವಕಾಶಗಳು ದೊರೆಯಬಹುದು. ಹೊಸ ಒಪ್ಪಂದಗಳು ಮತ್ತು ವ್ಯವಹಾರ ವಿಸ್ತರಣೆಯ ಬಗ್ಗೆ ಆಲೋಚನೆ ಮೂಡಬಹುದು. ಆದರೆ ದೊಡ್ಡ ಮೊತ್ತದ ಹೂಡಿಕೆ ಮಾಡುವ ಮುನ್ನ ಲಾಭ-ನಷ್ಟದ ಲೆಕ್ಕಾಚಾರ ಮಾಡುವುದು ಅಗತ್ಯ. ಆದಾಯದ ಮೂಲಗಳು ಸ್ಥಿರವಾಗಿದ್ದರೂ ಪ್ರಯಾಣ ಮತ್ತು ಇತರ ಅಗತ್ಯಗಳಿಗಾಗಿ ಖರ್ಚು ಹೆಚ್ಚಾಗಬಹುದು. ಈ ತಿಂಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಯಾರಿಗೂ ಸಾಲವಾಗಿ ನೀಡುವುದು ಅಥವಾ ಸಾಲ ಪಡೆಯುವುದನ್ನು ಮುಂದೂಡುವುದು ಉತ್ತಮ.‌

ಡಿಸೆಂಬರ್ ತಿಂಗಳಲ್ಲಿ ಮಿಥುನ ರಾಶಿಗೆ ರಾಜಯೋಗದ ಭಾಗ್ಯ, ಮೇಷ ರಾಶಿಯವರಿಗೆ ಹೇಗಿರಲಿದೆ ಗ್ರಹಬಲ?
ಡಿಸೆಂಬರ್ ತಿಂಗಳಲ್ಲಿ ಮಿಥುನ ರಾಶಿಗೆ ರಾಜಯೋಗದ ಭಾಗ್ಯ, ಮೇಷ ರಾಶಿಯವರಿಗೆ ಹೇಗಿರಲಿದೆ ಗ್ರಹಬಲ?

ಆರೋಗ್ಯ

ಕೆಲಸದ ಒತ್ತಡ ಮತ್ತು ನಿದ್ರೆಯ ಕೊರತೆಯಿಂದ ದೈಹಿಕ ಆಯಾಸ ಉಂಟಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ ಸಮಯಕ್ಕೆ ಸರಿಯಾಗಿ ವಿಶ್ರಾಂತಿ ಪಡೆಯಬೇಕು. ಆಹಾರ ಪದ್ಧತಿಯಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಉತ್ತಮ.

ಪರಿಹಾರವೇನು?: ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಶ್ರೀ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸುವುದು ಶುಭಕರ ಎಂದು ಜ್ಯೋತಿಷ್ಯ ನಂಬಿಕೆ ತಿಳಿಸುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಡಿಸೆಂಬರ್ ತಿಂಗಳು ಮಿಶ್ರ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ. ವೃತ್ತಿ ಮತ್ತು ಆರ್ಥಿಕ ವಿಚಾರಗಳಲ್ಲಿ ಪ್ರಗತಿ ಕಂಡುಬಂದರೂ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚಿನ ಜಾಗ್ರತೆ ಅಗತ್ಯವಾಗಿರುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯ ಇದಾಗಿದ್ದು, ಹೊಸ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ.

ಉದ್ಯೋಗ ಮತ್ತು ವೃತ್ತಿ

ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯಬಹುದು. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಅವಕಾಶವೂ ಸಿಗಬಹುದು. ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಉತ್ತಮ ಸಮಯವಾಗಬಹುದು. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವುದು ಪ್ರಯೋಜನಕಾರಿ.

ವ್ಯಾಪಾರ ಮತ್ತು ಹಣಕಾಸು

ವ್ಯಾಪಾರಸ್ಥರಿಗೆ ಹೊಸ ಆಲೋಚನೆಗಳು ಮತ್ತು ವ್ಯವಹಾರ ವಿಸ್ತರಣೆಯ ಅವಕಾಶಗಳು ದೊರೆಯಬಹುದು. ಆದಾಯದ ಹರಿವು ಉತ್ತಮವಾಗಿರುವ ಸಾಧ್ಯತೆ ಇದ್ದರೂ ಹಣಕಾಸಿನ ವಿಚಾರದಲ್ಲಿ ಯೋಜಿತವಾಗಿ ಮುಂದುವರಿಯಬೇಕು. ದೊಡ್ಡ ಮೊತ್ತದ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ. ಅನಗತ್ಯ ಖರ್ಚು ಮತ್ತು ಐಷಾರಾಮಿ ವಸ್ತುಗಳ ಖರೀದಿಗೆ ಕಡಿವಾಣ ಹಾಕಬೇಕು. ಭವಿಷ್ಯದ ಅಗತ್ಯಗಳಿಗಾಗಿ ಉಳಿತಾಯ ಮಾಡುವತ್ತ ಗಮನ ಹರಿಸುವುದು ಉತ್ತಮ.

ಆರೋಗ್ಯ

ಒಟ್ಟಾರೆ ಆರೋಗ್ಯ ಸಾಮಾನ್ಯವಾಗಿರಬಹುದು. ಹವಾಮಾನ ಬದಲಾವಣೆಯಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಆಹಾರ ಮತ್ತು ನಿದ್ರೆಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು.

ಪರಿಹಾರವೇನು?: ಶ್ರೀ ಮಹಾಲಕ್ಷ್ಮಿ ದೇವಿ ಅಥವಾ ಶಿವಪಾರ್ವತಿಯರನ್ನು ಭಕ್ತಿಯಿಂದ ಪೂಜಿಸುವುದು ಶುಭಕರ ಎಂದು ನಂಬಲಾಗಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಡಿಸೆಂಬರ್ ತಿಂಗಳು ಪ್ರಗತಿ ಮತ್ತು ಹೊಸ ಅವಕಾಶಗಳ ದೃಷ್ಟಿಯಿಂದ ಅನುಕೂಲಕರವಾಗಿರಬಹುದು. ಕೇತುವಿನ ಸಂಚಾರದಿಂದ ಸ್ವಂತ ಪ್ರಯತ್ನಗಳಿಗೆ ಹೆಚ್ಚಿನ ಮಹತ್ವ ದೊರೆಯುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಚುರುಕುತನ ಹೆಚ್ಚಾಗಲಿದ್ದು, ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆತ್ಮವಿಶ್ವಾಸ ಮೂಡಬಹುದು.

ಉದ್ಯೋಗ ಮತ್ತು ವೃತ್ತಿ

ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು. ನಿಮ್ಮ ಕೌಶಲ್ಯ ಮತ್ತು ಕೆಲಸದ ಮೇಲಿನ ಬದ್ಧತೆಗೆ ಮನ್ನಣೆ ದೊರೆಯುವ ಸಾಧ್ಯತೆ ಇದೆ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಜವಾಬ್ದಾರಿಗಳು ಸಿಗಬಹುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಬೆಳವಣಿಗೆಗಳು ಕಂಡುಬರಬಹುದು. ಕೆಲಸದ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಯೋಜನಾಬದ್ಧವಾಗಿ ಮುನ್ನಡೆಯುವುದು ಉತ್ತಮ.

ವ್ಯಾಪಾರ ಮತ್ತು ಹಣಕಾಸು

ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು ಮತ್ತು ಆದಾಯ ಗಳಿಸುವ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ವ್ಯಾಪಾರದಲ್ಲಿ ನಿಧಾನವಾಗಿ ಪ್ರಗತಿ ಕಂಡುಬರುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಬಹುದು. ಆದರೆ ಇತರರಿಗೆ ಹಣಕಾಸಿನ ವಿಚಾರದಲ್ಲಿ ಜಾಮೀನು ನೀಡುವುದು, ಹಾಮೀದಾರರಾಗುವುದು ಅಥವಾ ದೊಡ್ಡ ಮೊತ್ತವನ್ನು ಸಾಲವಾಗಿ ನೀಡುವಾಗ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವ್ಯವಹಾರಗಳಲ್ಲಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವುದು ಉತ್ತಮ.

ಆರೋಗ್ಯ

ಹೆಚ್ಚು ಆಲೋಚನೆ ಮಾಡುವುದು ಮತ್ತು ಮಾನಸಿಕ ಒತ್ತಡದಿಂದ ಆಯಾಸ ಉಂಟಾಗಬಹುದು. ಕೆಲಸದ ನಡುವೆ ವಿಶ್ರಾಂತಿ ಪಡೆಯಬೇಕು. ಧ್ಯಾನ, ಯೋಗ ಮತ್ತು ಲಘು ವ್ಯಾಯಾಮದಂತಹ ಅಭ್ಯಾಸಗಳು ಮಾನಸಿಕ ನೆಮ್ಮದಿಗೆ ಸಹಕಾರಿಯಾಗಬಹುದು. ಆರೋಗ್ಯ ಸಮಸ್ಯೆಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಪರಿಹಾರವೇನು?: ಶ್ರೀ ಮಹಾವಿಷ್ಣು ಅಥವಾ ಶ್ರೀ ಗಣಪತಿಯನ್ನು ಭಕ್ತಿಯಿಂದ ಆರಾಧಿಸುವುದು ಶುಭಕರ ಎಂದು ಜ್ಯೋತಿಷ್ಯ ನಂಬಿಕೆ ತಿಳಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+