ಮದುವೆ ಹೆಸರಲ್ಲಿ ಸಾಲದ ಸುಳಿಗೆ ಬೀಳಬೇಡಿ: ಶಿವಮೊಗ್ಗದ ಮತ್ತೊಂದು ಗ್ರಾಮದಲ್ಲಿಯೂ ಅದ್ಧೂರಿ ಬೀಗರೂಟಕ್ಕೆ ಬ್ರೇಕ್

ಶಿವಮೊಗ್ಗ: ಮದುವೆ ಮುಗಿಯುತ್ತಿದ್ದಂತೆ ಬೀಗರೂಟದ ಹೆಸರಿನಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಒಂದಿಷ್ಟು ಸಾಮಾಜಿಕ ಆಂದೋಲನ ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮಗಳಲ್ಲಿ ಬೀಗರೂಟ ನಿಷೇಧ ಯಶಸ್ವಿಯಾಗಿ ಜಾರಿಯಲ್ಲಿದ್ದು, ಇದೀಗ ಈ ಮಾದರಿ ಪಟ್ಟಿಗೆ ಮತ್ತೊಂದು ಗ್ರಾಮ ಸೇರ್ಪಡೆಯಾಗಿದೆ.

ಸೊರಬ ತಾಲೂಕಿನ ಗೆಂಡ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಗ್ರಾಮಸ್ಥರು ತಮ್ಮ ಊರಿನಲ್ಲಿ ದುಬಾರಿ ಬೀಗರೂಟವನ್ನ ಸಂಪೂರ್ಣವಾಗಿ ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

Shivamogga Village Bans Lavish Beegaroota Soraba s Talaguppa Villagers Curb Extravagant Wedding Feasts

ದುಂದುವೆಚ್ಚಕ್ಕೆ ಕಡಿವಾಣ: ಸೊರಬ ತಾಳಗುಪ್ಪ ಗ್ರಾಮಸ್ಥರ ಮಾದರಿ ಸಂದೇಶವೇನು?

ಮದುವೆ ಸಮಾರಂಭಗಳಲ್ಲಿ ಪ್ರತಿಷ್ಠೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಗರೂಟ ಆಯೋಜಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂಬುದನ್ನ ಮನಗಂಡಿರುವ ಸೊರಬ ತಾಳಗುಪ್ಪ ಗ್ರಾಮದ ಜನರು ಒಗ್ಗಟ್ಟಿನಿಂದ ಈ ತೀರ್ಮಾನಕ್ಕೆ ಬಂದಿದ್ದಾರೆ.

ಬೀಗರೂಟದ ಹೆಸರಿನಲ್ಲಿ ಅನಗತ್ಯವಾಗಿ ಹಣವನ್ನ ಪೋಲು ಮಾಡುವ ಬದಲು, ಅದೇ ಹಣವನ್ನ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಹಾಗೂ ಮಕ್ಕಳ ಉನ್ನತ ಶಿಕ್ಷಣ ಮತ್ತು ಉಜ್ವಲ ಭವಿಷ್ಯ ರೂಪಿಸಲು ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರು ಕರೆ ನೀಡಿದ್ದಾರೆ. ಸಂಪ್ರದಾಯಕ್ಕಿಂತ ಕುಟುಂಬದ ಆರ್ಥಿಕ ಶಿಸ್ತು ಮುಖ್ಯ ಎಂಬ ಸಂದೇಶವನ್ನ ತಾಳಗುಪ್ಪ ಗ್ರಾಮಸ್ಥರು ಸಮಾಜಕ್ಕೆ ಸಾರಿದ್ದಾರೆ.

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರ ಊಟ ಹಾಕಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ!
ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರ ಊಟ ಹಾಕಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ!

ಮಲೆನಾಡಿನಲ್ಲಿ ವ್ಯಾಪಿಸುತ್ತಿರುವ ಬೀಗರೂಟ ವಿರೋಧಿ ಆಂದೋಲನ: ಯಾವೆಲ್ಲಾ ಗ್ರಾಮಗಳಲ್ಲಿ ನಿಷೇಧ?

ಸೊರಬ ತಾಲೂಕಿನಲ್ಲಿ ಆರಂಭಗೊಂಡಿರುವ ಬೀಗರೂಟ ವಿರೋಧಿ ಆಂದೋಲನಕ್ಕೆ ತಾಳಗುಪ್ಪದ ನಿರ್ಧಾರ ಮತ್ತಷ್ಟು ಬಲ ತುಂಬಿದೆ. ಈ ಹಿಂದೆಯೇ ಶಿವಮೊಗ್ಗ ಜಿಲ್ಲೆಯ ಹಲವು ಗ್ರಾಮಗಳು ದುಬಾರಿ ಬೀಗರೂಟಕ್ಕೆ ಬ್ರೇಕ್ ಹಾಕಿ ಇತರರಿಗೆ ಮಾದರಿಯಾಗಿವೆ:

ಸೊರಬ ತಾಲೂಕು: ಚಿಕ್ಕಶಕುನ, ಶೀಗೇಹಳ್ಳಿ, ಕುಂದಗಸವಿ, ಗುಡವಿ ಮತ್ತು ಶಿಗ್ಗಾ ಗ್ರಾಮಗಳು.

ಶಿಕಾರಿಪುರ ತಾಲೂಕು: ಹರಗಿ ಗ್ರಾಮ.

ಸಾಗರ ತಾಲೂಕು: ಹುಣಸೂರು ಗ್ರಾಮ.

ಪ್ರತಿಷ್ಠೆಗಾಗಿ ಸಾಲದ ಹೊರೆ: ಮದುವೆ ದುಂದುವೆಚ್ಚಕ್ಕೆ ಬ್ರೇಕ್ ಹಾಕುವುದು ಏಕೆ ಅನಿವಾರ್ಯ?

ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ಭಾಗದಲ್ಲಿ ಬೀಗರೂಟ ಎನ್ನುವುದು ಸಂಬಂಧಗಳನ್ನ ಬೆಸೆಯುವ ಊಟಕ್ಕಿಂತ ಹೆಚ್ಚಾಗಿ ಪ್ರತಿಷ್ಠೆಯ ಪೈಪೋಟಿಯಾಗಿ ಬದಲಾಗಿತ್ತು. ಬಡ ಕುಟುಂಬಗಳಾದರೂ ಕನಿಷ್ಠ 2 ಲಕ್ಷ ರೂ.ಗಳಿಂದ ಹಿಡಿದು, ಮಧ್ಯಮ ಮತ್ತು ಶ್ರೀಮಂತ ವರ್ಗದವರು ಶಾಮಿಯಾನ, ಅಡುಗೆ ಹಾಗೂ ಬಾಡೂಟಕ್ಕಾಗಿ 8 ರಿಂದ 15 ಲಕ್ಷ ರೂಪಾಯಿವರೆಗೆ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.

ವಿದೇಶಿ ಏರ್‌ಪೋರ್ಟ್‌ನಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿದ ಭಾರತೀಯರು: ತರಾಟೆಗೆ ತೆಗೆದುಕೊಂಡ ಹರ್ಷ ಗೋಯೆಂಕಾ
ವಿದೇಶಿ ಏರ್‌ಪೋರ್ಟ್‌ನಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿದ ಭಾರತೀಯರು: ತರಾಟೆಗೆ ತೆಗೆದುಕೊಂಡ ಹರ್ಷ ಗೋಯೆಂಕಾ

ಒಂದೆಡೆ ಬೆಲೆ ಏರಿಕೆ, ಮತ್ತೊಂದೆಡೆ ಕೃಷಿ ಆದಾಯದ ಏರಿಳಿತದ ನಡುವೆ ಇಂತಹ ಮದುವೆ ದುಂದುವೆಚ್ಚಗಳು ಪೋಷಕರನ್ನ ಸಾಲದ ಸುಳಿಗೆ ತಳ್ಳುತ್ತಿದ್ದವು. ಈ ಕಾರಣದಿಂದಲೇ ಹರಗಿಯಂತಹ ಕೆಲವು ಗ್ರಾಮಗಳಲ್ಲಿ ಬೀಗರೂಟ ಆಯೋಜಿಸಿದವರಿಗೆ 1 ಲಕ್ಷ ರೂ. ಹಾಗೂ ಊಟಕ್ಕೆ ಹೋದವರಿಗೂ 50 ಸಾವಿರ ರೂ. ದಂಡ ವಿಧಿಸುವಂತಹ ಕಠಿಣ ನಿಯಮಗಳನ್ನ ಗ್ರಾಮಸ್ಥರೇ ರೂಪಿಸಿಕೊಂಡಿದ್ದರು.

ಇದೀಗ ತಾಳಗುಪ್ಪ ಗ್ರಾಮ ಈ ಸುಧಾರಣಾ ಹಾದಿ ತುಳಿದಿರುವುದು ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+