South Bullet Train: ಆಂಧ್ರಪ್ರದೇಶಕ್ಕೆ ಸಿಂಹಪಾಲು: ದಕ್ಷಿಣ ಭಾರತದ ಐಟಿ - ಬಿಟಿ ನಗರ ಸಂಪರ್ಕಿಸಲಿರುವ ಬುಲೆಟ್ ಟ್ರೈನ್ ಯೋಜನೆ

ದಕ್ಷಿಣ ಭಾರತದ ಪ್ರಥಮ ಹಾಗೂ ಪ್ರಮುಖ ಬುಲೆಟ್ ಟ್ರೈನ್ ಯೋಜನೆಯ ಬಗ್ಗೆ ಭಾರೀ ಚರ್ಚೆ ನಡೆದಿದೆ. ಆದರೆ, ಈ ಯೋಜನೆಯಲ್ಲಿ ಆಂಧ್ರಪ್ರದೇಶವು ಸಿಂಹಪಾಲು ಪಡೆದಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಬುಲೆಟ್ ಟ್ರೈನ್ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು 4,000 ಕಿ.ಮೀ. ವ್ಯಾಪ್ತಿಯ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಅನುಮೋದನೆ ನೀಡಿದ್ದಾರೆ. ಇದು ಬೆಂಗಳೂರು-ಪುಣೆ ಬುಲೆಟ್ ಟ್ರೈನ್ ಈ ಕಾರಿಡಾರ್‌ನಲ್ಲಿ ಸೇರಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಆದರೆ, ಈ ಯೋಜನೆಯಲ್ಲಿ ಮುಖ್ಯವಾಗಿ ದಕ್ಷಿಣ ಭಾರತದ ಇತರ ರಾಜ್ಯಗಳನ್ನು ಆಂಧ್ರಪ್ರದೇಶ ಹಿಂದಿಕ್ಕಿದೆ. ಈ ಯೋಜನೆಯಲ್ಲಿ ಆಂಧ್ರಪ್ರದೇಶಕ್ಕೆ ಸಿಂಹಪಾಲು ಸಿಕ್ಕಂತಾಗಿದೆ.

ದಕ್ಷಿಣ ಕಾರಿಡಾರ್‌ನಲ್ಲಿ ಬೆಂಗಳೂರು-ಹೈದರಾಬಾದ್-ಚೆನ್ನೈ ಹಾಗೂ ಬೆಂಗಳೂರು-ಪುಣೆ ನಡುವೆ ಬುಲೆಟ್‌ ಟ್ರೈನ್‌ ಸಂಚರಿಸಲಿವೆ. ಅಲ್ಲಿಗೆ ಒಟ್ಟು ದಕ್ಷಿಣದ ಎಲ್ಲಾ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಾಣವಾದಂತೆ ಆಗುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

South Bullet Train Andhra Pradesh Gets Lion s Share High-Speed Rail to Connect South India s IT Hubs

ಮುಂದಿನ ವರ್ಷಗಳಲ್ಲಿ 3,000 ಕಿ.ಮೀ. ಬುಲೆಟ್ ಟ್ರೈನ್ ಕಾರಿಡಾರ್ ಘೋಷಣೆ ಆಗಲಿದೆ. ಅಲ್ಲದೆ ಬೆಂಗಳೂರು-ಪುಣೆ ಕಾರಿಡಾರ್ ನಿಂದಾಗಿ ಕರ್ನಾಟಕವನ್ನು ಪೂರ್ಣ ಪ್ರಮಾಣದಲ್ಲಿ ಸಂಪರ್ಕಿಸಿದಂತೆ ಆಗುತ್ತದೆ. ಈ ಟ್ರೈನ್ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಪುಣೆಯವರೆಗೆ ಸಂಚರಿಸಲಿದೆ ಎಂದಿದ್ದಾರೆ.

ಐಟಿ ನಗರಗಳನ್ನು ಒಂದು ಮಾಡುವ ಯೋಜನೆ

ದಕ್ಷಿಣ ಭಾರತದ ಐಟಿ - ಬಿಟಿ ನಗರಗಳನ್ನು ಒಂದು ಮಾಡುವ ಯೋಜನೆ ಇದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬೆಂಗಳೂರು, ಹೈದರಾಬಾದ್, ಅಮರಾವತಿ (ಆಂಧ್ರ ರಾಜಧಾನಿ) ಮತ್ತು ಚೆನ್ನೈ ಈ ನಾಲ್ಕು ಪ್ರಮುಖ ಹಾಗೂ ದೊಡ್ಡ ಐಟಿ ನಗರಗಳನ್ನು ಒಂದು ಮಾಡುವ ಬುಲೆಟ್ ಟ್ರೈನ್ ಕಾರಿಡಾರ್ ಯೋಜನೆಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಈ ಮಾರ್ಗ ಅಭಿವೃದ್ಧಿಯಾದ ನಂತರ ಬೆಂಗಳೂರು- ಚೆನ್ನೈ ನಗರದ ನಡುವಿನ ಪ್ರಯಾಣದ ಅಂತರವು ಕೇವಲ 73 ನಿಮಿಷ (1 ಗಂಟೆ 13 ನಿಮಿಷ) ಆಗಲಿದೆ. ಅಲ್ಲದೆ ಬೆಂಗಳೂರು-ಹೈದ್ರಾಬಾದ್ ಪ್ರಯಾಣ ಕೇವಲ 2.10 ಗಂಟೆಗೆ ಇಳಿಯಲಿದೆ. ಆಗ ಈ ಎರಡೂ ನಗರಗಳು ಒಂದೇ ನಗರವಾಗುತ್ತವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಹೇಳಿದ್ದಾರೆ.

ಪ್ರಸ್ತಾವಿತ ದಕ್ಷಿಣ ಬುಲೆಟ್ ರೈಲು ಕಾರಿಡಾರ್ ಬೆಂಗಳೂರನ್ನು ಹೈದರಾಬಾದ್, ಅಮರಾವತಿ ಮತ್ತು ಚೆನ್ನೈ ಜೊತೆ ಸಂಪರ್ಕಿಸುತ್ತದೆ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಆದರೆ, ವಿದ್ಯುದ್ಧೀಕರಣ ಮತ್ತು ಪರೀಕ್ಷಾ ಕಾರ್ಯಗಳು ಪೂರ್ಣಗೊಂಡ ನಂತರ ಮುಂದಿನ ವಾರಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆಯನ್ನು ಪರಿಚಯಿಸಲಾಗುತ್ತದೆ.

ಆಂಧ್ರಪ್ರದೇಶಕ್ಕೆ ಸಿಂಹಪಾಲು

ದಕ್ಷಿಣ ಭಾರತದ ಪ್ರಮುಖ ಬುಲೆಟ್ ಟ್ರೈನ್ ಯೋಜನೆಯಲ್ಲಿ ಆಂಧ್ರಪ್ರದೇಶಕ್ಕೆ ಸಿಂಹಪಾಲು ಸಿಕ್ಕಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಪ್ರಮುಖ ನಗರಗಳು ಇವೆ. ಹೈದರಾಬಾದ್-ಅಮರಾವತಿ-ಚೆನ್ನೈ ಕಾರಿಡಾರ್‌ನಲ್ಲಿ ಆಂಧ್ರಪ್ರದೇಶವು ಅತಿ ಹೆಚ್ಚು ಅಂದರೆ 9 ನಿಲ್ದಾಣಗಳನ್ನು ಹೊಂದಿವೆ. ಅದರಲ್ಲಿ ಅಮರಾವತಿ, ಗುಂಟೂರು, ಚೀರಾಮ, ಒಂಗೋಲು, ಕಾವಲಿ, ನೆಲ್ಲೂರು, ಗೂಡೂರು ಹಾಗೂ ತಿರುಪತಿ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ನಿಲ್ದಾಣಗಳು ಪ್ರಸ್ತಾವನೆ ಇಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+