ಇಂದು ಕೆಪಿಎಸ್‌ಸಿ 319 ಹುದ್ದೆಗಳ ಪೂರ್ವಭಾವಿ ಫಲಿತಾಂಶ ಪ್ರಕಟ ಸಾಧ್ಯತೆ: ಅನ್ನಭಾಗ್ಯ ಕೀ ಉತ್ತರ ಗೊಂದಲಕ್ಕೆ ಅಭ್ಯರ್ಥಿಗಳ ಆಕ್ರೋಶ

ಬೆಂಗಳೂರು: ರಾಜ್ಯದ 319 ಗೆಜೆಟೆಡ್ ಪ್ರೊಬೇಷನರ್ (ಕೆಎಎಸ್) ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸಿಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಿದ್ಧತೆ ನಡೆಸುತ್ತಿದೆ. 1:15 ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗುವ ಅಭ್ಯರ್ಥಿಗಳ ಪಟ್ಟಿಯನ್ನ ಇಂದು (ನವೆಂಬರ್ 24) ಪ್ರಕಟಿಸುವ ಸಾಧ್ಯತೆಯಿದೆ.

ಆದರೆ, ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಅನೌನ್ಸ್‌ ಆಗುವ ಹೊತ್ತಲ್ಲೇ ಕೃಪಾಂಕ ಹಾಗೂ ಪರಿಷ್ಕೃತ ಕೀ ಉತ್ತರದಲ್ಲಿನ ದೋಷಗಳ ಕುರಿತು ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

KPSC Gazetted Probationers 319 Posts Prelims Result Likely Today Amid Revised Key Answer amp amp Grace Marks Row

ಕೆಪಿಎಸ್‌ಸಿ ಪರಿಷ್ಕೃತ ಕೀ ಉತ್ತರದಲ್ಲಿ ಗೊಂದಲ

ಒಟ್ಟು 117 ಗ್ರೂಪ್ 'ಎ ' ಹಾಗೂ 202 ಗ್ರೂಪ್ 'ಬಿ' ಸೇರಿದಂತೆ 319 ಹುದ್ದೆಗಳಿಗೆ ನವೆಂಬರ್ 15ರಂದು ಲಿಖಿತ ಪರೀಕ್ಷೆ ನಡೆಸಿದ್ದ ಕೆಪಿಎಸ್‌ಸಿ, ಮರುದಿನವೇ (ನ.16) ಕೀ ಉತ್ತರ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿತ್ತು. ವಿಶೇಷವೆಂದರೆ, ಈ ಬಾರಿ ಮೊದಲ ಬಾರಿಗೆ ಒಎಂಆರ್ ಪ್ರತಿ ಹಾಗೂ ಕೀ ಉತ್ತರಗಳನ್ನ ತ್ವರಿತವಾಗಿ ಪ್ರಕಟಿಸುವ ಮೂಲಕ ಆಯೋಗವು ಪಾರದರ್ಶಕತೆ ಕಾಯ್ದುಕೊಂಡಿತ್ತು.

ನಂತರ ನವೆಂಬರ್ 21-22ರಂದು ಕೆಪಿಎಸ್‌ಸಿ ಪರಿಷ್ಕೃತ ಕೀ ಉತ್ತರ ಹಾಗೂ ತಾತ್ಕಾಲಿಕ ಅಂಕಗಳನ್ನ ಬಿಡುಗಡೆ ಮಾಡಿತ್ತು. ಆದರೆ, ಈ ಪರಿಷ್ಕೃತ ಕೀ ಉತ್ತರದಲ್ಲಿ ಕೆಲವು ತಪ್ಪುಗಳಿವೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಅನ್ನಭಾಗ್ಯ ಮತ್ತು ಇಂದಿರಾ ಫುಡ್ ಕಿಟ್ ಪ್ರಶ್ನೆ ಸಂಖ್ಯೆ 60ರ ವಿವಾದವೇನು?

ಅಭ್ಯರ್ಥಿಗಳ ಪ್ರಮುಖ ಆಕ್ಷೇಪಣೆ ಇರುವುದು ಅನ್ನಭಾಗ್ಯ ಮತ್ತು ಇಂದಿರಾ ಫುಡ್ ಕಿಟ್ ಸಂಬಂಧಿಸಿದ ಪ್ರಶ್ನೆ ಸಂಖ್ಯೆ 60ರ ಮೇಲೆ. ಈ ಪ್ರಶ್ನೆಯಲ್ಲಿ ಮೂರು ಹೇಳಿಕೆಗಳನ್ನ ನೀಡಲಾಗಿತ್ತು:

1. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು.

2. 2026-27ನೇ ಸಾಲಿನಲ್ಲಿ ಮಾಸಿಕ ಅಕ್ಕಿಯ ಬದಲಾಗಿ ತೊಗರಿ ಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆ ಒಳಗೊಂಡ ಇಂದಿರಾ ಫುಡ್ ಕಿಟ್ ವಿತರಿಸಲು ಸರ್ಕಾರ ಉದ್ದೇಶಿಸಿದೆ.

3. ಇಂದಿರಾ ಫುಡ್ ಕಿಟ್ ವಿತರಣೆಗೆ ವಾರ್ಷಿಕ 6,200 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಅಧಿಕೃತ ಬಜೆಟ್ ದಾಖಲೆಗಳ ಪ್ರಕಾರ ಈ ಮೂರೂ ಹೇಳಿಕೆಗಳು ಸರಿಯಾಗಿವೆ. ಆದರೆ, ಕೆಪಿಎಸ್‌ಸಿ ತನ್ನ ಕೀ ಉತ್ತರದಲ್ಲಿ ಮೊದಲನೇ ಹೇಳಿಕೆಯನ್ನ ತಪ್ಪು ಎಂದು ಪರಿಗಣಿಸಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

2026-27ರ ಬಜೆಟ್ ದಾಖಲೆ ಏನು ಹೇಳುತ್ತದೆ?

ಅಭ್ಯರ್ಥಿಗಳು ಉಲ್ಲೇಖಿಸಿರುವ 2026-27ರ ಬಜೆಟ್ ದಾಖಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 242ನೇ ಪ್ಯಾರಾದಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿಯಿದೆ. ಅದರಂತೆ, ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 4.54 ಕೋಟಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದ್ದು, ಕಳೆದ 3 ವರ್ಷಗಳಲ್ಲಿ 17,167 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದೀಗ ಅದರ ಬದಲಿಗೆ ಪೌಷ್ಟಿಕ ಆಹಾರದ ಇಂದಿರಾ ಫುಡ್ ಕಿಟ್ ನೀಡಲು 6,200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಜೆಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಸರ್ಕಾರದ ಅಧಿಕೃತ ದಾಖಲೆಯಲ್ಲೇ ಈ ಅಂಶವಿದ್ದರೂ ಆಯೋಗವು ಮೊದಲ ಹೇಳಿಕೆಯನ್ನ ತಪ್ಪೆಂದು ಪರಿಗಣಿಸಿರುವುದನ್ನ ಪ್ರಶ್ನಿಸಿ ಅಭ್ಯರ್ಥಿಗಳು ಕೆಪಿಎಸ್‌ಸಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಸೋಶಿಯಲ್‌ ಮೀಡಿಯಾಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನ ಟ್ಯಾಗ್ ಮಾಡಿ, ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಈ ಹಂತದಲ್ಲಿ ಪರಿಷ್ಕೃತ ಕೀ ಉತ್ತರದ ಮೇಲಿನ ಆಕ್ಷೇಪಣೆಗಳನ್ನ ಮತ್ತೆ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೆಪಿಎಸ್‌ಸಿ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+