ಫಲಪುಷ್ಪ ಪ್ರದರ್ಶನ 2026: ನಾಳೆಯಿಂದ 13 ದಿನ 15 ಲಕ್ಷ ಹೂಗಳಿಂದ ಕಂಗೊಳಿಸಲಿದೆ ಕಬ್ಬನ್ ಪಾರ್ಕ್‌, ಟಿಕೆಟ್ ದರ ಎಷ್ಟು?

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಚಳಿಗಾಲದ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್‌ನಲ್ಲಿ ನಾಳೆಯಿಂದ ಅಂದರೆ ನವೆಂಬರ್ 25ರಿಂದ ಡಿಸೆಂಬರ್ 7ರವರೆಗೆ ಒಟ್ಟು 13 ದಿನಗಳ ಕಾಲ ಕಬ್ಬನ್ ಪಾರ್ಕ್‌ನಲ್ಲಿ 2026ರ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಈ ಬಾರಿ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ವಿಶೇಷ ಥೀಮ್‌ನಡಿ ಹೂಗಳ ಹಬ್ಬವನ್ನ ಆಯೋಜಿಸಲಾಗಿದ್ದು, ಪ್ರಕೃತಿ ಪ್ರಿಯರು, ಕುಟುಂಬಗಳು ಹಾಗೂ ಶಾಲಾ ಮಕ್ಕಳನ್ನು ಆಕರ್ಷಿಸಲು ಕಬ್ಬನ್ ಪಾರ್ಕ್ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

Bengaluru Cubbon Park Flower Show 2026 From Nov 25 To Dec 7 Check Attractions Ticket Price amp amp Parking Details

15 ಲಕ್ಷ ಹೂಗಳಲ್ಲಿ ಅರಳುವ ವಿಸ್ಮಯ: ಬೆಂಗಳೂರು ಫ್ಲವರ್ ಶೋ ಪ್ರಮುಖ ಆಕರ್ಷಣೆಗಳೇನು?

ಬಾಲಭವನದ ಮುಂಭಾಗದಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೂ ಹೂವಿನ ಕಲಾಕೃತಿಗಳನ್ನ ಜೋಡಿಸಲಾಗಿದ್ದು, ಈ ಬಾರಿಯ ಫ್ಲವರ್ ಶೋ ಹಿಂದಿಗಿಂತಲೂ ಅದ್ಧೂರಿಯಾಗಿರಲಿದೆ.

ಭವ್ಯ ಕಲಾಕೃತಿಗಳು: ಸುಮಾರು 15 ಲಕ್ಷಕ್ಕೂ ಅಧಿಕ ಬಣ್ಣಬಣ್ಣದ ಹೂಗಳನ್ನ ಬಳಸಿ ನಾಡಿನ ವೀರ ವನಿತೆಯರ ಶೌರ್ಯ, ತಾಯಿ ಭುವನೇಶ್ವರಿ ಮತ್ತು ಕರ್ನಾಟಕದ ನಕ್ಷೆ, ನಮ್ಮ ಮೆಟ್ರೋ ರೈಲು ಮಾದರಿ, ಹೊಯ್ಸಳ ವಾಸ್ತುಶಿಲ್ಪ, ಗಂಡಭೇರುಂಡ ಹಾಗೂ ಇಂಡಿಯಾ ಗೇಟ್ ಪ್ರತಿಕೃತಿಗಳನ್ನ ನಿರ್ಮಿಸಲಾಗುತ್ತಿದೆ.

ಮಕ್ಕಳಿಗಾಗಿ ವಿಶೇಷ: ಪುಟಾಣಿಗಳನ್ನ ರಂಜಿಸಲು ವಿವಿಧ ಕಾರ್ಟೂನ್ ಪಾತ್ರಗಳು, ನರ್ತಿಸುವ ನವಿಲು, ಪಾಂಡಾ, ಸ್ಟಾರ್‌ಫಿಶ್ ಹಾಗೂ ತರಕಾರಿ-ಹೂಗಳಿಂದ ಸಿದ್ಧಪಡಿಸಿದ ಆನೆ ಮತ್ತು ಚಿಟ್ಟೆಗಳ ಮಾದರಿಗಳು ಇರಲಿವೆ.

ಸೈಕಲ್ ಅಲ್ಲಿ ಡೆಲಿವರಿ ಮಾಡುತ್ತಲೇ CA ಪಾಸ್ ಮಾಡಿದ ಯುವಕ: ರಸ್ತೆಯಲ್ಲಿ ನಿಂತು ಕನಸು ಕಂಡಿದ್ದ ಬೆಂಗಳೂರಿನ ಅದೇ ಆಫೀಸ್‌ನಲ್ಲಿ ಕೆಲಸ
ಸೈಕಲ್ ಅಲ್ಲಿ ಡೆಲಿವರಿ ಮಾಡುತ್ತಲೇ CA ಪಾಸ್ ಮಾಡಿದ ಯುವಕ: ರಸ್ತೆಯಲ್ಲಿ ನಿಂತು ಕನಸು ಕಂಡಿದ್ದ ಬೆಂಗಳೂರಿನ ಅದೇ ಆಫೀಸ್‌ನಲ್ಲಿ ಕೆಲಸ

ವೈವಿಧ್ಯಮಯ ಹೂಗಳು: ಪ್ರದರ್ಶನದ ಉದ್ದಕ್ಕೂ ಲಕ್ಷಾಂತರ ಹೂವಿನ ಕುಂಡಗಳನ್ನ ಜೋಡಿಸಲಾಗಿದ್ದು, ಪೆಟೂನಿಯಾ, ಟೊರೇನಿಯಾ, ಸಾಲ್ವಿಯಾ, ಚೆಂಡುಹೂವು (ಮಾರಿಗೋಲ್ಡ್), ಸೇವಂತಿಗೆ (ಕ್ರಿಸಾಂಥಿಮಮ್) ಹಾಗೂ ಜರ್ಬೆರಾ ಸೇರಿದಂತೆ ದೇಶ-ವಿದೇಶದ ಹಲವು ತಳಿಯ ಹೂವುಗಳು ಕಣ್ಮನ ಸೆಳೆಯಲಿವೆ.

ಸಾಂಸ್ಕೃತಿಕ ಹಾಗೂ ಸೇನಾ ಪ್ರದರ್ಶನ: ಹೂವಿನ ಪ್ರದರ್ಶನಕ್ಕೆ ಸಾಂಸ್ಕೃತಿಕ ಮೆರುಗು ನೀಡಲು ನಿತ್ಯವೂ ಸಂಗೀತ-ನೃತ್ಯ ಕಾರ್ಯಕ್ರಮಗಳು ಹಾಗೂ ಭಾರತೀಯ ಸೇನೆಯ ವತಿಯಿಂದ ವಿಶೇಷ ಜಾಗೃತಿ ಪ್ರದರ್ಶನಗಳನ್ನ ಹಮ್ಮಿಕೊಳ್ಳಲಾಗಿದೆ.

ಕಬ್ಬನ್ ಪಾರ್ಕ್ ಟಿಕೆಟ್ ದರ ಎಷ್ಟು? ಶಾಲಾ ಮಕ್ಕಳಿಗೆ ಉಚಿತ ಪ್ರವೇಶ!

ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗಾಗಿ ತೋಟಗಾರಿಕೆ ಇಲಾಖೆ ಟಿಕೆಟ್ ದರವನ್ನ ನಿಗದಿಪಡಿಸಿದೆ:

* ವಯಸ್ಕರಿಗೆ (ಸಾಮಾನ್ಯ ದಿನಗಳಲ್ಲಿ): 50 ರೂಪಾಯಿ

* ವಯಸ್ಕರಿಗೆ (ವಾರಾಂತ್ಯ ಮತ್ತು ರಜಾ ದಿನಗಳಲ್ಲಿ): 80 ರೂಪಾಯಿ

* ಮಕ್ಕಳಿಗೆ (ಎಲ್ಲಾ ದಿನಗಳಲ್ಲೂ): 20 ರೂಪಾಯಿ

* ಶಾಲಾ ಮಕ್ಕಳಿಗೆ: ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಸಂಪೂರ್ಣ ಉಚಿತವಾಗಿರಲಿದೆ.

ಈ ಕುರಿತು ಮಾಹಿತಿ ನೀಡಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಹಾಗೂ ಕಬ್ಬನ್ ಪಾರ್ಕ್ ಉಸ್ತುವಾರಿ ಜಿ. ಕುಸುಮಾ ಅವರು, "ಕಳೆದ ವರ್ಷ ಸರಳವಾಗಿ ಪ್ರದರ್ಶನ ನಡೆಸಲಾಗಿತ್ತು. ಆದರೆ ಈ ಬಾರಿ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದ ಥೀಮ್‌ನಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ" ಎಂದು ತಿಳಿಸಿದ್ದಾರೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮಂಗಳವಾರ ಸಂಜೆವರೆಗೂ ವಿದ್ಯುತ್ ವ್ಯತ್ಯಯ
Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮಂಗಳವಾರ ಸಂಜೆವರೆಗೂ ವಿದ್ಯುತ್ ವ್ಯತ್ಯಯ

ವಾಹನ ಸವಾರರಿಗೆ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಎಲ್ಲೆಲ್ಲಿ?

ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಸಂಚಾರ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆಯಾಗದಂತೆ ಇಲಾಖೆ ಐದು ಪ್ರಮುಖ ಸ್ಥಳಗಳಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆಯನ್ನ ಮಾಡಿದೆ. ಎನ್‌ಜಿಒ ಹಾಲ್ ವೃತ್ತದ ಬಳಿ, ಕ್ವೀನ್ಸ್ ಪಾರ್ಕ್ ಬಳಿ, ಹೈಕೋರ್ಟ್ ಪಾರ್ಕಿಂಗ್ ಆವರಣ, ಶ್ರೀ ಕಂಠೀರವ ಕ್ರೀಡಾಂಗಣದ ಆವರಣ ಹಾಗೂ ಸೇಂಟ್ ಜೋಸೆಫ್ ಶಾಲೆಯ ಆವರಣದಲ್ಲಿ ವಾಹನಗಳನ್ನ ನಿಲುಗಡೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+