ಭಾರತದಲ್ಲಿ ಪ್ರತಿದಿನ 25 ಸರ್ಕಾರಿ ಶಾಲೆಗಳು ಬಂದ್, ಕಳೆದ 10 ವರ್ಷಗಳಲ್ಲಿ 94,000 ಶಾಲೆಗಳಿಗೆ ಬೀಗ: ನೀತಿ ಆಯೋಗ ವರದಿ

ಸರ್ಕಾರಿ ಶಾಲೆ ಅಂದರೆ ಸಾಕು ಜನಗಳು ಯಾಕೋ ಮುಗು ಮುರಿಯುತ್ತಿದ್ದಾರೆ. ಕೇಳಿದರೆ ಒಂದಿಷ್ಟು ಕಾರಣವನ್ನು ನೀಡುತ್ತಾರೆ, ಅದರಲ್ಲಿ ಹೆಚ್ಚಾಗಿ ಕೇಳಿ ಬರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಪಾಠಗಳು ಹೇಳಿ ಕೊಡುವುದಿಲ್ಲ, ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯಗಳೇ ಇಲ್ಲ, ಮತ್ತು ಇನ್ನೂ ಕೆಲವರು ಮುಂದೆ ಮಕ್ಕಳಿಗೆ ಒಳ್ಳೆ ಕಡೆ ಉದ್ಯೋಗ ಸಿಗಲ್ಲ. ಇದೆಲ್ಲ ಕಾರಣಕ್ಕಾಗಿ ಪೋಷಕರು ತಮ್ಮ ಕೈಯಲ್ಲಿ ಆಗದಿದ್ದರು ಕೂಡ ಸಾಲ-ಸೂಲ ಮಾಡಿ ತಮ್ಮ ಮಕ್ಕಳನ್ನ ದೊಡ್ಡ ದೊಡ್ಡ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಇದರಿಂದಾಗಿ ಇಂದು ಭಾರತದ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ತುಂಬ ದೊಡ್ಡ ಸಮಸ್ಯೆಯನ್ನ ಎದುರಿಸುತ್ತಿದೆ.

ಇತ್ತೀಚೆಗೆ ನೀತಿ ಆಯೋಗದ ಬಿಡುಗಡೆ ಮಾಡಿರುವ ವರದಿಯಲ್ಲಿ ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಆಘಾತಕಾರಿ ಸತ್ಯವೊಂದನ್ನ ಬಯಲು ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬರೋಬ್ಬರಿ 94,000 ಸರ್ಕಾರಿ ಶಾಲೆಗಳು ಮುಚ್ಚಿದ್ದಾವೆ ಅಂದರೆ ನಂಬುತ್ತೀರಾ? ನಂಬಲು ಸ್ವಲ್ಪ ಕಷ್ಟ ಆಗಬಹುದು ಆದರೆ ಇದು ಸತ್ಯ. ಅಂದರೆ, ನಮ್ಮ ದೇಶದಲ್ಲಿ ಕಳೆದ ಒಂದು ದಶಕದಲ್ಲಿ ಪ್ರತಿದಿನ 25 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗುತ್ತಿದೆ. ಕೇವಲ ಶಾಲೆಗೆ ಮಾತ್ರ ಬೀಗ ಹಾಕುತ್ತಿಲ್ಲ, ಬದಲಿಗೆ ಸರ್ಕಾರಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯು ಗಣನೀಯವಾಗಿ ಕಡಿಮೆಯಾಗಿದೆ.

India

ಈ ಅಂಕಿ-ಅಂಶಗಳು ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.

ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಭಾರೀ ಕುಸಿತ

ಟೆಂಪೊರಲ್ ಅನಾಲಿಸಿಸ್ ಅಂಡ್ ಪಾಲಿಸಿ ರೋಡ್‌ಮ್ಯಾಪ್ ಫಾರ್ ಕ್ವಾಲಿಟಿ ಎನ್‌ಹ್ಯಾನ್ಸ್‌ಮೆಂಟ್' ಎಂಬ ಹೆಸರಿನಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿರುವ ಈ ವರದಿಯ ಪ್ರಕಾರ, ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾತಿರುವ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. 2014-15ನೇ ಸಾಲಿನಲ್ಲಿ 26.95 ಕೋಟಿ ವಿದ್ಯಾರ್ಥಿಗಳು ದೇಶಾದ್ಯಂತ ಸರ್ಕಾರಿ ಶಾಲೆಗೆ ದಾಖಲಾಗಿದ್ದರು. ಆದರೆ, ಅದೇ 2024-25ರ ಹೊತ್ತಿಗೆ ಈ ಸಂಖ್ಯೆ 24.69 ಕೋಟಿಗೆ ಕುಸಿದಿದೆ. ಅಂದರೆ, ಕೇವಲ 10 ವರ್ಷಗಳಲ್ಲಿ ಬರೋಬ್ಬರಿ 2.26 ಕೋಟಿ ವಿದ್ಯಾರ್ಥಿಗಳು ಶಾಲಾ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಭಾರತದಲ್ಲಿ ಇಳಿಕೆಯಾಗುತ್ತಿರುವ ಜನನ ಪ್ರಮಾಣ ಮತ್ತು ಶಾಲಾ ವಯಸ್ಸಿನ ಮಕ್ಕಳು ಕಡಿಮೆ ಇರುವುದು ಎಂದು ವರದಿಯಲ್ಲಿ ನೀಡಲಾಗಿದೆ.

ಸರ್ಕಾರಿ ಶಾಲೆಗಳ ವಿಲೀನ: ಇದು ಲಾಭವೋ ಅಥವಾ ನಷ್ಟವೋ?

ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗ ಮೂಲಸೌಕರ್ಯ ಹಾಗೂ ಶಿಕ್ಷಕರ ಸಂಪನ್ಮೂಲಗಳ ಸದ್ಬಳಕೆಗಾಗಿ 'ಶಾಲಾ ವಿಲೀನ' ನೀತಿಯನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಹತ್ತಿರದ ಇತರ ಶಾಲೆಗಳೊಂದಿಗೆ ವಿಲೀನ ಮಾಡಬೇಕು. ಈ ನೀತಿಯ ಅಡಿ ಕೇವಲ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲೇ ಸುಮಾರು 40,000 ಶಾಲೆಗಳನ್ನ ವಿಲೀನಗೊಳಿಸಲಾಗಿದೆ.

ಆದರೆ, ಶಿಕ್ಷಣ ತಜ್ಞರ ಪ್ರಕಾರ ಈ ನೀತಿಯೇ ವಿದ್ಯಾರ್ಥಿಗಳ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಹತ್ತಿರದ ನೆರೆಹೊರೆಯ ಶಾಲೆಗಳು ಮುಚ್ಚಲ್ಪಟ್ಟಾಗ, ದೂರದ ಶಾಲೆಗಳಿಗೆ ನಡೆದುಕೊಂಡು ಹೋಗಲಾಗದೆ ಅನೇಕ ಮಕ್ಕಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ.

ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರು

ನೀತಿ ಆಯೋಗದ ವರದಿಯ ಪ್ರಕಾರ, ಸರ್ಕಾರಿ ಶಾಲೆಗಳ ಸಂಖ್ಯೆ 2014-15ರಲ್ಲಿದ್ದ 11.07 ಲಕ್ಷದಿಂದ 2024-25ರ ಹೊತ್ತಿಗೆ 10.13 ಲಕ್ಷಕ್ಕೆ ಇಳಿಕೆಯಾಗಿದೆ. ಇದೇ ರೀತಿ, ಸರ್ಕಾರಿ ಅನುದಾನಿತ ಶಾಲೆಗಳು ಸಹ 83,000 ದಿಂದ 79,000 ಕ್ಕೆ ಇಳಿದಿವೆ. ಆದರೆ, ಅಚ್ಚರಿಯ ವಿಷಯವೆಂದರೆ, ಇದೇ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ 2.88 ಲಕ್ಷದಿಂದ 3.39 ಲಕ್ಷಕ್ಕೆ ಭಾರೀ ಏರಿಕೆಯಾಗಿದೆ.

ಇದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಅತೀ ದೊಡ್ಡ ಬದಲಾವಣೆ. ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಹಾಗೂ ಗುಣಮಟ್ಟದ ಕೊರತೆಯಿಂದಾಗಿ ಪೋಷಕರು ತಮ್ಮ ಕೈಯಲ್ಲಿ ಆಗದಿದ್ದರೂ ಸಹ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂಬುದು ಮಾತ್ರ ಸತ್ಯ.

ಹೆಚ್ಚುತ್ತಿರುವ ಡ್ರಾಪ್‌ಔಟ್ ರೇಟ್

ಇವೆಲ್ಲದರ ಜೊತೆಗೆ ಇನ್ನೊಂದು ಆತಂಕಕಾರಿ ವಿಷಯವೆಂದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಕ್ಕಳ ಡ್ರಾಪ್‌ಔಟ್ ರೇಟ್. ಹೌದು ಶಾಲಾ ಶಿಕ್ಷಣದಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಾಥಮಿಕ ಹಂತದಲ್ಲಿ ಡ್ರಾಪ್‌ಔಟ್ ಪ್ರಮಾಣ ಕೇವಲ ಶೇ. 0.3 ರಷ್ಟಿದ್ದರೆ, ಮೇಲ್ದರ್ಜೆಯ ಪ್ರಾಥಮಿಕ ಹಂತದಲ್ಲಿ ಇದು ಶೇ. 3.5 ಕ್ಕೆ ಹಾಗೂ ಪ್ರೌಢಶಾಲಾ ಹಂತ ತಲುಪುವಷ್ಟರಲ್ಲಿ ಶೇ. 11.5 ಕ್ಕೆ ಏರಿಕೆಯಾಗುತ್ತಿದೆ. ಮೇಲ್ದರ್ಜೆಯ ಪ್ರಾಥಮಿಕ ಹಂತದಿಂದ ಪ್ರೌಢಶಾಲೆಗೆ ದಾಖಲಾಗುವ ಮಕ್ಕಳ ಪ್ರಮಾಣ 2014ರಲ್ಲಿದ್ದ ಶೇ. 91.58 ರಿಂದ 2024ರಲ್ಲಿ ಶೇ. 86.6 ಕ್ಕೆ ಕುಸಿದಿದೆ.

ಪುದುಚೇರಿ ಮತ್ತು ಕೇರಳದಲ್ಲಿ ಶೇ. 99.6ರಷ್ಟು ಈ ಡ್ರಾಪ್‌ಔಟ್ ರೇಟ್ ಇದ್ದರೆ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ತೀರಾ ಕಳಪೆಯಾಗಿದೆ. ಇದರ ಜೊತೆಗೆ, ಮಾಧ್ಯಮಿಕ ಹಂತದಲ್ಲಿ ಕಲಿಕಾ ಗುಣಮಟ್ಟ ತೀರಾ ಕುಸಿದಿದೆ. ಒಂಬತ್ತನೇ ತರಗತಿಯ ಅನೇಕ ವಿದ್ಯಾರ್ಥಿಗಳು ಸಾಮಾನ್ಯವಾದ ಗಣಿತದ ಪರಿಕಲ್ಪನೆಗಳಾದ ಶೇಕಡಾವಾರು, ಭಿನ್ನರಾಶಿ ಹಾಗೂ ಬೀಜಗಣಿತವನ್ನು ಅರ್ಥಮಾಡಿಕೊಳ್ಳಲು ಪರದಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+