ವೈಭವ್ ಸೂರ್ಯವಂಶಿ ಕಾಲೆಳೆದ ತನ್ನದೇ ತಂಡದ ಆಟಗಾರ, ಭಾರತದ ವಿರುದ್ಧ ಇಂಗ್ಲೆಂಡ್‌ ಗೆಲ್ಲಿಸಿದ ಆರ್‌ಸಿಬಿ ಸ್ಟಾರ್

India vs England 4th T20I: ಬ್ರಿಸ್ಟಲ್‌ನಲ್ಲಿ ಗುರುವಾರ (ಜುಲೈ 09) ನಡೆದ ರೋಚಕ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ ತಂಡವು ಆರ್‌ಸಿಬಿ ಸ್ಟಾರ್ ಆಟಗಾರನ ಆಕ್ರಮಣಕಾರಿ ಆಟದ ನೆರವಿನಿಂದ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು. ಟೀಮ್ ಇಂಡಿಯಾ ನಾಯಕ ಶ್ರೇಯಸ್‌ ಅಯ್ಯರ್ ಸಿಡಿಸಿದ ಅಜೇಯ ಅರ್ಧಶತಕ ವ್ಯರ್ಥವಾದಂತಾಗಿದೆ. ಈ ಕುರಿತ ಸಂಪೂರ್ಣ ವರದಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್‌ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆಯೇ ಮೊದಲಿಗೆ ಬ್ಯಾಟ್‌ ಬೀಸಿದ ಭಾರತವು ನಾಯಕ ನಾಯಕ ಶ್ರೇಯಸ್‌ ಅಯ್ಯರ್ ಅವರ ಆಕ್ರಮಣಕಾರಿ ಆಟದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್‌ಗಳನ್ನು ಪೇರಿಸಿತು. ಆದರೆ ಬಳಿಕ ಬ್ಯಾಟಿಂಗ್‌ಗಿಳಿದ ಇಂಗ್ಲೆಂಡ್‌ ತಂಡವು ಫಿಲ್‌ ಸಾಲ್ಟ್‌ ಹಾಗೂ ನಾಯಕ ಹ್ಯಾರಿ ಬ್ರೂಕ್ ಸ್ಫೋಟಕ ಆಟದಿಂದ ಭರ್ಜರಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿತು.

England Beat India by 9 Wickets to ClinchT20I Series RCB Star Plyer Phil Salt Harry Brook Shine

ಸರಣಿ ತನ್ನದಾಗಿಸಿಕೊಂಡ ಇಂಗ್ಲೆಂಡ್‌

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ ಮತ್ತೊಂದು ಪಂದ್ಯ ಬಾಕಿ ಇರುವಂತೆಯೇ ಕೈಚೆಲ್ಲಿದೆ. ಬ್ರಿಸ್ಟಲ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿತು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬಳಿಕ ಇಂಗ್ಲೆಂಡ್ ತಂಡ ಸತತ ಮೂರು ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿತು.

ಸುಲಭವಾಗಿ ಗುರಿ ಮುಟ್ಟಿದ್ದ ಇಂಗ್ಲೆಂಡ್‌

ಗುರುವಾರ ನಡೆದ ಪಂದ್ಯದಲ್ಲಿ ನಾಯಕ ಹ್ಯಾರಿ ಬ್ರೂಕ್ ಮತ್ತು ಫಿಲ್ ಸಾಲ್ಟ್ ಅಜೇಯ ಅರ್ಧಶತಕಗಳನ್ನು ಸಿಡಿಸುವ ಮೂಲಕ ಭಾರತ ನೀಡಿದ್ದ 159 ರನ್‌ಗಳ ಗುರಿಯನ್ನು ಅತ್ಯಂತ ಸುಲಭವಾಗಿ ಬೆನ್ನಟ್ಟಿದರು. ಇಂಗ್ಲೆಂಡ್ ಕೇವಲ 13.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯಭೇರಿ ಬಾರಿಸಿತು.

ಮಿಂಚಿದ ಸಾಲ್ಟ್‌, ಹ್ಯಾರಿ ಬ್ರೂಕ್

ಇಂಗ್ಲೆಂಡ್ ಪರ ಬ್ಯಾಟ್‌ ಬೀಸಿದ ಆರ್‌ಸಿಬಿ ಪರ ಕೊಹ್ಲಿ ಜೊತೆ ಕಣಕ್ಕಿಳಿಯುವ ಫಿಲ್ ಸಾಲ್ಟ್‌ 42 ಎಸೆತಗಳಲ್ಲಿ 9 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ ಅಜೇಯ 59 ರನ್‌ ಕಲೆಹಾಕಿದರು. ಇನ್ನೂ ಜೋಸ್ ಬಟ್ಲರ್ 8 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ನಾಯಕ ಹ್ಯಾರಿ ಬ್ರೂಕ್‌ ಸಾಲ್ಟ್‌ ಜೊತೆ ಕೊನೆವರೆಗೂ ನಿಂತು ಉತ್ತಮ ಸಾಥ್ ನಿಡಿದ್ದು, ಇವರು 35 ಎಸೆತಗಳಲ್ಲಿ ಅಜೇಯ 79 ರನ್‌ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಸಾಧಾರಣ ಮೊತ್ತ ಕಲೆಹಾಕಿದ ಟೀಮ್ ಇಂಡಿಯಾ

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್‌ ಬೀಸಿದ ಭಾರತ 7 ವಿಕೆಟ್ ನಷ್ಟಕ್ಕೆ 158 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಭಾರತದ ಪರ ನಾಯಕ ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟ ನಡೆಸಿ 49 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 80 ರನ್ ಸಿಡಿಸಿದರು.

ತನ್ನದೇ ತಂಡದ ಆಟಗಾರನಿಂದ ವೈಭವ್‌ ಆಟಕ್ಕೆ ಬ್ರೇಕ್

ಆದರೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫರಾದರು. ಅವರು 10 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್‌ ಸಹಿತ 15 ರನ್ ಗಳಿಸಿ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ನಡೆದರು. ಜೋಫ್ರಾ ಆರ್ಚರ್ ಅವರು ಐಪಿಎಲ್‌ನಲ್ಲಿ ಆರ್‌ಆರ್ ತಂಡದ ವೈಭವ್ ಸಹ ಆಟಗಾರ ಆಗಿದ್ದಾರೆ.

ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು?

ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಜೋಫ್ರಾ ಆರ್ಚರ್ ಕೇವಲ 20 ರನ್‌ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರೆ, ಜೋಶ್ ಟಂಗ್ 36 ರನ್‌ ನೀಡಿ 2 ವಿಕೆಟ್ ಪಡೆದು ಟೀಮ್ ಇಂಡಿಯಾ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ವಿಲ್ ಜಾಕ್ಸ್‌ ಹಾಗೂ ಆದಿಲ್ ರಶಿದ್ ತಲಾ ಒಂದು ವಿಕೆಟ್‌ ಪಡೆದರು. ಒಟ್ಟಿನಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ನಾಲ್ಕನೇ ಪಂದ್ಯದಲ್ಲಿ ಸೋಲುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು ಕೈಚೆಲ್ಲಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+