CID ವಿವೇಕ್ ನೆನಪಿದೆಯಾ? ಪೊಲೀಸ್ ಅಧಿಕಾರಿಯಾಗಿ ಜನರ ಮನ ಗೆದ್ದ ಈ ನಟ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

ಟಿವಿಯಲ್ಲಿ ಕ್ರೈಂ ಸ್ಟೋರಿ ನೋಡುತ್ತಾ ಬೆಳೆದವರಿಗೆ ಸಿಐಡಿ (CID) ಕಾರ್ಯಕ್ರಮದ ನೆನಪು ಖಂಡಿತಾ ಇರುತ್ತದೆ. ಒಂದು ಕಡೆ ಎಸಿಪಿ ಪ್ರದ್ಯೂಮನ್ ಗಂಭೀರ ಧ್ವನಿ, ಇನ್ನೊಂದು ಕಡೆ ದಯಾನ ಬಲಿಷ್ಠ ವ್ಯಕ್ತಿತ್ವ, ಅಭಿಜಿತ್‌ನ ಚುರುಕಿನ ತನಿಖೆ... ಇವೆಲ್ಲದರ ನಡುವೆ ತನ್ನದೇ ಆದ ಸರಳ ಶೈಲಿಯಲ್ಲಿ ಗಮನ ಸೆಳೆದವರು ಇನ್‌ಸ್ಪೆಕ್ಟರ್ ವಿವೇಕ್.

ಹಲವರಿಗೆ ನಾಸ್ತಾಲ್ಜಿಯಾ

ಒಂದು ಕಾಲದಲ್ಲಿ ಸಿಐಡಿ ಕಾರ್ಯಕ್ರಮದ ಪ್ರತಿಯೊಂದು ಎಪಿಸೋಡ್‌ಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ವಿವೇಕ್ ಕೇವಲ ಪೊಲೀಸ್ ಅಧಿಕಾರಿಯ ಪಾತ್ರವಾಗಿರಲಿಲ್ಲ. ಮನೆಯವರ ಜೊತೆ ಕುಳಿತು ಕ್ರೈಂ ಕಥೆ ನೋಡುತ್ತಿದ್ದ ನಾಸ್ತಾಲ್ಜಿಯಾವೂ ಹೌದು. ಈ ಪಾತ್ರದಲ್ಲಿ ಕಾಣಿಸಿಕೊಂಡ ನಟ ವಿವೇಕ್ ಮಶ್ರು ಅವರು ನಿಜ ಜೀವನದಲ್ಲಿ ಏನು ಮಾಡುತ್ತಿದ್ದಾರೆ, ನಟನೆಯಿಂದ ದೂರ ಸರಿಯಲು ಕಾರಣವೇನು, ಅವರ ಬದುಕಿನ ಕಥೆ ಸಖತ್ ಇಂಟರೆಸ್ಟಿಂಗ್.

Remember CID Inspector Vivek Here s What Actor Vivek Mashru Is Doing Now corporate strategist

ಆಪರೇಷನ್ ತಲಾಶ್ ಮೂಲಕ ಸಿಐಡಿಗೆ ಎಂಟ್ರಿ

ವಿವೇಕ್ ಮಶ್ರು ಅವರಿಗೆ ಸಿಐಡಿ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿದ್ದು ಸಾಮಾನ್ಯ ರೀತಿಯಲ್ಲಿ ಅಲ್ಲ. ಹೊಸ ಪೊಲೀಸ್ ಅಧಿಕಾರಿಯ ಪಾತ್ರಕ್ಕಾಗಿ ಕಾರ್ಯಕ್ರಮದ ತಂಡ ದೇಶಾದ್ಯಂತ ಪ್ರತಿಭೆ ಹುಡುಕುವ 'ಆಪರೇಷನ್ ತಲಾಶ್' ಎಂಬ ಆಯ್ಕೆ ಪ್ರಕ್ರಿಯೆ ನಡೆಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವೇಕ್, ಆಡಿಷನ್ ಮತ್ತು ಆಯ್ಕೆ ಹಂತಗಳನ್ನು ದಾಟಿ ಪಾತ್ರವನ್ನು ತಮ್ಮದಾಗಿಸಿಕೊಂಡರು.

ವಿವೇಕ್ ಲೈಫ್ ನಲ್ಲಿ ಈ ಪಾತ್ರ ಮತ್ತೊಂದು ಕಾರಣಕ್ಕೆ ವಿಶಿಷ್ಟ. ಇವರ ತಾತ ಮತ್ತು ಅಜ್ಜಿ ಸಿಐಡಿ ಕಾರ್ಯಕ್ರಮದ ದೊಡ್ಡ ಅಭಿಮಾನಿಗಳು. ಅವರೆಲ್ಲ ಈ ಪ್ರೋಗ್ರಾಂ ಅನ್ನು ತಪ್ಪದೇ ನೋಡುತ್ತಿದ್ದರಂತೆ. ಆದರೆ ವಿವೇಕ್ ಆಯ್ಕೆಯಾದ ಸುದ್ದಿ ಅಧಿಕೃತವಾಗಿ ಹೊರಬರುವುದಕ್ಕೂ ಮುನ್ನವೇ ಅವರ ತಾತ ನಿಧನರಾಗಿದ್ದರು. ಹೀಗಾಗಿ ಈ ಸಾಧನೆಯನ್ನು ಅವರು ತಮ್ಮ ಅಜ್ಜ-ಅಜ್ಜಿಗೆ ಅರ್ಪಿಸಿದ್ದರು.

Mohanlal: RSS ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಮೋಹನ್‌ಲಾಲ್; ಸಂಘದ ಕಾರ್ಯಗಳ ಬಗ್ಗೆ ಹೇಳಿದ್ದೇನು?
Mohanlal: RSS ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಮೋಹನ್‌ಲಾಲ್; ಸಂಘದ ಕಾರ್ಯಗಳ ಬಗ್ಗೆ ಹೇಳಿದ್ದೇನು?

ಮೂರು ತಿಂಗಳಿಗೆಂದು ಬಂದವರು ಉಳಿದಿದ್ದು ಆರು ವರ್ಷ!

ಮೊದಲಿಗೆ ವಿವೇಕ್ ಅವರಿಗೆ ಕೇವಲ ಮೂರು ತಿಂಗಳ ಅಗ್ರಿಮೆಂಟ್ ನೀಡಲಾಗಿತ್ತು. ಆದರೆ ಅವರ ಅಭಿನಯ, ಪಾತ್ರದ ಮೇಲಿನ ಹಿಡಿತ ಮತ್ತು ತಂಡದ ಜೊತೆಗಿನ ಹೊಂದಾಣಿಕೆ ಇವೆಲ್ಲವೂ ಅವಕಾಶವನ್ನು ಮುಂದುವರಿಸಿತು. ಮೂರು ತಿಂಗಳಿನಿಂದ ಆರಂಭವಾದ ಈ ಪಯಣ ಸುಮಾರು ಆರು ವರ್ಷಗಳವರೆಗೆ ಸಾಗಿತು. ಈ ಅವಧಿಯಲ್ಲಿ ಅವರು ಸುಮಾರು 500 ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡರು.

ವಿವೇಕ್ ಪಾತ್ರ ಜನರಿಗೆ ಇಷ್ಟವಾಗಿದ್ದು ಯಾಕೆ?

ಸಿಐಡಿ ತಂಡದಲ್ಲಿ ಪ್ರತಿಯೊಬ್ಬ ಅಧಿಕಾರಿಗೂ ತಮ್ಮದೇ ಆದ ವಿಶೇಷತೆ ಇತ್ತು. ದಯಾ ಅವರ ಸಾಹಸ, ಅಭಿಜಿತ್ ಅವರ ತನಿಖಾ ಕೌಶಲ್ಯ, ಪ್ರದ್ಯೂಮನ್ ಅವರ ನಾಯಕತ್ವದ ನಡುವೆ ವಿವೇಕ್ ತಮ್ಮದೇ ಆದ ಗುರುತು ಮೂಡಿಸಿದ್ದರು. ಅವರು ಕೇವಲ ಅಪರಾಧಿಯನ್ನು ಹಿಡಿಯುವ ಪೊಲೀಸ್ ಅಧಿಕಾರಿಯಷ್ಟೇ ಆಗಿರಲಿಲ್ಲ. ತಂಡದ ಜೊತೆ ಬೆರೆಯುವ ರೀತಿ, ಕೆಲವೊಮ್ಮೆ ಕಾಣಿಸುತ್ತಿದ್ದ ಹಾಸ್ಯಭರಿತ ಸ್ವಭಾವ, ಅಪಾಯದ ಸಂದರ್ಭಗಳಲ್ಲಿ ತೋರಿಸುತ್ತಿದ್ದ ಧೈರ್ಯ ಇವೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ಕ್ರೈಂ ಕಥೆಯಲ್ಲಿ ಭಯ, ಕುತೂಹಲ ಮತ್ತು ಗಂಭೀರತೆ ಇರುತ್ತದೆ. ಆದರೆ ಅದರ ನಡುವೆ ವಿವೇಕ್ ಅವರಂತಹ ಪಾತ್ರಗಳು ಕಥೆಗೆ ಸಹಜವಾದ ಮಾನವೀಯ ಸ್ಪರ್ಶ ನೀಡುತ್ತವೆ. ಅದಕ್ಕಾಗಿಯೇ ಅವರು ಪರದೆಯ ಮೇಲೆ ಕಾಣಿಸಿಕೊಂಡಾಗ ಪ್ರೇಕ್ಷಕರಿಗೆ ಪರಿಚಿತ ವ್ಯಕ್ತಿಯೊಬ್ಬರು ಬಂದಂತೆ ಅನಿಸುತ್ತಿತ್ತು.

ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ

ದಿನಕ್ಕೆ 16ರಿಂದ 18 ಗಂಟೆಗಳ ಶೂಟಿಂಗ್!

ಟಿವಿ ಪರದೆಯ ಮೇಲೆ ಕೆಲವೇ ನಿಮಿಷ ಕಾಣಿಸುವ ದೃಶ್ಯಗಳ ಹಿಂದೆ ಎಷ್ಟು ಪರಿಶ್ರಮ ಇರುತ್ತದೆ ಎಂಬುದು ಸಾಮಾನ್ಯವಾಗಿ ನಮಗೆ ಗೊತ್ತಿರುವುದಿಲ್ಲ. ಸಿಐಡಿ ಕಾರ್ಯಕ್ರಮದ ಚಿತ್ರೀಕರಣವೂ ಅಷ್ಟೇ ಕಠಿಣವಾಗಿತ್ತು. ಕೆಲವೊಮ್ಮೆ ದಿನಕ್ಕೆ 16ರಿಂದ 18 ಗಂಟೆಗಳವರೆಗೆ ಸೆಟ್‌ನಲ್ಲಿ ಕೆಲಸ ಮಾಡಬೇಕಾಗುತ್ತಿತ್ತು. ತನಿಖೆಯ ದೃಶ್ಯಗಳು, ಓಡಾಟ, ಸಾಹಸ, ಸಂಭಾಷಣೆ ಮತ್ತು ಒಂದೇ ದೃಶ್ಯವನ್ನು ಹಲವು ಬಾರಿ ಚಿತ್ರೀಕರಿಸುವುದು ಹೀಗೆ ಕೆಲಸದ ದಿನಗಳು ಬಹಳ ದೀರ್ಘವಾಗಿರುತ್ತಿದ್ದವು.

ಜನಪ್ರಿಯತೆಯ ನಡುವೆಯೇ ನಟನೆಯಿಂದ ದೂರ

ಸಾಮಾನ್ಯವಾಗಿ ಒಂದು ಕಾರ್ಯಕ್ರಮ ದೊಡ್ಡ ಯಶಸ್ಸು ಕಂಡಾಗ ನಟರು ಇನ್ನಷ್ಟು ಅವಕಾಶಗಳಿಗಾಗಿ ಕಾಯುತ್ತಾರೆ. ಆದರೆ ವಿವೇಕ್ ಮಶ್ರು ಅವರ ನಿರ್ಧಾರ ಸ್ವಲ್ಪ ವಿಭಿನ್ನವಾಗಿತ್ತು. 2012ರ ಜೂನ್‌ನಲ್ಲಿ, ತಮ್ಮ 29ನೇ ವಯಸ್ಸಿನಲ್ಲಿ ಅವರು ನಟನೆಯಿಂದ ದೂರ ಸರಿಯಲು ನಿರ್ಧರಿಸಿದರು. ಸಿಐಡಿ ಕಾರ್ಯಕ್ರಮದ ಜನಪ್ರಿಯತೆ ಮುಂದುವರಿದಿದ್ದರೂ, ತಮ್ಮ ಜೀವನದಲ್ಲಿ ಹೊಸ ದಾರಿಯನ್ನು ಹುಡುಕಬೇಕು ಎಂಬ ಆಲೋಚನೆ ಅವರಿಗೆ ಬಂದಿತ್ತು.

ಹಿಮಾಲಯದ ಪ್ರವಾಸ, ಹೈಯರ್ ಎಜುಕೇಶನ್

ನಟನೆಯಿಂದ ವಿರಾಮ ಪಡೆದ ಬಳಿಕ ವಿವೇಕ್ ತಮ್ಮ ಜೀವನವನ್ನು ಹೊಸ ರೀತಿಯಲ್ಲಿ ನೋಡಲು ಆರಂಭಿಸಿದರು. ಭಾರತದ ಹಿಮಾಲಯ ಪ್ರದೇಶಗಳಲ್ಲಿ ಬ್ಯಾಕ್‌ಪ್ಯಾಕಿಂಗ್ ಪ್ರವಾಸ ಕೈಗೊಂಡರು. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲೂ ಒಬ್ಬರೇ ರಸ್ತೆ ಪ್ರವಾಸಗಳನ್ನು ಮಾಡಿದರು. ಪ್ರವಾಸ ಎಂದರೆ ಕೇವಲ ಹೊಸ ಸ್ಥಳಗಳನ್ನು ನೋಡುವುದಲ್ಲ. ಕೆಲವೊಮ್ಮೆ ಅದು ನಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯಾಣವೂ ಆಗಿರುತ್ತದೆ. ವಿವೇಕ್ ಅವರಿಗೂ ಈ ಅನುಭವ ಹೊಸ ದೃಷ್ಟಿಕೋನ ನೀಡಿತು.

ನಂತರ singaporeದಲ್ಲಿ ಇಂಟರ್‌ನ್ಯಾಷನಲ್ ಬಿಸಿನೆಸ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದರು. ಡೇಟಾ ಸೈನ್ಸ್ ಮತ್ತು ಬಿಸಿನೆಸ್ ಅನಾಲಿಟಿಕ್ಸ್ ಕ್ಷೇತ್ರದಲ್ಲಿಯೂ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ತಂದೆಯ ವ್ಯವಹಾರವನ್ನು ನೋಡಿಕೊಳ್ಳುವುದರ ಜೊತೆಗೆ ಕೆಲವು ಸಾಮಾಜಿಕ ಸಂಸ್ಥೆಗಳ ಜೊತೆಗೂ ಕೆಲಸ ಮಾಡಿದರು.

Saraswati Iyer: ಕೇವಲ ಎರಡು ಸೀರೆ, ಒಂದು ಟೆಂಟ್, ಪವರ್ ಬ್ಯಾಂಕ್ ಹಿಡಿದು ಕಾಸಿಲ್ಲದೇ ದೇಶ ಸುತ್ತಿದ ಯುವತಿ!
Saraswati Iyer: ಕೇವಲ ಎರಡು ಸೀರೆ, ಒಂದು ಟೆಂಟ್, ಪವರ್ ಬ್ಯಾಂಕ್ ಹಿಡಿದು ಕಾಸಿಲ್ಲದೇ ದೇಶ ಸುತ್ತಿದ ಯುವತಿ!

ಬೆಂಗಳೂರಿನಲ್ಲಿ ಎಡುಕೇಶನ್ ಲೀಡರ್

2023ರಲ್ಲಿ ವಿವೇಕ್ ಅವರ ಹಳೆಯ ಸಿಐಡಿ ಫೋಟೋ social mediaಗಳಲ್ಲಿ ವೈರಲ್ ಆಯಿತು. 'ಈ ವ್ಯಕ್ತಿ ಗೊತ್ತಿದ್ದರೆ ನಿಮ್ಮ ಬಾಲ್ಯ ಅದ್ಭುತವಾಗಿತ್ತು' ಎಂಬ ರೀತಿಯ ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದವು.ಅದೇ ಸಂದರ್ಭದಲ್ಲಿ ಅವರು ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿತು. ಕೆಲವರು ಅವರನ್ನು ಪ್ರಾಧ್ಯಾಪಕ ಎಂದು ಗುರುತಿಸಿದರೂ, ಅವರು ಸ್ಪಷ್ಟಪಡಿಸಿದಂತೆ ಅವರ ಕೆಲಸ ಸಾಮಾನ್ಯ ಬೋಧಕ ಹುದ್ದೆಯಾಗಿರಲಿಲ್ಲ. ಅವರು ಒಂದು ಸೆಕ್ಷನ್ ನ ಮ್ಯಾನೇಜ್ ಮೆಂಟ್ ನೋಡಿಕೊಳ್ಳುವ ಲೀಡರ್ ಆಗಿ ಇದ್ದರು. ಆ ಬಳಿಕ ಕಾರ್ಪೊರೇಟ್ ಜಗತ್ತಿನಲ್ಲೂ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು.

ಇಂದಿಗೂ ಅಭಿಮಾನಿಗಳ ಮನದಲ್ಲಿ ವಿವೇಕ್

ಸಿಐಡಿ ಕಾರ್ಯಕ್ರಮದಿಂದ ಅವರನ್ನು ನೆನಪಿಸಿಕೊಳ್ಳುವ ಅಭಿಮಾನಿಗಳು ಇಂದಿಗೂ ಇದ್ದಾರೆ. ಅವರ ಫೋಟೋ ವೈರಲ್ ಆದಾಗ ಬಂದ ಪ್ರತಿಕ್ರಿಯೆಗಳು ಇದಕ್ಕೆ ಸಾಕ್ಷಿ. ಹಳೆಯ ಎಪಿಸೋಡ್‌ಗಳನ್ನು ಮತ್ತೆ ನೋಡಿದಾಗ ವಿವೇಕ್ ಅವರ ಮುಖ ಕಾಣಿಸಿಕೊಂಡರೆ, ಅಂದಿನ ಬಾಲ್ಯ, ಕುಟುಂಬದ ಜೊತೆ ಟಿವಿ ನೋಡಿದ ಕ್ಷಣಗಳು ಮತ್ತು ಆ ಕ್ರೈಂ ಕಥೆಗಳ ಕುತೂಹಲ ಎಲ್ಲವೂ ಮತ್ತೆ ನೆನಪಾಗುತ್ತವೆ. ಪೊಲೀಸ್ ಅಧಿಕಾರಿಯಾಗಿ ಅಪರಾಧಿಗಳನ್ನು ಬೆನ್ನಟ್ಟುತ್ತಿದ್ದ ವಿವೇಕ್, ನಿಜ ಜೀವನದಲ್ಲಿ ಈಗ ಶಿಕ್ಷಣ, ವ್ಯವಹಾರ ಮತ್ತು ತಂತ್ರ ರೂಪಿಸುವ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ಅವರು ಇಂದಿಗೂ ಸಿಐಡಿ ವಿವೇಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+