ದೇಶದ ಲೋಕಸಭಾ ಸೀಟು‌ಗಳು 816ಕ್ಕೇರಿಕೆ! ಕರ್ನಾಟಕ ಪ್ರತಿನಿಧಿಸೋ ಎಂಪಿಗಳೆಷ್ಟು ಆಗುತ್ತಾರೆ?

ನವದೆಹಲಿ: ಕೇಂದ್ರ ಸರ್ಕಾರ ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ವಿಧೇಯಕ 2026 ಸೇರಿ ಮೂರು ಬಿಲ್ ಗಳ ತಿದ್ದುಪಡಿ ಮಾಡಿ ಅನುಮೋದನೆ ನೀಡಿದೆ. ದಕ್ಷಿಣ ಭಾರತ ರಾಜ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಸಂಸದರ ಸೀಟುಗಳು ಸಂಖ್ಯೆ ಹೆಚ್ಚಾಗಲಿವೆ. ಹಾಲಿ ದೇಶದ 545 ಲೋಕಸಭಾ (ಎಂಪಿ) ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಆಗಲಿವೆ. ಹಾಗಾದರೆ ಕರ್ನಾಟಕದಲ್ಲಿರುವ 28 ಎಂಪಿ ಗಳ ಸೀಟು ಎಷ್ಟಕ್ಕೆ ಏರಿಕೆ ಆಗಲಿದೆ? ದಕ್ಷಿಣ ರಾಜ್ಯಗಳ ಸೀಟು ಹೆಚ್ಚಳ ಸಂಪೂರ್ಣ ವಿವರ ಇಲ್ಲಿದೆ.

ಈ ಹಿಂದೆ ಕೇಂದ್ರ ಸಂಸತ್ ಕಲಾಪದಲ್ಲಿ ಕ್ಷೇತ್ರ ಮರುವಿಂಗಡಣೆ ವಿಧೇಯಕ-2026, ಸಂವಿಧಾನದ (131ನೇ ತಿದ್ದುಪಡಿ) ವಿಧೇಯಕ-2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ವಿಧೇಯಕ-2026 ಮಂಡಿಸುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿತ್ತು. ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕ, ಕೇರಳ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಲಾಗಿತ್ತು. ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದಂತೆ ಯಾವುದೇ ರಾಜ್ಯ, ಮುಂದಿನ ಚುನಾವಣೆಗಳಿಗೆ ತೊಂದರೆ ಆಗದಂತೆ ಮಾಡಲಾದ ಬದಲಾವಣೆಗಳಿಗೆ ಇಂದು ಕೇಂದ್ರವು ಅನುಮೋದನೆ ಕೊಟ್ಟಿದೆ.

Karnataka MP Seats Set to Rise From 28 to 42 Under Delimitation Bill 2026 India s total Seats From 545 to 816

ದಕ್ಷಿಣ ಭಾರತ ರಾಜ್ಯಗಳ ಸ್ಥಾನ 129 ರಿಂದ 195ಕ್ಕೇರಿಕೆ

ಈ ವಿಧೇಯಕಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ಪ್ರಾತಿನಿಧ್ಯವು ಕಡಿಮೆಯಾಗುವುದಿಲ್ಲ. ದಕ್ಷಿಣ ಭಾರತದ ರಾಜ್ಯಗಳ ಪ್ರಸ್ತುತ 129 ಲೋಕಸಭಾ ಸ್ಥಾನಗಳು ಈ ಪ್ರಸ್ತಾವನೆಯಡಿ 195ಕ್ಕೆ ಏರಿಕೆಯಾಗಲಿವೆ. ಬದಲಾಗಿ, ಶೇ. 50ರಷ್ಟು ಹೆಚ್ಚಳದ ಮಾದರಿಯಡಿ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 543 ರಿಂದ 816ಕ್ಕೆ ಹೆಚ್ಚಾಗಲಿದೆ. ಇದರಿಂದ ಆಯಾ ರಾಜ್ಯಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಕೇಂದ್ರ ತಿಳಿಸಿದೆ.

'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ
'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ

ದಕ್ಷಿಣ ರಾಜ್ಯಗಳಲ್ಲಿ ಹೆಚ್ಚಾಗಲಿರುವ ಎಂಪಿ ಸೀಟುಗಳ ವಿವರ

ದಕ್ಷಿಣ ಭಾರತದ ರಾಜ್ಯಗಳ ಪ್ರಸ್ತುತ 129 ಲೋಕಸಭಾ ಸ್ಥಾನಗಳು ಈ ಪ್ರಸ್ತಾವನೆಯಡಿ 195ಕ್ಕೆ ಏರಿಕೆಯಾಗಲಿವೆ. ಒಟ್ಟು ಸದನದಲ್ಲಿ ದಕ್ಷಿಣ ರಾಜ್ಯಗಳ ಪಾಲು ಪ್ರಸ್ತುತ ಇರುವ ಸುಮಾರು ಶೇ. 23.76ರ ಬದಲಾಗಿ ಶೇ. 23.87 ಅಂದರೆ ಸರಿಸುಮಾರು ಶೇ. 24ರಷ್ಟು ಇರಲಿದೆ. ಕರ್ನಾಟಕದ ಸ್ಥಾನಗಳು 28ರಿಂದ 42ಕ್ಕೆ ಏರಿಕೆಯಾಗಲಿದ್ದು, ಒಟ್ಟು ಸ್ಥಾನಗಳಲ್ಲಿ ರಾಜ್ಯದ ಪ್ರಾತಿನಿಧ್ಯ ಶೇ. 5.15ರ ಬದಲು ಶೇ. 5.14ರಷ್ಟೇ ಇರುವುದರಿಂದ ಕರ್ನಾಟಕಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಶಾ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲಿ ಎಂಪಿ ಸೀಟು 42!

ಕರ್ನಾಟಕ ರಾಜ್ಯದಲ್ಲಿ ಸದ್ಯ ಹಾಲಿ 28 ಲೋಕಸಭಾ ಸೀಟುಗಳ ಸಂಖ್ಯೆ ಇವೆ. ಅಂದರೆ ಶೇ. 5.15ರಷ್ಟು. ಇದನ್ನು ಜನಗಣತಿ ಆಧಾರದಲ್ಲಿ 42 ಸೀಟುಗಳಿಗೆ ಏರಿಕೆ ಮಾಡಲಾಗಿದೆ. ಶೇಕಡಾವಾರು ಮತದಾರರು ಮೊದಲಿನಂತೆಯೇ ಇರಲಿದ್ದು, (5.14ರಷ್ಟು ) ಎಂಪಿ ಸೀಟುಗಳ ಸಂಖ್ಯೆ ಮಾತ್ರ ಏರಿಕೆ ಆಗುತ್ತದೆ.

ಇನ್ನೂ ಇತರ ದಕ್ಷಿಣ ರಾಜ್ಯಗಳ ಸ್ಥಾನಗಳ ಹೆಚ್ಚಳದ ವಿವರ ನೋಡುವುದಾದರೆ, ಆಂಧ್ರಪ್ರದೇಶದ ಸ್ಥಾನಗಳು 25 ಸೀಟುಗಳಿಂದ 38ಕ್ಕೆ (ಶೇ. 4.60 ರಿಂದ ಶೇ. 4.65ಕ್ಕೆ ಹೆಚ್ಚಳ), ತೆಲಂಗಾಣದ ಸ್ಥಾನಗಳು 17 ಸೀಟುಗಳಿಂದ 26ಕ್ಕೆ (ಶೇ. 3.13 ರಿಂದ ಶೇ. 3.18ಕ್ಕೆ) ಮತ್ತು ತಮಿಳುನಾಡಿನ ಸ್ಥಾನಗಳು 39 ರಿಂದ 59 ಸೀಟುಗಳಿಗೆ (ಪಾಲು ಶೇ. 7.18ರಿಂದ ಶೇ. 7.23ಕ್ಕೆ) ಹೆಚ್ಚಾಗಲಿವೆ.

ಕೇರಳದ ಸ್ಥಾನಗಳು 20ರಿಂದ 30ಕ್ಕೆ ಹೆಚ್ಚಳವಾಗಲಿದ್ದು, ಅದರ ಪಾಲು ಸುಮಾರು ಶೇ. 3.67ರಷ್ಟಿರಲಿದೆ. ಈ ಮೊದಲು ದೇಶದ ಒಟ್ಟು ಲೋಕಸಭಾ ಸೀಟುಗಳು 850ಕ್ಕೆ ಏರಿಕೆ ಆಗಲಿವೆ ಎಂದು ಹೇಳಲಾಗಿತ್ತು. ಜನಸಂಖ್ಯೆ ಆಧಾರದಲ್ಲಿ 850 ಗರಿಷ್ಠ ಸಂಖ್ಯೆಯಾಗಿ ಪರಿಗಣಿಸಲಾಗಿತ್ತು. ಆದರೆ ವಾಸ್ತವದಲ್ಲಿ ಹೆಚ್ಚಳವಾಗುವ ನಿಖರ ಸಂಖ್ಯೆ 816 ಎಂದು ಅಮಿತ್ ಶಾ ವಿವರಿಸಿದ್ದಾರೆ.

2029ಕ್ಕೂ ಮೊದಲು ಜಾರಿ ಇಲ್ಲ

ಸಂಸತ್ತಿನ ಅನುಮೋದನೆ ಹಾಗೂ ರಾಷ್ಟ್ರಪತಿಗಳ ಒಪ್ಪಿಗೆಯ ಬಳಿಕವೇ ಈ ಕಾನೂನು ಜಾರಿಗೆ ಆಗಲಿವೆ. ಮುಂದಿನ 2029ಕ್ಕೂ ಮೊದಲು ಜಾರಿಯಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. 2029ರ ಹೊತ್ತಿಗೆ ನಡೆಯುವ ಲೋಕಸಭಾ ಚುನಾವಣೆಗಳನ್ನು 816 ಸೀಟುಗಳೊಂದಿಗೆ ಎದುರಿಸಬೇಕೋ ಬೇಡವೋ ಎಂಬುದನ್ನು ಮುಂದಿನ ಕೆಲವು ದಿನಗಳಲ್ಲಿ ಕೇಂದ್ರ ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ.

ಹಗರಣ ನಡೆದಿದ್ದಾಗಿ ಸಿದ್ದರಾಮಯ್ಯ ಒಪ್ಪಿಕೊಂಡ್ರು ಬಿ.ನಾಗೇಂದ್ರಗೆ ಕ್ಲೀನ್ ಚೀಟ್! ವಿಪಕ್ಷ ನಾಯಕ ಕಿಡಿ
ಹಗರಣ ನಡೆದಿದ್ದಾಗಿ ಸಿದ್ದರಾಮಯ್ಯ ಒಪ್ಪಿಕೊಂಡ್ರು ಬಿ.ನಾಗೇಂದ್ರಗೆ ಕ್ಲೀನ್ ಚೀಟ್! ವಿಪಕ್ಷ ನಾಯಕ ಕಿಡಿ

ಸರ್ಕಾರವು ಕ್ಷೇತ್ರ ಮರುವಿಂಗಡಣಾ ಆಯೋಗದ ಕಾಯ್ದೆಗೆ ಯಾವುದೇ ಬದಲಾವಣೆ ಮಾಡಿಲ್ಲ, ಬದಲಾಗಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಪ್ರಸ್ತುತ ಸರ್ಕಾರವು ಬದಲಾವಣೆಯಂತಹ ಯಾವುದೇ ಪ್ರಯತ್ನ ಮಾಡಿಲ್ಲ. ಇನ್ನೂ ತಮಿಳುನಾಡು ಅಥವಾ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆಗಳ ಮೇಲೆ ಈ ಕಾಯ್ದೆಯು ಯಾವುದೇ ಪರಿಣಾಮ ಬೀರುವುದಿಲ್ಲ. ಹಾಲಿ ಸ್ಥಾನಗಳಲ್ಲೇ ಚುನಾವಣೆ ನಡೆಯಲಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಚಿವ ಸಂಪುಟವು ಜಾತಿ ಜನಗಣತಿ ನಡೆಸಲು ನಿರ್ಧರಿಸಿದೆ. ಜನಗಣತಿಯಲ್ಲಿ ಜಾತಿಗೆ ಸಂಬಂಧಿಸಿದ ದತ್ತಾಂಶ ಸಂಗ್ರಹಿಸಲಾಗುವುದು. ಜನಗಣತಿಯನ್ನು 'ಮನೆಗಳ ಎಣಿಕೆ' ಮತ್ತು ನಂತರ 'ವ್ಯಕ್ತಿಗಳ ಎಣಿಕೆ' ಎಂದು ಹಂತಗಳಲ್ಲಿ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಮನೆಗಳನ್ನು ಎಣಿಸುವ ಮೊದಲ ಹಂತವು ಪ್ರಸ್ತುತ ನಡೆಯುತ್ತಿದ್ದು ಮನೆಗಳಿಗೆ ಯಾವುದೇ ಜಾತಿ ಇರುವುದಿಲ್ಲವಾದ್ದರಿಂದ ಈ ಹಂತದಲ್ಲಿ ಫಾರಂನಲ್ಲಿ ಜಾತಿಗೆ ಯಾವುದೇ ಆಯ್ಕೆ ಇರುವುದಿಲ್ಲ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+