SWR: ಅರಸೀಕೆರೆ-ಮೈಸೂರು, ಮೈಸೂರು-ಬೆಂಗಳೂರು ರೈಲು ರದ್ದು: ನೈಋತ್ಯ ರೈಲ್ವೆಯಿಂದ ಮಹತ್ವದ ಮಾಹಿತಿ
ಬೆಂಗಳೂರು: ಡಿಸೆಂಬರ್ ಮೊದಲ ವಾರ ವಿವಿಧ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಹೆಜ್ಜಾಲ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ರೈಲು ಸೇವೆಗಳಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ. ರದ್ದು, ಭಾಗಶಃ ರದ್ದಾಗಲಿವೆ. ಬೆಂಗಳೂರಿನಿಂದ ಹೊರಡುವ ಸಾಪ್ತಾಹಿಕ ರೈಲುಗಳ ಸೇವೆಯಲ್ಲೂ ವಿಸ್ತರಣೆ ಆಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ರದ್ದಾದ ರೈಲುಗಳ ಪಟ್ಟಿ
* ಇದೇ ಡಿಸೆಂಬರ್ 01, 2026 ಮತ್ತು 07 ರಂದು ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ ರೈಲು (56265) ರದ್ದುಗೊಳ್ಳಲಿದೆ.

* ಡಿಸೆಂಬರ್ 01,2026 ಮತ್ತು 07 ರಂದು ಮೈಸೂರು-ಎಸ್ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು (56231) ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲುಗಳ ಸಂಚಾರ ಭಾಗಶಃ ರದ್ದು ವಿವರ
* ಡಿಸೆಂಬರ್ 07.12.2026 ರಂದು ಹೊರಡುವ ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮೆಮು ರೈಲು (66580) ಚನ್ನಪಟ್ಟಣ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿಗೆ ಹೋಗುವ ಬದಲು ಚನ್ನಪಟ್ಟಣದಲ್ಲೇ ತನ್ನ ಪ್ರಯಾಣ ಅಂತ್ಯಗೊಳಿಸಲಿದೆ.
* ಕೆಎಸ್ಆರ್ ಬೆಂಗಳೂರು-ಅಶೋಕಪುರಂ ಮೆಮು ರೈಲು (66579) ಡಿಸೆಂಬರ್ 08, 2026 ರಂದು ಕೆಎಸ್ಆರ್ ಬೆಂಗಳೂರಿನ ಬದಲಾಗಿ ಚನ್ನಪಟ್ಟಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ. ಕೆಎಸ್ಆರ್ ಬೆಂಗಳೂರು ಮತ್ತು ಚನ್ನಪಟ್ಟಣ ನಿಲ್ದಾಣಗಳ ನಡುವೆ ಈ ರೈಲಿನ ಸೇವೆ ರದ್ದುಗೊಂಡಿದೆ.
ರೈಲುಗಳ ವಿಳಂಬ ಸಂಚಾರ
* ಎಸ್ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ರೈಲು (56232) ಡಿಸೆಂಬರ್ 01,2026 ರಂದು ಎಸ್ಎಂವಿಟಿ ಬೆಂಗಳೂರಿನಿಂದ 150 ನಿಮಿಷಗಳ ತಡವಾಗಿ ಮತ್ತು ಡಿಸೆಂಬರ್ 03, 2026 ರಂದು 75 ನಿಮಿಷಗಳ ತಡವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಸಾಪ್ತಾಹಿಕ ವಿಶೇಷ ರೈಲುಗಳ ಸೇವೆ ವಿಸ್ತರಣೆ
* ಶಬರಿಮಲೆ ಮತ್ತು ಕ್ರಿಸ್‌ಮಸ್ ವೇಳೆ ದಟ್ಟಣೆ ಹೆಚ್ಚಿರುವ ಕಾರಣಕ್ಕೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ 2027ರ ಜನವರಿವರೆಗೂ ಕೆಲವು ಮಾರ್ಗಗಳ ರೈಲು ಸೇವೆ ವಿಸ್ತರಿಸಲಾಗಿದೆ.
* ಎಸ್.ಎಸ್.ಎಸ್. ಹುಬ್ಬಳ್ಳಿ - ಕೊಲ್ಲಂ ವಿಶೇಷ ರೈಲು (07313) ಜನವರಿ 17 ರವರೆಗೆ ವಿಸ್ತರಣೆ ಆಗಿದೆ.
* ತಿರುವನಂತಪುರಂ ನಾರ್ತ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (06556) ಜನವರಿ 31, 2027 ರವರೆಗೆ ವಿಸ್ತರಣೆ ಆಗಿದೆ.
* ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ತಿರುವನಂತಪುರಂ ನಾರ್ತ್ ವಿಶೇಷ ರೈಲು (06555) ಜನವರಿ 29, 2027 ರವರೆಗೆ ವಿಸ್ತರಣೆಗೊಂಡಿದೆ.
* ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ತಿರುವನಂತಪುರಂ ನಾರ್ತ್ ವಿಶೇಷ ರೈಲು (06523) ಜನವರಿ 25,2027 ರವರೆಗೆ ವಿಸ್ತರಿಸಲಾಗಿದೆ.
* ತಿರುವನಂತಪುರಂ ನಾರ್ತ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (06524) ಜನವರಿ 26ವರೆಗೆ ಸೇವೆ ನೀಡಲಿದೆ.
* ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ತಿರುವನಂತಪುರಂ ನಾರ್ತ್ ವಿಶೇಷ ರೈಲು (06547) ಜನವರಿ 27ರವರೆಗೆ ವಿಸ್ತರಣೆ ಆಗಿದೆ.
* ತಿರುವನಂತಪುರಂ ನಾರ್ತ್‌ನಿಂದ ಹೊರಡುವ ರೈಲು (06548) ತಿರುವನಂತಪುರಂ ನಾರ್ತ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು ಜನವರಿ 28, 2027ರವರೆಗೆ ಸೇವೆ ನೀಡಲಿದೆ.




Click it and Unblock the Notifications
