ರೈಲು ಪ್ರಯಾಣಿಕರ ಗಮನಕ್ಕೆ! ಬೆಂಗಳೂರು, ಹುಬ್ಬಳ್ಳಿಯಿಂದ ಹೊರಡುವ ವಿಶೇಷ ರೈಲುಗಳ ಸೇವೆ ವಿಸ್ತರಣೆ, ವೇಳಾಪಟ್ಟಿ

ಬೆಂಗಳೂರು: ಮುಂಬರುವ ಚಳಿಗಾಲ, ಶಬರಿಮಲೆ, ಕ್ರಿಸ್‌ಮಸ್ ಹಬ್ಬದ ಋತುಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ಅಗತ್ಯ ರೈಲುಗಳ ಪೂರೈಕೆಗಾಗಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರದ ಅವಧಿ ವಿಸ್ತರಿಲಾಗಿದೆ. ಯಾವ ಮಾರ್ಗಗಳಲ್ಲಿ ಎಷ್ಟು ರೈಲುಗಳ ಸಂಚಾರ ಸೇವೆ ವಿಸ್ತರಣೆ ಆಗಿದೆ, ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ.

* ಯಶವಂತಪುರ-ಜೈಪುರ ವಿಶೇಷ ಎಕ್ಸ್'ಪ್ರೆಸ್ ರೈಲು (06543) ಪ್ರತಿ ಬುಧವಾರ ಯಶವಂತಪುರದಿಂದ ಹೊರಡಲಿದೆ. ನವೆಂಬರ್ 25 ರವರೆಗೆ ಸೇವೆ ನೀಡಬೇಕಿದ್ದ ರೈಲು ಡಿಸೆಂಬರ್ 30,2026 ರವರೆಗೆ ವಿಸ್ತರಣೆ ಆಗಿದೆ.

Weekly Special Trains Extended

* ಇನ್ನು ಪ್ರತಿ ಶನಿವಾರ ಜೈಪುರದಿಂದ ಹೊರಡುವ ಜೈಪುರ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್'ಪ್ರೆಸ್ ರೈಲು (06544) ನವೆಂಬರ್ 28ರವ ಬದಲಾಗಿ ಡಿಸೆಂಬರ್ 05 ರಿಂದ ಜನವರಿ 2,2027 ರವರೆಗೆ ವಿಸ್ತರಣೆ ಮಾಡಲಾಗಿದೆ.

SWR: ಅರಸೀಕೆರೆ-ಮೈಸೂರು, ಮೈಸೂರು-ಬೆಂಗಳೂರು ರೈಲು ರದ್ದು: ನೈಋತ್ಯ ರೈಲ್ವೆಯಿಂದ ಮಹತ್ವದ ಮಾಹಿತಿ
SWR: ಅರಸೀಕೆರೆ-ಮೈಸೂರು, ಮೈಸೂರು-ಬೆಂಗಳೂರು ರೈಲು ರದ್ದು: ನೈಋತ್ಯ ರೈಲ್ವೆಯಿಂದ ಮಹತ್ವದ ಮಾಹಿತಿ

ವಿಶೇಷ ರೈಲಿನ ನಿಲುಗಡೆ ರದ್ದು

* ಯಶವಂತಪುರ-ಜೈಪುರ-ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ (06543/06544) ರೈಲಿಗೆ ಬಮ್ನಿಯಾದಲ್ಲಿ ನೀಡಲಾಗುತ್ತಿದ್ದ ನಿಲುಗಡೆ ರದ್ದುಗೊಳಿಸಲಾಗಿದೆ.

ವಿಸ್ತರಣೆಯಾದ ರೈಲುಗಳ ಪಟ್ಟಿ

* ಮುಂದುವರಿದು ಪ್ರತಿ ಶನಿವಾರ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ-ಖತಿಪುರ ವಿಶೇಷ ಎಕ್ಸ್'ಪ್ರೆಸ್ ರೈಲು (07371) ಈ ಹಿಂದೆ ಡಿಸೆಂಬರ್ 05ರವರೆಗೆ ಮಾತ್ರವೇ ಸೇವೆ ನೀಡುವುದಿತ್ತು. ಇದೀಗ ಆ ರೈಲನ್ನು ಡಿಸೆಂಬರ್ 12 ರಿಂದ 26ರವರೆಗೆ ವಿಸ್ತರಿಸಲಾಗಿದೆ.

* ಪ್ರತಿ ಸೋಮವಾರ ಖತಿಪುರದಿಂದ ಹೊರಡುವ ಖತಿಪುರ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್'ಪ್ರೆಸ್ ರೈಲು (07372) ಡಿಸೆಂಬರ್ 07ರ ಬದಲಾಗಿ ಡಿಸೆಂಬರ್ 28, 2026 ರವರೆಗೆ ಸೇವೆ ನೀಡಲಿದೆ.

ಯಶವಂತಪುರ-ವಿಜಯಪುರ ರೈಲು ಸೇವೆ ವಿಸ್ತರಣೆ

* ನವೆಂಬರ್ 28,2026 ರವರೆಗೆ ಪ್ರತಿ ಶನಿವಾರ ಸಂಚರಿಸಬೇಕಿದ್ದ ಯಶವಂತಪುರ-ವಿಜಯಪುರ ವಿಶೇಷ ಎಕ್ಸ್'ಪ್ರೆಸ್ ರೈಲು (06577) ಹೊಸ ಆದೇಶ ಪ್ರಕಾರ, ಡಿಸೆಂಬರ್ 05 ರಿಂದ 26 ರವರೆಗೆ ಸಂಚಾರ ಮುಂದುವರಿಸಲಿದೆ.

* ಮರಳಿ ಅದೇ ದಿಕ್ಕಿನಲ್ಲಿ ಪ್ರತಿ ಭಾನುವಾರ ವಿಜಯಪುರದಿಂದ ಹೊರಡುವ ವಿಜಯಪುರ-ಯಶವಂತಪುರ ವಿಶೇಷ ಎಕ್ಸ್'ಪ್ರೆಸ್ ರೈಲು (06578) ಸೇವೆ ನವೆಂಬರ್ 29ಕ್ಕೆ ಅಂತ್ಯಗೊಳ್ಳದೇ ವಿಸ್ತರಣೆಗೊಂಡ ಬಳಿಕ ಡಿಸೆಂಬರ್ 27 ರವರೆಗೆ ಸೇವೆ ಒದಗಿಸಲಿದೆ.

SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ
SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ

* ಪ್ರತಿ ಶನಿವಾರ ಪ್ರಯಾಗ್'ರಾಜ್'ನಿಂದ ಹೊರಡುವ ಪ್ರಯಾಗ್'ರಾಜ್-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್'ಪ್ರೆಸ್ ರೈಲು (04113) ಡಿಸೆಂಬರ್ 19 ರಿಂದ 26 ರವರೆಗೆ ಸೇವೆ ನೀಡಲಿದೆ.

* ಪ್ರತಿ ಮಂಗಳವಾರ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸಂಚರಿಸುವ ಎಸ್ಎಸ್ಎಸ್ ಹುಬ್ಬಳ್ಳಿ-ಪ್ರಯಾಗ್'ರಾಜ್ ವಿಶೇಷ ಎಕ್ಸ್'ಪ್ರೆಸ್ ರೈಲು (04114) ಡಿಸೆಂಬರ್ 15ರವರೆಗೆ ಸಂಚರಿಬೇಕಿದ್ದು, ವಿಸ್ತರಣೆಗೊಂಡ ಹಿನ್ನೆಲೆ ಈ ರೈಲು ಡಿ.22 ರಿಂದ 29 ರವರೆಗೆ ಸಂಚಾರ ಮುಂದುವರಿಸಲಿದೆ.

* ಹುಬ್ಬಳ್ಳಿಯಿಂದ ಪ್ರತಿ ಭಾನುವಾರ ಎಸ್ಎಸ್ಎಸ್ ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ಎಕ್ಸ್'ಪ್ರೆಸ್ ರೈಲು (07355) ನವೆಂಬರ್ 29 ರವರೆಗೆ ಸಂಚರಿಸದೇ ಹೊಸ ಆದೇಶ ಪ್ರಕಾರ ಡಿಸೆಂಬರ್ 13 ರಿಂದ 24ರವರೆಗೆ ವಿಸ್ತರಣೆ ಆಗಲಿದೆ.

* ಪ್ರತಿ ಸೋಮವಾರ ರಾಮೇಶ್ವರಂನಿಂದ ಹೊರಡುವ ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್'ಪ್ರೆಸ್ ರೈಲು (07356) ನವೆಂಬರ್ 30, 2026 ರವರೆಗೆ ಸಂಚರಿಸಲಿದೆ. ಈ ರೈಲು ಡಿಸೆಂಬರ್ 14, 2026 ರಿಂದ 25 ರವರೆಗೆ ವಿಸ್ತರಿಸಲಾಗಿದೆ.

ರೈಲು ಸಮಯ ಪರಿಷ್ಕರಣೆ, ನಿಲ್ದಾಣ ಸಮಯ ಗಮನಿಸಿ

2027 ಜನವರಿ 03 ರಂದು ಆರಂಭವಾಗುವ ಪ್ರಯಾಣದಿಂದ ಜಾರಿಗೆ ಬರುವಂತೆ ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ ರೈಲು (07355) ಸಮಯವನ್ನು ಪರಿಷ್ಕರಿಸಲಾಗಿದೆ.

ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ತನ್ನ ಈಗಿನ ನಿಗದಿತ ನಿರ್ಗಮನ ಸಮಯಕ್ಕೇ ಹೊರಡಲಿದೆ. ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪುದುಕ್ಕೋಟೈ ನಡುವಿನ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೈಲು ಕಾರೈಕುಡಿಗೆ 02:08 ಗಂಟೆಗೆ ಆಗಮಿಸಿ 02:10 ಗಂಟೆಗೆ ನಿರ್ಗಮಿಸಲಿದೆ; ಶಿವಗಂಗಾಕ್ಕೆ 02:43 ಗಂಟೆಗೆ ಆಗಮಿಸಿ 02:45 ಗಂಟೆಗೆ ನಿರ್ಗಮಿಸಲಿದೆ. ಅದೇ ರೀತಿ ಕ್ರಮವಾಗಿ ಮಾನಾಮದುರೈಗೆ 03:05/03:10 ಗಂಟೆಗೆ ಮತ್ತು ರಾಮನಾಥಪುರಂಗೆ 03:58/04:00ಕ್ಕೆ ಆಗಮಿಸಿ/ ನಿರ್ಗಮಿಸಲಿದೆ. ಬೆಳಗ್ಗೆ 05:45 ಗಂಟೆಗೆ ರಾಮೇಶ್ವರಂ ನಿಲ್ದಾಣ ತಲುಪುತ್ತದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+