BMTC: 1000 ಎಲೆಕ್ಟ್ರಿಕ್ ಬಸ್‌ಗಳ ಮೇಲೆ ಜಾಹೀರಾತಿಗೆ ಹಸಿರು ನಿಶಾನೆ, ಟೆಂಡರ್ ಆಹ್ವಾನ: ಆದಾಯ ಹೆಚ್ಚಳಕ್ಕೆ ಪ್ಲ್ಯಾನ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇದೀಗ ಆದಾಯ ಸಂಗ್ರಹಕ್ಕೆ ಜಾಹೀರಾತು ಮಾರ್ಗವನ್ನು ಪರಿಣಾಮಕಾರಿಯಾಗಿ ಅನುಸರಿಸುತ್ತಿದೆ. ನಗರಾದ್ಯಂತ ಸಂಚಾರ ಮಾಡುವ ಟಾಟಾ ಎಲೆಕ್ಟ್ರಿಕಲ್ ಇ-ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಅಳವಡಿಸುವ ಅಸಕ್ತಿದಾರರ ಏಜೆನ್ಸಿ/ಕಂಪನಿಗಳ ಟೆಂಡರ್ ಆಹ್ವಾನಿಸಿದೆ. ಜೊತೆಗೆ ಕೆಲವು ಷರತ್ತು ವಿಧಿಸಿದೆ.

ಬಿಎಂಟಿಸಿ 1000 ಟಾಟಾ ಎಸಿ ರಹಿತ ಎಲೆಕ್ಟ್ರಿಕ್ ಬಸ್‌ಗಳ ಹಿಂದಿನ ಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಸಂಸ್ಥೆ ಅವಕಾಶ ನೀಡಿದೆ. ಪರವಾನಿಗೆದಾರರ/ಗುತ್ತಿಗೆದಾರರ ಆಯ್ಕೆಗಾಗಿ ಇ-ಸಂಗ್ರಹಣಾ ವೇದಿಕೆ ಮೂಲಕ ಟೆಂಡರ್ ಕರೆದಿದೆ. ಇದೇ ಜುಲೈ 17ರಂದು ಬೆಳಗ್ಗೆ 11 ಗಂಟೆಗೆ ನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಎರಡನೇ ಮಹಡಿಯಲ್ಲಿ ಬಿಡ್ ಪೂರ್ವ ಸಭೆ ನಡೆಯಲಿದೆ. ಹೆಚ್ಚಿನ ಹಣ ಕೂಗುವ ಕಂಪನಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬಿಎಂಟಿಸಿ ಮುಖ್ಯಸ್ಥರು ತಿಳಿಸಿದ್ದಾರೆ.

BMTC

ಟೆಂಡರ್ ನ ಪ್ರಮುಖ ದಿನಾಂಕಗಳು

* ಬಿಡ್ ಸಲ್ಲಿಕೆ ಕೊನೆ ದಿನಾಂಕ: 7 ಆಗಸ್ಟ್ 2026
* ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 10 ಆಗಸ್ಟ್ 2026
* ಆರ್ಥಿಕ ಬಿಡ್ ತೆರೆಯುವ ದಿನಾಂಕ: ಶೀಘ್ರವೇ ಪ್ರಕಟವಾಗಲಿದೆ.

ಚಾಲಕರ ಮೇಲಿನ ಒತ್ತಡವೇ BMTC ಅಪಘಾತಗಳಿಗೆ ಕಾರಣ, ರಜೆಗೂ ಲಂಚ ಕೊಡಬೇಕು; ಆರ್ ಅಶೋಕ್
ಚಾಲಕರ ಮೇಲಿನ ಒತ್ತಡವೇ BMTC ಅಪಘಾತಗಳಿಗೆ ಕಾರಣ, ರಜೆಗೂ ಲಂಚ ಕೊಡಬೇಕು; ಆರ್ ಅಶೋಕ್

ಉದ್ದೇಶಿತ ಟಾಟಾ ಎಸಿ ರಹಿತ ಇ-ಬಸ್‌ಗಳ ಹೊರತಾಗಿ ಇತರ ಬಸ್‌ಗಳಲ್ಲಿ ಹೊರಾಂಗಣ ತುಂಬಾ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಈಗಗಾಗಲೇ ನೀಡಲಾಗಿದೆ. ಆದರೆ ಟೆಂಡರ್ ಕರೆದ ಸದರಿ ಟಾಟಾ ಎಸಿ ರಹಿತ ಇ-ಬಸ್‌ಗಳ ಹಿಂಭಾಗದಲ್ಲಿ 18 ಚದರ ಅಡಿಯ ಜಾಗದಲ್ಲಿ ಮಾತ್ರವೇ ಜಾಹೀರಾತು ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ. ಈ ಜಾಹೀರಾತು ವಿಷಯಕ್ಕೂ, ಬಿಎಂಟಿಸಿ ನಿಗಮಕ್ಕೂ ಸಂಬಂಧ ಇರುವುದಿಲ್ಲ ಎಂದು ತಿಳಿಸಿದೆ.

ಮಾತ್ರವಲ್ಲದೇ ಟೆಂಡರ್ ಪಡೆಯುವ ಕಂಪನಿ ಅಥವಾ ಏಜೆನ್ಸಿಗಳು ನಿಗದಿತ ಅವಧಿವರೆಗೆ ಜಾಹೀರಾತು ಪ್ರದರ್ಶನದ ಪರವಾನಿಗೆ ಪಡೆಯಲಿವೆ. ಏಜೆನ್ಸಿಯು ನಿಗದಿತ ಮಾರ್ಗಸೂಚಿಗಳನ್ನು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಕ್ಕೆ ಸಂಬಂಧಿಸಿದಂತೆ ಬೈಲಾ ನಿಯಮಗಳನ್ನು ಪಾಲಿಸುವಂತೆ ಟೆಂಡರ್ ಆಹ್ವಾನದಲ್ಲಿ ಬಿಎಂಟಿಸಿ ತಿಳಿಸಿದೆ.

ಹೆಚ್ಚುವರಿ ಆದಾಯ ಸಂಗ್ರಹಕ್ಕೆ ಉಪಕ್ರಮ ಸಹಕಾರಿ

ಬಿಎಂಟಿಸಿ ಈ ಉಪಕ್ರಮವು ಪ್ರಯಾಣಿಕರಿಂದ ಸಂಗ್ರಹವಾಗಿ ಟಿಕೆಟ್ ಹಣ ಬಿಟ್ಟು ಇನ್ನೊಂದು ಮೂಲದಿಂದ ಹೆಚ್ಚುವರಿ ಆದಾಯ ಸಂಗ್ರಹಿಸಲು ಸಹಾಯವಾಗುತ್ತದೆ. ಈ ಹಿಂದೆ ಡೀಸೆಲ್, ಪೆಟ್ರೋಲ್, ಎಸಿ ಇ- ಬಸ್‌ಗಳ ಹೊರ ಭಾಗದಲ್ಲಿ ಜಾಹೀರಾತು ಪ್ರದರ್ಶಿಸಲಾಗಿತ್ತು. ಇದೀಗ ಟಾಟಾ ಎಸಿ ರಹಿತ ಇ-ಬಸ್‌ಗಳ ಹಿಂಬದಿಯಲ್ಲೂ ಜಾಹೀರಾತು ಪ್ರದರ್ಶನಕ್ಕೆ ಬಿಎಂಟಿಸಿ ಅವಕಾಶ ನೀಡುತ್ತಿದೆ.

ಇಎಂಡಿ ಮೊತ್ತ, ವಿಸ್ತೀರ್ಣ, ಇನ್ನಿತರ ಮಾಹಿತಿ, ಆಯ್ಕೆ ವಿಧಾನ ಇತ್ಯಾದಿ ವಿಷಯಗಳನ್ನು ತಿಳಿಯಲು ನೀವು ಅಧಿಕೃತ ವೆಬ್‌ಸೈಟ್ www.kppp.karnataka.gov.in ಗೆ ಭೇಟಿ ನೀಡಬೇಕು. ಇಲ್ಲವೇ ದೂರವಾಣಿ 0 92402 14000ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+