Karnataka Dam Water Level: ಭಾರೀ ಮಳೆ, ರಾಜ್ಯದ ಅಣೆಕಟ್ಟುಗಳ ಒಳಹರಿವು ಭಾರೀ ಹೆಚ್ಚಳ, ರೈತರಲ್ಲಿ ಹೊಸ ಭರವಸೆ

Dam Water Storage Today Updates: ರಾಜ್ಯದಲ್ಲಿ ಕಳೆದ ಎರಡು ವಾರಗಳಲ್ಲಿ ಸುರಿದ ಮುಂಗಾರು ಮಳೆಯಿಂದಾಗಿ ರಾಜ್ಯದ ಪ್ರಮುಖ ಎಲ್ಲ ಜಲಾಶಯಗಳಿಗೂ ಜೀವಕಳೆ ಬಂದಿದೆ. ಜೂನ್ ತಿಂಗಳು ಪೂರ್ತಿ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಮೇಣ ಇಳಿಕೆ ಆಗಿತ್ತು. ಇದೀಗ ಜುಲೈ ಮೊದಲ ಎರಡು ವಾರದಲ್ಲೇ ಡ್ಯಾಂಗಳಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಾಗಿದೆ. ಈ ಮೂಲಕ ಜಲಾನಯನ ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಇಂದು (ಜುಲೈ 10) ಶುಕ್ರವಾರದ ಹೊತ್ತಿಗೆ ಕಬಿನಿ, ಹಾರಂಗಿ, ಆಲಮಟ್ಟಿ, ಕೆಆರ್ ಎಸ್, ಲಿಂಗನಮಕ್ಕಿ ಸೇರಿದಂತೆ ಅನೇಕ ಜಲಾಶಯಗಳಲ್ಲಿ ಒಳಹರಿವು ಏರಿಕೆ ಆಗಿದೆ.

ಕೇರಳ, ಕರ್ನಾಟಕ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮುಂಗಾರು ಮಳೆ ಅಬ್ಬರಿಸಿದ ಪರಿಣಾಮ ನದಿಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ. ಕನಿಷ್ಠ ಮಟ್ಟದ ನೀರು ಹೊಂದಿದ್ದ ರಾಜ್ಯದ ಜಲಾಶಯಗಳ ಚಿತ್ರಣ ಒಂದೇ ವಾರದಲ್ಲಿ ಸಂಪೂರ್ಣ ಬದಲಾಗಿದೆ. ಹೀಗೆ ನಿರಂತರವಾಗಿ ಮುಂದಿನ ದಿನಗಳಲ್ಲೂ ಮಳೆ ಆದಲ್ಲಿ ಬರದ ಪರಿಸ್ಥಿತಿಯನ್ನು ಎದುರಿಸಬಹುದಾಗಿದೆ. ಆದರೆ ಹವಾಮಾನ ಇಲಾಖೆ ಪ್ರಕಾರ ಮುಂಗಾರು ಮಳೆ ಇಂದಿನಿಂದ ದುರ್ಬಲಗೊಳ್ಳಲಿದ್ದು, ಅಣೆಕಟ್ಟುಗಳ ಹಾಲಿ ನೀರನ್ನೇ ಬಳಸುತ್ತಾ ಹೋದರೆ ಒಳಹರಿವಿಗಿಂತ ಹೊರ ಹರಿವು ಹೆಚ್ಚಾಗಿ ಮತ್ತೆ ನೀರಿನ ಕೊರತೆಯ ಭೀತಿಯು ನಿರ್ಮಾಣವಾಗಿದೆ.

Karnataka Dams Water

ಆಲಮಟ್ಟಿ, ತುಂಗಭದ್ರಾ ಡ್ಯಾಂಗೆ ಅತ್ಯಧಿಕ ಒಳಹರಿವು

ಕೊಡಗು, ಮಡಿಕೇರಿ, ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಭಾಗದಲ್ಲಿ ವಾರದಿಂದಲೂ ಉತ್ತಮ ಮಳೆ ಆಗಿದೆ. ಆಯಾ ಭಾಗದ ನದಿಗಳ ಒಳಹರಿವು ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಕೆಲವೆಡೆ ಸಣ್ಣ ಸಣ್ಣ ಸೇತುವೆಗಳು ಮುಳಗಡೆ ಆಗಿವೆ. ಎಲ್ಲ ಡ್ಯಾಂಗಳ ಪೈಕಿ ಆಲಮಟ್ಟಿ ಹಾಗೂ ತುಂಗಭದ್ರಾ ಡ್ಯಾಂಗಳ ಒಳಹರಿವು ದಾಖಲೆ ಮಟ್ಟದಲ್ಲಿ ಏರಿಕೆ ಆಗಿದೆ. ಅವುಗಳ ಮಾಹಿತಿ ಮುಂದಿದೆ.

Karnataka Rains: ಆರ್ಭಟಿಸಿದ್ದ ಮುಂಗಾರು ದುರ್ಬಲ! ಬರೀ 7 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ, ಮತ್ತೆ ಬರ ಭೀತಿ
Karnataka Rains: ಆರ್ಭಟಿಸಿದ್ದ ಮುಂಗಾರು ದುರ್ಬಲ! ಬರೀ 7 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ, ಮತ್ತೆ ಬರ ಭೀತಿ

ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ, ಅಪ್ಡೇಟ್

KRS ಅಣೆಕಟ್ಟಿನ ಇಂದಿನ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 49.452ಟಿಎಂಸಿ

ಇಂದಿನ ನೀರು ಸಂಗ್ರಹ: 14.502 ಟಿಎಂಸಿ

ಒಟ್ಟು ಒಳಹರಿವು: 12,312 ಕ್ಯೂಸೆಕ್

ಹೊರ ಹರಿವು: 762 ಕ್ಯೂಸೆಕ್


ಕಬಿನಿ ಡ್ಯಾಂ ನೀರಿನ ಮಾಹಿತಿ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 19.52 ಟಿಎಂಸಿ

ಇಂದಿನ ನೀರು ಸಂಗ್ರಹ: 10.42 ಟಿಎಂಸಿ

ಒಟ್ಟು ಒಳಹರಿವು: 15,198 ಕ್ಯೂಸೆಕ್

ಹೊರ ಹರಿವು: 500 ಕ್ಯೂಸೆಕ್


ಹಾರಂಗಿ ಅಣೆಕಟ್ಟಿನ ನೀರಿನ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 8.5ಟಿಎಂಸಿ

ಇಂದಿನ ನೀರು ಸಂಗ್ರಹ: 4.54 ಟಿಎಂಸಿ

ಒಟ್ಟು ಒಳಹರಿವು: 2751ಕ್ಯೂಸೆಕ್

ಹೊರ ಹರಿವು: 180 ಕ್ಯೂಸೆಕ್


ಹೇಮಾವತಿ ಡ್ಯಾಂ ನೀರಿನ ಸಂಗ್ರಹ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 37.10 ಟಿಎಂಸಿ

ಇಂದಿನ ನೀರು ಸಂಗ್ರಹ: 21.062 ಟಿಎಂಸಿ

ಒಟ್ಟು ಒಳಹರಿವು: 11,470 ಕ್ಯೂಸೆಕ್

ಹೊರ ಹರಿವು: 300 ಕ್ಯೂಸೆಕ್

Cauvery: ಕರುನಾಡಿನಲ್ಲಿ ನೀರಿಗೆ ಕೊರತೆ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ವಿಪಕ್ಷ ನಾಯಕ ಕಿಡಿ
Cauvery: ಕರುನಾಡಿನಲ್ಲಿ ನೀರಿಗೆ ಕೊರತೆ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ವಿಪಕ್ಷ ನಾಯಕ ಕಿಡಿ


ತುಂಗಭದ್ರಾ ಡ್ಯಾಂ ನೀರಿನ ಮಾಹಿತಿ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 105 ಟಿಎಂಸಿ

ಇಂದಿನ ನೀರು ಸಂಗ್ರಹ: 17.51 ಟಿಎಂಸಿ

ಒಟ್ಟು ಒಳಹರಿವು: 44, 782 ಕ್ಯೂಸೆಕ್

ಹೊರ ಹರಿವು: 180 ಕ್ಯೂಸೆಕ್


ಲಿಂಗನಮಕ್ಕಿ ಅಣೆಕಟ್ಟು ನೀರಿನ ವಿವರ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 152. 75 ಟಿಎಂಸಿ

ಇಂದಿನ ನೀರು ಸಂಗ್ರಹ: 29.94 ಟಿಎಂಸಿ

ಒಟ್ಟು ಒಳಹರಿವು: 19,496 ಕ್ಯೂಸೆಕ್

ಹೊರ ಹರಿವು: 4042 ಕ್ಯೂಸೆಕ್


ಆಲಮಟ್ಟಿ ಡ್ಯಾಂ ನೀರಿನ ಮಟ್ಟ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 123.08 ಟಿಎಂಸಿ

ಇಂದಿನ ನೀರು ಸಂಗ್ರಹ: 57.04 ಟಿಎಂಸಿ

ಒಟ್ಟು ಒಳಹರಿವು: 1,43,653 ಕ್ಯೂಸೆಕ್

ಹೊರ ಹರಿವು: 100 ಕ್ಯೂಸೆಕ್


ವಾಣಿವಿಲಾಸ ಸಾಗರ ಡ್ಯಾಂ ವಿವರ

ಡ್ಯಾಂ ಒಟ್ಟು ನೀರು ಸಾಮರ್ಥ್ಯ: 30.42 ಟಿಎಂಸಿ

ಇಂದಿನ ನೀರು ಸಂಗ್ರಹ: 23.72 ಟಿಎಂಸಿ

ಒಟ್ಟು ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 00 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+