ಭಾರತದ ಮೊದಲ ಕೇಸರಿ ಬುಲೆಟ್ ರೈಲು: ಹೊಸ ಚಿತ್ರ ಅನಾವರಣ

ಭಾರತದ ಮೊದಲ ಬುಲೆಟ್ ರೈಲಿನ ಚಿತ್ರವನ್ನು ಭಾರತೀಯ ರೈಲ್ವೆ ಬಾರಿಗೆ ಬಹಿರಂಗಪಡಿಸಿದೆ. ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆಯಡಿಯಲ್ಲಿ ಸಂಚರಿಸಲಿರುವ ಈ ಬುಲೆಟ್ ರೈಲು ಕೇಸರಿ ಬಣ್ಣದಲ್ಲಿರಲಿದೆ. ರೈಲ್ವೆ ಸಚಿವಾಲಯದ ಗೇಟ್ ನಂಬರ್ 4ರ ಬಳಿ ಈ ರೈಲಿನ ಚಿತ್ರವನ್ನು ಪ್ರದರ್ಶಿಸಲಾಗಿದೆ.

ಭಾರತೀಯ ರೈಲ್ವೆ ಇಲಾಖೆಯು ಈ ವರ್ಷದ ಅಂತ್ಯದೊಳಗೆ ಬುಲೆಟ್ ರೈಲಿನ ಮೊದಲ ಹಂತದ ಸೇವೆ ಪ್ರಾರಂಭಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆ (MAHSR) ಒಟ್ಟು 508 ಕಿಲೋಮೀಟರ್ ದೂರದ ಮಾರ್ಗವಾಗಿದೆ, ಜಪಾನ್ ಸರ್ಕಾರದ ತಾಂತ್ರಿಕ ಹಾಗೂ ಆರ್ಥಿಕ ಸಹಾಯದೊಂದಿಗೆ ಈ ಬುಲೆಟ್ ರೈಲು ನಿರ್ಮಾಣಗೊಳ್ಳುತ್ತಿದೆ.

Saffron Bullet Train

ಈ ಯೋಜನೆಯು ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ರೈಲ್ವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಅನುಭವವನ್ನು ನೀಡಲಿದೆ. ಜಪಾನ್‌ನ ಶಿಂಕಾನ್ಸೆನ್ ತಂತ್ರಜ್ಞಾನ ಆಧಾರಿತ ಈ ರೈಲು ವ್ಯವಸ್ಥೆಯಲ್ಲಿ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ, ಭೂಕಂಪ ಎಚ್ಚರಿಕೆ ತಂತ್ರಜ್ಞಾನ ಹಾಗೂ ಆರಾಮದಾಯಕ ಪ್ರಯಾಣ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ.

ಬುಲೆಟ್ ರೈಲು ಯೋಜನೆಯ ಮೂಲಕ ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಪ್ರಸ್ತುತ ರೈಲಿನಲ್ಲಿ ಸುಮಾರು 6 ರಿಂದ 7 ಗಂಟೆಗಳ ಕಾಲ ಹಿಡಿಯುವ ಈ ಪ್ರಯಾಣವನ್ನು ಬುಲೆಟ್ ರೈಲು ಕೇವಲ 2 ರಿಂದ 3 ಗಂಟೆಗಳೊಳಗೆ ಪೂರ್ಣಗೊಳಿಸಲಿದೆ ಎಂದು ಅಂದಾಜಿಸಲಾಗಿದೆ. ಗಂಟೆಗೆ ಸುಮಾರು 320 ಕಿ.ಮೀ ವೇಗದಲ್ಲಿ ಸಂಚರಿಸುವ ಈ ರೈಲು ಭಾರತದಲ್ಲಿ ಅತಿ ವೇಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಲಿದೆ.

ಈ ಯೋಜನೆ ಮಹಾರಾಷ್ಟ್ರ, ಗುಜರಾತ್ ಹಾಗೂ ದಾದ್ರಾ ಮತ್ತು ಹವೇಲಿ ನಗರದ ಮಾರ್ಗದ ಮೂಲಕ ಸಾಗಲಿದೆ. ಮುಂಬೈ, ಠಾಣೆ, ವಿರಾರ್, ಬೋಯ್ಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ರೂಪಿಸಲಾಗಿದೆ.

ರೈಲ್ವೆ ಸಚಿವಾಲಯದ ಪ್ರಕಾರ, ಈ ವರ್ಷವೇ ಸೂರತ್ ಮತ್ತು ಬಿಲಿಮೋರಾ ನಡುವೆ ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಈ ವರ್ಷದ ಫೆಬ್ರವರಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದು, 12 ನಿಲ್ದಾಣಗಳಲ್ಲಿ 8 ನಿಲ್ದಾಣಗಳ ಅಡಿಪಾಯ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ವಾಪಿ, ಬಿಲಿಮೋರಾ, ಸೂರತ್, ಭರೂಚ್, ಆನಂದ್, ವಡೋದರಾ, ಅಹಮದಾಬಾದ್ ಮತ್ತು ಸಬರಮತಿ ನಿಲ್ದಾಣಗಳಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಇಲ್ಲಿಯವರೆಗೆ 17 ನದಿ ಸೇತುವೆಗಳ ನಿರ್ಮಾಣ ಪೂರ್ಣಗೊಂಡಿದೆ. ಗುಜರಾತ್‌ನ ನರ್ಮದಾ, ಮಾಹಿ, ತಾಪ್ತಿ ಮತ್ತು ಸಬರಮತಿ ನದಿಗಳ ಮೇಲಿನ ಪ್ರಮುಖ ಸೇತುವೆಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಹಾರಾಷ್ಟ್ರದಲ್ಲೂ ಹಲವು ಸೇತುವೆಗಳ ನಿರ್ಮಾಣ ಕಾರ್ಯ ಮುಂದುವರಿದಿದೆ.

ಥಾಣೆ, ಸೂರತ್ ಮತ್ತು ಸಬರಮತಿ ಡಿಪೋಗಳ ನಿರ್ಮಾಣದ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಅಗೆದು ತೆಗೆಯುವ ಕಾಮಗಾರಿ ಸುಮಾರು 91 ಶೇಕಡಾ ರಷ್ಟು ಪೂರ್ಣಗೊಂಡಿದ್ದು, ಸಮುದ್ರದಡಿ ನಿರ್ಮಾಣವಾಗುತ್ತಿರುವ ಸುಮಾರು 21 ಕಿ.ಮೀ ಉದ್ದದ ಸುರಂಗ ಮಾರ್ಗದ 4.8 ಕಿ.ಮೀ ಭಾಗ ಈಗಾಗಲೇ ಪೂರ್ಣಗೊಂಡಿದೆ.

ಭಾರತದ ಸಾರಿಗೆ ಇತಿಹಾಸದಲ್ಲೇ ಮಹತ್ತರವಾದ ಮೈಲಿಗಲ್ಲಾಗಲಿರುವ 'ಬುಲೆಟ್ ರೈಲು' ಯೋಜನೆ, ದೇಶದ ವೇಗ ಮತ್ತು ಪ್ರಗತಿಗೆ ಹೊಸ ಅಧ್ಯಾಯ ಬರೆಯಲಿದೆ. ಈ ಅತ್ಯಾಧುನಿಕ ರೈಲು ವ್ಯವಸ್ಥೆಯು ಕೇವಲ ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+