ನಿಮ್ಮ ಜನ್ಮರಾಶಿ ಹೇಳುತ್ತೆ ನಿಮ್ಮ ಕ್ರಿಯೇಟಿವಿಟಿಯ ರಹಸ್ಯ! ಯಾವ ರಾಶಿಯವರು ಯಾವ ಕ್ಷೇತ್ರದಲ್ಲಿ ಮಿಂಚುತ್ತಾರೆ?

ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಜನ್ಮರಾಶಿಯವರೂ ತಮ್ಮದೇ ಆದ ರೀತಿಯ ಸೃಜನಶೀಲತೆ (Creativity) ಹೊಂದಿರುತ್ತಾರೆ. ವ್ಯಕ್ತಿಯ ಸೃಜನಶೀಲತೆ ಜನ್ಮರಾಶಿಯ ಹಾಗೇ ಆತನ/ ಆಕೆಯ ಶಿಕ್ಷಣ, ಆಸಕ್ತಿ, ಅಭ್ಯಾಸ, ಪರಿಸರ ಮತ್ತು ಅನುಭವಗಳಿಂದ ಮೂಡಿ ಬರುತ್ತವೆ. ಜ್ಯೋತಿಷ್ಯದಲ್ಲಿ ಇದನ್ನು ಸಾಮಾನ್ಯ ಪ್ರವೃತ್ತಿಯಾಗಿ ಪರಿಗಣಿಸಬಹುದು. ಉದಾಹರಣೆಗೆ ಅತ್ಯಂತ ಕಲಾತ್ಮಕ ರಾಶಿಗಳೆಂದು ಮೀನ, ತುಲಾ, ಕಟಕಗಳನ್ನು ಪರಿಗಣಿಸಲಾಗುತ್ತದೆ. ಸಂಗೀತ ಮತ್ತು ಚಿತ್ರಕಲೆಯಲ್ಲಿ ವೃಷಭ, ತುಲಾ, ಮೀನ ಸಿದ್ಧಹಸ್ತರು. ಬನ್ನಿ, ಹಾಗಾದರೆ ನಿಮ್ಮ ಜನ್ಮರಾಶಿಗೆ ಯಾವುದು ಹೆಚ್ಚು ಸೃಜನಶೀಲ ಕ್ಷೇತ್ರ ಎಂದು ನೋಡೋಣ.

ಮೇಷ (Aries)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳು ಹೊಸ ಐಡಿಯಾಗಳು, ಸ್ಟಾರ್ಟ್‌ಅಪ್‌, ಕ್ರೀಡೆ, ಸಾಹಸ. ಇವರ ಸ್ಫೂರ್ತಿ ಸ್ಪರ್ಧೆ, ಸವಾಲು, ಹೊಸ ಅನುಭವಗಳು. ಇವರು ಹೆಚ್ಚು ಕ್ರಿಯೇಟಿವ್‌ ಆಗಿರುವ ಸಮಯ ಬೆಳಗಿನ ಜಾವ ಮತ್ತು ಬೆಳಿಗ್ಗೆ. ಹವ್ಯಾಸಗಳು ಟ್ರೆಕ್ಕಿಂಗ್‌, ಫೋಟೋಗ್ರಫಿ, ವಿಡಿಯೋ ಕ್ರಿಯೇಷನ್‌, ಫಿಟ್ನೆಸ್‌, DIY ಪ್ರಾಜೆಕ್ಟ್‌ಗಳು.

Zodiac Sign

ವೃಷಭ (Taurus)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳು ಸಂಗೀತ, ಅಡುಗೆ, ತೋಟಗಾರಿಕೆ, ಒಳಾಂಗಣ ಅಲಂಕಾರ. ಸ್ಫೂರ್ತಿ ಪಡೆಯುವುದು ಪ್ರಕೃತಿ, ಸುಂದರ ವಾತಾವರಣ, ಸಂಗೀತದಿಂದ. ಹೆಚ್ಚು ಕ್ರಿಯೇಟಿವ್‌ ಸಮಯ ಸಂಜೆ. ಹವ್ಯಾಸಗಳು ಅಡುಗೆ, ಚಿತ್ರಕಲೆ, ಹೂವಿನ ತೋಟ, ಕೈಗಾರಿಕೆ.

ಮಿಥುನ (Gemini)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳು ಬರವಣಿಗೆ, ಸಂವಹನ, ಕಥೆ ಹೇಳುವುದು. ಸ್ಫೂರ್ತಿ ಪಡೆಯುವುದು ಜನರ ಜೊತೆಗಿನ ಮಾತುಕತೆ, ಪುಸ್ತಕಗಳು, ಸಾಮಾಜಿಕ ಜಾಲತಾಣಗಳಿಂದ. ಹೆಚ್ಚು ಕ್ರಿಯೇಟಿವ್‌ ಸಮಯ ಬೆಳಿಗ್ಗೆ ಮತ್ತು ಮಧ್ಯಾಹ್ನ. ಹವ್ಯಾಸಗಳು ಬ್ಲಾಗಿಂಗ್‌, ಪಾಡ್‌ಕಾಸ್ಟ್‌, ಪುಸ್ತಕ ಓದುವುದು, ಭಾಷೆ ಕಲಿಯುವುದು.

ನಿಮ್ಮ ಜನ್ಮರಾಶಿಗೆ ನಿಜವಾದ ಮನರಂಜನೆ ಯಾವುದು? 12 ರಾಶಿಗಳ ಗುಟ್ಟನ್ನು ಹೇಳುತ್ತದೆ ಜ್ಯೋತಿಷ್ಯ!
ನಿಮ್ಮ ಜನ್ಮರಾಶಿಗೆ ನಿಜವಾದ ಮನರಂಜನೆ ಯಾವುದು? 12 ರಾಶಿಗಳ ಗುಟ್ಟನ್ನು ಹೇಳುತ್ತದೆ ಜ್ಯೋತಿಷ್ಯ!

ಕಟಕ (Cancer)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳು ಕವಿತೆ, ಕಥೆ, ಚಿತ್ರಕಲೆ. ಇವರ ಸ್ಫೂರ್ತಿ ನೆನಪುಗಳು, ಕುಟುಂಬ, ಭಾವನೆಗಳು. ಹೆಚ್ಚು ಕ್ರಿಯೇಟಿವ್‌ ಸಮಯ ರಾತ್ರಿ. ಇವರ ಹವ್ಯಾಸಗಳು ಡೈರಿ ಬರೆಯುವುದು, ಸಂಗೀತ ಕೇಳುವುದು, ಅಡುಗೆ.

ಸಿಂಹ (Leo)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳು ಅಭಿನಯ, ವೇದಿಕೆ, ನಾಯಕತ್ವ. ಇವರ ಸ್ಫೂರ್ತಿಗಳು ಪ್ರಶಂಸೆ, ಪ್ರೇಕ್ಷಕರು, ಯಶಸ್ಸು. ಹೆಚ್ಚು ಕ್ರಿಯೇಟಿವ್‌ ಸಮಯ ಮಧ್ಯಾಹ್ನದಿಂದ ಸಂಜೆ. ಇವರ ಹವ್ಯಾಸಗಳು ನೃತ್ಯ, ನಟನೆ, ಯೂಟ್ಯೂಬ್‌, ಸಾರ್ವಜನಿಕ ಭಾಷಣ.

ಕನ್ಯಾ (Virgo)

ಇವರು ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರ ವಿನ್ಯಾಸ, ಯೋಜನೆ, ಬರವಣಿಗೆ. ಇವರ ಸ್ಫೂರ್ತಿಗಳು ಶಿಸ್ತು, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು. ಹೆಚ್ಚು ಕ್ರಿಯೇಟಿವ್‌ ಸಮಯ ಮುಂಜಾನೆ. ಇವರ ಹವ್ಯಾಸಗಳು ಕ್ರಾಫ್ಟ್‌, ಜರ್ನಲಿಂಗ್‌, ಡಿಸೈನ್‌, ಪಜಲ್‌ಗಳು.

ಈ ರಾಶಿಯವರಿಗೆ ಗಜಕೇಸರಿ ರಾಜಯೋಗ : ಆದಾಯದಲ್ಲಿ ಹೆಚ್ಚಳ, ಆಸೆಗಳು ಈಡೇರುವ ಕಾಲ
ಈ ರಾಶಿಯವರಿಗೆ ಗಜಕೇಸರಿ ರಾಜಯೋಗ : ಆದಾಯದಲ್ಲಿ ಹೆಚ್ಚಳ, ಆಸೆಗಳು ಈಡೇರುವ ಕಾಲ

ತುಲಾ (Libra)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರ ಫ್ಯಾಷನ್‌, ಚಿತ್ರಕಲೆ, ಅಲಂಕಾರ. ಇವರ ಸ್ಫೂರ್ತಿ ಸೌಂದರ್ಯ, ಕಲೆ, ಸಂಗೀತ. ಹೆಚ್ಚು ಕ್ರಿಯೇಟಿವ್‌ ಆಗಿರುವ ಸಮಯ ಸಂಜೆ. ಹವ್ಯಾಸಗಳು ಫೋಟೋಗ್ರಫಿ, ಇಂಟೀರಿಯರ್‌ ಡಿಸೈನ್‌, ಸಂಗೀತ.

ವೃಶ್ಚಿಕ (Scorpio)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳೆಂದರೆ ರಹಸ್ಯ ಕಥೆಗಳು, ಸಿನಿಮಾ, ಸಂಶೋಧನೆ. ಇವರ ಸ್ಫೂರ್ತಿ ಜೀವನದ ಆಳವಾದ ಅನುಭವಗಳು, ರಹಸ್ಯಗಳು. ಹೆಚ್ಚು ಕ್ರಿಯೇಟಿವ್‌ ಸಮಯ ತಡರಾತ್ರಿ. ಇವರ ಹವ್ಯಾಸಗಳು ಕಾದಂಬರಿ ಬರೆಯುವುದು, ಡಾಕ್ಯುಮೆಂಟರಿ ನೋಡುವುದು, ಧ್ಯಾನ.

ಧನು (Sagittarius)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರ ಪ್ರವಾಸ ಬರಹ, ಶಿಕ್ಷಣ, ತತ್ವಶಾಸ್ತ್ರ. ಇವರ ಸ್ಫೂರ್ತಿ ಪ್ರಯಾಣ, ಹೊಸ ಸಂಸ್ಕೃತಿಗಳು, ಪ್ರಕೃತಿ. ಹೆಚ್ಚು ಕ್ರಿಯೇಟಿವ್‌ ಸಮಯ ಬೆಳಿಗ್ಗೆ. ಇವರ ಹವ್ಯಾಸಗಳು ಟ್ರಾವೆಲ್‌, ವ್ಲಾಗಿಂಗ್‌, ಪುಸ್ತಕ ಓದುವುದು, ಟ್ರೆಕ್ಕಿಂಗ್‌.

ಮಕರ (Capricorn)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರ ವ್ಯವಹಾರ, ವಾಸ್ತುಶಿಲ್ಪ, ತಂತ್ರಯೋಜನೆ. ಇವರ ಸ್ಫೂರ್ತಿಯ ಸೆಲೆ ಗುರಿ, ಸಾಧನೆ, ಶಿಸ್ತು. ಹೆಚ್ಚು ಕ್ರಿಯೇಟಿವ್‌ ಆಗಿರುವ ಸಮಯ ಮುಂಜಾನೆ. ಇವರ ಹವ್ಯಾಸಗಳು ಚೆಸ್‌, ಮರದ ಕೆಲಸ, ಹಣಕಾಸು ಯೋಜನೆ.

ಕುಂಭ (Aquarius)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳು ತಂತ್ರಜ್ಞಾನ, ವಿಜ್ಞಾನ, ಹೊಸ ಆವಿಷ್ಕಾರಗಳು. ಇವರ ಸ್ಫೂರ್ತಿ ಮೂಲ ಭವಿಷ್ಯದ ಕಲ್ಪನೆಗಳು, ಸಮಾಜದ ಸಮಸ್ಯೆಗಳು. ಹೆಚ್ಚು ಕ್ರಿಯೇಟಿವ್‌ ಸಮಯ ರಾತ್ರಿ. ಹವ್ಯಾಸಗಳು ಕೋಡಿಂಗ್‌, ರೋಬೋಟಿಕ್ಸ್‌, ವಿಜ್ಞಾನ ಪ್ರಯೋಗಗಳು, ಡಿಜಿಟಲ್ ಆರ್ಟ್‌.

ಮೀನ (Pisces)

ಹೆಚ್ಚು ಕ್ರಿಯೇಟಿವ್‌ ಆಗಿರುವ ಕ್ಷೇತ್ರಗಳು ಸಂಗೀತ, ಕವಿತೆ, ಸಿನಿಮಾ, ಚಿತ್ರಕಲೆ. ಇವರ ಸ್ಫೂರ್ತಿಯ ಮೂಲ ಕನಸುಗಳು, ಪ್ರಕೃತಿ, ಆಧ್ಯಾತ್ಮ, ಭಾವನೆಗಳು. ಹೆಚ್ಚು ಕ್ರಿಯೇಟಿವ್‌ ಸಮಯವೆಂದರೆ ಮುಂಜಾನೆ ಮತ್ತು ತಡರಾತ್ರಿ. ಇವರ ಹವ್ಯಾಸಗಳು ಸಂಗೀತ ಸಂಯೋಜನೆ, ಚಿತ್ರಕಲೆ, ಧ್ಯಾನ, ಕಥೆ ಬರೆಯುವುದು.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+