Viral Video: ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಹಸು ಖರೀದಿಸದ ಮುಸ್ಲಿಮರು: ರೈತರ ಆಕ್ರೋಶ

Viral Video: ಈ ಬಾರಿಯ ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ಕರ್ನಾಟಕದ ಹಾಸನ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಸ್ಲಿಮರು ಗೋವು ಖರೀದಿ ಮಾಡುವುದರಿಂದ ಹಿಂದೆ ಸರಿದಿದ್ದಾರೆ. ಗೋವು ಖರೀದಿಸಿದ್ರೆ ಹಿಡ್ಕೊಂಡು ಹೊಡಿತಾರೆ ಈ ಸಹವಾಸವೇ ಬೇಡ ಎಂದು ಹಲವರು ಹೇಳಿದ್ದಾರೆ. ಅಸ್ಸಾಂನಲ್ಲಿಯೂ ಈ ಬಾರಿ ಮುಸ್ಲಿಮರು ಇದೇ ನಿರ್ಧಾರಕ್ಕೆ ಬಂದಿದ್ದಾರೆ. ಶಾಂತಿ ಮತ್ತು ಸೌಹಾರ್ದದಿಂದ ಬಕ್ರೀದ್ ಹಬ್ಬ ಆಚರಿಸುವ ಉದ್ದೇಶದಿಂದ ಈ ಬಾರಿಯ ಬಕ್ರೀದ್ ಪ್ರಯುಕ್ತ ಜಾನುವಾರುಗಳನ್ನು(ದನ, ಹಸು, ಎಮ್ಮೆ) ಖರೀದಿ ಮಾಡಬಾರದೆಂದು ಸ್ವಯಂ ನಿರ್ಬಂಧ ಹೇರಿಕೊಂಡಿದ್ದೇವೆ ಎಂದು ಹಾಸನ ಜಿಲ್ಲೆಯ ಮುಸ್ಲಿಂ ಒಕ್ಕೂಟ ಹೇಳಿದೆ. ಆದರೆ, ಈ ನಿರ್ಧಾರದಿಂದ ಕೆಲವು ಹಿಂದೂ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಆಕ್ರೋಶ ಹೊರ ಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹಾಸನದಲ್ಲಿ ಮಂಗಳವಾರ ನಡೆದ ಸಾಪ್ತಾಹಿಕ ಸಂತೆಯಲ್ಲಿ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದು, ಮುಸ್ಲಿಂ ಸಮುದಾಯದವರಿಗೆ ಯಾವುದೇ ರೀತಿಯ ಜಾನುವಾರುಗಳನ್ನು ಖರೀದಿ ಮಾಡದಂತೆ ಮನವಿ ಮಾಡಿದ್ದಾರೆ. ಹೀಗಾಗಿ, ಈ ಬಾರಿಯ ಸಂತೆಯಲ್ಲಿ ಮುಸ್ಲಿಮರು ದನ, ಹಸು, ಎಮ್ಮೆ ಖರೀದಿ ಮಾಡಿಲ್ಲ. ಕೆಲವು ಕಡೆಗಳಲ್ಲಿ ಮೇಕೆ ಖರೀದಿಯಿಂದಲೂ ಹಿಂದೆ ಸರಿದಿದ್ದಾರೆ. ಇದರಿಂದ ರೈತರಿಗೆ ಭಾರೀ ನಷ್ಟವಾಗಿದೆ. ಇದೀಗ ಹಾಸನ ರೈತರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video

ನಮಗೆ ಸಂಕಷ್ಟ ಎದುರಾಗಿದೆ ಎಂದ ರೈತನ ವಿಡಿಯೋ ವೈರಲ್

ಇನ್ನು ಈಚೆಗೆ ನಡೆದ ಹಾಸನ ಸಾಪ್ತಾಹಿಕ ಸಂತೆಯಲ್ಲಿ ಮುಸ್ಲಿಮರು ಜಾನುವಾರು ಖರೀದಿ ಮಾಡಿಲ್ಲ. ಈ ರೀತಿ ಪರಿಸ್ಥಿತಿ ಎದುರಾಗುವುದಕ್ಕೆ ಕಾರಣರಾಗಿರುವವರ ಬಗ್ಗೆ ರೈತರು ಆಕ್ರೋಶ ಹೊರ ಹಾಕಿದ್ದಾರೆ. ನಾವು ನಿರ್ದಿಷ್ಟ ಜಾತಿಗೆ ಸೇರಿದವರು ನಾವು ಕುರಿ, ಮಟನ್ ತಿಂತೀನಿ, ಕೋಳಿ ತಿನ್ನುತ್ತೀನಿ ಅದೂ ಪ್ರಾಣಿ ತಾನೆ ಎಂದು ಹೇಳಿದ್ದಾರೆ. ಈ ರೀತಿ ಆದರೆ ರೈತರಿಗೆ ಸಂಕಷ್ಟ ಎದುರಾಗಲಿದೆ ಎಲ್ಲರೂ ಒಂದಾಗಬೇಕು ಎಂದು ಅವರು ಹೇಳಿದ್ದಾರೆ. ಹಿಂದೂ - ಮುಸ್ಲಿಂ ಎಂದು ಕೆಲವರು ಮಾಡಿದ್ದಾರೆ ಇದರಲ್ಲಿ ಸಂಕಷ್ಟ ಅನುಭವಿಸುತ್ತಿರುವುದು ರೈತರು ಅಂತಲೂ ಅವರು ಹೇಳಿದ್ದಾರೆ.

ಗೋವು ರಾಷ್ಟ್ರೀಯ ಪ್ರಾಣಿಯಾಗಲಿ ಎಂದು ಮುಸ್ಲಿಂ ಸಂಘಟನೆಗಳ ಬೇಡಿಕೆ

ಇನ್ನು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಎಂದು ಬ್ರಕೀದ್‌ಗೂ ಮುನ್ನವೇ ಮುಸ್ಲಿಂ ಸಂಘಟನೆಗಳು ಮನವಿ ಮಾಡಿದ್ದವು. ದೇಶದಲ್ಲಿ ಸಾಮಸ್ಯ ಮತ್ತು ಏಕರೂಪತೆಗಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು ಎಂದು ಪ್ರಮುಖ ಮುಸ್ಲಿಂ ಸಂಘಟನೆಗಳೇ ದೇಶದ ವಿವಿಧ ಭಾಗಗಳಲ್ಲಿ ಈಚೆಗೆ ಮನವಿ ಮಾಡಿದ್ದವು. ಜಮೈತ್ ಉಲ್ಮಾ ಎ ಹಿಂದ್ ನೇತೃತ್ವದಲ್ಲಿ ಹಲವು ಮುಸ್ಲಿಂ ಸಂಘಟನೆಗಳು ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಮುಖ್ಯವಾಗಿ ಈ ವಿಚಾರವಾಗಿ ಮುಸ್ಲಿಮರ ಮೇಲೆ ಆಗುವ ಗುಂಪು ದಾಳಿ, ಹತ್ಯೆ ಹಾಗೂ ದೌರ್ಜನ್ಯಗಳನ್ನು ತಡೆಯುವುದು ಹಾಗೂ ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+