Bengaluru Tunnel Road: ಹೆಬ್ಬಾಳ ಜಂಕ್ಷನ್‌ನಲ್ಲಿ 6 ಪಥದ ಭೂಗತ ರಸ್ತೆ: ನಿರ್ಣಾಯಕ ಹಂತಕ್ಕೆ ತಲುಪಿದ ಯೋಜನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಸಂಚಾರ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಡಿಮೆ ಮಾಡಬಹುದಾದ ಉದ್ದೇಶಿತ ಸುರಂಗ ರಸ್ತೆ ಮಾರ್ಗ ಯೋಜನೆ (Bengaluru Tunnel Road Project) ಅನುಷ್ಠಾನವು ಮಹತ್ವದ ಘಟ್ಟ ತಲುಪಿದೆ. ₹1,086 ಕೋಟಿ ವೆಚ್ಚದ ಈ ಯೋಜನೆಗೆ ನಾಲ್ಕು ಅನುಭವಿ ಕಂಪನಿಗಳು ಬಿಡ್ ಸಲ್ಲಿಸಿವೆ. ಬೆಂಗಳೂರು ಏರ್‌ಪೋರ್ಟ್‌ಗೆ ರಸ್ತೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವು ಇದಾಗಲಿದೆ. ಹೀಗಾಗಿ ಈ ಯೋಜನೆ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇವೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ದಟ್ಟಣೆ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಲೇ ಇವೆ. ಸಂಚಾರ ಪೊಲೀಸರು ಎಷ್ಟೇ ಪ್ರಯತ್ನಿಸಿದರು, ಡೌನ್-ರ‍್ಯಾಂಪ್ ನಿರ್ಮಿಸಿದರೂ ಸಹಿತ ಇಲ್ಲಿ ದಟ್ಟಣೆ ಕಡಿಮೆ ಆಗಿಲ್ಲ. ಇದರ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಹೆಬ್ಬಾಳ ವ್ಯಾಪ್ತಿಯಲ್ಲಿ ಆರು ಪಥಗಳ ಟನಲ್ ರಸ್ತೆ ನಿರ್ಮಾಣ (ಭೂಗತ ಕಾರಿಡಾರ್) ಯೋಜನೆಗೆ ಕೈ ಹಾಕಿದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಎಇ) ಕರೆದಿದ್ದ ಟೆಂಡರ್‌ನಲ್ಲಿ ಆರು ನುರಿತ ಕಂಪನಿಗಳು ಬಿಡ್ ಸಲ್ಲಿಸಿ ಯೋಜನೆ ಅನುಷ್ಠಾನಕ್ಕೆ ಮುಂದೆ ಬಂದಿವೆ.

Hebbal Tunnel Project

ಟೆಂಡರ್ ನಲ್ಲಿ ಪಾಲ್ಗೊಂಡ 4 ಕಂಪನಿಗಳು

ಸುರಂಗ ರಸ್ತೆ ನಿರ್ಮಿಸುವುದಾಗಿ ಅದಾನಿ ಗ್ರೂಪ್, ದಿಲೀಪ್ ಬಿಲ್ಡ್‌ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್ ಮತ್ತು ರೈಲ್ ವಿಕಾಸ್ ನಿಗಮ್ ಕಂಪನಿಗಳು ಬಿಡ್ ಸಲ್ಲಿಸಿವೆ. ಹೆದ್ದಾರಿಗಳು, ಸುರಂಗಗಳು ಮತ್ತು ನಗರ ಫ್ಲೈಓವರ್‌ಗಳು ಸೇರಿದಂತೆ ಹೆಚ್ಚಿನ ಮೌಲ್ಯದ ಸಾರಿಗೆ ಮತ್ತು ಮೂಲಸೌಕರ್ಯ ನಿರ್ಮಿಸುವುದರಲ್ಲಿ ಈ ಕಂಪನಿಗಳಿಗೆ ಹೆಚ್ಚು ಅನುಭವ ಹೊಂದಿವೆ. ಹೀಗಾಗಿ ಸದರಿ ಟೆಂಡರ್ ಯಾವ ಕಂಪನಿ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಕಂಪನಿಗಳು ನಾ ಮುಂದೆ ತಾ ಮುಂದೆ ಬರುತ್ತಿದ್ದಂತೆ ಯೋಜನೆ ಆರಂಭಿಕ ಹಂತಕ್ಕೆ ವೇಗ ಸಿಕ್ಕಂತಾಗಿದೆ.

ಹೆಬ್ಬಾಳ್ ಜಂಕ್ಷನ್‌ನಲ್ಲಿ ಸುರಂಗ ಏಕೆ?

ಹೆಬ್ಬಾಳ ಜಂಕ್ಷನ್ ಉತ್ತರ ಬೆಂಗಳೂರು, ಹೊರವರ್ತುಲ ರಸ್ತೆ ಕಾರಿಡಾರ್ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗವನ್ನು ಸಂಪರ್ಕಿಸುವ ಪ್ರಮುಖ ಇಂಟರ್‌ಚೇಂಜ್ ಪ್ರದೇಶವಾಗಿದೆ. ಯಲಹಂಕ, ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತ ಹಾಗೂ ಉತ್ತರದ ಉಪನಗರಗಳಲ್ಲಿ ಕಟ್ಟಡಗಳ ನಿರ್ಮಾಣ, ವಸತಿ ಪ್ರಮಾಣ ಹೆಚ್ಚಾಗುತ್ತಿದೆ. ಏರ್‌ಪೋರ್ಟ್ ರಸ್ತೆಯಲ್ಲಿ, ದೇವನಹಳ್ಳಿ ಸುತ್ತಮುತ್ತ ಕೈಗಾರಿಕೆಗಳ ಆಗಮ ಹೆಚ್ಚಾಗಿದೆ. ಹೀಗಾಗಿ ಈ ಜಂಕ್ಷನ್ ಮೂಲಕ ಸಂಚಾರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಲೇ ಇದೆ.

ಜಂಕ್ಷನ್‌ನಲ್ಲಿ ಫ್ಲೈಓವರ್‌ಗಳು ಮತ್ತು ಸಿಗ್ನಲ್ ಪುನರ್‌ ರಚಿಸಿದರೂ ಸಹಿತ ಪೀಕ್ ಹವರ್‌ಗಳಲ್ಲಿ ದಟ್ಟಣೆ ವಿಪರೀತವಾಗಿ ಹೆಚ್ಚಾಗುತ್ತಿದೆ. ಇದು ಏರ್‌ಪೋರ್ಟ್‌ಗಳಿಗೆ ತೆರಳುವವರು ಮತ್ತು ಜಂಕ್ಷನ್‌ನಿಂದ ಇತರ ಮಾರ್ಗಗಳಲ್ಲಿ ತೆರಳುವವರಿಗೆ ದಟ್ಟಣೆಯ ಸಮಸ್ಯೆ, ಕಿರಿಕಿರಿ ನೀಡುತ್ತಿದೆ. ಇಲ್ಲಿ ಸಂಚಾರ ಬಿಕ್ಕಟ್ಟು ಎದುರಾಗಿದ್ದು, ಅದರ ಪರಿಹಾರಾರ್ಥವಾಗಿ ಇಲ್ಲಿ ಸುರಂಗ ರಸ್ತೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಒಂದಷ್ಟು ಪರಿಸರವಾದಿಗಳು, ವಿಪಕ್ಷ ನಾಯಕರ ವಿರೋಧವು ಇದೆ.

ಸುರಂಗ ಮಾರ್ಗ ವಿನ್ಯಾಸ: ಏರ್‌ಪೋರ್ಟ್‌ಗೆ ಸಂಪರ್ಕ ಸುಲಭ

ಆರು ಪಥದ ಭೂಗತ ರಸ್ತೆ ನಿರ್ಮಾಣವಾಗಲಿದೆ. ವಿಶೇಷವಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ದೂರದ ವಾಹನಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಬೈಪಾಸ್ ನಿರ್ಮಿಸಿ ಸರಾಗ ಸಂಚಾರಕ್ಕೆ ಅನುವಾಗುವಂತೆ ವಿನ್ಯಾಸ ಮಾಡಲಾಗಿದೆ. ಇದರೊಂದಿಗೆ ಸ್ಥಳೀಯ ಸಂಚಾರವು ಸುಧಾರಿಸುತ್ತದೆ. ಟ್ರಾಫಿಕ್ ಕಿರಿಕಿರಿ ತಪ್ಪಲಿದೆ. ಟ್ರಾಫಿಕ್ ಸಿಗ್ನಲ್ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಉಂಟಾಗುವ ದಟ್ಟಣೆಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ. ವಾಹನ ಸವಾರರಿಗೆ ಸಿಗ್ನಲ್ ಫ್ರಿ ರಸ್ತೆ ಸಂಚಾರ ಸಾಧ್ಯವಾಗುತ್ತದೆ. ಸಮಯ ಉಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+