NEET UG Results: ಮರುಪರೀಕ್ಷೆಯ ಸವಾಲು ಗೆದ್ದ ದಾವಣಗೆರೆಯ ವಿದ್ಯಾರ್ಥಿನಿ ಸುಚಿತಾ, ಕರ್ನಾಟಕಕ್ಕೆ 2ನೇ ರ‍್ಯಾಂಕ್

NEET UG Results 2026: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್‌ (NEET UG 2026) ಪರೀಕ್ಷೆಯಲ್ಲಿ ದಾವಣಗೆರೆಯ ವಿದ್ಯಾರ್ಥಿನಿ ಸುಚಿತಾ 695 ಅಂಕ ಗಳಿಸಿದ್ದಾರೆ. ಈ ಮೂಲಕ ಅವರು ಇಡೀ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಆ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನೀಟ್‌ ಪರೀಕ್ಷೆ 2026ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗುರುವಾರ (ಜುಲೈ 16) ಪ್ರಕಟಿಸಿತ್ತು. ಈ ವೇಳೆ ದಾವಣಗೆರೆಯ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಸುಚಿತಾ ಎಂ.ಎಫ್ ಅವರು 720ಕ್ಕೆ 695 ಅಂಕ ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 48ನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ಕರ್ನಾಟ ರಾಜ್ಯ ಮಟ್ಟದಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

NEET UG Results 2026 Davanagere Student Suchita Secures Second Ranks Karnataka with 695 Marks

ಸಂಸತ ವ್ಯಕ್ತಪಡಿಸಿದ ವಿದ್ಯಾರ್ಥಿನಿ

ಈ ಕುರಿತು ಮಾತನಾಡಿರುವ ಸುಚಿತಾ ಅವರು, 'ಆರಂಭದಲ್ಲಿ ನಡೆದಿದ್ದ ಮೊದಲ ನೀಟ್ ಪರೀಕ್ಷೆಯಲ್ಲಿ 720ಕ್ಕೆ 720 ಅಂಕಗಳನ್ನು ಪಡೆಯುವ ವಿಶ್ವಾಸದಲ್ಲಿದ್ದೆ. ಆದರೆ ದೇಶಾದ್ಯಂತ ನೀಟ್ ವಿವಾದ ನಡೆದು ಸುಪ್ರೀಂ ಕೋರ್ಟ್ ಹಾಗೂ ಎನ್‌ಟಿಎ ನಿರ್ಧಾರದಂತೆ ಮರುಪರೀಕ್ಷೆ ಘೋಷಣೆಯಾದಾಗ ಆರಂಭದಲ್ಲಿ ತುಂಬಾ ಆತಂಕದಲ್ಲಿದ್ದೆ. ಆದರೂ ಧೃತಿಗೆಡದೆ ಶಿಕ್ಷಕರು ಹಾಗೂ ಪೋಷಕರು ನೀಡಿದ ಬೆಂಬಲದಿಂದ ಮತ್ತೆ ಶ್ರದ್ಧೆಯಿಂದ ಅಭ್ಯಾಸ ನಡೆಸಿದೆ. ಈಗ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿರುವುದು ನನಗೆ ತುಂಬಾ ಸಂತಸವಾಗಿದೆ,' ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದ ಸುಚಿತಾ

ಮರುಪರೀಕ್ಷೆಯ ನಂತರವೂ ಅತ್ಯುತ್ತಮ ರ‍್ಯಾಂಕ್ ಬಂದಿರುವುದಕ್ಕೆ ಸುಚಿತಾ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಕ್ಷೇತ್ರವು ಅತ್ಯಂತ ಗೌರವಾನ್ವಿತ ವೃತ್ತಿಯಾಗಿದ್ದು, ಸಮಾಜ ಸೇವೆ ಮಾಡುವ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದಾರೆ. ಇನ್ನೂ ಈ ಸಾಧನೆಯ ಮೂಲಕ ಸುಚಿತಾ ಅವರು ದಾವಣಗೆರೆ ಜಿಲ್ಲೆ ಹಾಗೂ ಇಡೀ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಸುಚಿತಾ ಪೋಷಕರ ವೃತ್ತಿ ಏನು?

ಸುಚಿತಾ ಅವರ ಬಿ.ಎಚ್. ಮಲ್ಲಿಕಾರ್ಜುನಪ್ಪ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನಾಳಿ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಎಂ.ಪಿ. ಫಾಲಾಕ್ಷಮ್ಮ ಅವರು ಗೃಹಿಣಿಯಾಗಿದ್ದಾರೆ. ಮಗಳ ಈ ಐತಿಹಾಸಿಕ ಸಾಧನೆಗೆ ಪೋಷಕರು ಮತ್ತು ಕಾಲೇಜಿನ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿ ಸುಚಿತಾ ಮಹಾದಾಸೆ ಏನು?

ಬಾಲ್ಯದಿಂದಲೂ ವೈದ್ಯೆ ಆಗಬೇಕೆಂಬ ಆಸೆ ಇಟ್ಟುಕೊಂಡಿರುವ ಸುಚಿತಾ ಅವರಿಗೆ ನರರೋಗ ವಿಜ್ಞಾನ ವಿಭಾಗದಲ್ಲಿ ವಿಶೇಷ ಆಸಕ್ತಿಯಿದೆ. ನವದೆಹಲಿಯ ಪ್ರತಿಷ್ಠಿತ ಏಮ್ಸ್ ಸಂಸ್ಥೆಯಲ್ಲಿ ಎಂಬಿಬಿಎಸ್ ಸೀಟು ಪಡೆದು, ಮುಂದೆ ದೇಶದ ಅತ್ಯುತ್ತಮ ವೈದ್ಯೆಯಾಗಿ ಸಮಾಜ ಸೇವೆ ಮಾಡುವುದು ಇವರ ಮುಖ್ಯ ಗುರಿಯಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+