Vijay: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ವಿಧಾನಸಭೆ ಕುರ್ಚಿಯ ಮುಂದೆ ಕ್ರೈಸ್ತ ಧರ್ಮ... ಬಳಕೆ, ಭಾರೀ ವಿವಾದ
Vijay: ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ತಮಿಳುನಾಡಿನಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎನ್ನುವುದರ ನಡುವೆಯೇ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಮುಖ್ಯಮಂತ್ರಿ ಕುರ್ಚಿ / ಮೇಜಿನ ಮೇಲೆ ಕಂಡುಬಂದ (ಕ್ರೈಸ್ತ ಧರ್ಮದ) ಶಿಲುಬೆಯು ತಮಿಳುನಾಡಿನಲ್ಲಿ ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದೆ.
ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ವಕ್ತಾರ ಮತ್ತು ಮಾಜಿ ಸಂಸದ ಡಿಎನ್‌ವಿ ಸೆಂಥಿಲ್‌ಕುಮಾರ್ ಅವರು ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. 1968ರಲ್ಲಿ ಆಗಿನ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರು ಸರ್ಕಾರಿ ಕಚೇರಿಗಳಲ್ಲಿದ್ದ ದೇವರ ಚಿತ್ರಗಳು ಮತ್ತು ವಿಗ್ರಹಗಳನ್ನು "ಕ್ರಮೇಣ ಹಾಗೂ ಯಾವುದೇ ಆಡಂಬರವಿಲ್ಲದೆ ತೆರವುಗೊಳಿಸಬೇಕು" ಎಂದು ಇಲಾಖೆಗಳ ಮುಖ್ಯಸ್ಥರಿಗೆ (HOD) ಸುತ್ತೋಲೆ ಹೊರಡಿಸಿದ್ದರು. ಬಳಿಕ 1993ರಲ್ಲಿ ಆಗಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು 'ತಮಿಳುನಾಡು ಕಚೇರಿ ಕೈಪಿಡಿ'ಗೆ ತಿದ್ದುಪಡಿ ಮಾಡಿ, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಪೂಜೆ ನಡೆಸುವುದನ್ನು ನಿಷೇಧಿಸಿದರು. ನಂತರ ಅವರು ಮುಖ್ಯಮಂತ್ರಿಯಾಗಿ "ಜಾತ್ಯತೀತರಾಗಿ" ಇರಲು ಹೇಳಿದರು, "#ಜಾತ್ಯತೀತ ವಿಜಯ್ ಆಗಿರಿ" ಎಂದು ಬರೆದುಕೊಂಡಿದ್ದಾರೆ.

ಸೆಂಥಿಲ್‌ಕುಮಾರ್ ಅವರು ಈ ಹಿಂದಿನ ಮುಖ್ಯಮಂತ್ರಿಗಳ ಹಿಂದಿನ ನಿರ್ದೇಶನಗಳನ್ನು ಉಲ್ಲೇಖಿಸಿದ್ದಾರೆ. ಸೆಂಥಿಲ್ ಕುಮಾರ್ ಅವರ ಉಲ್ಲೇಖಿಸಿರುವ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸಿಎನ್ ಅಣ್ಣಾದೊರೈ ಮತ್ತು ಜೆ ಜಯಲಲಿತಾ ಅವರು ಸರ್ಕಾರಿ ಕಚೇರಿಗಳು ಧಾರ್ಮಿಕ ಚಿಹ್ನೆಗಳು ಮತ್ತು ಆಚರಣೆಗಳಿಂದ ಮುಕ್ತವಾಗಿರಬೇಕು ಎಂದು ಹೊರಡಿಸಿದ ನಿರ್ದೇಶನಗಳನ್ನು ಉಲ್ಲೇಖಿಸಿದ್ದಾರೆ. 1968ರಲ್ಲಿ ಆಗಿನ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರು ಸರ್ಕಾರಿ ಕಚೇರಿಗಳಲ್ಲಿದ್ದ ದೇವರುಗಳ ಚಿತ್ರಗಳು ಮತ್ತು ವಿಗ್ರಹಗಳನ್ನು "ಕ್ರಮೇಣ ಹಾಗೂ ಯಾವುದೇ ಆಡಂಬರವಿಲ್ಲದೆ" ತೆರವುಗೊಳಿಸುವಂತೆ ಖಚಿತಪಡಿಸಿಕೊಳ್ಳಲು ಇಲಾಖೆಗಳ ಮುಖ್ಯಸ್ಥರಿಗೆ (HOD) ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಿದ್ದರು.
1993ರಲ್ಲಿ ಜಯಲಲಿತಾ ಅವರ ಅಧಿಕಾರಾವಧಿಯಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವು ತಮಿಳುನಾಡು ಕಚೇರಿ ಕೈಪಿಡಿಯನ್ನು ತಿದ್ದುಪಡಿ ಮಾಡಿತು ಮತ್ತು ಸರ್ಕಾರಿ ಸಿಬ್ಬಂದಿ ಕಚೇರಿಗಳಲ್ಲಿ ಪೂಜೆ ಮಾಡುವುದನ್ನು ನಿಷೇಧಿಸಿತು ಎಂದಿದ್ದಾರೆ.
Vijay: ಸಿಎಂ ವಿಜಯ್ ಅವರ 'ಜಾತ್ಯತೀತ' ಪ್ರಮಾಣವಚನ
ತಮಿಳುನಾಡಿನಲ್ಲಿ ಸಾರ್ವಜನಿಕ ಸಂಸ್ಥೆಗಳಲ್ಲಿ ಜಾತ್ಯತೀತತೆಯ ವಿಚಾರ ರಾಜಕೀಯವಾಗಿ ಸೂಕ್ಷ್ಮವಾಗಿರುವ ಸಂದರ್ಭದಲ್ಲೇ ಈ ವಿವಾದ ಭುಗಿಲೆದ್ದಿದೆ. ಎಐಎಡಿಎಂಕೆ ಮತ್ತು ಡಿಎಂಕೆಯಂತಹ ದ್ರಾವಿಡ ಪಕ್ಷಗಳು ಸಾಂಪ್ರದಾಯಿಕವಾಗಿ ಧರ್ಮ ಮತ್ತು ಆಡಳಿತವನ್ನು ಪ್ರತ್ಯೇಕವಾಗಿರಿಸಬೇಕೆಂಬ ನಿಲುವನ್ನು ಪ್ರತಿಪಾದಿಸುತ್ತಿವೆ. ಡಿಎಂಕೆಯ ಟೀಕೆ ವಿಶೇಷ ಮಹತ್ವ ಪಡೆದಿದೆ. ಏಕೆಂದರೆ ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಮ್ಮನ್ನು ಜಾತ್ಯತೀತ ಆಡಳಿತದ ಪ್ರತಿಪಾದಕರಾಗಿ ಹಲವು ಬಾರಿ ಬಿಂಬಿಸಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಿದ್ದ ವಿಜಯ್, "ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಹೊಸ ಯುಗಕ್ಕೆ ನಾಂದಿ ಹಾಡುತ್ತೇವೆ" ಎಂದು ಹೇಳಿದ್ದರು. ಆದರೆ ಈಚೆಗೆ ಹಿಂದೂ ಧರ್ಮದ ವಿಚಾರದಲ್ಲಿ ಮೃಧು ಹಿಂದುತ್ವದ ಧೋರಣೆ ಅಥವಾ ಪೆರಿಯಾರ್ ರಾಮಸ್ವಾಮಿ ಅಯ್ಯಂಗಾರ್ ಅವರ ಎಲ್ಲ ವಾದಗಳನ್ನೂ ನಾವು ಒಪ್ಪುವುದಿಲ್ಲ ಎಂದೂ ತಮಿಳಗ ವೆಟ್ರಿ ಕಳಗಂ ಪಕ್ಷವು ಹೇಳಿತ್ತು. ಇದೀಗ ವಿಜಯ್ ಅವರ ಕುರ್ಚಿಯ ಮುಂದೆಯೇ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಚಿಹ್ನೆ ಬಳಕೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ, ಡಿಎಂಕೆಯ ಟೀಕೆಗೆ ಮುಖ್ಯಮಂತ್ರಿ ಕಚೇರಿ ಅಥವಾ ಆಡಳಿತಾರೂಢ ಟಿವಿಕೆ ಪಕ್ಷ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications
