Bengaluru Property: ಬೆಂಗಳೂರು ಆಸ್ತಿದಾರರಿಗೆ ಶಾಕ್! ಪಿತ್ರಾರ್ಜಿತ ಜಮೀನು ಹಂಚಿಕೆಗೆ ಶೇ.45 ಭೂಮಿ ಮೀಸಲಿಡುವ ಹೊಸ ಪ್ರಸ್ತಾವನೆ

Bengaluru Property: ಬೆಂಗಳೂರಿನ ಆಸ್ತಿದಾರರಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವ ಬದಲಾವಣೆ ತರುವುದಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬ ಸದಸ್ಯರ ನಡುವೆ ಹಂಚಿಕೊಳ್ಳಲು ಬಯಸುವವರಿಗೆ ಕರ್ನಾಟಕ ಸರ್ಕಾರದ ಹೊಸ ಪ್ರಸ್ತಾವಿತ ನಿಯಮಗಳು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಕುಟುಂಬ ಉಪವಿಭಾಗ (Family Subdivision) ನಿಯಮಗಳಿಗೆ ಸರ್ಕಾರ ತಿದ್ದುಪಡಿ ಜಾರಿಗೊಳಿಸಿದರೆ, ತಮ್ಮ ಜಮೀನಿನ ಶೇ.45ರಷ್ಟು ಭಾಗವನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಿಡಬೇಕಾಗಬಹುದು.

ಈ ನಿಯಮ ಜಾರಿಗೆ ಬಂದರೆ ಅನೇಕ ಭೂಮಾಲೀಕರಿಗೆ ತಮ್ಮ ಭೂಮಿಯ ಪೂರ್ಣ ಮೌಲ್ಯ ಪಡೆಯಲು ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಅಥವಾ ಭೂಮಿಯನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆಯೇ ಉಳಿಯದ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಲಾಗಿದೆ. ಜೂನ್ 4 ರಂದು ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಪ್ರಕಟಿಸಿದ ಪ್ರಸ್ತಾವಿತ ತಿದ್ದುಪಡಿಗಳು, ಪ್ಲಾಟ್‌ಗಳ ಕುಟುಂಬ ಉಪವಿಭಾಗವನ್ನು ನಿಯಂತ್ರಿಸುವ ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್‌ಎಂಪಿ), 2015 ರ ಅಧ್ಯಾಯ 6 ಅನ್ನು ಮಾರ್ಪಡು ಮಾಡುವುದಕ್ಕೆ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸುವ ಅವಧಿ ಮುಗಿದಿರುವುದರಿಂದ ಸರ್ಕಾರವು ಶೀಘ್ರದಲ್ಲೇ ಅಂತಿಮ ನಿಯಮಗಳನ್ನು ತಿಳಿಸುವ ನಿರೀಕ್ಷೆ ಇದೆ.

Bengaluru Property

ಕರ್ನಾಟಕ ಸರ್ಕಾರದ ಕರಡು ತಿದ್ದುಪಡಿ ಪ್ರಕಾರ, 2,000 ಚದರ ಮೀಟರ್ (ಸುಮಾರು ಅರ್ಧ ಎಕರೆ) ಒಳಗಿನ ಜಮೀನನ್ನು ಕುಟುಂಬ ಸದಸ್ಯರ ನಡುವೆ ಹಂಚಿಕೊಳ್ಳಲು ಯಾವುದೇ ಭೂಮಿಯನ್ನು ಬಿಟ್ಟುಕೊಡಬೇಕಾಗಿಲ್ಲ. ಆದರೆ, 2,000 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಜಮೀನು ಇದ್ದರೆ, ಕುಟುಂಬ ವಿಭಜನೆಗೆ ಅನುಮತಿ ಪಡೆಯುವ ಮೊದಲು ರಸ್ತೆ, ಉದ್ಯಾನ ಮತ್ತು ಇತರ ನಾಗರಿಕ ಸೌಲಭ್ಯಗಳಿಗಾಗಿ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಈ ಪ್ರಸ್ತಾವನೆ ಏಕಪಕ್ಷೀಯವಾಗಿದೆ, ಇದಕ್ಕೆ ಸ್ಪಷ್ಟ ಕಾನೂನು ಬೆಂಬಲ ಇಲ್ಲ ಮತ್ತು ಪಿತ್ರಾರ್ಜಿತ ಆಸ್ತಿಗಳ ವಿಶೇಷ ಸ್ವರೂಪವನ್ನು ಪರಿಗಣಿಸಿಲ್ಲ ಎಂದು ಆಸ್ತಿ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕಾರಣದಿಂದ, ಈ ಕರಡು ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ಅವರು ನಗರಾಭಿವೃದ್ಧಿ ಇಲಾಖೆಗೆ (UDD) ಒತ್ತಾಯಿಸಿದ್ದಾರೆ. ಅಲ್ಲದೆ ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಇರುವ ಅನೇಕ ಪಿತ್ರಾರ್ಜಿತ ಕುಟುಂಬದ ಜಮೀನುಗಳು 2,000 ಚದರ ಮೀಟರ್‌ಗಿಂತಲೂ ದೊಡ್ಡದಾಗಿವೆ. ಆದ್ದರಿಂದ ಈ ಹೊಸ ನಿಯಮದಿಂದ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗಿದೆ. ಹೀಗಾಗಿ, ಈ ಕರಡು ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ಅವರು ನಗರಾಭಿವೃದ್ಧಿ ಇಲಾಖೆಗೆ (UDD) ಒತ್ತಾಯಿಸಿದ್ದಾರೆ.

Bengaluru Property: ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ

ಇನ್ನು ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದರೊಂದಿಗೆ ವಿವಿಧ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಂಡಿದೆ. ಇದೀಗ ನಗರಾಭಿವೃದ್ಧಿ ಇಲಾಖೆಯ ಹೊಸ ಪ್ರಸ್ತಾವನೆಯು ಭಾರೀ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+