ನಿಮ್ಮ ಜನ್ಮರಾಶಿಗೆ ಯಾರು ಬೆಸ್ಟ್‌ ಲೈಫ್‌ ಪಾರ್ಟ್ನರ್? ಯಾರು ಬೇಡ? ಜ್ಯೋತಿಷ್ಯ ಹೇಳುವ ರಹಸ್ಯಗಳು

ಮದುವೆ ಮತ್ತು ಸಂಗಾತಿಯ ಆಯ್ಕೆಯಲ್ಲಿ ಜ್ಯೋತಿಷ್ಯ ಪ್ರಕಾರ ಜನ್ಮರಾಶಿಗಳನ್ನು ಹೊಂದಾಣಿಸಿ ನೋಡಲಾಗುತ್ತದೆ. ಆದರೆ ಅಷ್ಟನ್ನೇ ನೋಡುವುದಿಲ್ಲ. ಜನ್ಮ ನಕ್ಷತ್ರ, ಅಷ್ಟಕೂಟ ಗುಣಮಿಲನ, ಗಣ, ಯೋನಿ, ನಾಡಿ, ರಜ್ಜು, ಮಹೇಂದ್ರ, ದಿನ, ಗ್ರಹಮೈತ್ರಿ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸುತ್ತದೆ. ಸಾಮಾನ್ಯ ಜ್ಯೋತಿಷ್ಯ ಮಾರ್ಗದರ್ಶನದ ಪ್ರಕಾರ, ಸಂಗಾತಿಯನ್ನು ಆರಿಸಲು ಕೆಲವು ಸೂತ್ರಗಳು ಇಲ್ಲಿವೆ.

ಮೇಷ ರಾಶಿ

ಇವರಿಗೆ ಸಿಂಹ, ಧನು, ಮಿಥುನ ರಾಶಿಯವರು ಉತ್ತಮ ಸಂಗಾತಿ ಆಗಬಲ್ಲರು. ಧೈರ್ಯ, ಉತ್ಸಾಹ ಮತ್ತು ಸಾಹಸಪ್ರಿಯ ಸ್ವಭಾವವನ್ನು ಈ ರಾಶಿಯವರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ನಕ್ಷತ್ರಗಳಲ್ಲಿ ಅಶ್ವಿನಿ, ಮಘಾ, ಮೂಲ, ಪುನರ್ವಸು ಮೊದಲಾದವು ಸಾಮಾನ್ಯವಾಗಿ ಉತ್ತಮ ಹೊಂದಾಣಿಕೆ ತೋರಬಹುದು. ಇವರು ಉತ್ಸಾಹಿಗಳು, ನಾಯಕತ್ವದ ಗುಣ ಹೊಂದಿರುತ್ತಾರೆ. ಇವರ ವೇಗಕ್ಕೆ ಹೊಂದಿಕೊಳ್ಳುವ ಸಂಗಾತಿ ಸೂಕ್ತ. ಕಟಕ, ಮಕರದವರು ಕೆಲವು ಸಂದರ್ಭಗಳಲ್ಲಿ ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ. ಯಾಕೆಂದರೆ ಇವರು ಅತಿಯಾದ ಭಾವನಾತ್ಮಕ ಅಥವಾ ನಿಯಂತ್ರಣ ಸ್ವಭಾವದವರು.

Best Zodiac Match for Marriage Which Rashi is Your Perfect Life Partner Know Complete details

ವೃಷಭ ರಾಶಿ

ಇವರಿಗೆ ಉತ್ತಮ ಸಂಗಾತಿಗಳು ಕನ್ಯಾ, ಮಕರ, ಕಟಕ ರಾಶಿಯವರು. ಸ್ಥಿರತೆ, ನಂಬಿಕೆ ಮತ್ತು ಕುಟುಂಬದ ಮೌಲ್ಯಗಳನ್ನು ಹಂಚಿಕೊಳ್ಳುವ ಸ್ವಭಾವ. ಉತ್ತಮ ಹೊಂದಾಣಿಕೆಯ ನಕ್ಷತ್ರಗಳು ರೋಹಿಣಿ, ಉತ್ತರ ಫಲ್ಗುಣಿ, ಶ್ರವಣ ಮುಂತಾದವು. ಇವರದು ಸ್ಥಿರತೆ, ಕುಟುಂಬ ಮತ್ತು ಆರ್ಥಿಕ ಭದ್ರತೆಯನ್ನು ಬಯಸುವ ಸ್ವಭಾವ. ಧನು, ಕುಂಭದವರ ಜೊತೆ ಹೊಂದಾಣಿಕೆ ಕಷ್ಟವಾದೀತು. ಯಾಕೆಂದರೆ ಹೆಚ್ಚು ಅಸ್ಥಿರ ಅಥವಾ ಸ್ವಾತಂತ್ರ್ಯಪ್ರಿಯ ವ್ಯಕ್ತಿತ್ವ.

ಮಿಥುನ ರಾಶಿ

ಇವರಿಗೆ ಉತ್ತಮ ಸಂಗಾತಿಗಳು ತುಲಾ, ಕುಂಭ, ಮೇಷ. ಉತ್ತಮ ಸಂವಹನ, ಹೊಸತನ ಮತ್ತು ಬೌದ್ಧಿಕ ಹೊಂದಾಣಿಕೆ ತೋರುತ್ತಾರೆ. ಉತ್ತಮ ಹೊಂದಾಣಿಕೆಯ ನಕ್ಷತ್ರಗಳು ಮೃಗಶಿರ, ಸ್ವಾತಿ, ಶತಭಿಷ. ಮಾತುಕತೆ, ಹೊಸತನ ಮತ್ತು ಬೌದ್ಧಿಕತೆ ಇವರಿಗೆ ಮುಖ್ಯ. ವೃಶ್ಚಿಕ, ಮೀನದವರೊಂದಿಗೆ ಹೊಂದಾಣಿಕೆ ಕಷ್ಟವಾಗಬಹುದು. ಇವರ ಅತಿಯಾದ ಭಾವನಾತ್ಮಕತೆ ಕೆಲವೊಮ್ಮೆ ಸಮಸ್ಯೆಯಾಗಬಹುದು.

ಕಟಕ ರಾಶಿ

ಉತ್ತಮ ಸಂಗಾತಿಗಳು ವೃಶ್ಚಿಕ, ಮೀನ, ವೃಷಭ. ಭಾವನಾತ್ಮಕ ಬೆಂಬಲ, ಕಾಳಜಿ ಮತ್ತು ಕುಟುಂಬದತ್ತ ಒಲವು ನೀಡುತ್ತಾರೆ. ಉತ್ತಮ ನಕ್ಷತ್ರಗಳು ಪುಷ್ಯ, ಅನುರಾಧಾ, ರೇವತಿ. ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ ಇರುವುದು ಮೇಷ, ತುಲಾದವರ ಜೊತೆ. ಭಾವನೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಸಂಘರ್ಷ ಉಂಟಾಗಬಹುದು.

ಸಿಂಹ ರಾಶಿ

ಇವರಿಗೆ ಉತ್ತಮ ಸಂಗಾತಿಗಳು ಮೇಷ, ಧನು, ತುಲಾ. ಆತ್ಮವಿಶ್ವಾಸ, ನಾಯಕತ್ವ ಮತ್ತು ಪರಸ್ಪರ ಪ್ರೋತ್ಸಾಹ ಇವರ ಆಸ್ತಿಗಳು. ಹೊಂದುವ ಉತ್ತಮ ನಕ್ಷತ್ರಗಳು ಮಘಾ, ಪೂರ್ವಾಷಾಢ, ವಿಶಾಖ. ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ ವೃಷಭ, ವೃಶ್ಚಿಕದವರ ಜೊತೆಗೆ. ಇಬ್ಬರೂ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದರೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು.

ಕನ್ಯಾ ರಾಶಿ

ಉತ್ತಮ ಸಂಗಾತಿಗಳು ವೃಷಭ, ಮಕರ, ಕಟಕ. ಶಿಸ್ತು, ಜವಾಬ್ದಾರಿ ಮತ್ತು ಪ್ರಾಯೋಗಿಕ ಜೀವನಶೈಲಿ ಉಳ್ಳವರು ಇವರು. ಉತ್ತಮ ನಕ್ಷತ್ರಗಳು ಉತ್ತರ ಫಲ್ಗುಣಿ, ಹಸ್ತ, ಶ್ರವಣ. ಮಿಥುನ, ಧನುಗಳ ಜೊತೆ ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ. ಜೀವನದ ದೃಷ್ಟಿಕೋನದಲ್ಲಿ ವ್ಯತ್ಯಾಸ ಕಂಡುಬರಬಹುದು.

ತುಲಾ ರಾಶಿ

ಉತ್ತಮ ಸಂಗಾತಿಗಳು ಮಿಥುನ, ಕುಂಭ, ಸಿಂಹ. ಸಮತೋಲನ, ಪ್ರೀತಿ ಮತ್ತು ಉತ್ತಮ ಸಂವಹನ ಸಾಧಿಸುವವರು. ಉತ್ತಮ ನಕ್ಷತ್ರಗಳು ಸ್ವಾತಿ, ಶತಭಿಷ, ಪುನರ್ವಸು. ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ ಕಟಕ, ಮಕರದ ಜೊತೆ. ಭಾವನೆ ಮತ್ತು ವ್ಯವಹಾರಿಕತೆಯ ನಡುವೆ ಅಂತರ ಉಂಟಾಗಬಹುದು.

ವೃಶ್ಚಿಕ ರಾಶಿ

ಉತ್ತಮ ಸಂಗಾತಿಗಳು ಇವರಿಗೆ ಕಟಕ, ಮೀನ, ಮಕರದವರು. ಆಳವಾದ ಭಾವನೆ, ನಿಷ್ಠೆ ಮತ್ತು ಬಲವಾದ ಬಾಂಧವ್ಯ ತೋರ್ಪಡಿಸುತ್ತಾರೆ. ಉತ್ತಮ ಜೋಡಿ ನಕ್ಷತ್ರಗಳು ಅನುರಾಧಾ, ಉತ್ತರಾಭಾದ್ರ, ಪುಷ್ಯ. ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ ಮಿಥುನ, ಸಿಂಹ ರಾಶಿಯವರೊಂದಿಗೆ. ಅನುಮಾನ ಅಥವಾ ಅಹಂಕಾರ ಹೆಚ್ಚಾದರೆ ಸಂಬಂಧಕ್ಕೆ ತೊಂದರೆ.

ಧನು ರಾಶಿ

ಇವರಿಗೆ ಉತ್ತಮ ಸಂಗಾತಿಗಳು ಮೇಷ, ಸಿಂಹ, ಕುಂಭದವರು. ಸ್ವಾತಂತ್ರ್ಯ, ಪ್ರವಾಸ ಮತ್ತು ಸಾಹಸವನ್ನು ಇಷ್ಟಪಡುವ ಗುಣ ಇವರದು. ಉತ್ತಮ ನಕ್ಷತ್ರಗಳು ಮೂಲ, ಪೂರ್ವಾಷಾಢ, ಧನಿಷ್ಠಗಳು. ವೃಷಭ, ಕನ್ಯಾದವರ ಜೊತೆ ಹೊಂದಾಣಿಕೆ ಸರಿಹೋಗದು. ಜೀವನಶೈಲಿ ಮತ್ತು ಆದ್ಯತೆಗಳಲ್ಲಿ ವ್ಯತ್ಯಾಸ ಇರಬಹುದು.

ಮಕರ ರಾಶಿ

ವೃಷಭ, ಕನ್ಯಾ, ವೃಶ್ಚಿಕದವರು ಉತ್ತಮ ಸಂಗಾತಿಗಳಾಗುತ್ತಾರೆ. ಗುರಿಯತ್ತ ಗಮನ, ಪರಿಶ್ರಮ ಮತ್ತು ಸ್ಥಿರ ಜೀವನವನ್ನು ಇಷ್ಟಪಡುತ್ತಾರೆ. ಹೊಂದುವ ಉತ್ತಮ ನಕ್ಷತ್ರಗಳು ಶ್ರವಣ, ಉತ್ತರಾಷಾಢ, ರೋಹಿಣಿ. ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ ಮೇಷ, ತುಲಾದವವರದು. ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದಲ್ಲಿ ಭಿನ್ನಾಭಿಪ್ರಾಯ.

ಕುಂಭ ರಾಶಿ

ಇವರಿಗೆ ಒಪ್ಪುವ ಉತ್ತಮ ಸಂಗಾತಿಗಳು ಮಿಥುನ, ತುಲಾ, ಧನು ರಾಶಿಗಳು. ಸ್ವತಂತ್ರ ಚಿಂತನೆ, ಸ್ನೇಹ ಮತ್ತು ಹೊಸ ವಿಚಾರಗಳ ಮೇಲಿನ ಆಸಕ್ತಿ ಇವರನ್ನು ಒಂದಾಗಿಸುತ್ತದೆ. ಉತ್ತಮ ನಕ್ಷತ್ರಗಳು ಶತಭಿಷ, ಸ್ವಾತಿ, ಧನಿಷ್ಠ. ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ ವೃಷಭ, ಕಟಕದವರೊಂದಿಗೆ. ಇವರ ಭಾವನಾತ್ಮಕ ನಿರೀಕ್ಷೆಗಳು ಹೊಂದಿಕೆಯಾಗದಿರಬಹುದು.

ಮೀನ ರಾಶಿ

ಇವರಿಗೆ ಉತ್ತಮ ಸಂಗಾತಿಗಳು ಕಟಕ, ವೃಶ್ಚಿಕ, ವೃಷಭ. ಕರುಣೆ, ಪ್ರೀತಿ ಮತ್ತು ಭಾವನಾತ್ಮಕ ಅರ್ಥೈಸಿಕೊಳ್ಳುವಿಕೆ ಇವರನ್ನು ಸೇರಿಸುತ್ತದೆ. ಹೊಂದುವ ಉತ್ತಮ ನಕ್ಷತ್ರಗಳು ರೇವತಿ, ಪುಷ್ಯ, ಅನುರಾಧಾ. ಹೊಂದಾಣಿಕೆ ಮಿಥುನ, ಧನು ರಾಶಿಯವರೊಂದಿಗೆ ಸರಿ ಹೋಗಲಿಕ್ಕಿಲ್ಲ. ಯಾಕೆಂದರೆ ಜೀವನದ ಗುರಿ ಮತ್ತು ನಿರ್ಧಾರಗಳಲ್ಲಿ ವ್ಯತ್ಯಾಸ ಕಂಡುಬರಬಹುದು.

ಇದಲ್ಲದೇ ಇವುಗಳನ್ನೂ ಪರಿಗಣಿಸಬೇಕು

* ಅಷ್ಟಕೂಟ ಗುಣಮಿಲನ- ಒಟ್ಟು 36 ಗುಣಗಳಲ್ಲಿ ಸಾಮಾನ್ಯವಾಗಿ 18 ಅಥವಾ ಅದಕ್ಕಿಂತ ಹೆಚ್ಚು ಗುಣಗಳು ಹೊಂದಿದರೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ನಾಡಿ ದೋಷ- ಇಬ್ಬರ ನಾಡಿಯೂ ಒಂದೇ ಆಗಿದ್ದರೆ ಸಾಂಪ್ರದಾಯಿಕವಾಗಿ ಎಚ್ಚರಿಕೆ ವಹಿಸಲಾಗುತ್ತದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಇದು ಮದುವೆಗೆ ಅಡ್ಡಿಯಾಗುವುದಿಲ್ಲ.ಇತರ ಯೋಗಗಳು ದೋಷವನ್ನು ಶಮನಗೊಳಿಸಬಹುದು.
* ಗಣ ಹೊಂದಾಣಿಕೆ- ದೇವ, ಮಾನವ ಮತ್ತು ರಾಕ್ಷಸ ಗಣಗಳ ಹೊಂದಾಣಿಕೆಯನ್ನು ಪರಿಶೀಲಿಸಲಾಗುತ್ತದೆ.
* ರಜ್ಜು ದೋಷ- ದಾಂಪತ್ಯದ ಸ್ಥಿರತೆಗೆ ಸಂಬಂಧಿಸಿದ ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ.
* ಯೋನಿ ಕೂಟ- ದೈಹಿಕ ಮತ್ತು ಮಾನಸಿಕ ಹೊಂದಾಣಿಕೆಯನ್ನು ಸೂಚಿಸುತ್ತದೆ.
* ಗ್ರಹಮೈತ್ರಿ- ಮನೋಭಾವ ಮತ್ತು ಕುಟುಂಬ ಜೀವನದ ಹೊಂದಾಣಿಕೆಯನ್ನು ಸೂಚಿಸುತ್ತವೆ.
* ಮಂಗಳ ದೋಷ (ಕುಜ ದೋಷ)- ಇಬ್ಬರ ಜಾತಕದಲ್ಲೂ ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+