ಇರಾನ್ ನೆಲದಲ್ಲಿ ಹೊಸ ಆಟ ಶುರು ಮಾಡಿದ ಚೀನಾ, ತೈಲ ತರಿಸಿಕೊಳ್ಳಲು ಭರ್ಜರಿ ಪ್ಲಾನ್ | Operation Roaring Lion
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಕಾರ್ಯಾಚರಣೆ ತೀವ್ರಗೊಳಿಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ತೈಲ ಸರಬರಾಜು ನಿಂತು ಹೋದ ಹಿನ್ನೆಲೆ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ. ಅದರಲ್ಲೂ ಇರಾನ್ ಈಗ ಅಮೆರಿಕದ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿರುವ ದೇಶಗಳಿಗೆ ಬೇಕು ಅಂತಲೇ ಸಮಸ್ಯೆ ಮಾಡುತ್ತಿದ್ದು, ಭಾರತಕ್ಕೆ ಕೂಡ ಸಮಸ್ಯೆ ಮಾಡ್ತಾ ಇದೆ. ಭಾರತದ ತೈಲ ಹಡಗುಗಳು ಕೂಡ ಇರಾನ್ ಸೇನೆಯ ಟಾರ್ಗೆಟ್ ಆಗಿದ್ದು, ಇರಾನ್ ಸೇನೆಯ ಕಡೆಯಿಂದ ದಾಳಿ ಎದುರಿಸಿದ ಆರೋಪ ಕೂಡ ಕೇಳಿಬಂದಿದೆ. ಇಂತಹ ಸಮಯದಲ್ಲೇ ಚೀನಾ ಮಾತ್ರ ಹೊಸ ಆಟ ಶುರು ಮಾಡಿದ್ದು, ತೈಲ ತರಿಸಿಕೊಳ್ಳಲು ಭರ್ಜರಿ ಪ್ಲಾನ್ ಮಾಡಿದೆ.
ಹಾರ್ಮುಜ್ ಜಲಸಂಧಿ ಮೂಲಕವೇ ಅರಬ್ ದೇಶಗಳು ಬದುಕುತ್ತಿವೆ ಎಂದು ಹೇಳಿದರೆ ತಪ್ಪು ಆಗಲ್ಲ. ಏಕೆಂದರೆ ಮಧ್ಯಪ್ರಾಚ್ಯ ದೇಶಗಳ ಪಾಲಿಗೆ ಹಾರ್ಮುಜ್ ಜಲಸಂಧಿ ಅತ್ಯಂತ ಮುಖ್ಯವಾದ ಜಲಮಾರ್ಗ. ಇರಾನ್ ಯುದ್ಧ ಶುರುವಾದ ನಂತರ ಆರ್ಥಿಕವಾಗಿ ಮಧ್ಯಪ್ರಾಚ್ಯ ಬೀದಿಗೆ ಬೀಳುವ ಎಲ್ಲಾ ಲಕ್ಷಣಗಳು ಈಗ ಕಾಣುತ್ತಿದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿಬಿಟ್ಟಿದೆ, ಹೀಗಾಗಿ ಒದ್ದಾಟ ಶುರುವಾಗಿ ಏನು ಮಾಡುವುದು? ಎಂದು ಅರಬ್ ದೇಶಗಳು ತಲೆ ಮೇಲೆ ಕೈಹೊತ್ತು ಕೂತಿವೆ. ಇಂತಹ ಸಮಯದಲ್ಲಿ ಚೀನಾ ಮಾತ್ರ ತನ್ನ ಸ್ವಾರ್ಥಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಮುಂದೆ ನುಗ್ಗಿದೆ. ಇರಾನ್ ಜೊತೆಗಿನ ಸಂಬಂಧವನ್ನ ಈ ಸಮಯದಲ್ಲಿ ಬಳಸಿಕೊಂಡು ಹೊಸ ಆಟ ಶುರು ಮಾಡಿದೆ ಚೀನಾ.

ಚೀನಾ ಹಡಗುಗಳಿಗೆ ವಿಶೇಷ ವ್ಯವಸ್ಥೆ
ಹಾರ್ಮುಜ್ ಜಲಸಂಧಿ ಇರಾನ್ ಗಡಿ ಭಾಗದಲ್ಲಿ ಕೂಡ ಹಾದು ಹೋಗುವ ಕಾರಣಕ್ಕೆ, ಇರಾನ್ ಸೇನೆ ಈಗ ಘೋರವಾಗಿ ದಾಳಿ ಮಾಡುತ್ತಾ ಕಚ್ಚಾತೈಲ ಸರಬರಾಜು ಬಂದ್ ಮಾಡಿದೆ. ಇದರಿಂದ ಸೇಡಿಗೆ ಸೇಡು ಎಂದು ತೊಡೆತಟ್ಟಿ ನಿಂತು ಅಮೆರಿಕ ಎದುರು ಸೆಡ್ಡು ಹೊಡೆದಿದೆ. ಆದರೆ ಇರಾನ್ & ಚೀನಾ ನಡುವೆ ಈಗಲೂ ಉತ್ತಮ ಬಾಂಧವ್ಯ ಇದ್ದು, ಇದೇ ಸಂಬಂಧ ಮುಂದೆ ಇಟ್ಟುಕೊಂಡು ದಿಢೀರ್ ಅಂತಾ ತನ್ನ ತೈಲ ಹಡಗುಗಳನ್ನು ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವಂತೆ ಮಾಡಲು ಯಶಸ್ವಿ ಆಗಿದೆ ಚೀನಾ. ಇರಾನ್ ಈಗ ಹಾರ್ಮುಜ್ ಜಲಸಂಧಿ ಮೂಲಕ ಚೀನಾ ಹಡಗುಗಳಿಗೆ ಮಾತ್ರ ಸಂಚಾರ ವ್ಯವಸ್ಥೆ ಮಾಡಿಕೊಟ್ಟಿದೆ. ಇದು ಜಗತ್ತಿನ ಇತರ ರಾಷ್ಟ್ರಗಳಿಗೆ ಇರಾನ್ ಮೇಲೆ ಮತ್ತಷ್ಟು ಕೋಪವನ್ನ ಉಂಟುಮಾಡಿದೆ.
ರಷ್ಯಾ ಹಡಗುಗಳಿಗೂ ವಿಶೇಷ ವ್ಯವಸ್ಥೆ!
ಚೀನಾ ಮಾತ್ರವಲ್ಲ ರಷ್ಯಾ ಹಡಗುಗಳಿಗೆ ಕೂಡ ಅನುಮತಿ ನೀಡುವುದಾಗಿ ಇರಾನ್ ಘೋಷಿಸಿದ್ದು, ಈ ಎರಡು ದೇಶಗಳನ್ನು ಬಿಟ್ಟು ಬೇರೆ ಯಾವುದೇ ದೇಶದ ಹಡಗು ಹಾರ್ಮುಜ್ ಜಲಸಂಧಿ ಬಳಿ ಸುಳಿದರೂ ಡ್ರೋನ್ ಹಾಗೂ ಮಿಸೈಲ್ ಅಟ್ಯಾಕ್ ಗ್ಯಾರಂಟಿ ಎಂದು ಇರಾನ್ ಎಚ್ಚರಿಸಿದೆ. ಅಲ್ಲದೆ ದಾಳಿ ನಡೆಸಲು ವಿಶೇಷ ವ್ಯವಸ್ಥೆ ಕೂಡ ಮಾಡಿಕೊಂಡಿರುವ ಇರಾನ್ ಶತಾಯಗತಾಯ ಹಾರ್ಮುಜ್ ಜಲಸಂಧಿಯನ್ನ ಸಂಪೂರ್ಣ ಬಂದ್ ಮಾಡಿಸಿ, ಆರ್ಥಿಕವಾಗಿ ಅರಬ್ ದೇಶಗಳನ್ನು ಒದ್ದಾಡುವಂತೆ ಮಾಡಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಆದರೆ ಈ ಬಗ್ಗೆ ಅರಬ್ ದೇಶಗಳಿಗೆ ಸಿಕ್ಕಾಪಟ್ಟೆ ಕೋಪ ಇದ್ದು, ಹೇಗಾದರೂ ಮಾಡಿ ಈ ವಿಚಾರದಲ್ಲಿ ಇರಾನ್‌ಗೆ ಪಾಠ ಕಲಿಸಬೇಕು ಎಂದು ಸಮಯಕ್ಕಾಗಿ ಕಾಯುತ್ತಿವೆ. ಅಲ್ಲದೇ ಇದೇ ರೀತಿ ಬಡಿದಾಟ ಮುಂದುವರಿದರೆ ಜಾಗತಿಕ ಆರ್ಥಿಕತೆ ಕುಸಿಯುವ ಭೀತಿ ಕೂಡ ಕಾಡುತ್ತಿದೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications