ಇರಾನ್‌ನಲ್ಲಿ 1000 ದಾಟಿದ ಸಾವು: ಯುಎಸ್- ಇಸ್ರೇಲ್ ತೀವ್ರ ವಾಯುದಾಳಿಗೆ ಸಜ್ಜು, 10 ಪ್ರಮುಖಾಂಶಗಳು
War Update Today: ಇರಾನ್, ಇಸ್ರೇಲ್ ಮತ್ತು ಯುಎಸ್ ಮಧ್ಯದ ಯುದ್ಧ ಸಂಘರ್ಷ ಐದನೇ ದಿನ ಬುಧವಾರದಂದು (ಮಾರ್ಚ್ 4) ಮತ್ತಷ್ಟು ತೀವ್ರಗೊಂಡಿದೆ. ಪ್ರತೀಕಾರದ ದಾಳಿ ನಡೆಸಿದ ಇರಾನ್ ಇಂದ ಕೂಡ ಇಸ್ರೇಲ್ ಹಾಗೂ ಯುಎಸ್‌ಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ನಿರಂತರ ಕ್ಷಿಪಣಿಗಳನ್ನು ಉಡಾಯಿಸಿದೆ. ಇದಕ್ಕೆ ವಿರುದ್ಧ ಯುಎಸ್ ಬೆಂಬಲದೊಂದಿಗೆ ಇಸ್ರೇಲ್ ಪೈಲಟ್‌ಗಳು ಇರಾನ್ ಮತ್ತು ಟೆಹ್ರಾನ್ ಮೇಲೆ ಹಾರಾಡುತ್ತಿವೆ. ಹೊಸದಾಗಿ ಮತ್ತೊಂದು ಸುತ್ತಿನ ದಾಳಿಗೆ ಸಜ್ಜಾಗಿದ್ದರ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ. ಮತ್ತೊಂದೆ ಯುಎಸ್ ಜಲಾಂತರ್ಗಾಮಿ ನೌಕೆಯು ಶ್ರೀಲಂಕಾ ಕರಾವಳಿಯಲ್ಲಿ ಇರಾನ್‌ನ ಯುದ್ಧನೌಕೆಯನ್ನು ಮುಳುಗಿಸಿದೆ. ಇರಾನ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಏನೆಲ್ಲ ನಡೆಯಿತು ಎಂಬುದರ ಸಂಕ್ಷಿಪ್ತ ಟಾಪ್ 10 ಮುಖ್ಯಾಂಶಗಳು ಇಲ್ಲಿವೆ.
ಐದನೇ ದಿನದ ಯುದ್ಧದ 10 ಪ್ರಮುಖಾಂಶಗಳು
1. ಇರಾನ್ ಪ್ರತೀಕಾರದ ದಾಳಿ ಬೆನ್ನಲ್ಲೆ ಯುಎಸ್ ಬೆಂಬಲದೊಂದಿಗೆ ಇಸ್ರೇಲ್ ಹೊಸದಾಗಿ ಮತ್ತೊಂದು ಸುತ್ತಿನ ಬೃಹತ್ ದಾಳಿಗೆ ಪ್ಲಾನ್ ಮಾಡಿಕೊಂಡಿದೆ. ಈ ಸಂಬಂಧ ಇಸ್ರೇಲ್ ಪೈಲಟ್‌ಗಳು, ಯುದ್ಧ ವಿಮಾನಗಳು ಕ್ಷಿಪಣಿ, ಯುದ್ಧ ಬಾಂಬ್‌ಗಳನ್ನು ಹೊತ್ತು ಉದ್ದೇಶಿತ ಇರಾನ್ ಮತ್ತು ಟೆಹರಾನ್ ಪಶ್ಚಿಮ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಾರಾಡುತ್ತಿದ್ದನ್ನು ಇಸ್ರೇಲ್ ಪ್ರಧಾನಿ ಖಚಿಪಡಿಸಿದ್ದಾರೆ. ಇಂದು ಯಾವ ಕ್ಷಣದಲ್ಲಾದರೂ ದಾಳಿ ಆಗುವ ನಿರೀಕ್ಷೆ ಇದೆ.

2. ಇರಾನಿನ ಜಲಾಂತರ್ಗಾಮಿ ನೌಕೆ ಐಆರ್‌ಐಎಸ್ ದೇನಾವನ್ನು ಶ್ರೀಲಂಕಾದ ಕರಾವಳಿಯಲ್ಲಿ ಯುಎಸ್ ಯುದ್ಧ ನೌಕೆಯು ಮುಳುಗಿಸಿದೆ. ಶ್ರೀಲಂಕಾ ಪಡೆಗಳು 32 ನಾವಿಕರನ್ನು ರಕ್ಷಿಸಿದ್ದು, ಸುಮಾರು 100 ಜನರು ಕಾಣೆಯಾಗಿದ್ದಾರೆ ಎಂದು ವರದಿ ಆಗಿದೆ.
3. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಇರಾನಿನ ಬೃಹತ್ ನಗರ, ಕಟ್ಟಡಗಳನ್ನು, ಭದ್ರತಾ ಪ್ರಧಾನ ಕಚೇರಿ ಮತ್ತು ಕೋಮ್‌ನಲ್ಲಿರುವ ತಜ್ಞರ ಸಭಾ ಕಟ್ಟಡವನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿದವು.
4. ಯುಎಸ್ ಬೆಂಬಲಿತ ಇಸ್ರೇಲ್ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ನಾಲ್ಕು ದಿನದಿಂದ ಮುಂದುವರಿದ ದಾಳಿಯಿಂದಾಗಿ ಇರಾನ್‌ನಲ್ಲಿ ಸಾವಿನ ಸಂಖ್ಯೆ 1,000ಕ್ಕೂ ಹೆಚ್ಚಿದೆ. ಕನಿಷ್ಠ 1,045 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
5. ಇರಾನ್ ಸರ್ವೋಚ್ಚ ನಾಯಕನ ಆಯತೂಲ್ಲಾ ಅಲಿ ಖಮೇನಿ ಸ್ಥಾನಕ್ಕೆ ಹೊಸ ಸರ್ವೋಚ್ಚ ನಾಯಕನನ್ನು ನೇಮಿಸಲು ತಜ್ಞರು ತುರ್ತು ಸಭೆ ಸೇರಿದ್ದಾರೆ. ಮೊಜ್ತಾಬಾ ಖಮೇನಿ (ದಿವಂಗತ ನಾಯಕನ ಮಗ) ಉನ್ನತ ಅಭ್ಯರ್ಥಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ. ಇರಾನ್‌ನಲ್ಲಿ ಯಾವುದೇ ಉತ್ತರಾಧಿಕಾರಿ ಅಧಿಕಾರಕ್ಕೆ ಬಂದರೂ ಅವರನ್ನು ಹತ್ಯೆ ಮಾಡಿಯೇ ತೀರುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ.
6. ಪ್ರತೀಕಾರ ದಾಳಿ ಮುಂದುವರಿಸಿರುವ ಇರಾನ್ ಸೇನಾಪಡೆ ಇಸ್ರೇಲ್ ಮೇಲೆ ಬಹು ಕ್ಷಿಪಣಿ ದಾಳಿಯನ್ನು ಇಂದು ಕೂಡ ನಡೆಸಿತು. ಕೊಲ್ಲಿಯಲ್ಲಿ ಯುಎಸ್ ಮತ್ತು ಮಿತ್ರಪಕ್ಷಗಳ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದುಬೈ, ಅಬುಧಾಬಿ ಮತ್ತು ದೋಹಾದಲ್ಲಿ ದಾಳಿ ನಡೆಸಿದೆ ಎಂದು ವರದಿ ಆಗಿದೆ.
7. ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯನ್ನು ಸಂಪರ್ಕಿಸುವ ಹಾರ್ಮುಜ್ ಜಲಸಂಧಿ ಮುಚ್ಚಿಸಿದ್ದರಿಂದ ಭಾರತ ಸೇರಿ ವಿವಿಧ ರಾಷ್ಟ್ರಗಳಿಗೆ ತೈಲ ಸಮಸ್ಯೆ ಆಗಿದೆ. ಈ ಮಾರ್ಗವಾಗಿ ಯಾವುದೇ ತೈಲ ಟ್ಯಾಂಕರ್ ಹಡಗುಗಳು ಸಂಚಾರ ಮಾಡಲು ಮುಂದಾದರೆ ಅವುಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಬೆದರಿಕೆ ಹಾಕಿದೆ. ಆ ಮಾರ್ಗದಲ್ಲಿ ಕಣ್ಣಿಟ್ಟಿದೆ.
8. ತೀವ್ರಗೊಂಡ ಯುದ್ಧದ ಪರಿಣಾಮವು ಜಾಗತಿಕ ವಾಯುಯಾನಗಳ ಮೇಲೆ ಬೀರಿದ್ದು, ಮಧ್ಯಪ್ರಾಚ್ಯದಾದ್ಯಂತ ವಾಯು ಪ್ರಯಾಣವು ನಿಷ್ಕ್ರಿಯವಾಗಿದೆ. ಎಮಿರೇಟ್ಸ್, ಎತಿಹಾದ್ ಮತ್ತು ಕತಾರ್ ಏರ್ವೇಸ್‌ಗಳಲ್ಲಿ ಮಾರ್ಚ್ 5 ರವರೆಗೆ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಯುದ್ಧ ತೀವ್ರಗೊಂಡರೆ ಮತ್ತಷ್ಟು ವಿಮಾನ ಹಾರಾಟ ನಿಷೇಧ ಅವಧಿ ವಿಸ್ತರಣೆ ಆಗಲಿದೆ.
9. ಓಮನ್, ಕುವೈತ್, ಬಹ್ರೇನ್ ಮತ್ತು ಸೌದಿ ಅರೇಬಿಯಾದಿಂದ ನಾಗರಿಕರನ್ನು ಸ್ಥಳಾಂತರಿಸಲು ಮುಂದಾಗಿದ್ದು, ಯುಎಸ್ ಹಾಗೂ ಯುಕೆ ಮಿಲಿಟರಿ ಮತ್ತು ಚಾರ್ಟರ್ ವಿಮಾನಗಳನ್ನು ನಿಯೋಜಿಸುತ್ತಿದೆ. ಜನರ ರಕ್ಷಣೆಗೆ ಆದ್ಯತೆ ನೀಡುವುದು ನೋಡಿದರೆ ಯುದ್ಧ ಮತ್ತಷ್ಟು ತೀವ್ರಗೊಳ್ಳಲಿದೆ ಎನ್ನಲಾಗುತ್ತಿದೆ.
10. ಹಾರ್ಮುಜ್ ಜಲಸಂಧಿ ಮಾರ್ಗವಾಗಿ ಸಂಚಾರ ಬಂದ್ ಆದ ಬೆನ್ನಲ್ಲೆ ಜಾಗತಿಕವಾಗಿ ಅನೇಕ ರಾಷ್ಟ್ರಗಳು ತೈಲ ಪೂರೈಕೆಯ ಕೊರತೆ ಎದುರು ನೋಡುತ್ತಿವೆ. ಕಚ್ಚಾ ತೈಲ ಬೆಲೆ ಹೆಚ್ಚಾದರೆ ಅದು ಪ್ರಾದೇಶಿಕ ಇಂಧನ ಬಳಕೆ ಮೇಲೂ ಉಂಟಾಗುತ್ತಿದೆ. ಭಾರತದ ಹಲವೆಡೆ ಇಂಧನ ಕೊರತೆ ಉಂಟಾಗಿದೆ. ಬೆಲೆಗಳು ತೀವ್ರಗತಿಯಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ.












Click it and Unblock the Notifications