ಕರ್ನಾಟಕ ಪತ್ರಕರ್ತೆಯರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ: ಬಿ. ಉತ್ತರಾಕುಮಾರಿ ಸೇರಿ ಮೂವರು ಆಯ್ಕೆ
ಕರ್ನಾಟಕ ಪತ್ರಕರ್ತೆಯರ ಸಂಘವು 2025-2026ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ಹಿರಿಯ ಪತ್ರಕರ್ತೆ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ನಿವೃತ್ತ ಸುದ್ದಿ ಸಂಪಾದಕಿ ಬಿ. ಉತ್ತರಾಕುಮಾರಿ ಹಾಗೂ ಸಂಯಕ್ತ ಕರ್ನಾಟಕ, ಹುಬ್ಬಳ್ಳಿ ಬ್ಯುರೋದಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ತನುಜಾ ನಾಯಕ್ ಅವರನ್ನು ಆಯ್ಕೆ ಮಾಡಿದೆ.
ಪತ್ರಿಕೋದ್ಯಮ ಕ್ಷೇತ್ರದ ಹೊರತಾಗಿ ವಿಶಿಷ್ಟ ಸಾಧಕಿಯರಿಗೆ ನೀಡುವ ಪ್ರಶಸ್ತಿಗಾಗಿ ಮಹಿಳಾ ವಲಸೆ ಕಾರ್ಮಿಕರ ಹಕ್ಕು ಮತ್ತು ಸಂಘಟನೆಗಾಗಿ ದುಡಿಯುತ್ತಿರುವ ಇಂಡಿ ಮೂಲದ ಡಾ. ಭುವನೇಶ್ವರಿ ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಜುಲೈ ಎರಡನೇ ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಆರ್. ಪೂರ್ಣಿಮಾ ಅವರು ತಿಳಿಸಿದ್ದಾರೆ.












Click it and Unblock the Notifications