ಲಕ್ಷ್ಮೀ ನಿವಾಸ ಸೀರಿಯಲ್: ಜಯಂತ್ - ವೆಂಕಿ ನಡುವಿನ ರಹಸ್ಯ ರಿವೀಲ್, ಸೈಕೋ ಸ್ಟೋರಿ
Lakshmi Niwas Serial: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಲಕ್ಷ್ಮೀ ನಿವಾಸ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಸೀರಿಯಲ್‌ನಲ್ಲಿ ಸೈಕೋ ಜಯಂತ್‌ನ ಜನ್ಮ ರಹಸ್ಯ ಕೊನೆಗೂ ರಿವೀಲ್ ಆಗಿದೆ. ಸೈಕೋ ಜಯಂತ್‌ನ ವರ್ತನೆ ಹಾಗೂ ಜನ್ಮ ರಹಸ್ಯದ ಬಗ್ಗೆ ಮೊದಲಿನಿಂದಲೂ ವೀಕ್ಷಕರಲ್ಲಿ ಕುತೂಹಲ ಮೂಡಿತ್ತು. ಇದೀಗ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ. ಜಯಂತ್ ಇಷ್ಟು ದಿನಗಳ ಕಾಲ ಮುಚ್ಚಿಟ್ಟಿದ್ದ ರಹಸ್ಯಗಳನ್ನು ಪತ್ತೆ ಹಚ್ಚುವಲ್ಲಿ ಜಾಹ್ನವಿ ಯಶಸ್ವಿಯಾಗಿದ್ದಾಳೆ. ಲಕ್ಷ್ಮೀ ನಿವಾಸದಲ್ಲಿ ಕುಚುಕು ದೋಸ್ತಿ. ಹೆತ್ತಮ್ಮನೇ ಕತ್ತಲೆಯಲ್ಲಿ ಬಿಟ್ಟು ಹೊರಟಾಗ.. ವೆಂಕಿಯ ಬದುಕಿಗೆ ಗೆಳೆಯನಾಗಿ ಎಂಟ್ರಿ ಕೊಟ್ಟ ಜಯಂತ್ ಎನ್ನುವ ಸಾಲುಗಳೊಂದಿಗೆ ಹೊಸ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇಷ್ಟು ದಿನಗಳಿಂದ ರಹಸ್ಯವಾಗಿಯೇ ಉಳಿದಿದ್ದ ಜಯಂತ್‌ನ ಜನ್ಮ ರಹಸ್ಯ ಕೊನೆಗೂ ರಿವೀಲ್ ಆಗಿದೆ. ವೈದೇಹಿ ಯಾರು ಎನ್ನುವ ಪ್ರಶ್ನೆಗೆ ಜಯಂತ್ ಉತ್ತರ ಕೊಟ್ಟಿದ್ದಾನೆ. ಜಯಂತ್‌ನನ್ನು ಮನಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗುವಲ್ಲಿ ಜಾಹ್ನವಿ ಯಶಸ್ವಿಯಾಗಿದ್ದಾಳೆ. ಮನಶಾಸ್ತ್ರಜ್ಞರ ಬಳಿ ಜಯಂತ್ ಒಂದೊಂದೇ ರಹಸ್ಯವನ್ನು ಸಹ ರಿವೀಲ್ ಮಾಡಿದ್ದಾನೆ. ವೈದೇಹಿ ಯಾರು ಎನ್ನುವ ಪ್ರಶ್ನೆಗೆ ಜಯಂತ್ ಉತ್ತರ ಕೊಟ್ಟಿದ್ದಾನೆ.

ವೈದೇಹಿ ಅರ್ಜುನ್ ಅವರ ತಾಯಿ ಅಂತ ಹೇಳಿದ್ದಾನೆ. ವೆಂಕಿ ಅಣ್ಣ ಅವರ ತಾಯಿನೇ ವೈದೇಹಿ ಎನ್ನುವುದನ್ನ ಜಾಹ್ನವಿ ಪತ್ತೆ ಮಾಡಿದ್ದಾಳೆ. ಜಾಹ್ನವಿ ಈ ಹಿಂದೆ ಲಕ್ಷ್ಮೀ ಅವರ ಬಳಿ ವೈದೇಹಿ ಅವರ ಪೋಟೋ ತೋರಿಸಿದ್ದಳು. ಆಗ ಸತ್ಯ ಗೊತ್ತಾಗಿತ್ತು. ಇದೀಗ ಈ ವಿಚಾರಕ್ಕೆ ಜಯಂತ್‌ನಿಂದ ಕ್ಲಾರಿಟಿ ಸಿಕ್ಕಂತಾಗಿದೆ. ಅಲ್ಲದೆ ವೆಂಕಿಯನ್ನು ನೋಡಿದಾಗೆಲ್ಲವೂ ಜಯಂತ್ ದೂರವೇ ಸರಿಯುತ್ತಿದ್ದ, ಸಿಡಿದು ಬೀಳುತ್ತಿದ್ದ. ಇದೀಗ ಈ ಪ್ರಶ್ನೆ - ಗೊಂದಲಗಳಿಗೂ ಉತ್ತರ ಸಿಗುವ ಟೈಮ್ ಬಂದಿದೆ.
Lakshmi Nivasa Serial: ವೆಂಕಿ (ಅರ್ಜುನ್) - ಜಯಂತ್ ಸ್ನೇಹ ರಹಸ್ಯ ಬಯಲು
ಇನ್ನು ವೆಂಕಿ ಹಾಗೂ ಜಯಂತ್ ಇಬ್ಬರು ಹೇಗೆ ಸ್ನೇಹಿತರಾಗಿದ್ದರು. ಜಯಂತ್‌ಗೆ ವೆಂಕಿ ಎಷ್ಟೊಂದು ಆತ್ಮೀಯ ಗೆಳೆಯ ಆಗಿದ್ದ ಎನ್ನುವ ವಿಷಯವೂ ಸಹ ಈಗ ರಿವೀಲ್ ಆಗಿದೆ. ಅನಾಥ ಆಶ್ರಮದಲ್ಲಿ ಅರ್ಜುನ್ ಅಂದ್ರೆ ವೆಂಕಿಯ ಪರಿಚಯವಾಗಿತ್ತು.
ನನ್ನ ಜೀವನಕ್ಕೆ ಬೆಳಕಾಗಿ ಬಂದವನು ಅರ್ಜುನ, ಅವರ ತಾಯಿಯ ಮದುವೆಯು ಅವರ ತಾತನಿಗೆ ಇಷ್ಟ ಇರಲಿಲ್ಲವಂತೆ ಅವನಿಗೆ ಆ ಮನೆಯಲ್ಲಿ ಚಿತ್ರ ಹಿಂಸೆ ಕೊಡುತ್ತಿದ್ದರಂತೆ ಅವನ ಕಷ್ಟವನ್ನ ನೋಡೋಕೆ ಆಗದೆ ಅನಾಥ ಆಶ್ರಮಕ್ಕೆ ಸೇರಿಸಿದ್ದರಂತೆ. ನಾವಿಬ್ಬರು ಆಟವಾಡಿಕೊಂಡು - ಪಾಠ ಕೇಳಿಕೊಂಡು ತುಂಬಾನೇ ಖುಷಿ - ಖುಷಿಯಾಗಿ ಇದ್ವಿ ಅಂತ ಹಳೆಯ ವಿಷಯಗಳನ್ನೆಲ್ಲವನ್ನೂ ಜಯಂತ್ ರಿವೀಲ್ ಮಾಡಿದ್ದಾನೆ. ಇನ್ನೂ ಏನೆಲ್ಲ ವಿಷಯಗಳನ್ನು ರಿವೀಲ್ ಮಾಡಬಹುದು ಎನ್ನುವ ಕುತೂಹಲ ವೀಕ್ಷಕರಲ್ಲಿ ಇದೆ.












Click it and Unblock the Notifications