ರಾತ್ರಿ ಹೊತ್ತು ಇದೊಂದು ಕೆಲಸ ಮಾಡಿದರೆ ಸುಲಭವಾಗಿ ಜಿರಳೆಗಳನ್ನು ಓಡಿಸಬಹುದು!

ಅನೇಕ ಅಡುಗೆ ಮನೆಗಳಲ್ಲಿ ಜಿರಳೆಗಳು ತಮ್ಮ ನೆಲೆ ಕಂಡುಕೊಂಡಿರುತ್ತವೆ. ರಾತ್ರಿಯಾಗುತ್ತಿದ್ದ ಹಾಗೆ ಜಿರಳೆಗಳು ಹೊರ ಬಂದು ಇಡೀ ಅಡುಗೆ ಮನೆಯಲ್ಲಿ ಓಡಾಟ ಶುರು ಮಾಡಿಕೊಂಡು ಬಿಡುತ್ತವೆ. ಜಿರಳೆಗಳು ಆಹಾರವನ್ನು ಕಲುಷಿತಗೊಳಿಸುತ್ತವೆ. ರೋಗಗಳು ಹರಡುವುದಕ್ಕೂ ಕಾರಣವಾಗುತ್ತದೆ. ಜಿರಳೆಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ದುಬಾರಿ ಕೆಮಿಕಲ್‌ಗಳು ಲಭ್ಯವಿದೆ. ಆದರೆ ಇದರ ಬಳಕೆ ಅಪಾಯಕಾರಿಯಾಗಲೂ ಬಹುದು. ರಾಸಾಯನಿಕಗಳ ಬದಲಿಗೆ, ಕೆಲವು ಸರಳ ಮನೆಮದ್ದುಗಳನ್ನು ಬಳಸುವ ಮೂಲಕವೂ ಜಿರಳೆಗಳನ್ನು ಓಡಿಸಬಹುದು.

ಅಡುಗೆಮನೆಯನ್ನು ಸ್ವಚ್ಛವಾಗಿ ಮತ್ತು ನೈರ್ಮಲ್ಯವಾಗಿಡುವುದು ಪ್ರತಿಯೊಂದು ಕುಟುಂಬದ ಮೊದಲ ಆದ್ಯತೆಯಾಗಿರುವುದು. ಇದರ ಹೊರತಾಗಿಯೂ, ಜಿರಳೆಗಳು ಹೆಚ್ಚಾಗಿ ಅಡುಗೆಮನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅವು ಅಡುಗೆಮನೆಯನ್ನು ಗಲೀಜು ಮಾಡುವುದಲ್ಲದೆ, ಆಹಾರವನ್ನು ಕಲುಷಿತಗೊಳಿಸಬಹುದು. ವಿವಿಧ ರೀತಿಯ ಸೋಂಕುಗಳನ್ನು ಉಂಟುಮಾಡಬಹುದು. ಆದ್ದರಿಂದ, ಜನರು ಹೆಚ್ಚಾಗಿ ದುಬಾರಿ ರಾಸಾಯನಿಕ ಉತ್ಪನ್ನಗಳನ್ನೇ ಆಶ್ರಯಿಸುತ್ತಾರೆ. ಆದರೆ, ಕೆಲವು ಸರಳ, ಸುರಕ್ಷಿತ ಮತ್ತು ಮನೆಮದ್ದುಗಳು ಜಿರಳೆಗಳನ್ನು ತೊಡೆದುಹಾಕಲು ಸಾಕಷ್ಟು ಪರಿಣಾಮಕಾರಿಯಾಗಿರಲಿದೆ.

Natural Kitchen

ಈ ಮನೆಮದ್ದು ಪ್ರಯತ್ನಿಸಿದರೆ ಜಿರಳೆ ಕಾಟದಿಂದ ಮುಕ್ತಿ

ದಿನನಿತ್ಯ ಬಳಸುವ ಕೆಲವು ಸಾಮಾನ್ಯ ಗೃಹೋಪಯೋಗಿ ವಸ್ತುಗಳು ಜಿರಳೆಗಳನ್ನು ದೂರವಿಡಲು ಸಹಾಯ ಮಾಡುತ್ತವೆ. ಮುಖ್ಯವಾಗಿ, ಮಲಗುವ ಮುನ್ನ ಅಡುಗೆಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಸಿಂಕ್, ಗ್ಯಾಸ್ ಸ್ಟೌವ್ ಮತ್ತು ಅಡುಗೆಮನೆಯ ಒಲೆಯಿಂದ ಉಳಿದಿರುವ ಆಹಾರ ಅಥವಾ ನೀರನ್ನು ಸಂಪೂರ್ಣವಾಗಿ ತೆಗೆದುಹಾಕಿ. ಏಕೆಂದರೆ ಇವು ಜಿರಳೆಗಳ ಅತ್ಯಂತ ಇಚ್ಟದ ಜಾಗಗಳಾಗಿರುತ್ತವೆ. ಅಡುಗೆ ಮನೆ ಸ್ಲಾಬ್‌ ಅನ್ನು ನಿತ್ಯ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಒಣ ಅಡುಗೆಮನೆಯನ್ನು ನಿರ್ವಹಿಸುವುದರಿಂದ ಜಿರಳೆ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಪಲಾವ್‌ ಎಲೆ ಮತ್ತು ಲವಂಗದ ಬಳಕೆ

ಹೆಚ್ಚುವರಿಯಾಗಿ, ಅಡುಗೆಮನೆಯ ಮೂಲೆಗಳಲ್ಲಿ, ಸಿಂಕ್ ಸುತ್ತಲೂ ಮತ್ತು ಜಿರಳೆಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಪಲಾವ್‌ ಎಲೆಗಳು ಅಥವಾ ಲವಂಗಗಳನ್ನು ಇಡಬಹುದು. ಜಿರಳೆಗಳು ತಮ್ಮ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ, ಹಾಗಾಗಿ ಈ ಎಲೆ ಮತ್ತು ಲವಂಗ ಇರುವ ಜಾಗವನ್ನು ಜಿರಳೆಗಳು ಬಿಟ್ಟು ಓಡುತ್ತವೆ. ಈ ಪರಿಹಾರವು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಹಾಗಾಗಿ ಮಕ್ಕಳು, ಮುದುಕರು ಇದ್ದ ಮನೆಗಳಲ್ಲಿಯೂ ಇದನ್ನು ಬಳಸುವುದು ಅತ್ಯಂತ ಸುಲಭ ಮತ್ತು ಸುರಕ್ಷಿತವಾಗಿರುತ್ತದೆ. ಇದು ಎಲ್ಲರೂ ಬಳಸಬಹುದಾದ ಪರಿಹಾರವಾಗಿದೆ.

ರಾತ್ರಿ ಕಸದ ಬುಟ್ಟಿ ಹೊರಗಿಡಿ

ರಾತ್ರಿಯಲ್ಲಿ ಕಸದ ಬುಟ್ಟಿಯನ್ನು ಖಾಲಿ ಮಾಡುವುದು ಒಳ್ಳೆಯದು. ಯಾವಾಗಲೂ ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಕಸದ ಬುಟ್ಟಿಯನ್ನು ಇಡಬೇಡಿ. ಒಂದು ವೇಳೆ ಅಡುಗೆ ಮನೆಯಲ್ಲಿ ಕಸದ ಬುಟ್ಟಿ ಇಡಲೇ ಬೇಕು ಎಂದಾದರೆ ಅದನ್ನು ಮುಚ್ಚಿಡಿ. ಅಲ್ಲದೆ, ರಾತ್ರಿ ಸಿಂಕ್‌ನಲ್ಲಿ ಯಾವ ಪಾತ್ರೆಯನ್ನೂ ಉಳಿಸಬಾರದು. ಸಿಂಕ್‌ ಅನ್ನು ಚೆನ್ನಾಗಿ ತೊಳೆದು ಒಣಗಲು ಬಿಡಿ. ಅಡುಗೆಮನೆಯ ನೆಲವನ್ನು ಕೂಡಾ ಚೆನ್ನಾಗಿ ಒರೆಸಿ ಒಣಗಿಸಬೇಕು. ಯಾಕೆಂದರೆ ಜಿರಳೆಗಳು ತೇವಾಂಶವುಳ್ಳ ಪ್ರದೇಶಗಳಲ್ಲಿ ಹೆಚ್ಚಾಗಿ ಓಡಾಡುತ್ತವೆ ಮತ್ತು ಬೆಳೆಯುತ್ತವೆ. ಆದ್ದರಿಂದ, ಅಡುಗೆಮನೆಯನ್ನು ಸ್ವಚ್ಛವಾಗಿಡುವುದರ ಮೂಲಕ ಜಿರಳೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಇದು ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ಸರಳ ಅಭ್ಯಾಸ ಅಳವಡಿಸಿಕೊಳ್ಳಿ

ಈ ಸರಳ ಅಭ್ಯಾಸಗಳನ್ನು ಪ್ರತಿದಿನ ಅಳವಡಿಸಿಕೊಂಡರೆ, ಅಡುಗೆಮನೆಯಲ್ಲಿ ಜಿರಳೆ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ನಿಯಮಿತ ಶುಚಿಗೊಳಿಸುವಿಕೆ, ಒಣ ವಾತಾವರಣ ಮತ್ತು ನೈಸರ್ಗಿಕ ಪರಿಹಾರಗಳು ಜಿರಳೆ ಸಂತಾನೋತ್ಪತ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಜಿರಳೆಗಳ ಸಂಖ್ಯೆ ಅಧಿಕವಾಗಿದ್ದರೆ ಮತ್ತು ಮನೆಮದ್ದುಗಳು ಗಮನಾರ್ಹ ವ್ಯತ್ಯಾಸವನ್ನುಂಟುಮಾಡದಿದ್ದರೆ, ತಜ್ಞರ ಸಲಹೆ ಅಥವಾ ಸುರಕ್ಷಿತ ಕೀಟ ನಿಯಂತ್ರಣವನ್ನು ಪಡೆಯುವುದು ಉತ್ತಮ ಆಯ್ಕೆಯಾಗಿರಬಹುದು.

(ಬರಹ: ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+