ಕೇವಲ ಒಂದೂವರೆ ವರ್ಷದಲ್ಲಿ 20 ಕೋಟಿ ರೂ. ಮೌಲ್ಯದ ಕೃಷಿ ಸ್ಟಾರ್ಟ್ಅಪ್ ಕಟ್ಟಿದ ಬಿಬಿಎ ಪದವೀಧರನ ಕಮಾಲ್

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡುತ್ತಿರುವ ಯುವಜನರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದರ ಅರ್ಥ ಎನನ್ನಾದರೂ ಸಾಧಿಸಲು ದಶಕಗಳ ಅನುಭವವೇ ಬೇಕೆಂದಿಲ್ಲ, ಬದಲಿಗೆ ಸರಿಯಾದ ಮಾರ್ಗ ಹಾಗೂ ಸಾಧಿಸುವ ಛಲವಿದ್ದರೆ ಸಾಕು ಎಂತಹ ಸಾಧನೆಯನ್ನಾದರೂ ಕೂಡ ಮಾಡಬಹುದು. ಇದಕ್ಕೆ ಹೈದರಾಬಾದ್‌ನ 23 ವರ್ಷದ ಯುವಕ ಸಾಯಿತೇಜ ಗೋಪಿಶೆಟ್ಟಿ ಎನ್ನುವವರೇ ಉದಾಹರಣೆ.

ಹೌದು, ಹೈದರಾಬಾದ್‌ನ ವಾಕ್ಸೆನ್ ವಿಶ್ವವಿದ್ಯಾಲಯದಲ್ಲಿ ಬಿಬಿಎ ವ್ಯಾಸಂಗ ಮುಗಿಸಿದ ತಕ್ಷಣವೇ ಇವರು ತಮ್ಮದೇ ಆದ ಕೃಷಿಗೆ ಸಂಬಂಧಿಸಿದ ಒಂದು ಸ್ಟಾರ್ಟ್ಅಪ್ ಆರಂಭಿಸಿದ್ದಾರೆ. ಸ್ಟಾರ್ಟ್ಅಪ್ ಆರಂಭಿಸಿರುವುದು ವಿಶೇಷವಲ್ಲ. ಬದಲಿಗೆ ಶುರುವಾಗಿ ಕೇವಲ ಒಂದೂವರೆ ವರ್ಷದಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಇದೀಗ ಇವರ ಈ ಅದ್ಭುತ ಸಾಧನೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಯುವ ಪೀಳಿಗೆಗೆ ದೊಡ್ಡ ಮಾದರಿಯಾಗಿದ್ದಾರೆ.

Saiteja

ರೈತರ ಬೆನ್ನಲುಬಾಗಿ ನಿಂತ 'ಲ್ಯುಮಿನಾರ ಲೆಗಸಿ ಪ್ರೈ. ಲಿಮಿಟೆಡ್'

ಸಾಯಿತೇಜ ಗೋಪಿಶೆಟ್ಟಿ ಅವರು ಶುರುಮಾಡಿರುವ ಈ ಕಂಪನಿಯ ಹೆಸರು 'ಲ್ಯುಮಿನಾರ ಲೆಗಸಿ ಪ್ರೈ. ಲಿಮಿಟೆಡ್ʼ. ಮುಖ್ಯವಾಗಿ ಈ ಸಂಸ್ಥೆ ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬೀಜಗಳು, ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು ಹಾಗೂ ಸುಸ್ಥಿರ ಕೃಷಿ ಪರಿಹಾರಗಳನ್ನ ಒದಗಿಸುವ ಮೂಲಕ ಗಮನ ಸೆಳೆಯುತ್ತಿದೆ. ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ನೆರವಾಗುವ ಉದ್ದೇಶದಿಂದ ಅತ್ಯುತ್ತಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಈ ಯುವ ಉದ್ಯಮಿಯ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

2028ರ ವೇಳೆಗೆ 100 ಕೋಟಿ ರೂಪಾಯಿ ವಹಿವಾಟಿನ ಗುರಿ

ಕೇವಲ 18 ತಿಂಗಳಲ್ಲಿ 20 ಕೋಟಿ ರೂಪಾಯಿಗಳ ಮೈಲಿಗಲ್ಲು ತಲುಪಿರುವ ಸಾಯಿತೇಜ ಅವರ ಕನಸು ಇಲ್ಲಿಗೇ ನಿಂತಿಲ್ಲ ನೋಡಿ. ಮುಂದಿನ ದಿನಗಳಲ್ಲಿ ತಮ್ಮ ಕೃಷಿ ಸ್ಟಾರ್ಟ್ಅಪ್ ಅನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ರೂಪಿಸಿರುವ ಅವರು, 2028ರ ವೇಳೆಗೆ ಕಂಪನಿಯ ಮೌಲ್ಯವನ್ನು 100 ಕೋಟಿ ರೂಪಾಯಿಗಳಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿರುವ ನಿಜವಾದ ಸಮಸ್ಯೆಗಳನ್ನ ಗುರುತಿಸಿ, ಅವುಗಳಿಗೆ ಪರಿಹಾರ ಒದಗಿಸುವ ಅವರ ದೃಷ್ಟಿಕೋನ ಮತ್ತು ಪರಿಶ್ರಮ ಈ ಯಶಸ್ಸಿಗೆ ಪ್ರಮುಖ ಕಾರಣ. ಎಜ್‌ ಇಸ್‌ ಜಸ್ಟ್‌ ಅ ನಂಬರ್‌ (ವಯಸ್ಸು ಕೇವಲ ಒಂದು ಸಂಖ್ಯೆ) ಎನ್ನುವ ಇಂಗ್ಲೀಷ್‌ ವ್ಯಾಖ್ಯಾನವನ್ನಾ ಈ ಸಾಬೀತು ಮಾಡಿ ತೋರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ

ಎಕ್ಸ್ ಖಾತೆಯಲ್ಲಿ ವಿಕಾಸ್‌ ಎನ್ನುವವರು ಸಾಯಿತೇಜ ಗೋಪಿಶೆಟ್ಟಿ ಅವರ ಈ ಸಾಧನೆಯನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ನೆಟ್ಟಿಗರು ಈ ಯುವ ಉದ್ಯಮಿಯ ಸಾಧನೆಗೆ ಅಚ್ಚರಿ ವ್ಯಕ್ತಪಡಿಸಿ, ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

"23ನೇ ವಯಸ್ಸಿಗೆ ಇದು ನಿಜಕ್ಕೂ ಅದ್ಭುತ ಸಾಧನೆ! ಬಿಬಿಎ ಮುಗಿಸಿ ಕೇವಲ 1.5 ವರ್ಷದಲ್ಲಿ 20 ಕೋಟಿಯ ಕೃಷಿ ಕಂಪನಿ ಕಟ್ಟುವುದು ಸಾಮಾನ್ಯ ಮಾತಲ್ಲ ಎಂದು ಬಳಕೆದಾರರೊಬ್ಬರು ಕೊಂಡಾಡಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, "ವಯಸ್ಸು ಯಶಸ್ಸನ್ನು ನಿರ್ಧರಿಸುವುದಿಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಛಲ ಯಶಸ್ಸು ತಂದುಕೊಡುತ್ತದೆ. 2028ರ ವೇಳೆಗೆ 100 ಕೋಟಿ ತಲುಪಲಿ" ಎಂದು ಹಾರೈಸಿದ್ದಾರೆ.

ಮತ್ತೊಬ್ಬರು "ಅವರ ಸಾಧನೆಗೆ ನನ್ನ ಮೆಚ್ಚುಗೆ ಇದೆ. ಆದರೆ, ಎಲ್ಲರಿಗೂ ಉನ್ನತ ಕಾಲೇಜುಗಳಲ್ಲಿ ಓದುವ ಹಾಗೂ ಪೋಷಕರ ಬೆಂಬಲ ಇರುವುದಿಲ್ಲ. ಹಳ್ಳಿಗಳ ಕಾಲೇಜುಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ಓದಿ ಇಂದು ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ನಾವು ಇಂದಿಗೂ ಹೋರಾಡುತ್ತಿದ್ದೇವೆ. ಇದು ಅವರ ಮೇಲಿನ ದ್ವೇಷವಲ್ಲ, ಕೇವಲ ವಾಸ್ತವ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+