ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಯುವಕ ಈಗ ಭಾರತದ ಬಾಹ್ಯಾಕಾಶ ರೂವಾರಿ: ಇದು ಪವನ್ ಕುಮಾರ್ ಚಂದನ ಯಶೋಗಾಥೆ

ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ರಾಕೆಟ್ ಉಡಾವಣೆಯ ಹೊಸ ಅಧ್ಯಾಯ ಆರಂಭವಾಗಿದೆ ಎನ್ನಬಹುದು. ಏಕೆಂದರೆ, ಇಸ್ರೋದಂತಹ ದೊಡ್ಡ ದೊಡ್ಡ ಸರ್ಕಾರಿ ಸಂಸ್ಥೆಗಳು ಮಾತ್ರ ಸಾಧಿಸುತ್ತಿದ್ದ ಮೈಲಿಗಲ್ಲನ್ನು ಇದೀಗ ಭಾರತದ ಖಾಸಗಿ ಸ್ಟಾರ್ಟ್ಅಪ್ 'ಸ್ಕೈರೂಟ್ ಏರೋಸ್ಪೇಸ್' ಸಾಧಿಸಿ ತೋರಿಸಿದೆ.

ಈ ಐತಿಹಾಸಿಕ ಸಾಧನೆಯ ಹಿಂದಿರುವ ಪ್ರಮುಖ ಮುಖ ಪವನ್ ಕುಮಾರ್ ಚಂದನ ಅವರು. ಶಾಲೆ ದಿನಗಳಲ್ಲಿ ಗಣಿತ ಎಂದರೆ ಹಿಂಜೆರಿಯುತ್ತಿದ್ದು, ಪರೀಕ್ಷೆಗಳಲ್ಲಿ ಪರದಾಡಿ ಕೇವಲ 51 ಅಂಕ ಪಡೆದ ಈ ಯುವಕ, ಇಂದು ನಮ್ಮ ದೇಶದ ಬಾಹ್ಯಾಕಾಶ ವಲಯದಲ್ಲಿ ಇದೀಗ 'ಭಾರತದ ಎಲಾನ್ ಮಸ್ಕ್' ಎಂದೇ ಕರೆಸಿಕೊಳ್ಳುತ್ತಿದ್ದಾರೆ.

Pawan Kumar Chandana

ಗಣಿತದ ಭಯದಿಂದ ಯಶಸ್ವಿ ಇಸ್ರೋ ವಿಜ್ಞಾನಿವರೆಗಿನ ಪಯಣ

1991ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಒಂದು ಮಧ್ಯಮ ವರ್ಗದ ಕುಟುಂಬನಲ್ಲಿ ಜನಿಸಿದ ಪವನ್ ಕುಮಾರ್ ಚಂದನ ಬೆಳೆದಿದ್ದೆಲ್ಲ ಹೈದರಾಬಾದ್‌ನಲ್ಲಿಯೇ. ಶಾಲಾ ದಿನಗಳಲ್ಲಿ ಗಣಿತವೆಂದರೆ ಅವರಿಗೆ ಕಬ್ಬಿಣದ ಕಡಲೆ ಎನ್ನುವಂತಿತ್ತು. ಒಮ್ಮೆ ಗಣಿತದಲ್ಲಿ ಕೇವಲ 51 ಅಂಕಗಳನ್ನಾ ಮಾತ್ರ ಪಡೆದಿದ್ದರು. ಆದರೆ, ಐಐಟಿ ಪ್ರವೇಶ ಪರೀಕ್ಷೆಯ ಸಿದ್ಧತೆ ಮಾಡಿಕೊಳ್ಳುವಾಗ ಅವರಿಗೆ ಗಣಿತದ ಮೇಲಿದ್ದ ಭಯ ನಿಧಾನಕ್ಕೆ ಒಲವಾಗಿ ಬದಲಾಯಿತು. ಹಾಗೆಯೇ ಪವನ್‌ ಅವರ ಕಠಿಣ ಪರಿಶ್ರಮದ ಫಲವಾಗಿ 2007ರಲ್ಲಿ ಐಐಟಿ ಖರಗ್‌ಪುರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರವೇಶ ಪಡೆದರು.

ಪದವಿ ಮುಗಿದ ತಕ್ಷಣ, ಲಕ್ಷಾಂತರ ರೂಪಾಯಿ ಸಂಬಳದ ಕಾರ್ಪೊರೇಟ್ ಕೆಲಸಗಳನ್ನ ಬಿಟ್ಟು, 2012ರಲ್ಲಿ ಇಸ್ರೋ ಸೇರಿಕೊಂಡರು. ಅಲ್ಲಿ ಭಾರತದ ಅತಿ ದೊಡ್ಡ ಬಾಹ್ಯಕಾಶ ಉಡಾವಣಾ ವಾಹನವಾದ GSLV Mk-3 ಮತ್ತು SSLV ಯೋಜನೆಗಳಲ್ಲಿ ಡೆಪ್ಯುಟಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.

ಭಾರತದ ಮೊದಲ ಖಾಸಗಿ ರಾಕೆಟ್

ಇಸ್ರೋದಲ್ಲಿ ಕೆಲಸ ಮಾಡುವಾಗ ಪವನ್ ಅವರಿಗೆ ಭಾರತದಲ್ಲಿ ಖಾಸಗಿ ರಾಕೆಟ್ ಉದ್ಯಮವನ್ನು ಬೆಳೆಸುವ ದೊಡ್ಡ ಕನಸಿತ್ತಂತೆ. ವಿದೇಶಕ್ಕೆ ಹೋಗಿ ಸ್ಪೇಸ್‌ಎಕ್ಸ್‌ನಂತಹ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶವಿದ್ದರೂ, ಭಾರತದಲ್ಲೇ ಏನಾದರೂ ಸಾಧಿಸಬೇಕು ಎಂಬ ಛಲ ಅವರಲ್ಲಿತ್ತು. 2018ರಲ್ಲಿ ಭಾರತ ಸರ್ಕಾರ ಬಾಹ್ಯಾಕಾಶ ವಲಯವನ್ನು ಖಾಸಗಿಯವರಿಗೆ ನೀಡುವ ನಿರ್ಧಾರ ಮಾಡಿದಾಗ, ಪವನ್ ಕುಮಾರ್ ಚಂದನ ತಮ್ಮ ಇಸ್ರೋ ಸಹೋದ್ಯೋಗಿ ನಾಗ ಭರತ್ ಡಾಕಾ ಅವರೊಂದಿಗೆ ಸೇರಿ ಹೈದರಾಬಾದ್‌ನಲ್ಲಿ 'ಸ್ಕೈರೂಟ್ ಏರೋಸ್ಪೇಸ್' ಸ್ಥಾಪಿಸಿದರು.

2020ರಲ್ಲಿ ಭಾರತದ ಮೊದಲ ಖಾಸಗಿ ರಾಕೆಟ್ ಎಂಜಿನ್ ಅನ್ನು ಸ್ಕೈರೂಟ್ ಯಶಸ್ವಿಯಾಗಿ ಪರೀಕ್ಷಿಸಿತು. ಬಳಿಕ ನವೆಂಬರ್ 18, 2022ರಲ್ಲಿ ಸಬ್-ಆರ್ಬಿಟಲ್ ರಾಕೆಟ್ 'ವಿಕ್ರಮ್-ಎಸ್' ಉಡಾವಣೆ ಮಾಡುವ ಮೂಲಕ ಭಾರತದ ಮೊದಲ ಖಾಸಗಿ ರಾಕೆಟ್ ಉಡಾವಣೆ ಮಾಡಿದ ಕೀರ್ತಿಗೆ ಪಾತ್ರವಾಯಿತು.

ಪ್ರಧಾನಿ ಮೋದಿಯವರ ಮೆಚ್ಚುಗೆ

ಇದೀಗ ಜುಲೈ 18 ಅಂದರೆ ಇಂದು ಶ್ರೀಹರಿಕೋಟಾದಿಂದ 'ವಿಕ್ರಮ್-1' ಆರ್ಬಿಟಲ್ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಸ್ಕೈರೂಟ್ ಮತ್ತೊಂದು ಇತಿಹಾಸ ನಿರ್ಮಿಸಿದೆ. ಈ ಅದ್ಭುತ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಸ್ಕೈರೂಟ್ ತಂಡದೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಎಕ್ಸ್ (X) ಖಾತೆಯಲ್ಲಿ "ವಿಕ್ರಮ್-1ರ ಯಶಸ್ವಿ ಉಡಾವಣೆ ಭಾರತದ ಬಾಹ್ಯಾಕಾಶ ಪಯಣದಲ್ಲಿ ಒಂದು ನಿರ್ಣಾಯಕ ಘಟ್ಟ. ಖಾಸಗಿ ವಲಯದ ಭಾಗವಹಿಸುವಿಕೆ ಹೊಸ ಆವಿಷ್ಕಾರಗಳನ್ನು ಉತ್ತೇಜಿಸುತ್ತಿದೆ" ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು ಸ್ಕೈರೂಟ್ ಏರೋಸ್ಪೇಸ್ ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತಿದೆ. ಉಪಗ್ರಹ ಉಡಾವಣೆಯಲ್ಲಿ 'ಬಾಹ್ಯಾಕಾಶದ ಉಬರ್' ಆಗುವ ಗುರಿಯನ್ನು ಪವನ್ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+