ವೈಭವ್ ಸೂರ್ಯವಂಶಿ ಈ ಕೆಲ್ಸ ಮಾಡಿದ್ರೆ ಮೈಮೇಲೆ ತುಂಡು ಬಟ್ಟೆ ಇಲ್ಲದೆ ಕುಣಿದಾಡುತ್ತೇನೆ: ಪಾಕ್ ಮಾಜಿ ಕ್ರಿಕೆಟರ್ ಚಾಲೆಂಜ್

Vaibhav Sooryavanshi: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಇತ್ತೀಚೆಗೆ ಶ್ರೀಲಂಕಾ 'ಎ' ವಿರುದ್ಧದ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಮಯದಲ್ಲಿ ವೈಭವ್‌ಗೆ ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್ ಸವಾಲು ಹಾಕಿದ್ದಾರೆ. ಇದು ಇದೀಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಸದ್ಯ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಇದನ್ನ ಕಂಡ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Vaibhav Sooryavanshi Faces Challenge From Pakistan Ex-Pacer Tanveer Ahmed After Record Knock

ತನ್ವೀರ್ ಅಹ್ಮದ್ ಹೇಳಿಕೆ ಭಾರಿ ವೈರಲ್

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದನ್ನು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ ನಡುವೆಯೇ ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್ ಅಹ್ಮದ್ ನೀಡಿರುವ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬೆತ್ತಲೆಯಾಗಿ ಓಡಾಡುವುದಾಗಿ ಘೋಷಣೆ

ಮುಂಬರುವ ಪ್ರವಾಸದ ವೇಳೆ ಭಾರತ ತಂಡದ ಪರ ವೈಭವ್ ಸೂರ್ಯವಂಶಿ ಐರ್ಲೆಂಡ್ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ತನ್ವೀರ್ ಅಹ್ಮದ್, 'ವೈಭವ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶತಕ ಗಳಿಸಿದರೆ, ನಾನು ಪಾಕಿಸ್ತಾನದ ಲಾಹೋರ್‌ನ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುವುದಾಗಿ,' ಘೋಷಣೆ ಮಾಡಿದ್ದಾರೆ.

ವೈಭವ್ ವಯಸ್ಸಿನ ವಿಚಾರದಲ್ಲಿ ಲೇವಡಿ

ಅಲ್ಲದೆ 'ಈ ಆಟಗಾರನಿಗೆ 15 ವರ್ಷ ವಯಸ್ಸು ಎಂದು ಹೇಳಲಾಗುತ್ತಿದೆ. ಆದರೆ ಆತನ ಶರೀರ ಮತ್ತು ಆಟದ ಪ್ರೌಢಿಮೆಯನ್ನು ನೋಡಿದರೆ ಕನಿಷ್ಠ 20 ರಿಂದ 22 ವರ್ಷ ಇರಬಹುದು. ಭಾರತದಲ್ಲಿ ಆಟಗಾರರ ವಯಸ್ಸಿನ ವಿಚಾರದಲ್ಲಿ ವಂಚನೆ ನಡೆಯುತ್ತಿದೆ,' ಎಂದು ತನ್ವೀರ್ ನೇರವಾಗಿ ಟೀಕಿಸಿದ್ದಾರೆ. ತನ್ವೀರ್ ಕೇವಲ ವಯಸ್ಸಿನ ಬಗ್ಗೆ ಮಾತ್ರವಲ್ಲದೆ, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ತಂತ್ರದ ಮೇಲೂ ಲೇವಡಿ ಮಾಡಿದ್ದಾರೆ.

'ಕೇವಲ ಸಣ್ಣ ಮೈದಾನಗಳಲ್ಲಿ ಮತ್ತು ಸಾಧಾರಣ ಬೌಲಿಂಗ್ ದಾಳಿಯ ವಿರುದ್ಧ ರನ್ ಗಳಿಸುವುದರಿಂದ ಯಾರೂ ಉತ್ತಮ ಆಟಗಾರನಾಗಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಬೌಲರ್‌ಗಳ ಎದುರು ಬೌನ್ಸ್‌ ಪಿಚ್‌ಗಳಲ್ಲಿ ಈ ಬ್ಯಾಟಿಂಗ್ ಶೈಲಿ ನಡೆಯುವುದಿಲ್ಲ. ನಿಜವಾದ ವೇಗ ಮತ್ತು ಸ್ವಿಂಗ್ ಎದುರಿಸುವಾಗ ಇವರ ಅಸಲಿ ಆಟ ಬಯಲಾಗುತ್ತದೆ.' ಎಂದು ವ್ಯಂಗ್ಯವಾಡಿದ್ದಾರೆ.

ತನ್ವೀರ್‌ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ತಿರುಗೇಟು

ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತನ್ವೀರ್ ಅಹ್ಮದ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ಪಾಕಿಸ್ತಾನದ ಆಟಗಾರರೇ ವಯಸ್ಸಿನ ವಿಷಯದಲ್ಲಿ ಮೋಸ ಮಾಡುವುದರಲ್ಲಿ ಎತ್ತಿದ ಕೈ. ಶಾಹೀದ್ ಅಫ್ರಿದಿ ಸೇರಿದಂತೆ ಹಲವು ಪಾಕ್ ಆಟಗಾರರ ಅಸಲಿ ವಯಸ್ಸು ಮತ್ತು ದಾಖಲೆಗಳಲ್ಲಿನ ವಯಸ್ಸಿಗೆ ಭಾರಿ ವ್ಯತ್ಯಾಸವಿರುವುದು ಜಗತ್ತಿಗೇ ಗೊತ್ತು. ಹೀಗಿರುವಾಗ ಭಾರತದ ಯುವ ಪ್ರತಿಭೆಯ ಯಶಸ್ಸನ್ನು ಸಹಿಸದ ತನ್ವೀರ್ ಅಹ್ಮದ್ ಇಂತಹ ಆಧಾರರಹಿತ ಆರೋಪ ಮಾಡುತ್ತಿದ್ದಾರೆ.' ಎಂದು ನೆಟ್ಟಿಗರು ತಿರುಗೇಟು ನೀಡಿದ್ದಾರೆ.

ಬಿಸಿಸಿಐ ಈಗಾಗಲೇ ವಯಸ್ಸಿನ ವಂಚನೆಯನ್ನು ತಡೆಯಲು ಅತ್ಯಂತ ಕಠಿಣವಾದ ಬೋನ್ ಏಜ್ ಟೆಸ್ಟ್ ಅನ್ನು ಜಾರಿಗೆ ತಂದಿದ್ದು, ವೈಭವ್ ಎಲ್ಲಾ ನಿಯಮಾವಳಿಗಳನ್ನು ಪೂರೈಸಿಯೇ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ. ಸದ್ಯ ತನ್ವೀರ್ ಅಹ್ಮದ್ ಅವರ ಈ ಹೇಳಿಕೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+