Fact Check: ಗರ್ಲ್‌ಫ್ರೆಂಡ್‌ ಜೊತೆ ವೈಭವ್ ಸೂರ್ಯವಂಶಿ, ವಿಡಿಯೋದ ಅಸಲಿಯತ್ತೇನು?

Vaibhav Sooryavanshi: ಭಾರತೀಯ ಕ್ರಿಕೆಟ್‌ನ ಯುವ ಸ್ಫೋಟಕ ಬ್ಯಾಟರ್ ಈಗ ಬರಿ ಮೈದಾನದಲ್ಲಿ ಅಷ್ಟೇ ಅಲ್ಲದೆ, ಮದಾನದಿಂದ ಆಚೆಗೂ ಸಖತ್ ಸುದ್ದಿಯಲ್ಲಿದ್ದಾರೆ. ಈ ನಡುವೆಯೇ ಅವರು ಹುಡುಗಿಯೊಬ್ಬರ ಕೈಹಿಡಿದುಕೊಂಡು ಕಾರಿನಿಂದ ಕೆಳಗಿಳಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್‌ ಆಗುತ್ತಿದೆ. ಹಾಗಾದ್ರೆ ಇದರ ಅಸಲಿ ಸತ್ಯವೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸಿಡಿಲಬ್ಬರದ ಆಟದ ಮೂಲಕವೇ ನಿರಂತರವಾಗಿ ಸುದ್ದಿಯಲ್ಲಿರುವ ವೈಭವ್ ಸೂರ್ಯವಂಶಿ ಇದೀಗ ಮೈದಾನದ ಹೊರಗೂ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರೀಲಂಕಾ 'ಎ' ವಿರುದ್ಧದ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದ ಈ 15 ವರ್ಷದ ಯುವ ಆಟಗಾರ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಿಂದ ಟ್ರೆಂಡ್ ಆಗುತ್ತಿದ್ದಾರೆ. ರೀಲ್ಸ್‌ನಲ್ಲಿ ವೈಭವ್ ತಮ್ಮ ಗರ್ಲ್ಸ್‌ಫ್ರೆಂಡ್ ಜೊತೆಗಿದ್ದಾರೆ ಎನ್ನಲಾದ ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

Fact Check Vaibhav Sooryavanshi Viral AI Video With Girlfriend Truth Behind The Trending Reel

ವೈಭವ್ ಸೂರ್ಯವಂಶಿ ವಿಡಿಯೋದ ಅಸಲಿಯತ್ತೇನು?

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ರೀಲ್ ನೋಡುಗರಿಗೆ ಫುಲ್ ಮಜಾ ನೀಡುತ್ತಿದೆ. ಇದರಲ್ಲಿ ವೈಭವ್ ಸೂರ್ಯವಂಶಿ ಅವರು ತಮ್ಮ ಗೆಳತಿಯ ಜೊತೆ ರೋಮ್ಯಾಂಟಿಕ್ ಆಗಿ ಕಾರಿನಿಂದ ಕೆಳಗಿಳಿದು ಪೋಸ್ ನೀಡುತ್ತಿರುವಂತೆ ಬಿಂಬಿಸಲಾಗಿದೆ. ಆದರೆ ಅಸಲಿ ವಿಚಾರ ಏನೆಂದರೆ ಇದು ನೈಜ ವಿಡಿಯೋ ಅಲ್ಲ. ಇತ್ತೀಚಿನ ಅತ್ಯಾಧುನಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ಎಡಿಟೆಡ್ ವಿಡಿಯೋ ಇದಾಗಿದೆ.

ವಿಡಿಯೋ ಭಾರಿ ವೈರಲ್‌

ಕೇವಲ ಫೋಟೋಗಳಿಂದ ಈ ವಿಡಿಯೋ ರೂಪಾದಲ್ಲಿ ಎಡಿಟ್ ಮಾಡಲಾಗಿದ್ದು, ಮೊದಲ ನೋಟಕ್ಕೆ ಇದು ನಿಜವಾದ ವಿಡಿಯೋ ಎಂದೇ ನಂಬುವಂತಿದೆ. ಬ್ಯಾಕ್-ಟು-ಬ್ಯಾಕ್ ಶತಕ ಹಾಗೂ ಅರ್ಧಶತಕಗಳನ್ನು ಬಾರಿಸಿ ಇಂಟರ್ನೆಟ್ ಸೆನ್ಸೇಷನ್ ಆಗಿರುವ ವೈಭವ್ ಅವರ ಕ್ರೇಜ್ ಅನ್ನು ಬಳಸಿಕೊಂಡು ಅಭಿಮಾನಿಯೊಬ್ಬರು ಈ ಕ್ರಿಯೇಟಿವ್ ರೀಲ್ಸ್ ಅನ್ನು ಹಂಚಿಕೊಂಡಿದ್ದಾರೆ. ಇದು indiascrolls ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಂಡಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಹೇಳೋದೇನು?

ಈ ಎಐ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳು ತಮಾಷೆಯ ಕಮೆಂಟ್‌ಗಳನ್ನು ಹಾಕುತ್ತಾ ವೈಭವ್ ಅವರ ಕಾಲೆಳೆಯುತ್ತಿದ್ದಾರೆ. 'ಅಣ್ಣ, ಇನ್ನೂ 15 ವರ್ಷ ಅಷ್ಟೇ ವಯಸ್ಸು.. ಈಗಲೇ ಗರ್ಲ್ಸ್‌ಫ್ರೆಂಡ್ ಇದ್ದಾರೆಯಾ ನಿನಗೆ?,' ಎಂದು ಕೆಲವರು ತಮಾಷೆ ಮಾಡುತ್ತಿದ್ದರೆ. ಇನ್ನೂ ಕೆಲ ನೆಟ್ಟಿಗರು ಇತ್ತೀಚೆಗಷ್ಟೇ ಪಾಕ್ ಮಾಜಿ ಆಟಗಾರ ತನ್ವೀರ್ ಅಹ್ಮದ್ ಮಾಡಿದ್ದ ವಯಸ್ಸಿನ ಆರೋಪವನ್ನು ಇದಕ್ಕೆ ಲಿಂಕ್ ಮಾಡಿದ್ದಾರೆ. 'ಇದನ್ನು ನೋಡಿದರೆ ಪಾಕಿಸ್ತಾನದ ತನ್ವೀರ್ ಅಹ್ಮದ್ ನಾಳೆ ಮತ್ತೊಂದು ಪ್ರೆಸ್ ಮೀಟ್ ಮಾಡಿ ವೈಭವ್‌ಗೆ ಮದುವೆ ವಯಸ್ಸಾಗಿದೆ ಅಂತ ಆರೋಪ ಮಾಡಿದರೂ ಆಶ್ಚರ್ಯವಿಲ್ಲ,' ಎಂದು ಲೇವಡಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಮೈದಾನದಲ್ಲಿ ಬೌಲರ್‌ಗಳನ್ನು ಬೆಂಡೆತ್ತಿ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿರುವ ವೈಭವ್ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಅತ್ಯಂತ ಲವಲವಿಕೆಯ, ರೋಮ್ಯಾಂಟಿಕ್ ಎಐ ಅವತಾರದಲ್ಲಿ ಕಾಣಿಸಿಕೊಂಡು ಸಖತ್ ವೈರಲ್ ಆಗುತ್ತಿದ್ದಾರೆ. ಇನ್ನು ಕ್ರಿಕೆಟ್ ಜಗತ್ತಿನಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಇಂತಹ ಎಐ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುವುದು ಸಾಮಾನ್ಯ. ಇದೀಗ ಆ ಸಾಲಿಗೆ ಕಿರಿಯ ವಯಸ್ಸಿನ ವೈಭವ್ ಸೂರ್ಯವಂಶಿ ಕೂಡ ಸೇರ್ಪಡೆಯಾಗಿದ್ದಾರೆ. ಕೇವಲ ಮನರಂಜನೆಗಾಗಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಸದ್ಯ ಕ್ರಿಕೆಟ್ ಪ್ರೇಮಿಗಳ ನಡುವೆ ಆರೋಗ್ಯಕರ ಚರ್ಚೆಯನ್ನು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+