ಲಕ್ ಅಂದ್ರೆ ಇದು! ಲೇ-ಆಫ್ ಅನ್ನೇ ಬಂಡವಾಳವಾಗಿಸಿಕೊಂಡ ಟೆಕ್ಕಿ, ಸೂಪರ್ ಮಾರ್ಕೆಟ್ ತೆರೆದು ಈಗ ದಿನಕ್ಕೆ 50,000 ರೂ. ಗಳಿಕೆ

ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಲೇ-ಆಫ್ ಎಂಬುದು ಸಾಮಾನ್ಯವಾಗಿದೆ. ಕೈಯಲ್ಲಿದ್ದ ಕೆಲಸ ಕಳೆದುಕೊಂಡಾಗ ಆತಂಕಕ್ಕೊಳಗಾಗುವುದು ಸಹಜ. ಆದರೆ, ಇದೇ ಆತಂಕವನ್ನು ಅವಕಾಶವನ್ನಾಗಿ ಪರಿವರ್ತಿಸಿ ಯಶಸ್ಸು ಸಾಧಿಸಿದ್ದಾರೆ ಶ್ರೀಲಂಕಾದ ಯುವ ಸಾಫ್ಟ್‌ವೇರ್ ಎಂಜಿನಿಯರ್. ಇದ್ದಕ್ಕಿದ್ದಂತೆ ಕೆಲಸ ಹೋದಾಗ ಕಂಗೆಡಲಿಲ್ಲ ಈ ಯುವಕ. ಬದಲಾಗಿ, ತಮ್ಮದೇ ಹಳ್ಳಿಯಲ್ಲಿ ಒಂದು ಪುಟ್ಟ ಸೂಪರ್ ಮಾರ್ಕೆಟ್ ಆರಂಭಿಸಿ, ಇಂದು ಪ್ರತಿದಿನ ಬರೋಬ್ಬರಿ 50,000 ರೂ. ವಹಿವಾಟು ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸವಾಲನ್ನು ಅವಕಾಶವಾಗಿ ಬದಲಿಸಿದ ಸಾಹಸ

ಶ್ರೀಲಂಕಾದ ಸಮಿತಾ ಸುಲಕ್ಕನ ಎಂಬುವವರೇ ಈ ಸಾಧನೆ ಮಾಡಿದ ಯುವಕ. ಇತ್ತೀಚೆಗೆ ವೃತ್ತಿಪರರ ನೆಟ್‌ವರ್ಕಿಂಗ್ ತಾಣವಾದ ಲಿಂಕ್ಡ್‌ಇನ್‌ನಲ್ಲಿ ತಮ್ಮ ಈ ಯಶೋಗಾಥೆಯನ್ನು ಹಂಚಿಕೊಂಡಿರುವ ಅವರು, ಉದ್ಯೋಗ ಕಡಿತದ ನಂತರ ತಾವು ಸವೆಸಿದ ಹಾದಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Software Engineer

"ಕೆಲವು ತಿಂಗಳ ಹಿಂದೆ ನನ್ನ ಕಂಪನಿಯಲ್ಲಿ ನಡೆದ ಭಾರೀ ಲೇ-ಆಫ್‌ನಿಂದಾಗಿ ನಾನು ಕೆಲಸ ಕಳೆದುಕೊಂಡೆ. ಇತರ ವೃತ್ತಿಪರರಂತೆ ನನಗೂ ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡತೊಡಗಿತು. ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವೀಧರನಾದ ನಾನು, ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಮುಂದುವರಿಯುವ ಕನಸು ಕಂಡಿದ್ದೆ. ಆದರೆ, ಆ ಸವಾಲಿನ ದಿನಗಳಲ್ಲಿ, ಅವಕಾಶಗಳು ಯಾವಾಗಲೂ ನಾವು ನಿರೀಕ್ಷಿಸಿದ ರೂಪದಲ್ಲಿಯೇ ಬರುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಬೇರೊಂದು ಉದ್ಯೋಗದ ಅವಕಾಶಕ್ಕಾಗಿ ಕಾಯುವ ಬದಲು, ನಾನೇ ಹೊಸದೊಂದು ಅವಕಾಶವನ್ನು ಸೃಷ್ಟಿಸಲು ನಿರ್ಧರಿಸಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ಹಳ್ಳಿಯ ಸಮಸ್ಯೆಗೆ ಸೂಪರ್ ಮಾರ್ಕೆಟ್ ಪರಿಹಾರ

ಸಮಿತಾ ಅವರ ಹಳ್ಳಿಯಲ್ಲಿ ಸ್ಥಳೀಯ ಸಮುದಾಯಕ್ಕೆ ಅನುಕೂಲವಾಗುವಂತಹ ಯಾವುದೇ ಮಿನಿ ಸೂಪರ್ ಮಾರ್ಕೆಟ್ ಇರಲಿಲ್ಲ. ಈ ಕೊರತೆಯನ್ನೇ ಅವರು ಒಂದು ಉತ್ತಮ ವ್ಯಾಪಾರ ಅವಕಾಶವಾಗಿ ಕಂಡರು. "ನನ್ನ ಹಳ್ಳಿಯಲ್ಲಿ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ಸೂಪರ್ ಮಾರ್ಕೆಟ್‌ನ ಅವಶ್ಯಕತೆಯಿತ್ತು. ಹಾಗಾಗಿ ನಾನು ಸ್ವಲ್ಪ ರಿಸ್ಕ್ ತೆಗೆದುಕೊಂಡು ನನ್ನದೇ ಆದ ಸ್ವಂತ ಅಂಗಡಿಯನ್ನು ತೆರೆದೆ. ಆದರೆ, ಆರಂಭದಿಂದಲೂ ನಾನು ಸಾಂಪ್ರದಾಯಿಕ ಅಂಗಡಿ ಮಾಲೀಕರಂತೆ ಕೆಲಸ ಮಾಡಲು ಬಯಸಲಿಲ್ಲ. ಬದಲಾಗಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನನ್ನ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡೆ" ಎಂದು ಅವರು ವಿವರಿಸಿದ್ದಾರೆ.

ವ್ಯಾಪಾರಕ್ಕೆ ತಂತ್ರಜ್ಞಾನದ ಸ್ಪರ್ಶ

ತಮ್ಮ ಸಾಫ್ಟ್‌ವೇರ್ ಕೌಶಲ್ಯವನ್ನು ಈ ಹೊಸ ವ್ಯಾಪಾರಕ್ಕೆ ಹೇಗೆ ಅಳವಡಿಸಿಕೊಂಡರು ಎಂಬುದನ್ನು ವಿವರಿಸಿರುವ ಅವರು, "ಮೊದಲ ಹಂತವಾಗಿ, ನಾನು ಕ್ಯಾಶ್ ಆನ್ ಡೆಲಿವರಿ ಸೌಲಭ್ಯವಿರುವ ಸರಳವಾದ ಆನ್‌ಲೈನ್ ಆರ್ಡರ್ ಮಾಡುವ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಗ್ರಾಹಕರು ಅಂಗಡಿಗೆ ಬರುವ ಬದಲು, ಮನೆಯಿಂದಲೇ ಸುಲಭವಾಗಿ ಆರ್ಡರ್ ಮಾಡಲು ಸಾಧ್ಯವಾಯಿತು.

ಕೇವಲ ಮೂರು ತಿಂಗಳ ನಂತರ, ನನ್ನ ವ್ಯಾಪಾರವು ದಿನಕ್ಕೆ 50,000 ರೂ. ವಹಿವಾಟು ನಡೆಸುವ ಮಟ್ಟಿಗೆ ಬೆಳೆದಿದೆ. ಪ್ರತಿದಿನ ಗ್ರಾಹಕರೊಂದಿಗೆ ಬೆರೆಯುವುದರಿಂದ ಸಮುದಾಯದ ನೈಜ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗಿದೆ" ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ

ಸಮಿತಾ ಅವರ ಈ ಸ್ಫೂರ್ತಿದಾಯಕ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ನೀವು ನಿಜಕ್ಕೂ ಸ್ಫೂರ್ತಿದಾಯಕ, ಸಮಿತಾ" ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ಕಳೆದ ವರ್ಷ ನನಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಆಗ ನಾನು ನನ್ನದೇ ಆದ ಬಟ್ಟೆ ಬ್ರ್ಯಾಂಡ್ ಆರಂಭಿಸಿದೆ. ಗುಣಮಟ್ಟದ ಕಂಟ್ರೋಲ್ ಕೇವಲ ಸಾಫ್ಟ್‌ವೇರ್‌ಗೆ ಮಾತ್ರ ಸೀಮಿತವಲ್ಲ, ಅದು ನಮ್ಮ ಸುತ್ತಲಿನ ಪ್ರತಿಯೊಂದಕ್ಕೂ ಅನ್ವಯಿಸುತ್ತದೆ. ಈಗ ನಾನು ಉತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸುವ ಉದ್ಯಮಿ. ಹೀಗೆಯೇ ಮುಂದುವರಿಯಿರಿ, ನೀವು ಏರಬೇಕಾದ ಮೆಟ್ಟಿಲುಗಳು ಇನ್ನೂ ಇವೆ" ಎಂದು ಪ್ರೋತ್ಸಾಹಿಸಿದ್ದಾರೆ.

ಕಷ್ಟದ ಸಮಯ ಬಂದಾಗ ಕುಗ್ಗಿ ಹೋಗದೆ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು, ಹೊಸ ವಿಷಯಗಳನ್ನು ಕಲಿತು, ಪ್ರತಿದಿನ ಸಣ್ಣ ಸಣ್ಣ ಹೆಜ್ಜೆಗಳನ್ನಿಟ್ಟರೆ ಅನಿರೀಕ್ಷಿತ ಹಾದಿಯಲ್ಲೂ ದೊಡ್ಡ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಸಮಿತಾ ಸುಲಕ್ಕನ ಅವರ ಈ ಕಥೆಯೇ ಅತ್ಯುತ್ತಮ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+