ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ
Rashmika Mandanna-Vijay Deverakonda: ದಕ್ಷಿಣ ಭಾರತದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ದಿನಗಳು ಕಳೆದಿವೆ. ಫೆಬ್ರವರಿ 26, 2026ರಂದು ಉದಯಪುರದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಇವರ ಮದುವೆ ಕಾರ್ಯಕ್ರಮ ನಡೆಯಿತು. ಈಗ ಇವರಿಬ್ಬರು ಮದುವೆಗೆ ಸಂಬಂಧಿಸಿದ ಸಂಗೀತ ಸಮಾರಂಭದ ಫೋಟೋಗಳು, ವಿಡಿಯೋಗಳನ್ನು ವಿಶೇಷ ಸಂದೇಶದೊಂದಿಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮದುವೆ ದಿನದ ಸಂಜೆ ಇವರಿಬ್ಬರು ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಂತರ ದಂಪತಿ ಸತ್ಯನಾರಾಯಣ ಪೂಜೆ ನೆರವೇರಿಸಿ ತಿರುಪತಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಇನ್ನೂ ಫೆಬ್ರವರಿ 24ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಅದ್ಧೂರಿಯಾಗಿ ಭಾಗವಹಿಸಿದ್ದರು. ಈ ಫೋಟೋಗಳನ್ನು ರಶ್ಮಿಕಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಒಟ್ಟಿಗೆ ಡಾನ್ಸ್ ಮಾಡುತ್ತಿರುವ ಕ್ಷಣಗಳು ವಿಶೇಷ ಗಮನ ಸೆಳೆಯುತ್ತಿವೆ.

ರಶ್ಮಿಕಾ ಮಂದಣ್ಣ ಪೋಸ್ಟ್‌ನಲ್ಲೇನಿದೆ?
ಸಂಗೀತ ರಾತ್ರಿಯ ನೆನಪುಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ, ಆ ರಾತ್ರಿ ಪ್ರೀತಿ, ನಗು, ಕಣ್ಣೀರು ಮತ್ತು ಸಂಗೀತದಿಂದ ತುಂಬಿಕೊಂಡಿತ್ತು ಎಂದು ಬರೆದಿದ್ದಾರೆ. "ಇಡೀ ರಾತ್ರಿ ನಾವು ನೃತ್ಯ ಮಾಡಿದೆವು. ಕುಟುಂಬದವರು ಕೂಡ ನಮ್ಮೊಂದಿಗೆ ಸೇರಿಕೊಂಡರು. ಈ ಕ್ಷಣವನ್ನು ಮರೆಯಲಾಗದು," ಎಂಬ ಭಾವನಾತ್ಮಕ ಸಾಲುಗಳ ಮೂಲಕ ಆ ಸಂಭ್ರಮವನ್ನು ಅವರು ವಿವರಿಸಿದ್ದಾರೆ.
ಕಾರ್ಯಕ್ರಮಕ್ಕೆ ಮೆರಗು ನೀಡಿದ ಕುಟುಂಬದ ಸದಸ್ಯರು
ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರ ಕುಟುಂಬ ಸದಸ್ಯರೂ ಭಾಗವಹಿಸಿ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ವೇದಿಕೆ ಮೇಲೆ ನಡೆದ ರೋಮ್ಯಾಂಟಿಕ್ ಡ್ಯಾನ್ಸ್ ವೇಳೆ ಸಮಯ ಹೇಗೆ ಕಳೆಯಿತು ಎಂಬುದು ತಿಳಿಯದಂತಾಗಿತ್ತು ಎಂದು ಹೇಳಿದರು. ಹೀಗೆ ವಿವಾಹಪೂರ್ವ ಕಾರ್ಯಕ್ರಮಗಳನ್ನು ದಂಪತಿ ಸಂಪೂರ್ಣವಾಗಿ ಆನಂದಿಸಿದ್ದರೆಂಬುದು ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಸಂಗೀತ ಸಮಾರಂಭಕ್ಕೆ ಖ್ಯಾತ ಡಿಸೈನರ್ ಫಲ್ಗುಣಿ-ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಉಡುಪುಗಳನ್ನು ದಂಪತಿ ಧರಿಸಿದ್ದರು. ರಶ್ಮಿಕಾ ಲೈಟ್ ಶೇಡ್ ಸೀಕ್ವಿನ್ಡ್ ಲೆಹೆಂಗಾ ಚೋಲಿ ತೊಟ್ಟು, ವಜ್ರಾಭರಣಗಳಿಂದ ಲುಕ್ ಪೂರ್ಣಗೊಳಿಸಿದ್ದರು. ವಿಜಯ್ ನೀಲಿ ಬಣ್ಣದ ಕಸೂತಿ ಶೇರ್ವಾನಿ ಧರಿಸಿ, ಶ್ರಗ್ ಜೊತೆಗೆ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು.
ಮದುವೆಯ ನಂತರವೂ ಅಭಿಮಾನಿಗಳಿಂದ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ರಶ್ಮಿಕಾ-ವಿಜಯ್ ಹೊಸ ಜೀವನಕ್ಕೆ ಎಲ್ಲರೂ ಹಾರೈಸುತ್ತಿದ್ದಾರೆ. ಈ ಜೋಡಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಆದರೆ ಈಗಲೂ ಕೂ ತಮ್ಮ ಮದುವೆ ಕಾರ್ಯಕ್ರಮಗಳ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಜೋಡಿ ವಿವಾಹವಾದ ಬೆನ್ನಲ್ಲೇ ಅನ್ನದಾನ ಸೇರಿದಂತೆ ಮಹತ್ವದ ಸಮಾಜ ಕಾರ್ಯಗಳನ್ನು ಕೈಗೊಂಡಿದ್ದಾರೆ.












Click it and Unblock the Notifications