Inspiring Success Story: ರೈಲ್ವೆ ಗೇಟ್‌ ಕೆಲಸದಿಂದ ಡಿಎಸ್‌ಪಿ ವರೆಗೆ ರಾಜು ಕುಶ್ವಾಹ ಯುವಕನ ಸ್ಫೂರ್ತಿದಾಯಕ ಕಥೆ

Inspiring Success Story: ಜೀವನದಲ್ಲಿ ಸಾಧನೆ ಮಾಡಬೇಕು, ಯಶಸ್ಸು ಗಳಿಸಬೇಕು ಎಂದರೆ ಬಡತನ ಅಡ್ಡಿಯಲ್ಲ ಎನ್ನುವುದನ್ನು ರೈಲ್ವೆ ಗೇಟ್ ಕೆಲಸ ಮಾಡುತ್ತಿದ್ದ ಯುವಕ ಸಾಬೀತು ಮಾಡಿದ್ದಾನೆ. ರೈಲ್ವೆ ಗೇಟ್ ಆಪರೇಟಿಂಗ್ ಕೆಲಸ ಮಾಡಿಕೊಂಡಿಯೇ ಯುವಕರೊಬ್ಬರು ಅಮೋಘ ಸಾಧನೆ ಮಾಡಿದ್ದಾರೆ. ರೈಲ್ವೆ ಗೇಟ್‌ನಲ್ಲಿ ನಿರ್ವಹಣೆ ಕೆಲಸ ಮಾಡಿಕೊಂಡು ಸತತ 12 ಗಂಟೆಗಳ ಕೆಲಸ - ಬಡತದೊಂದಿಗೆ ಸೆಣಸಾಡಿ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ. ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕೆಂದರೆ ಬಡತನ, ಸಮಯವಿಲ್ಲ ಎನ್ನುವುದು ಯಾವುದೂ ಸಹ ಮ್ಯಾಟರ್ ಆಗುವುದೇ ಇಲ್ಲ ಎನ್ನುವುದಕ್ಕೆ ಬಿಹಾರದ ರಾಜು ಕುಶ್ವಾಹ ತಾಜಾ ಉದಾಹರಣೆ.

ನಮ್ಮಪ್ಪ ಆಸ್ತಿ ಮಾಡಲಿಲ್ಲ, ನಮ್ಮ ಮನೆಯಲ್ಲಿ ಬಡತನ, ನನಗೆ ಅವಕಾಶಗಳೇ ಸಿಗಲಿಲ್ಲ... ನನಗೆ ಯಾರೂ ಸರಿಯಾಗಿ ಮಾರ್ಗದರ್ಶನ ಮಾಡಲಿಲ್ಲ... ಕೇಳುತ್ತಲ್ಲೇ ಹೋದರೆ ಪ್ರತಿಯೊಬ್ಬರಲ್ಲೂ ಒಂದೊಂದು ಕಾರಣವಿರುತ್ತದೆ. ಏನು ಪ್ರಯತ್ನವನ್ನೇ ಮಾಡದೆ ಜೀವನದಲ್ಲಿ ಸೋಲು ಒಪ್ಪಿಕೊಳ್ಳುವವರೇ ಹೆಚ್ಚು. ಆದರೆ ಈ ನೆಪಗಳಿಗೆ ಕೆಲವರು ಅಪವಾದ. ತಮಗೆ ಸಿಗುವ ಸಣ್ಣ ಸಣ್ಣ ಅವಕಾಶಗಳನ್ನೇ ಹೆಚ್ಚು ಜಾಣ್ಮೆಯಿಂದ ಕೆಲವರು ಬಳಸಿಕೊಳ್ಳುತ್ತಾರೆ. ಆ ಸಣ್ಣ ಅವಕಾಶಗಳಲ್ಲಿಯೇ ಚಂದದ ಬದುಕು ಕಟ್ಟಿಕೊಳ್ಳುತ್ತಾರೆ. ರಾತ್ರಿ ಕೆಲಸ ಮಾಡಿಯೂ ಬೆಳಿಗ್ಗೆಯೇ ಬೇಗ ಎದ್ದು ಓದುವವರು ಇದ್ದಾರೆ. ರಾತ್ರಿ - ಬೆಳಿಗ್ಗೆ ಕೆಲಸ ಮಾಡಿ ಸಂಜೆ ಕಾಲೇಜು ಓದುವವರು ಇದ್ದಾರೆ. ನಮ್ಮ ಜೀವನವನ್ನು ಬದಲಾಯಿಸಿಕೊಳ್ಳಬೇಕು, ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಎನ್ನುವವರು ನೆಪಗಳನ್ನು ಹುಡುಕುವುದೇ ಇಲ್ಲ. ತಮಗೆ ಸಿಕ್ಕ ಸಣ್ಣ ಸಣ್ಣ ಅವಕಾಶಗಳಲ್ಲೇ ಮಿಂಚುತ್ತಾರೆ. ಆ ರೀತಿ ಬೆರಳೆಣಿಕೆಯ ಜನರಲ್ಲಿ ರಾಜು ಸಹ ಒಬ್ಬರು.

Inspiring Success Story

ಬಿಹಾರದಲ್ಲಿ ರೈಲ್ವೆ ಗೇಟ್ ಆಪರೇಟರ್ ಆಗಿದ್ದ ರಾಜು ಕುಶ್ವಾಹ ಅವರು ಕೆಲಸದೊಂದಿಗೆ ಸಿಕ್ಕ ಸಮಯದಲ್ಲಿಯೇ ಓದಿ ಇಂದು ಡಿಎಸ್‌ಪಿ ಆಗಿದ್ದಾರೆ. ಅವರ ಸ್ಫೂರ್ತಿಯ ಕತೆ ಇದೀಗ ವೈರಲ್ ಆಗುತ್ತಿದೆ. ರೈಲ್ವೆಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಬಿಹಾರದ ರಾಜು ಕುಮಾರ್ ಅವರು ತಮ್ಮ ಕನಸಿನಿಂದ ಹಿಂದೆ ಸರಿಯಲಿಲ್ಲ. ದೀರ್ಘ ಅವಧಿಯ ಕೆಲಸದ ನಂತರವು ಅವರು ರಾಜ್ಯದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಕ್ಕೆ ತಯಾರಿ ನಡೆಸುತ್ತಾ ತಮ್ಮ ಸಂಜೆ ಮತ್ತು ರಾತ್ರಿಗಳನ್ನು ಕಳೆದರು.

ಬಡ ಕುಟುಂಬದಿಂದ ಬಂದ ಅವರ ಈ ಪ್ರಯಾಣವು ಸುಲಭವಾಗಿರಲಿಲ್ಲ. ಸಿಕ್ಕ ಸೀಮಿತ ಅವಕಾಶ ಹಾಗೂ ಕಡಿಮೆ ಬಿಡುವಿನ ಸಮಯದೊಂದಿಗೆ ಅವರು ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಬಿಹಾರ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಉಪ ಸೂಪರಿಂಟೆಂಡೆಂಟ್ (ಡಿಎಸ್‌ಪಿ) ಆಗಿ ಪೊಲೀಸ್ ಸೇವೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರ ವರ್ಷಗಳ ಕಠಿಣ ಪರಿಶ್ರಮಕ್ಕೆ ಅಂತಿಮವಾಗಿ ಫಲ ಸಿಕ್ಕಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+