ಐರ್ಲೆಂಡ್ ವಿರುದ್ಧದ ಕೊನೆ ಟಿ20 ಪಂದ್ಯದಲ್ಲಿ ವಂಡರ್‌ ಕಿಡ್‌ ವೈಭವ್‌ ಸೂರ್ಯವಂಶಿಗೆ ಇದ್ಯಾ ಸ್ಥಾನ? ಹೀಗಿದೆ ಭಾರತದ ಪ್ಲೇಯಿಂಗ್ 11

Vaibhav Sooryavanshi: ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ಇಂದು (ಜೂನ್ 28) ಟಿ20 ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಡಿಯಾವು 34 ರನ್‌ಗಳ ಹೀನಾಯ ಸೋಲು ಕಂಡಿದ್ದು, ಭಾನುವಾರ ಬೆಲ್‌ಫಾಸ್ಟ್‌ನ ಸ್ಟೋರ್ಮಾಂಟ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಹಾಗಾದ್ರೆ ವೈಭವ್ ಸೂರ್ಯವಂಶಿ ಅವರು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಲಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್‌ ನೀಡಿದ 183 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡದ ಬ್ಯಾಟಿಂಗ್ ಸಂಪೂರ್ಣ ವೈಫಲ್ಯ ಕಂಡಿತು. ಜೊತೆಗೆ ಶ್ರೇಯಸ್ ಅಯ್ಯರ್ ಅವರ ಭಾರತ ಟಿ20 ತಂಡದ ನಾಯಕತ್ವದ ಪಯಣ ನಿರಾಶಾದಾಯಕವಾಗಿ ಆರಂಭವಾಗಿದೆ. ಲೋರ್ಕನ್ ಟಕರ್ ನಾಯಕತ್ವದ ಐರ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿ ಭರ್ಜರಿ ಜಯ ದಾಖಲಿಸಿ ಗಮನ ಸೆಳೆಯಿತು.

India vs Ireland 2nd T20I Will 15 Year Old Boy Vaibhav Sooryavanshi Get a Chance in Playing XI

ವೈಭವ್ ಸೂರ್ಯವಂಶಿಗೆ ಅವಕಾಶ ಇದ್ಯಾ?

ಇನ್ನೂ ಸರಣಿಯ ಫಲಿತಾಂಶವನ್ನು ನಿರ್ಣಯಿಸುವ ಈ ಮಹತ್ವದ ಪಂದ್ಯದಲ್ಲಿ ಹೊಸ ಆಟಗಾರರಿಗೆ ಮನ್ನಣೆ ನೀಡಿ ಭಾರತ ತಂಡ ಕಾದಾಟಕ್ಕೆ ಮುಂದಾಗಲಿದೆಯೇ ಎಂಬುದು ಈಗ ಮೂಡಿರುವ ದೊಡ್ಡ ಪ್ರಶ್ನೆಯಾಗಿದೆ. ಆತಿಥೇಯ ಐರ್ಲೆಂಡ್ ತಂಡದ ಪಾದಾರ್ಪಣೆ ಆಟಗಾರರು ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದ ಬೆನ್ನಲ್ಲೇ ಈಗ ಟೀಮ್ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ಸಿಗಲಿದೆಯೇ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ.

ಸಂಜುಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ

ವೈಭವ್ ಸೂರ್ಯವಂಶಿ ಅವರ ಪಾದಾರ್ಪಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೂ ತಂಡದ ಮ್ಯಾನೇಜ್‌ಮೆಂಟ್ ಪ್ರಸ್ತುತ ಇರುವ ಆರಂಭಿಕ ಆಟಗಾರರನ್ನೇ ಮುಂದುವರಿಸುವ ಸಾಧ್ಯತೆಯಿದೆ ಮತ್ತು ಅಗ್ರ ಕ್ರಮಾಂಕದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿಲ್ಲ. ಅಭಿಷೇಕ್ ಶರ್ಮಾ ಮೊದಲ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಸಂಜು ಸ್ಯಾಮ್ಸನ್ ಕೇವಲ ಐದು ರನ್‌ಗಳಿಗೆ ಔಟಾಗಿದ್ದರೂ, ಪಂದ್ಯದಲ್ಲೂ ಅವರಿಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆಯಿದೆ.

ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ

ಬದಲಾಗಿ ಈಗ ಎಲ್ಲರ ಗಮನ ಪ್ರಸಿದ್ಧ್ ಕೃಷ್ಣ ಮತ್ತು ವಾಷಿಂಗ್ಟನ್ ಸುಂದರ್ ಅವರ ಮೇಲಿರಲಿದೆ. ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಮೊದಲ ಪಂದ್ಯದಲ್ಲಿ ಒಂದು ಓವರ್‌ನಲ್ಲಿ ಬರೋಬ್ಬರಿ 27 ರನ್ ಬಿಟ್ಟುಕೊಟ್ಟು, ಯಾವುದೇ ವಿಕೆಟ್ ಪಡೆಯದೇ ಅತ್ಯಂತ ದುಬಾರಿ ಎನಿಸಿಕೊಂಡಿದ್ದರು. ಮತ್ತೊಂದೆಡೆ ಸುಂದರ್ ಅವರು ಕೇವಲ ಒಂದು ಓವರ್ ಬೌಲಿಂಗ್ ಮಾಡಿ 19 ರನ್ ನೀಡಿದ್ದಲ್ಲದೆ, ಬ್ಯಾಟಿಂಗ್‌ನಲ್ಲೂ ಯಾವುದೇ ನಿರೀಕ್ಷಿಯ ಪ್ರದರ್ಶನ ನೀಡಲಿಲ್ಲ.

ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಪ್ರಿನ್ಸ್ ಯಾದವ್ ಎರಡನೇ ಟಿ20 ಪಂದ್ಯಕ್ಕಾಗಿ ಭಾರತದ ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಜೊತೆಗೆ ವಾಷಿಂಗ್ಟನ್ ಸುಂದರ್ ಅವರ ಪಾತ್ರದ ಮೇಲೂ ಕುತೂಹಲ ಮೂಡಿದ್ದು, ಮ್ಯಾನೇಜ್‌ಮೆಂಟ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ ಅವರ ಜಾಗದಲ್ಲಿ ರವಿ ಬಿಷ್ಣೋಯ್ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬಹು ನಿರೀಕ್ಷಿತ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆಯು ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅಥವಾ ಅದಕ್ಕಿಂತಲೂ ಮುಂದಕ್ಕೆ ಮುಂದೂಡಲ್ಪಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಭಾರತ, ಐರ್ಲೆಂಡ್‌ ಸಂಭಾವ್ಯ ಪ್ಲೇಯಿಂಗ್ 11

ಭಾರತ ಸಂಭಾವ್ಯ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.

ಐರ್ಲೆಂಡ್‌ ಸಂಭಾವ್ಯ ಪ್ಲೇಯಿಂಗ್ 11: ಟಿಮ್ ಟೆಕ್ಟರ್, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ನಾಯಕ, ವಿಕೆಟ್ ಕೀಪರ್), ಬೆನ್ ಕ್ಯಾಲಿಟ್ಜ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮ್ಯಾಥ್ಯೂ ಹಂಫ್ರೀಸ್, ಮ್ಯಾಟ್ ಹಾಲಾರ್ಡ್, ಲಿಯಾಮ್ ಮೆಕಾರ್ಥಿ, ಜೈ ಮುಂದ್ರಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+