Rashmika Mandanna: 'ರಾಕಾ'ಗೆ ಆಯ್ಕೆಯಾದ ಬೆನ್ನಲ್ಲೇ ರಶ್ಮಿಕಾ ವರ್ಕೌಟ್ ವೈರಲ್; ಫಿಟ್ನೆಸ್ ನೋಡಿ ಫ್ಯಾನ್ಸ್ ಫಿದಾ

Rashmika Mandanna Video Viral: ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂದಿನ 'ರಾಕಾ-Raaka' ಸಿನಿಮಾಗೆ ಕರ್ನಾಟಕ ಮೂಲದ ನಟಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ. ಈ ಮೂಲಕ 'ಪುಷ್ಪ' ಸರಣಿ ಸಿನಿಮಾಗಳ ಶ್ರೀವಲ್ಲಿ-ಪುಷ್ಪ ಜೋಡಿ ಮತ್ತೆ ದೊಡ್ಡಮಟ್ಟದಲ್ಲಿ ರಂಜಿಸಲು ಸಜ್ಜಾಗುತ್ತಿದೆ. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಟಿ ರಶ್ಮಿಕಾ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಶೂಟಿಂಗ್, ಫ್ಯಾಮಿಲಿ, ಟ್ರಿಪ್ ಜೊತೆಗೆ ತಮ್ಮ ಸೌಂದರ್ಯ, ದೇಹ ದಂಡನೆಗೆ ಹೆಚ್ಚಿನ ಒತ್ತು ನೀಡುತ್ತಾರೆ. 'ರಾಕಾ'ಗೆ ಆಯ್ಕೆಯಾದ ಬೆನ್ನಲ್ಲೆ ರಶ್ಮಿಕಾರ ಹೈಎನರ್ಜಿಟಿಕ್ ವರ್ಕೌಟ್ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.

ಈ ಮೊದಲು ಕನ್ನಡ ಭಾಷೆ, ಗೆಳೆಯನೊಂದಿಗೆ ಪ್ರೀತಿಯ ವಿಚಾರವಾಗಿ ಸಾಕಷ್ಟು ಸದ್ದು ಮಾಡುತ್ತಿದ್ದ ನಟಿ ರಶ್ಮಿಕಾ ಜೀವದ ಗೆಳೆಯ ನಟ ವಿಜಯ್ ದೇವರಕೊಂಡರನ್ನು ವರಿಸಿದ್ದಾರೆ. ಮದುವೆ ಬಳಿಕವು ರಶ್ಮಿಕಾ ಬ್ರೇಕ್ ತೆಗೆದುಕೊಳ್ಳದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗುತ್ತಿದ್ದಾರೆ. ವೈವಾಹಿಕ ಜೀವನದ ಜೊತೆಗೆ ತಮ್ಮನ್ನು ಉತ್ತುಂಗಕ್ಕೇರಿಸಿದ ಸಿನಿಮಾ ವೃತ್ತಿಯ ಕಡೆಗೆ, ಮುಂಬರುವ ಸಿನಿಮಾಗಳಿಗೆ ಫಿಟ್ ಆಗಿರಲು ಅವರು ದೇಹ ದಣಿಸುತ್ತಿದ್ದಾರೆ. ಇದರ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ, ಸಖತ್ ವೈರಲ್ ಆಗುತ್ತಿದೆ.

Rashmika Mandanna

ಎನರ್ಜಿ ಡ್ರಿಂಕ್ ಕುಡಿದು ವರ್ಕೌಟ್ ಶುರು ಮಾಡುವ ವಿಡಿಯೋ ಹಂಚಿಕೊಂಡ ಕೇವಲ 3 ಗಂಟೆಗಳಲ್ಲಿ 3.5ಲಕ್ಷ ಲೈಕ್ಸ್‌ಗಳು ಬಂದಿವೆ, ಲಕ್ಷಾಂತರ ವೀಕ್ಷಣೆ ಕಂಡಿದೆ. ರಶ್ಮಿಕಾ ಲೆಗ್, ಬ್ಯಾಕ್, ಶೋಲ್ಡರ್, ಅಪ್ಪರ್ ಮತ್ತು ಲೋವರ್ ಬಾಡಿ ವರ್ಕೌಟ್ ಮಾಡಿದ್ದಾರೆ. ಜಿಮ್‌ ನಲ್ಲಿ ಬೆವರಿಳಿಸುವ ವಿಡಿಯೋ ಲಕ್ಷಾಂತರ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ರಶ್ಮಿಕಾ ಪ್ರವಾಸ, ಶೂಟಿಂಗ್, ಟ್ರಾವೆಲ್, ಫ್ಯಾಮಿಲಿ, ಸಹೋದರಿಯ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಟ ಶಾಹಿದ್ ಕಪೂರ್‍‌, ನಟಿ ಕೃತಿ ಸನೂನ್ ಜೊತೆಗೆ 'ಕಾಕ್ಟೈಲ್ 2' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Peddi OTT Release: ರಾಮ್ ಚರಣ್ 'ಪೆದ್ದಿ'ಗೆ ಒಟಿಟಿ ಮಹೂರ್ತ ಫಿಕ್ಸ್: ಕನ್ನಡ ಸೇರಿ 5 ಭಾಷೆಗಳಲ್ಲಿ ಪ್ರಸಾರ
Peddi OTT Release: ರಾಮ್ ಚರಣ್ 'ಪೆದ್ದಿ'ಗೆ ಒಟಿಟಿ ಮಹೂರ್ತ ಫಿಕ್ಸ್: ಕನ್ನಡ ಸೇರಿ 5 ಭಾಷೆಗಳಲ್ಲಿ ಪ್ರಸಾರ

ರಶ್ಮಿಕಾ ವರ್ಕೌಟ್‌ ನೋಡಿ ಕಾಲೆಳೆದ ನೆಟ್ಟಿಗರು

ನೆಚ್ಚಿನ ನಟಿ ರಶ್ಮಿಕಾ ಮದುವೆ ಬಳಿಕ ಈರೀತಿ ಜಿಮ್‌ನಲ್ಲಿ ಬೆವರಿಳಿಸುತ್ತಿರುವುದು ನೋಡಿ ಅನೇಕ ಫ್ಯಾನ್ಸ್ ಮೆಚ್ಚಿ ಪ್ರಶಂಶಸಿದ್ದಾರೆ. ನೈಸ್, ಸೂಪರ್ ಎಂದು ಹಾರ್ಟ್ ಎಮೋಜಿ ಹಾಕಿ ಬೆಂಬಲಿಸಿದ್ದಾರೆ. ಹಾರ್ಡ್ ವರ್ಕಿಂಗ್ ರಶ್ಮಿಕಾ ಅಂತಲೂ ಹೇಳಿದ್ದಾರೆ. ಮತ್ತೊಬ್ಬರು 'ಸಿಹಿ ತಿಂಡಿ ತಿನ್ನಲು ಕಷ್ಟ ಪಟ್ಟು ಕೆಲಸ ಮಾಡುವುದು' ತಮಾಷೆಯಾಗಿ ರಶ್ಮಿಕಾ ಕಾಲೆಳೆದು ಕಾಮೆಂಟ್ ಹಾಕಿದ್ದಾರೆ. ನೋಡ ನೋಡುತ್ತಲೇ ವಿಡಿಯೋಗೆ 1200ಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ.

'ರಾಕಾ'ಗಾಗಿ ರಶ್ಮಿಕಾ ಭರ್ಜರಿ ತಯಾರಿ?

ಇದರ ಬೆನ್ನಲ್ಲೆ 'ರಾಕಾ' ಸಿನಿಮಾಗೆ ನಟಿ ರಶ್ಮಿಕಾ ಆಯ್ಕೆ ಆಗಿದ್ದಾರೆ. ಮುಂಬೈನಲ್ಲಿ ಶೂಟಿಂಗ್ ಇನ್ನೇನು ಆರಂಭವಾಗಲಿದೆ. ಶೀಘ್ರವೇ ರಶ್ಮಿಕಾ ಚಿತ್ರತಂಡವನ್ನು ಸೇರಲಿದ್ದಾರೆ ಎಂದು 'ವೆರೈಟಿ ಇಂಡಿಯಾ' ವರದಿ ಮಾಡಿದೆ. ಈ ಭಾರಿಯು 'ಪುಷ್ಪ' ಜೋಡಿ ಮೋಡಿ ಮಾಡುತ್ತಾ ಎಂದು ಕಾದು ನೋಡಬೇಕಿದೆ. ಅಟ್ಲಿ ಕುಮಾರ್ ನಿರ್ದೇಶನದ ಈ ಸಿನಿಮಾ ತನ್ನ ಪೋಸ್ಟರ್‌ನಿಂದ ಸದ್ದು ಮಾಡಿತ್ತು. ಇದು ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗಾರಿಯೇ ರಶ್ಮಿಕಾ ಭರ್ಜರಿ ತಯಾರಿ ನಡೆಸಿದ್ದಾರೆ ಅಂತಲೂ ಹೇಳಲಾಗುತ್ತಿದೆ.

ಪುಷ್ಪ, ಶ್ರೀವಲ್ಲಿ ಸಿನಿಮಾದಲ್ಲಿ ಶಾರುಖ್ ಖಾನ್?

ಇನ್ನೊಂದೆಡೆ ಸಿನಿಮಾದಲ್ಲಿ ಈ ಬಾರಿ ಅಲ್ಲು ಅರ್ಜುನ್ ಸಹ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ಟಾಲಿವುಡ್ ತಾಂತ್ರಿಕ ತಜ್ಞರನ್ನು ಸಿನಿಮಾ ತಂಡ ಭೇಟಿ ಮಾಡಿದೆ. ಶೂಟಿಂಗ್ ಆರಂಭಿಸಲು ಎಲ್ಲ ತಯಾರಿಗಳು ನಡೆಸಿದೆ. ಇದೇ ಸಿನಿಮಾದಲ್ಲಿ ನಟಿ ಮೃಣಾಲ್ ಠಾಕೂರ್, ಜಾನ್ವಿ ಕಪೂರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಬಹುತಾರಾಣದ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+